|
ಹೈದರಾಬಾದ್ಗೆ ಟ್ವಿಟರ್ನಲ್ಲಿ ತಮಾಷೆ
ಸನ್ ರೈಸರ್ಸ್ ಹೈದರಾಬಾದ್ ತಂಡ ಈವರೆಗೆ ಆಡಿರುವ 8 ಪಂದ್ಯಗಳಲ್ಲಿ 1 ಪಂದ್ಯದಲ್ಲಷ್ಟೇ ಗೆದ್ದು ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಇನ್ನುಳಿದ ಆರು ಪಂದ್ಯಗಳನ್ನು ಗೆದ್ದರೂ ಕೂಡ ಎಸ್ಆರ್ಎಚ್ನ ಪ್ಲೇ ಆಫ್ ಕನಸು ಈಡೇರೋದಕ್ಕೆ ಗ್ಯಾರಂಟಿಯಿಲ್ಲ. ಆರಂಭಿಕ ಪಂದ್ಯಗಳನ್ನು ಸೋತು ಸೋತು ಸುಣ್ಣವಾಗಿರುವ ಈ ಪಂದ್ಯದಲ್ಲಾದರೂ ಗೆದ್ದು ಮತ್ತೆ ಕಮ್ಬ್ಯಾಕ್ ಮಾಡುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಎಂದಿನಂತೆ ಈ ಬಾರಿ ಕೂಡ ಹೈದರಾಬಾದ್ ಸೋತು ನಿರಾಸೆ ಅನುಭವಿಸಿದೆ. ಡೆಲ್ಲಿ ಮತ್ತು ಹೈದರಾಬಾದ್ ಪಂದ್ಯ ಮುಕ್ತಾಯದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹೈದರಾಬಾದ್ ಗುರಿಯಾಗಿಸಿ ಹಲವಾರು ಟ್ವೀಟ್ಗಳು ಓಡಾಡುತ್ತಿವೆ. ಹೈದರಾಬಾದ್ ಪ್ರದರ್ಶನವನ್ನು ಕ್ರಿಕೆಟ್ ಅಭಿಮಾನಿಗಳು ತಮಾಷೆಯಾಗಿಸಿ ಹಲವಾರು ಮೀಮ್ಗಳನ್ನು ರಚಿಸಿ ಗಮ್ಮತ್ತು ತೆಗೆದುಕೊಳ್ಳುತ್ತಿದ್ದಾರೆ.
|
ಎಸ್ಆರ್ಎಚ್ ಓನರ್ ಮಗಳಿಗೆ ನಿರಾಸೆ
ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾಗಿರುವ ಸನ್ ಗ್ರೂಪ್ ಸಂಸ್ಥಾಪಕ ಕಲಾನಿಧಿ ಮಾರನ್ಗೆ ಕಾವ್ಯ ಮಾರನ್ ಎನ್ನುವ ಪುತ್ರಿಯಿದ್ದಾರೆ. ಸನ್ ರೈಸರ್ಸ್ಗೆ ಪಂದ್ಯಗಳಿದ್ದಾಗ ಕಾವ್ಯ ಮೈದಾನದಲ್ಲಿದ್ದು ತಂಡವನ್ನು ಚಿಯರ್ ಮಾಡುತ್ತಿರುತ್ತಾರೆ. ಆದರೆ ಪ್ರತೀ ಸಾರಿ ಕಾವ್ಯ ಮೈದಾನದಲ್ಲಿ ಕಾಣಿಸಿಕೊಳ್ಳುವಾಗಲೂ ಅವರಿಗೆ ತಂಡದ ಪ್ರದರ್ಶನ ಖುಷಿ ನೀಡಲ್ಲ. ಕಾರಣ ಹೈದರಾಬಾದ್ ಕೆಟ್ಟ ಪ್ರದರ್ಶನದ ಮೂಲಕ ಪಂದ್ಯ ಸೋತು ಕಾವ್ಯಗೆ ನಿರಾಸೆ ಮಾಡುತ್ತಿರುತ್ತದೆ. ಈ ಬಾರಿಯೂ ಹೈದರಾಬಾದ್ ಸೋಲಿನಿಂದ ಕಾವ್ಯ ನಿರಾಶೆಗೊಳಗಾಗಿದ್ದಾರೆ. ಈ ಸಂಗತಿಯನ್ನು ಮುಂದಿಟ್ಟುಕೊಂಡು ಟ್ರೋಲಿಗರು ತಮಾಷೆ ಮಾಡಿದ್ದಾರೆ. ಪಾಪ, ಕಾವ್ಯನಿಗಾಗಿಯಾದರೂ ಹೈದರಾಬಾದ್ ಪಂದ್ಯ ಗೆಲ್ಲಬಾರದಿತ್ತೆ? ಪಾಪ ಆ ಹುಡುಗಿಯ ಮುಖ ನೋಡೋಕ್ಕಾಗುತ್ತಿಲ್ಲ ಎಂದು ಮೀಮ್ಸ್ಗಳು ಟ್ವಿಟರ್ನಲ್ಲಿ ಓಡಾಡುತ್ತಿವೆ.
|
ಕ್ರಿಕೆಟ್ ಅಭಿಮಾನಿಗಳಿಗೆ ನಿದ್ದೆ ಬರತ್ತೆ
ಸನ್ ರೈಸರ್ಸ್ ಹೈದರಾಬಾದ್ಗೆ ಪಂದ್ಯಗಳಿದ್ದಾಗ ಕ್ರಿಕೆಟ್ ಅಭಿಮಾನಿಗಳಿಗೆ ಸಖತ್ ಬೋರಿಂಗ್ ಅನ್ನಿಸುತ್ತಿರತ್ತೆ. ಕಾರಣ ಎಸ್ಆರ್ಎಚ್ ತಂಡ ಬ್ಯಾಟಿಂಗ್ ಆಗಲಿ, ಬೌಲಿಂಗ್ ಆಗಲಿ ಅಭಿಮಾನಿಗಳಿಗೆ ಖುಷಿಕೊಡುವ ರೀತಿಯಲ್ಲಿರೋಲ್ಲ. ಹೀಗಾಗಿ ಡೆಲ್ಲಿ ಮತ್ತು ಹೈದರಾಬಾದ್ ಪಂದ್ಯದ ವೇಳೆ ಹೈದರಾಬಾದ್ ಬ್ಯಾಟಿಂಗ್ ಮಾಡುತ್ತಿದ್ದರೆ ಕ್ರಿಕೆಟ್ ಅಭಿಮಾನಿಗಳಿಗೆ ನಿದ್ದೆ ಬರುತ್ತಿತ್ತು ಎಂದು ಅನೇಕ ಅಭಿಮಾನಿಗಳು ಟ್ವೀಟ್ ಮೀಮ್ಸ್ ಹಂಚಿಕೊಂಡಿದ್ದಾರೆ. ಪಾಕ್ ಮಾಜಿ ನಾಯಕ ಸರ್ಫರಾಝ್ ಖಾನ್ ಅಹ್ಮದ್ ಅವರ ಚಿತ್ರ ಹಾಕಿಕೊಂಡು ಹೈದರಾಬಾದ್ ಬೋರಿಂಗ್ ಬ್ಯಾಟಿಂಗ್ಗೆ ಗೇಲಿ ಮಾಡಲಾಗಿದೆ.
|
ಪಂದ್ಯದ ಸಂಕ್ಷಿಪ್ತ ಸ್ಕೋರ್ಕಾರ್ಡ್
ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ ರೈಸರ್ಸ್ ಹೈದರಾಬಾದ್, ವೃದ್ಧಿಮಾನ್ ಸಾಹ 18, ಕೇನ್ ವಿಲಿಯಮ್ಸನ್ 18, ಮನೀಶ್ ಪಾಂಡೆ 17, ಅಬ್ದುಲ್ ಸಮದ್ 28, ರಶೀದ್ ಖಾನ್ 22 ರನ್ನೊಂದಿಗೆ 20 ಓವರ್ಗೆ 9 ವಿಕೆಟ್ ಕಳೆದು 134 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ 11, ಶಿಖರ್ ಧವನ್ 42, ಶ್ರೇಯಸ್ ಐಯ್ಯರ್ 47, ರಿಷಭ್ ಪಂತ್ 35 ರನ್ನೊಂದಿಗೆ 17.5 ಓವರ್ಗೆ 2 ವಿಕೆಟ್ ಕಳೆದು 139 ರನ್ ಗಳಿಸಿತು. 12 ರನ್ಗೆ 2 ವಿಕೆಟ್ ಪಡೆದ ಅನ್ರಿಕ್ ನಾರ್ಟ್ಜೆ ಪಂದ್ಯಶ್ರೇಷ್ಠರೆನಿಸಿದರು.