ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಬರೊಬ್ಬರಿ 677 ದಿನಗಳ ನಂತರ ಭಾರತಕ್ಕೆ ಮರಳುತ್ತಿದೆ ಚುಟುಕು ಕ್ರಿಕೆಟ್ ಜಾತ್ರೆ

IPL 2021: t20 cricket festival back in India after 677 days

ವಿಶ್ವ ಕ್ರಿಕೆಟ್‌ನ ಶ್ರೀಮಂತ ಲೀಗ್ ಎಂಬ ಹೆಗ್ಗಳಿಕೆಯ ಐಪಿಎಲ್ ಭಾರತದಲ್ಲಿ ನಡೆದು 677 ದಿನಗಳು ಕಳೆದಿದೆ. 2019ರ ಐಪಿಎಲ್ ಆವೃತ್ತಿಯ ಫೈನಲ್ ಪಂದ್ಯ ಮೇ 12ರಂದು ಭಾರತದಲ್ಲಿ ಅಂತಿಮವಾಗಿ ನಡೆದಿತ್ತು. ಆ ಪಂದ್ಯದಲ್ಲಿ ಮುಂಬೈ ಗೆದ್ದು ನಾಲ್ಕನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿತ್ತು. ಕಳೆದ ಆವೃತ್ತಿಯ ಟೂರ್ನಿಯನ್ನು ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಸುದೀರ್ಘ ವಿಳಂಬದ ಬಳಿಕ ಐಪಿಎಲ್‌ಅನ್ನು ವಿದೇಶದಲ್ಲಿ ನಡೆಸುವ ಪರಿಸ್ಥಿತಿ ಬರಬಹುದೆಂದು ಯಾರೂ ಊಹಿಸಿರಲಿಲ್ಲ.

ಕೊರೊನಾ ವೈರಸ್‌ನ ಕಾರಣದಿಂದಾಗಿ ಐಪಿಎಲ್ ವಿದೇಶದಲ್ಲಿ ನಡೆಯುವ ಅನಿವಾರ್ಯತೆ ಮಾತ್ರವೇ ಉಂಟಾಗಿರಲಿಲ್ಲ, ಇದರ ಜೊತೆಗೆ ಅದೇ ಮೊದಲ ಬಾರಿಗೆ ಐಪಿಎಲ್‌ಅನ್ನು ಮುಚ್ಚಿದ ಬಾಗಿಲುಗಳಲ್ಲಿ ಬಯೋಬಬಲ್ ನಿರ್ಮಿಸಿ ನಡೆಸಲಾಗಿತ್ತು. ಲಾಕ್‌ಡೌನ್ ಕಾರಣದಿಂದಾಗಿ ನಿಗದಿತ ಸಮಯಕ್ಕಿಂತ ಐದು ತಿಂಗಳು ತಡವಾಗಿ ಟೂರ್ನಿಯನ್ನು ಆಯೋಜಿಸಲಾಗಿತ್ತು.

ಐಪಿಎಲ್ 2021: ರಿಷಭ್ ಪಂತ್ ನಾಯಕನಾಗಿ ಮುರಿಯಬಲ್ಲ 5 ದಾಖಲೆಗಳುಐಪಿಎಲ್ 2021: ರಿಷಭ್ ಪಂತ್ ನಾಯಕನಾಗಿ ಮುರಿಯಬಲ್ಲ 5 ದಾಖಲೆಗಳು

ಅದೃಷ್ಟವಶಾತ್ ಭಾರತದಲ್ಲಿ ಆಡದಿದ್ದರೂ, ಅಭಿಮಾನಿಗಳ ಗೈರಿನ ಹೊರತಾಗಿಯೂ ಐಪಿಎಲ್ 2020 ಭಾರಿ ಯಶಸ್ಸನ್ನು ಸಾಧಿಸಿತ್ತು. ಇದು ಬಿಸಿಸಿಐಗೆ ಉತ್ಸಾಹವನ್ನು ಹೆಚ್ಚಿಸಿತ್ತು. ಹೀಗಾಗಿ ಟೂರ್ನಿಯನ್ನು ಭಾರತದಲ್ಲಿಯೇ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಆಯೋಜಿಸಲಾಗುತ್ತಿದೆ.

ಆದರೆ ಐಪಿಎಲ್ 2021 ಆವೃತ್ತಿಯ ಆರಂಭಕ್ಕೆ ಕೆಲವೇ ದಿನಗಳಿರುವಾಗ ಭಾರತಕ್ಕೆ ಎರಡನೇ ಅಲೆಯ ಕೊರೊನಾ ವೈರಸ್ ಆತಂಕವನ್ನು ಮೂಡಿಸಿದೆ. ಆದರೆ ಬಿಸಿಸಿಐ ಮುನ್ನೆಚ್ಚರಿಕಾ ಕ್ರಮಗಳ ಮೂಲಕ ಈ ಬಾರಿ ನಿಗದಿಯಂತೆಯೇ ಟೂರ್ನಿಯನ್ನು ನಡೆಸಲು ಉತ್ಸುಕವಾಗಿದೆ.

ಅದೇನೇ ಇದ್ದರೂ ಸುಮಾರು ಎರಡು ವರ್ಷಗಳ ನಂತರ ಭಾರತದಲ್ಲಿ ಆಡಲಾಗುತ್ತಿದೆ ಎಲ್ಲರಿಗೂ ಸಮಾಧಾನಕರವಾಗಿದೆ. ಇದು ಅಭಿಮಾನಿಗಳ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.

Story first published: Friday, April 9, 2021, 23:58 [IST]
Other articles published on Apr 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X