ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಸ್‌ಗೇಲ್ ಹೆಸರಿನಲ್ಲಿರುವ ವೇಗದ ಐಪಿಎಲ್ ಶತಕದ ದಾಖಲೆ ಮುರಿಯಬಲ್ಲ ಐವರು ಕ್ರಿಕೆಟಿಗರು ಇವರು

IPL 2021: These 5 crickters could break Chris Gayle’s fastest century record in IPL

14ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಈಗ ಕ್ಷಣಗಣನೆ ಆರಂಭವಾಗಿದ್ದು ಎಲ್ಲಾ ಆಟಗಾರರು ಹಾಗೂ ಅಭಿಮಾನಿಗಳು ಈ ಕ್ರಿಡಾಕೂಟದಲ್ಲಿ ಪಾಲ್ಗೊಳ್ಳಲು ಹಾಗೂ ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ. ಇದರ ಜೊತೆಗೆ ಈ ಬಾರಿಯ ಐಪಿಎಲ್‌ನಲ್ಲಿ ಯಾವೆಲ್ಲಾ ದಾಖಲೆಗಳು ರೆಕಾರ್ಡ್ ಪಟ್ಟಿಗೆ ಸೇರಿಕೊಳ್ಳಬಹುದು ಎಂಬುದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ.

ಐಪಿಎಲ್‌ನಲ್ಲಿ ಅತ್ಯಂತ ವೇಗವಾಗಿ ಶತಕವನ್ನು ಬಾರಿಸಿದ ದಾಖಲೆ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಹೆಸರಿನಲ್ಲಿದೆ. 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಪರವಾಗಿ ಆಡಲು ಇಳಿದಿದ್ದ ಗೇಲ್ ಕೇವಲ 30 ಎಸೆತಗಳಲ್ಲಿ ಈ ದಾಖಲೆಯನ್ನು ಮಾಡಿದ್ದರು. ಆ ಪಂದ್ಯದಲ್ಲಿ ಗೇಲ್ ಕೇವಲ 66 ಎಸೆತಗಳಲ್ಲಿ 175 ರನ್‌ ಬಾರಿಸಿದ್ದರು.

ಮುಂಬೈ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ XI ಹೆಸರಿಸಿದ ಚೋಪ್ರಾಮುಂಬೈ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ XI ಹೆಸರಿಸಿದ ಚೋಪ್ರಾ

ಈ ಬಾರಿಯ ಐಪಿಎಲ್‌ನಲ್ಲಿ ಈ ಅತ್ಯಂತ ವೇಗದ ಐಪಿಎಲ್ ಶತಕದ ದಾಖಲೆಯನ್ನು ಯಾರಾದರೂ ಮುರಿಯಬಹುದಾ ಎಂಬುದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಈ ದಾಖಲೆಯನ್ನು ಮುರಿಯಬಲ್ಲ ಸಾಮರ್ಥ್ಯವನ್ನು ಹೊಂದಿರುವ 5 ಕ್ರಿಕೆಟಿಗರ ಪಟ್ಟಿ ಇಲ್ಲಿದೆ

ಎಬಿ ಡಿವಿಲಿಯರ್ಸ್

ಎಬಿ ಡಿವಿಲಿಯರ್ಸ್

ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ ಅದ್ಭುತವಾಗಿ ರನ್‌ಗಳಿಸಬಲ್ಲ ಸಾಮರ್ಥ್ಯವನ್ನು ಹೊಂದಿರುವ ಆಟಗಾರ. ಐಪಿಎಲ್‌ನಲ್ಲಿ ಸಾಕಷ್ಟು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ ಎಬಿ ಡಿವಿಲಿಯರ್ಸ್. ಡಿವಿಲಿಯರ್ಸ್ ಈವರೆಗೆ 3 ಶತಕಗಳನ್ನು ಬಾರಿಸಿದ್ದಾರೆ. ಮುಂಬರುವ ಆವೃತ್ತಿಗಾಗಿ ಡಿವಿಲಿಯರ್ಸ್ ಸಾಕಷ್ಟು ಬೆವರಿಳಿಸುತ್ತಿದ್ದು ವೇಗದ ಶತಕವನ್ನು ಸಿಡಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಡೇವಿಡ್ ವಾರ್ನರ್

ಡೇವಿಡ್ ವಾರ್ನರ್

ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಐಪಿಎಲ್‌ನಲ್ಲಿ ಟಾಪ್ 5 ವೇಗದ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿರುವ ಎರಡನೇ ಸಕ್ರಿಯ ಆಟಗಾರ. ಗೇಲಕ್ ಮೊದಲನೆಯವರಾಗಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅವರು 43 ಎಸೆತಗಳಲ್ಲಿ ಶತಕವನ್ನು ಬಾರಿಸಿ ಮಿಂಚಿದ್ದರು.

ಜಾನಿ ಬೈರ್‌ಸ್ಟೋವ್

ಜಾನಿ ಬೈರ್‌ಸ್ಟೋವ್

ಸನ್‌ರೈಸರ್ಸ್ ಹೈದರಾಬಾದ್ ತಂಡದ ಮತ್ತೋರ್ವ ಆಟಗಾರ ಜಾನಿ ಬೈರ್‌ಸ್ಟೋವ್ ಕೂಡ ಈ ವೇಗದ ಶತಕವನ್ನು ಬಾರಿಸುವ ಸಾಮರ್ಥ್ಯವನ್ನು ಹೊಂದಿದ ಆಟಗಾರನಾಗಿದ್ದಾರೆ. ಭಾರತದ ವಿರುದ್ಧಧ ಏಕದಿನ ಸರಣಿಯಲ್ಲಿ ಬೈರ್‌ಸ್ಟೋವ್ ಮೊದಲ ಎರಡು ಪಂದ್ಯಗಳಲ್ಲಿ 94 ಮತ್ತು 122 ರನ್‌ಗಳನ್ನು ಬಾರಿಸಿದ್ದರು. 21 ಐಪಿಎಲ್ ಪಂದ್ಯಗಳಲ್ಲಿ ಆಡಿರುವ ಬೈರ್‌ಸ್ಟೋವ್ 790 ರನ್‌ಗಳಿಸಿದ್ದಾರೆ.

ಕೆಎಲ್ ರಾಹುಲ್

ಕೆಎಲ್ ರಾಹುಲ್

ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಅತಿ ಹೆಚ್ಚಿನ ರನ್‌ಗಳಿಸಿದ ಆಟಗಾರ ಎನಿಸಿದ್ದಾರೆ. ಐಪಿಎಲ್‌ನಲ್ಲಿ ಅತ್ಯಂತ ವೇಗವಾಗಿ ಅರ್ಧ ಶತಕದ ದಾಖಲೆಯನ್ನು ಹೆಎಲ್ ರಾಹುಲ್ ಹೊಂದಿದ್ದಾರೆ. ಕೇವಲ 14 ಎಸೆತಗಳಲ್ಲಿ ಅವರು ಅರ್ಧ ಶತಕವನ್ನು ಸಿಡಿಸಿ ಮಿಂಚಿದ್ದಾರೆ. ಇದರೊಂದಿಗೆ ಈ ಬಾರಿಯ ಐಪಿಎಲ್‌ಗೂ ಮುನ್ನ ಫಾರ್ಮ್‌ಗೆ ಮರಳಿರುವ ರಾಹುಲ್ ಈಗ ವೇಗವಾಗಿ ಶತಕವನ್ನು ದಾಖಲಿಸುವ ಅವಕಾಶವನ್ನು ಹೊಂದಿದ್ದಾರೆ.

ಸುರೇಶ್ ರೈನಾ

ಸುರೇಶ್ ರೈನಾ

ಕಳೆದ ಆವೃತ್ತಿಯಲ್ಲಿ ಸಂಪೂರ್ಣ ಟೂರ್ನಿಯಿಂದ ಸುರೇಶ್ ರೈನಾ ಹೊರಗುಳಿದಿದ್ದರು. ಆದರೆ ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಅದ್ಭುತ ಪ್ರದರ್ಶನವನ್ನು ನೀಡುವ ಭರವಸೆಯನ್ನು ಅವರು ಹೊಂದಿದ್ದಾರೆ. ವೇಗದ ಅರ್ಧ ಶತಕವನ್ನು ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ರೈನಾ 4ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಎಲ್ಲಾ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸುವ ಸಾಮರ್ಥ್ಯವನ್ನು ಹೊಂದಿರುವ ರೈನಾ ಈ ವೇಗದ ಶತಕದ ದಾಖಲೆಯನ್ನು ತನ್ನ ಹೆಸರಿಗೆ ಬರೆಯುವ ಸಾಮರ್ಥ್ಯವನ್ನು ಹೆಸರಿಸಿದ್ದಾರೆ.

Story first published: Monday, April 5, 2021, 16:01 [IST]
Other articles published on Apr 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X