ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಂಡದಿಂದ ಹೊರಗಿಟ್ಟರೂ ಕ್ರೀಡಾಂಗಣಕ್ಕೆ ಬಂದು ಡೇವಿಡ್ ವಾರ್ನರ್ ಮಾಡಿದ ಕೆಲಸಕ್ಕೆ ಸಿಕ್ತು ಗೌರವ

IPL 2021: Sunrisers Hyderabad Former Captain cheers for his team from the fans stand
David Warner ಸಾಧಾರಣ ಪ್ರೇಕ್ಷಕನಂತೆ ಪಂದ್ಯ ವೀಕ್ಷಿಸಿದರು | Oneindia Kannada

ಸದ್ಯ ನಡೆಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ತೀರಾ ಕಳಪೆ ಪ್ರದರ್ಶನವನ್ನು ನೀಡುವುದರ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಟೂರ್ನಿಯಲ್ಲಿ ಇದುವರೆಗೂ ಒಟ್ಟು 12 ಪಂದ್ಯಗಳನ್ನಾಡಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಕೇವಲ 2 ಪಂದ್ಯಗಳಲ್ಲಿ ಜಯಗಳಿಸಿ, 10 ಪಂದ್ಯಗಳಲ್ಲಿ ಸೋಲುವುದರ ಮೂಲಕ 4 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದೆ.

ಹೀಗೆ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸಾಲುಸಾಲು ಪಂದ್ಯಗಳಲ್ಲಿ ಸೋಲುವುದರ ಮೂಲಕ ಮಂಕಾಗಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಸಾಕಷ್ಟು ಟೀಕೆಗಳಿಗೆ ಕಾರಣವಾಗಿದ್ದು ದೊಡ್ಡ ಮಟ್ಟದ ಸುದ್ದಿಯಲ್ಲಿದೆ. ಕೇವಲ ಸತತ ಸೋಲುಗಳಿಂದ ಮಾತ್ರವಲ್ಲದೇ ತಮ್ಮದೇ ತಂಡದ ಆಟಗಾರನದ ಡೇವಿಡ್ ವಾರ್ನರ್ ಕುರಿತಾಗಿಯೂ ಸನ್ ರೈಸರ್ಸ್ ಹೈದರಾಬಾದ್ ತಂಡ ಸಾಕಷ್ಟು ಚರ್ಚೆಗೀಡಾಗಿದ್ದು ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೂ ಸಹ ಗುರಿಯಾಗಿದೆ.

ಟಿ20 ವಿಶ್ವಕಪ್‌ಗೂ ಮುನ್ನವೇ ಉಂಟಾಗಿರುವ ಈ 4 ಸಮಸ್ಯೆಗಳು ಭಾರತದ ಟ್ರೋಫಿ ಕನಸಿಗೆ ಮುಳುವಾಗಬಹುದು!ಟಿ20 ವಿಶ್ವಕಪ್‌ಗೂ ಮುನ್ನವೇ ಉಂಟಾಗಿರುವ ಈ 4 ಸಮಸ್ಯೆಗಳು ಭಾರತದ ಟ್ರೋಫಿ ಕನಸಿಗೆ ಮುಳುವಾಗಬಹುದು!

ಹೌದು, ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಭಾರತದ ನೆಲದಲ್ಲಿ ಆರಂಭವಾದಾಗ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವವನ್ನು ಡೇವಿಡ್ ವಾರ್ನರ್ ಅವರೇ ನಿರ್ವಹಿಸುತ್ತಿದ್ದರು. ಆದರೆ ಡೇವಿಡ್ ವಾರ್ನರ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡ ಸಾಲು ಸಾಲು ಪಂದ್ಯಗಳಲ್ಲಿ ಸೋತ ನಂತರ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಟೂರ್ನಿ ಮಧ್ಯದಲ್ಲಿಯೇ ನಾಯಕನ ಬದಲಾವಣೆಯನ್ನು ಮಾಡಿತು. ಡೇವಿಡ್ ವಾರ್ನರ್ ಬದಲಾಗಿ ತಂಡದ ಮತ್ತೋರ್ವ ಆಟಗಾರನಾದ ಕೇನ್ ವಿಲಿಯಮ್ಸನ್ ಅವರನ್ನು ನೂತನ ನಾಯಕನನ್ನಾಗಿ ನೇಮಿಸಲಾಯಿತು. ಆದರೂ ಸಹ ಸನ್ ರೈಸರ್ಸ್ ಹೈದರಾಬಾದ್ ತಂಡ ಗೆಲುವಿನ ಹಾದಿಗೆ ಮರಳಲೇ ಇಲ್ಲ, ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿಯೂ ಸಾಲು ಸಾಲು ಪಂದ್ಯಗಳನ್ನು ಸೋಲುವುದರ ಮೂಲಕ ಇದೀಗ ಪ್ಲೇ ಆಫ್ ರೇಸ್‌ನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಸಂಪೂರ್ಣವಾಗಿ ಹೊರ ಬಿದ್ದಿದೆ.

ನಾಯಕತ್ವವನ್ನು ಕಳೆದುಕೊಂಡ ನಂತರ ಒಂದೆರಡು ಪಂದ್ಯಗಳಲ್ಲಿ ಡೇವಿಡ್ ವಾರ್ನರ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದರು. ಆದರೆ ಆಟಗಾರನಾಗಿಯೂ ಡೇವಿಡ್ ವಾರ್ನರ್ ವಿಫಲರಾದ ನಂತರ ಆಡುವ ಬಳಗದಿಂದಲೂ ಡೇವಿಡ್ ವಾರ್ನರ್ ಹೊರಬಿದ್ದರು. ಅಷ್ಟೇ ಅಲ್ಲದೆ ಮುಂದಿನ ಪಂದ್ಯಗಳಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ತಾವು ಕಣಕ್ಕಿಳಿಯುವುದಿಲ್ಲ ಎಂಬುದನ್ನು ಕೂಡ ಸಾಮಾಜಿಕ ಜಾಲತಾಣದ ಮೂಲಕ ಡೇವಿಡ್ ವಾರ್ನರ್ ತಿಳಿಸಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ತಂಡದ ಆಟಗಾರರ ಜೊತೆ ಡೇವಿಡ್ ವಾರ್ನರ್ ಅವರಿಗೆ ಮೈದಾನಕ್ಕೆ ಪ್ರವೇಶಿಸುವ ಅವಕಾಶವನ್ನು ಸಹ ಫ್ರಾಂಚೈಸಿ ನೀಡಿರಲಿಲ್ಲ ಎಂಬ ಸುದ್ದಿ ಹರಿದಾಡಿತ್ತು.

ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ತಂಡದೊಂದಿಗೆ ಕ್ರೀಡಾಂಗಣವನ್ನು ಪ್ರವೇಶಿಸುವ ಅವಕಾಶ ಸಿಗದ ಡೇವಿಡ್ ವಾರ್ನರ್ ಕಳೆದ ಭಾನುವಾರ ( ಅಕ್ಟೋಬರ್ 3 ) ನಡೆದ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯವನ್ನು ವೀಕ್ಷಿಸಲು ಸನ್ ರೈಸರ್ಸ್ ಹೈದರಾಬಾದ್ ತಂಡದ ಜೆರ್ಸಿಯನ್ನು ತೊಟ್ಟು ಅಭಿಮಾನಿಗಳ ರೀತಿ ಕ್ರೀಡಾಂಗಣವನ್ನು ಪ್ರವೇಶಿಸಿದ್ದರು. ಇತರೆ ಅಭಿಮಾನಿಗಳ ಜೊತೆ ಫ್ಯಾನ್ಸ್ ಸ್ಟ್ಯಾಂಡ್ ವಿಭಾಗದಲ್ಲಿ ಕುಳಿತು ಸನ್ ರೈಸರ್ಸ್ ಹೈದರಾಬಾದ್ ತಂಡದ ಧ್ವಜವನ್ನು ಹಿಡಿದು ಡೇವಿಡ್ ವಾರ್ನರ್ ಪಂದ್ಯವನ್ನು ವೀಕ್ಷಿಸಿದರು. ಎಷ್ಟೇ ಅವಮಾನಕ್ಕೊಳಗಾದರೂ, ತಂಡದಲ್ಲಿ ಆಡುವ ಅವಕಾಶ ಸಿಗದೇ ಇದ್ದರೂ ತನ್ನ ತಂಡವನ್ನು ಬೆಂಬಲಿಸಲು ಕ್ರೀಡಾಂಗಣಕ್ಕೆ ಅಭಿಮಾನಿಯ ರೀತಿ ಬಂದ ಡೇವಿಡ್ ವಾರ್ನರ್ ಕುರಿತು ಕ್ರಿಕೆಟ್ ಅಭಿಮಾನಿಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದು ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಡೇವಿಡ್ ವಾರ್ನರ್ ಅವರಿಗೆ ಸರಿಯಾದ ಗೌರವ ನೀಡುವಂತಹ ಫ್ರಾಂಚೈಸಿ ಅವರನ್ನು ಖರೀದಿಸಲಿ ಎಂದು ಆಶಿಸುತ್ತಿದ್ದಾರೆ.

ಫ್ಲಾಪ್ ಆಗಿರುವ ರೈನಾ ಬದಲು ರಾಬಿನ್ ಉತ್ತಪ್ಪಗೆ ಯಾಕೆ ಅವಕಾಶ ನೀಡುತ್ತಿಲ್ಲ?; ಮಾಜಿ ಕ್ರಿಕೆಟಿಗನ ಪ್ರಶ್ನೆಫ್ಲಾಪ್ ಆಗಿರುವ ರೈನಾ ಬದಲು ರಾಬಿನ್ ಉತ್ತಪ್ಪಗೆ ಯಾಕೆ ಅವಕಾಶ ನೀಡುತ್ತಿಲ್ಲ?; ಮಾಜಿ ಕ್ರಿಕೆಟಿಗನ ಪ್ರಶ್ನೆ

ಇನ್ನು ಅಕ್ಟೋಬರ್ 3ರ ಭಾನುವಾರದಂದು ಸಂಜೆ ನಡೆದ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 6 ವಿಕೆಟ್‍ಗಳ ಜಯ ಸಾಧಿಸಿತು. ಈ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ತನ್ನ 10ನೇ ಸೋಲನ್ನು ಅನುಭವಿಸಿತು.

Story first published: Monday, October 4, 2021, 13:50 [IST]
Other articles published on Oct 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X