ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಹೈದರಾಬಾದ್ ವಿರುದ್ಧ ರೋಚಕ ಪಂದ್ಯ ಗೆದ್ದ ಪಂಜಾಬ್

IPL 2021, Sunrisers Hyderabad vs Punjab Kings, 37th Match, Report

ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ (ಸೆಪ್ಟೆಂಬರ್ 25) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 37ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ರೋಚಕ 5 ರನ್ ಜಯ ಗಳಿಸಿದೆ. ಜೇಸನ್ ಹೋಲ್ಡರ್ ಸ್ಫೋಟಕ ಬ್ಯಾಟಿಂಗ್‌ ಮತ್ತು ಮಾರಕ ಬೌಲಿಂಗ್‌ ಬಲದ ಹೊರತಾಗಿಯೂ ಹೈದರಾಬಾದ್ ಮತ್ತೆ ಸೋಲಿನ ಮುಖಭಂಗ ಅನುಭವಿಸಿದೆ. ಈ ಪಂದ್ಯದ ಬಳಿಕ ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಸೀಸನ್‌ನಲ್ಲಿ ಪ್ಲೇ ಆಫ್ಸ್ ಅವಕಾಶವನ್ನು ಕಳೆದುಕೊಂಡಿದೆ.

ನಾವು ತಟಸ್ಥ ತಾಣದಲ್ಲಿ ಸರಣಿ ನಡೆಸಲ್ಲ: ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನಾವು ತಟಸ್ಥ ತಾಣದಲ್ಲಿ ಸರಣಿ ನಡೆಸಲ್ಲ: ಪಾಕಿಸ್ತಾನ ಕ್ರಿಕೆಟ್ ಬೋರ್ಡ್

ಕೇನ್ ವಿಲಿಯಮ್ಸನ್ ನಾಯಕತ್ವದ ಸನ್ ರೈಸರ್ಸ್ ತಂಡ ಆಡಿರುವ 9 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. 7ನೇ ಸ್ಥಾನದಲ್ಲಿದ್ದ ಪಂಜಾಬ್ ಕಿಂಗ್ಸ್ ಈ ಗೆಲುವಿನೊಂದಿಗೆ 5ನೇ ಸ್ಥಾನಕ್ಕೇರಿದೆ. ಆಡಿರುವ 10 ಪಂದ್ಯಗಳಲ್ಲಿ ಪಂಜಾಬ್ 4 ಪಂದ್ಯಗಳನ್ನು ಗೆದ್ದಿದೆ. ಪಂಜಾಬ್ ಖಾತೆಯಲ್ಲೀಗ 8 ಪಾಯಿಂಟ್ಸ್ ಇವೆ.

ಇತ್ತಂಡಗಳ ಸಂಕ್ಷಿಪ್ತ ಸ್ಕೋರ್‌

ಇತ್ತಂಡಗಳ ಸಂಕ್ಷಿಪ್ತ ಸ್ಕೋರ್‌

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್‌ ಕಿಂಗ್ಸ್‌, ಕೆಎಲ್ ರಾಹುಲ್ 21, ಮಯಾಂಕ್ ಅಗರ್ವಾಲ್ 5, ಕ್ರಿಸ್ ಗೇಲ್ 14, ಐಡೆನ್ ಮಾರ್ಕ್ರಮ್ 27, ನಿಕೋಲಸ್ ಪೂರನ್ 8, ದೀಪಕ್ ಹೂಡಾ 13, ಹರ್‌ಪ್ರೀತ್ ಬ್ರಾರ್ 18, ನಾಥನ್ ಎಲ್ಲಿಸ್ 12 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 125 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್, ಡೇವಿಡ್ ವಾರ್ನರ್ 2, ವೃದ್ಧಿಮಾನ್ ಸಹಾ 31,ಕೇನ್ ವಿಲಿಯಮ್ಸನ್ 1, ಮನೀಶ್ ಪಾಂಡೆ 13, ಕೇದಾರ್ ಜಾಧವ್ 12, ಅಬ್ದುಲ್ ಸಮದ್ 1, ಜೇಸನ್ ಹೋಲ್ಡರ್ 47 (29), ರಶೀದ್ ಖಾನ್ 3, ಭುವನೇಶ್ವರ್ ಕುಮಾರ್ 3 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 120 ರನ್ ಗಳಿಸಿತು.

ಜೇಸನ್ ಹೋಲ್ಡರ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ

ಜೇಸನ್ ಹೋಲ್ಡರ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ

ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್‌ನ ಜೇಸನ್ ಹೊಲ್ಡರ್ 19 ರನ್‌ಗೆ 3 ವಿಕೆಟ್, ಸಂದೀಪ್ ಶರ್ಮಾ 1, ಭುವನೇಶ್ವರ್ ಕುಮಾರ್ 1, ರಶೀದ್ ಖಾನ್ 1, ಅಬ್ದುಲ್ ಸಮದ್ 1 ವಿಕೆಟ್‌ ಪಡೆದರೆ, ಹೈದರಾಬಾದ್ ಇನ್ನಿಂಗ್ಸ್‌ ನಲ್ಲಿ ಪಂಜಾಬ್ ಕಿಂಗ್ಸ್‌ನ ಮೊಹಮ್ಮದ್ ಶಮಿ 2, ಅರ್ಶದೀಪ್ ಸಿಂಗ್ 1, ರವಿ ಬಿಷ್ಣೋಯ್ 3 ವಿಕೆಟ್‌ನಿಂದ ಗಮನ ಸೆಳೆದರು.
ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ ಸನ್ ರೈಸರ್ಸ್ ಹೈದರಾಬಾದ್‌ನ ಜೇಸನ್ ಹೋಲ್ಡರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಸನ್ ರೈಸರ್ಸ್ ತಂಡಕ್ಕೆ ಇನ್ನೂ 5 ಪಂದ್ಯಗಳಿವೆ. ಈ ಪಂದ್ಯಗಳನ್ನು ಪ್ರತಿಷ್ಠೆಗಾದರೂ ಗೆಲ್ಲಬೇಕಿದೆ. ಸದ್ಯದ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಗ್ರ ಸ್ಥಾನಗಳಲ್ಲಿವೆ.

ಕೊನೆ ಕ್ಷಣದಲ್ಲಿ ಪಂದ್ಯಕ್ಕೆ ತಿರುವು ಕೊಟ್ಟ ಹರ್ಷಲ್ | Oneindia Kannada
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI

ಕೆಎಲ್ ರಾಹುಲ್ (ನಾಯಕ, ವಿಕೆಟ್ ಕೀಪರ್), ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಹರಪ್ರೀತ್ ಬ್ರಾರ್, ಅರ್ಷದೀಪ್ ಸಿಂಗ್, ನಾಥನ್ ಎಲ್ಲಿಸ್
ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI
ಡೇವಿಡ್ ವಾರ್ನರ್, ವೃದ್ಧಿಮಾನ್ ಸಹಾ (w), ಕೇನ್ ವಿಲಿಯಮ್ಸನ್ (c), ಮನೀಶ್ ಪಾಂಡೆ, ಕೇದಾರ್ ಜಾಧವ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್.

Story first published: Sunday, September 26, 2021, 1:01 [IST]
Other articles published on Sep 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X