ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಆರೆಂಜ್ ಆರ್ಮಿ ಸೇರಿದ ಇಂಗ್ಲೆಂಡ್‌ನ ಜೇಸನ್ ರಾಯ್

IPL 2021: Sunrisers Hyderabad sign Jason Roy as replacement for Mitchell Marsh

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಫ್ರಾಂಚೈಸಿ ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್‌) ಇಂಗ್ಲೆಂಡ್ ಬ್ಯಾಟ್ಸ್‌ಮನ್‌ ಜೇಸನ್ ರಾಯ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮಿಚೆಲ್ ಮಾರ್ಷ್ ಅವರ ಬದಲಿಗೆ ರಾಯ್ ಆರೆಂಜ್ ಆರ್ಮಿ ಸೇರಿಕೊಂಡಿದ್ದಾರೆ. ಎಸ್‌ಆರ್‌ಎಚ್‌ಗೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ನಾಯಕರಾಗಿದ್ದಾರೆ.

ಕ್ರಿಕೆಟ್‌ನಲ್ಲಿ 'ಸಾಫ್ಟ್‌ ಸಿಗ್ನಲ್' ಅಂದ್ರೇನು?, ಇಲ್ಲಿದೆ ಸಂಪೂರ್ಣ ಮಾಹಿತಿಕ್ರಿಕೆಟ್‌ನಲ್ಲಿ 'ಸಾಫ್ಟ್‌ ಸಿಗ್ನಲ್' ಅಂದ್ರೇನು?, ಇಲ್ಲಿದೆ ಸಂಪೂರ್ಣ ಮಾಹಿತಿ

ಸುದೀರ್ಘ ಕಾಲ ಬಯೋ ಬಬಲ್‌ನೊಳಗೆ ಕಳೆಯಬೇಕಾಗಿದ್ದರಿಂದ ಆಸ್ಟ್ರೇಲಿಯಾದ ಆಲ್ ರೌಂಡರ್ ಮಿಚೆಲ್ ಮಾರ್ಷ್ 2021ರ ಐಪಿಎಲ್‌ ಸೀಸನ್‌ನಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ದರು. ಹೀಗಾಗಿ ಈ ಸೀಸನ್‌ನಲ್ಲಿ ಮಾರ್ಷ್ ಬದಲಿಗೆ ರಾಯ್ ಅವರು ಹೈದರಾಬಾದ್ ತಂಡದಲ್ಲಿ ಕಣಕ್ಕಿಳಿಯಲಿದ್ದಾರೆ.

ಗೈಲ್ಸ್ ಬಿಚ್ಚಿಟ್ಟ ಕುತೂಹಲಕಾರಿ ಸತ್ಯ: ಆರ್ಚರ್ ಕೈಯೊಳಗಿದೆ ಗಾಜಿನ ಚೂರು!ಗೈಲ್ಸ್ ಬಿಚ್ಚಿಟ್ಟ ಕುತೂಹಲಕಾರಿ ಸತ್ಯ: ಆರ್ಚರ್ ಕೈಯೊಳಗಿದೆ ಗಾಜಿನ ಚೂರು!

ಜೇಸನ್ ರಾಯ್ ಒಟ್ಟಿಗೆ 8 ಐಪಿಎಲ್ ಪಂದ್ಯಗಳಲ್ಲಿ 29.83 ಸರಾಸರಿಯಂತೆ 179 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಅರ್ಧ ಶತಕವೂ ಸೇರಿದೆ. 2017ರಲ್ಲಿ ಗುಜರಾತ್ ಲಯನ್ಸ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ರಾಯ್ 2018ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ಪರ ಆಡಿದ್ದರು.

ಮುಂದಿನ ಸೀಸನ್‌ನಲ್ಲಿ ಅಂದರೆ 2020ರಲ್ಲಿ ವೈಯಕ್ತಿಕ ಕಾರಣ ನೀಡಿ ರಾಯ್ ಐಪಿಎಲ್‌ನಿಂದ ದೂರ ಉಳಿದಿದ್ದರು. ಹೀಗಾಗಿ 2021ರ ಹರಾಜಿನ ವೇಳೆ ಯಾವುದೇ ಫ್ರಾಂಚೈಸಿಗಳು ರಾಯ್ ಆರಿಸಲು ಆಸಕ್ತಿ ತಾಳಿರಲಿಲ್ಲ. ಆದರೆ ಇಂಗ್ಲೆಂಡ್-ಭಾರತ ಟಿ20ಐ ಸರಣಿಯಲ್ಲಿ ರಾಯ್ ಬ್ಯಾಟಿಂಗ್‌ಗಾಗಿ ಗಮನ ಸೆಳೆದಿದ್ದರಿಂದ ಈಗ ಹೈದರಾಬಾದ್ ತಂಡದಲ್ಲಿ ಅವರಿಗೆ ಅವಕಾಶ ಲಭಿಸಿದೆ.

Story first published: Wednesday, March 31, 2021, 19:16 [IST]
Other articles published on Mar 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X