ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಧೋನಿಯಿಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಲ್ಲ: ಎನ್ ಶ್ರೀನಿವಾಸನ್

IPL 2021: There is no CSK without Dhoni, Srinivasan praises CSK skipper

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟೂರ್ನಿಯ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಗೆಲುವಿನ ಬಳಿಕ ಬಿಸಿಸಿಐನ ಮಾಜಿ ಅಧ್ಯಕ್ಷರೂ ಆಗಿರುವ ಸಿಎಸ್‌ಕೆ ಮಾಲಿಕ ಎನ್ ಶ್ರೀನಿವಾಸನ್ ಪ್ರತಿಕ್ರಿಯೆ ನೀಡಿದ್ದಾರೆ. ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದ ಗೆಲುವು ಇಡೀ ಚೆನ್ನೈಯನ್ನು ವಿಶ್ವದ ಅಗ್ರಸ್ಥಾನಕ್ಕೇರಿಸಿದೆ ಎಂದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಐಪಿಎಲ್ ಟ್ರೋಫಿ ಗೆಲ್ಲುವ ಮೂಲಕ ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಟೂರ್ನಿಯನ್ನು ಗೆದ್ದ ಸಾಧನೆ ಮಾಡಿದೆ. ಇದಕ್ಕೂ ಮುನ್ನ 2010, 2011 ಹಾಗೂ 2018ರಲ್ಲಿ ಧೋನಿ ನೇತೃತ್ವದ ಸಿಎಸ್‌ಕೆ ಐಪಿಎಲ್‌ನಲ್ಲಿ ತಂಡವೆನಿಸಿತ್ತು. ಇದೀಗ ಟ್ರೋಫಿ ಸಂಖ್ಯೆಯನ್ನು ನಾಲ್ಕಕ್ಕೆ ಏರಿಸಿದೆ.

ಟಿ20 ವಿಶ್ವಕಪ್: ರಾಹುಲ್, ಇಶಾನ್ ಕಿಶನ್ ಅಬ್ಬರ; ಅಭ್ಯಾಸ ಪಂದ್ಯದಲ್ಲಿ ಆಂಗ್ಲರಿಗೆ ಸೋಲುಣಿಸಿದ ಭಾರತಟಿ20 ವಿಶ್ವಕಪ್: ರಾಹುಲ್, ಇಶಾನ್ ಕಿಶನ್ ಅಬ್ಬರ; ಅಭ್ಯಾಸ ಪಂದ್ಯದಲ್ಲಿ ಆಂಗ್ಲರಿಗೆ ಸೋಲುಣಿಸಿದ ಭಾರತ

ಈ ಗೆಲುವಿನ ನಂತರ ಎಂಎಸ್ ಧೋನಿ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿರುವ ಎನ್ ಶ್ರೀನಿವಾಸನ್ ಇದೊಂದು ಗುರುತರವಾದ ಗೆಲುವಾಗಿದ್ದು ಚೆನ್ನೈ ತಂಡ ವಿಶ್ವಮಟ್ಟದಲ್ಲಿ ಅಗ್ರಸ್ಥಾನಕ್ಕೇರಲು ಕಾರಣವಾಗಿದೆ ಎಂದಿದ್ದಾರೆ. "ಧೋನಿ ಸಿಎಸ್‌ಕೆ ತಂಡದ ಮತ್ತು ತಮಿಳುನಾಡಿದ ಅವಿಭಾಜ್ಯ ಅಂಗವಾಗಿದ್ದಾರೆ. ಧೋನಿಯಿಲ್ಲದೆ ಸಿಎಸ್‌ಕೆ ಇಲ್ಲ, ಸಿಎಸ್‌ಕೆ ಇಲ್ಲದೆ ಧೋನಿಯಿಲ್ಲ" ಎಂದು ಸಿಎಸ್‌ಕೆ ತಂಡದ ಮಾಲಿಕ ಎನ್ ಶ್ರೀನಿವಾಸನ್ ಹೇಳಿಕೆ ನೀಡಿದ್ದಾರೆ. ಅವರು ಐಪಿಎಲ್ ಟ್ರೋಫಿಯೊಂದಿಗೆ ಚೆನ್ನೈನ ವೆಂಕಟಾಚಲಪತಿ ದೇಗುಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೋಂದಿಗೆ ಮಾತನಾಡಿದ್ದಾರೆ.

ಟಿ20 ವಿಶ್ವಕಪ್‌: ಕಾರಣ ತಿಳಿಸಿ ರೋಹಿತ್ ಶರ್ಮಾ ಜೊತೆ ಕಣಕ್ಕಿಳಿಯುವ ನಿರ್ಧಾರದಿಂದ ಹಿಂದೆ ಸರಿದ ಕೊಹ್ಲಿ!ಟಿ20 ವಿಶ್ವಕಪ್‌: ಕಾರಣ ತಿಳಿಸಿ ರೋಹಿತ್ ಶರ್ಮಾ ಜೊತೆ ಕಣಕ್ಕಿಳಿಯುವ ನಿರ್ಧಾರದಿಂದ ಹಿಂದೆ ಸರಿದ ಕೊಹ್ಲಿ!

ಈ ಬಾರಿಯ ಐಪಿಎಲ್‌ನಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಐಪಿಎಲ್‌ನ ಫೈನಲ್ ಹಂತಕ್ಕೇರಿತ್ತು. ಈ ಪಂದ್ಯದಲ್ಲಿ ಕೆಕೆಆರ್‌ಗೆ ಸೋಲುಣಿಸಿ ಸಿಎಸ್‌ಗೆ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಇನ್ನು ಈ ಸಂದರ್ಭದಲ್ಲಿ ಶ್ರೀನಿವಾಸನ್ ಬಳಿ ಧೋನಿಯನ್ನು ಮುಂದಿನ ಆವೃತ್ತಿಯಲ್ಲಿ ರೀಟೈನ್ ಮಾಡಿಕೊಳ್ಳುವ ಬಗ್ಗೆ ಹೇಳಿಕೆ ನೀಡಿದ ಶ್ರೀನಿವಾಸನ್ ರೀಟೈನ್ ಬಗ್ಗೆ ನಿಯಮಾವಳಿಗಳು ಇನ್ನೂ ಬಂದಿಲ್ಲ ಎಂದಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಎನ್ ಶ್ರೀನಿವಾಸನ್ ಬಳಿ ತಮಿಳುನಾಡಿದ ಯಾವುದೇ ಆಟಗಾರ ಸಿಎಸ್‌ಕೆ ತಂಡದಲ್ಲಿ ಇಲ್ಲದ ಬಗ್ಗೆ ಕೇಳಿ ಬಂದಿರುವ ಟೀಕೆಯನ್ನೂ ಪ್ರಸ್ತಾಪಿಸಲಾಯಿತು. ಇದಕ್ಕೆ ಉತ್ತರಿಸಿದ ಶ್ರೀನಿವಾಸನ್ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಪ್ರತಿನಿಧಿಸಿರುವ 13 ಆಟಗಾರರು ಐಪಿಎಲ್ ಅಥವಾ ಟೀಮ್ ಇಂಡಿಯಾ ತಂಡವನ್ನು ಪ್ರತಿನಿಧಿಸುತ್ತಾರೆ ಎಂದಿದ್ದಾರೆ. "ಸಾಕಷ್ಟ೮ ಸಂಖ್ಯೆಯಲ್ಲಿ ಜನರು ತಮಿಳುನಾಡು ಪ್ರೀಮಿಯರ್ ಲೀಗ್ ವೀಕ್ಷಿಸುತ್ತಾರೆ. ಇದರಿಂದಾಗಿ ಮತ್ತಷ್ಟು ಹೆಚ್ಚಿನ ಶಕ್ತಿ ದೊರೆಯುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿನ ಸಂಭ್ರಮಾಚರಣೆಯ ಬಗ್ಗೆಯೂ ಶ್ರೀನಿವಾಸನ್ ಬಳಿ ಪ್ರಶ್ನಿಸಲಾಯಿತು. ಅದಕ್ಕೆ ಉತ್ತರಿಸಿದ ಅವರು ಧೋನಿ ರಾಷ್ಟ್ರೀಯ ತಂಡದ ಮೆಂಟರ್ ಆಗಿ ಕರ್ತವ್ಯದಲ್ಲಿದ್ದಾರೆ. ಈ ರಾಷ್ಟ್ರೀಯ ಕರ್ತವ್ಯ ಮುಗಿಸಿದ ನಂತರ ತಮಿಳುನಾಡಿಗೆ ಆಗಮಿಸಲಿದ್ದಾರೆ. ಆ ಸಂದರ್ಭದಲ್ಲಿ ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿ ಮುಖ್ಯಮಂತ್ರಿ ಸ್ಟಾಲಿನ್ ಅವರ ಜೊತೆಗೆ ಅಭಿಮಾನಿಗಳ ಸಮ್ಮುಖದಲ್ಲಿ ಸಂಭ್ರಮಾಚರಣೆ ಮಾಡುವುದಾಗಿ ಶ್ರೀನಿವಾಸನ್ ತಿಳಿಸಿದ್ದಾರೆ.

ಟಿ20 ವಿಶ್ವಕಪ್: ಪಾರ್ಥೀವ್ ಪಟೇಲ್ ಹೆಸರಿಸಿದ ಟೀಮ್ ಇಂಡಿಯಾದ ಪ್ಲೇಯಿಂಗ್ XIಟಿ20 ವಿಶ್ವಕಪ್: ಪಾರ್ಥೀವ್ ಪಟೇಲ್ ಹೆಸರಿಸಿದ ಟೀಮ್ ಇಂಡಿಯಾದ ಪ್ಲೇಯಿಂಗ್ XI

ಚೆನ್ನೈ ಸೂಪರ್ ಕಿಂಗ್ಸ್ ಸಂಪೂರ್ಣ ಸ್ಕ್ವಾಡ್: ಋತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಅಂಬಾಟಿ ರಾಯುಡು, ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಡ್ವೇಯ್ನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹಜಲ್‌ವುಡ್, ಸುರೇಶ್ ರೈನಾ, ಚೇತೇಶ್ವರ ಪೂಜಾರ, ಕರ್ಣ್ ಶರ್ಮಾ, ಇಮ್ರಾನ್ ತಾಹಿರ್ , ಜೇಸನ್ ಬೆಹ್ರೆಂಡೋರ್ಫ್, ಕೃಷ್ಣಪ್ಪ ಗೌತಮ್, ಲುಂಗಿ ಎನ್‌ಗಿಡಿ, ಮಿಚೆಲ್ ಸಾಂಟ್ನರ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಹರಿ ನಿಶಾಂತ್, ಎನ್ ಜಗದೀಶನ್, ಕೆಎಂ ಆಸಿಫ್, ಹರಿಶಂಕರ್ ರೆಡ್ಡಿ, ಡೊಮಿನಿಕ್ ಡ್ರೇಕ್ಸ್, ಭಗತ್ ವರ್ಮ

Chahal ಅವರ ಜಾಗ ಕಸಿದುಕೊಂಡ ಆಟಗಾರ ಯಾರು ? | Oneindia Kannada

Story first published: Tuesday, October 19, 2021, 12:12 [IST]
Other articles published on Oct 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X