ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೈದಾನದಲ್ಲಿಯೇ ಹರ್ಭಜನ್ ಕಾಲನ್ನು ಸ್ಪರ್ಶಿಸಿದ ಸುರೇಶ್ ರೈನಾ ; ವಿಡಿಯೋ ನೋಡಿ

IPL 2021: Suresh Raina Touched Harbhajan Singh Feet

ಇಂಡಿಯನ್ ಪ್ರೀಮಿಯರ್ ಲೀಗ್ ಕೇವಲ ಒಂದು ಕ್ರಿಕೆಟ್ ಟೂರ್ನಮೆಂಟ್ ಮಾತ್ರವಲ್ಲದೇ ಹಲವಾರು ಸ್ನೇಹ ಸಂಬಂಧಗಳು ಹುಟ್ಟಿಕೊಳ್ಳಲು ಕಾರಣವಾದ ವೇದಿಕೆ ಕೂಡ ಆಗಿದೆ. ಮೈದಾನದಲ್ಲಿ ಎರಡು ತಂಡಗಳ ನಡುವೆ ಮತ್ತು ಆಟಗಾರರ ನಡುವೆ ಪೈಪೋಟಿ ಇರುವುದು ಮಾತ್ರವಲ್ಲದೆ ಉತ್ತಮ ಸ್ನೇಹ ಬಾಂಧವ್ಯ ಕೂಡ ಇದೆ. ಕೇವಲ ತಮ್ಮ ತಂಡದ ಆಟಗಾರರ ಜೊತೆ ಮಾತ್ರವಲ್ಲದೆ ಬೇರೆ ತಂಡದ ಆಟಗಾರರ ಜೊತೆ ಕೂಡ ಆಟಗಾರರು ಉತ್ತಮ ಸ್ನೇಹ ಬಾಂಧವ್ಯವನ್ನು ಹೊಂದಿದ್ದು ಪರಸ್ಪರ ಎದುರಾದಾಗ ನಡೆದುಕೊಳ್ಳುವ ರೀತಿ ಇತರರಿಗೆ ಮಾದರಿಯಾಗಿರುತ್ತವೆ.

ಹೀಗೆ ವಿಭಿನ್ನ ತಂಡದ ಕೆಲ ಆಟಗಾರರು ಪರಸ್ಪರ ಎದುರಾದಾಗ ನಡೆದುಕೊಳ್ಳುವ ರೀತಿ ಈ ಹಿಂದೆ ಕೆಲವೊಮ್ಮೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ವೈರಲ್ ಆಗಿದ್ದವು. ಈಗ ಅದೇ ರೀತಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಸುರೇಶ್ ರೈನಾ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಹರ್ಭಜನ್ ಸಿಂಗ್ ಮೈದಾನದಲ್ಲಿ ಪರಸ್ಪರ ಭೇಟಿಯಾದಾಗ ನಡೆದುಕೊಂಡ ರೀತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬುಧವಾರ ( ಏಪ್ರಿಲ್ 21 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಪಂದ್ಯವಿತ್ತು.

ಈ ಪಂದ್ಯಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ ಮತ್ತು ಪ್ರಸ್ತುತ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರರಾದ ಹರ್ಭಜನ್ ಸಿಂಗ್ ಪರಸ್ಪರ ಭೇಟಿಯಾಗಿದ್ದಾರೆ. ಮೈದಾನದಲ್ಲಿದ್ದ ಹರ್ಭಜನ್ ಸಿಂಗ್ ಅವರ ಬಳಿ ಬಂದ ಸುರೇಶ್ ರೈನಾ ಹರ್ಭಜನ್ ಅವರ ಕಾಲು ಮುಗಿಯಲು ಪ್ರಯತ್ನಪಡುತ್ತಾರೆ , ಆದರೆ ಇದಕ್ಕೆ ಒಪ್ಪದ ಹರ್ಭಜನ್ ಸಿಂಗ್ ಸುರೇಶ್ ರೈನಾ ಕೈಗೆ ಕಾಲು ತಾಕದ ಹಾಗೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ, ನಂತರ ಇಬ್ಬರೂ ಪರಸ್ಪರ ನಗುವಿನೊಂದಿಗೆ ಮಾತನಾಡಲಾರಂಭಿಸಿದ್ದಾರೆ.

RCB ಗೆಲುವನ್ನ ವಿಶೇಷವಾಗಿ ಸಂಭ್ರಮಿಸಿದ Virat Kohli | Oneindia Kannada

ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸುರೇಶ್ ರೈನಾ ಅವರ ಸರಳತೆ ಮತ್ತು ಹಿರಿಯ ಆಟಗಾರರಿಗೆ ಅವರು ನೀಡುವ ಗೌರವಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

Story first published: Friday, April 23, 2021, 17:14 [IST]
Other articles published on Apr 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X