ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಭವಿಸಿದ ಐದು ಕುತೂಹಲಕಾರಿ ಸಂಗತಿಗಳಿವು

IPL 2021: These five incidents happened for the first time in History of IPL

ಐಪಿಎಲ್‌ನ ಪ್ರತಿ ಪಂದ್ಯಗಳು ಕೂಡ ಅಭಿಮಾನಿಗಳಿಗೆ ರೋಮಾಂಚನಕಾರಿ ಅನುಭವ ನೀಡುತ್ತದೆ. ಪ್ರತಿ ಆವೃತ್ತಿಯಲ್ಲಿ ಕೂಡ ಅನೇಕ ಸ್ಮರಣೀಯ ಕ್ಷಣಗಳನ್ನು ಅಭಿಮಾನಿಗಳು ಪಡೆದುಕೊಂಡಿರುತ್ತಾರೆ. ಇದೀಗ ಮತ್ತೊಂದು ಐಪಿಎಲ್ ಆವೃತ್ತಿ ಮುಕ್ತಾಯವಾಗಿದ್ದು ಅಂಥಾದ್ದೇ ಅನೇಕ ನೆನಪಿನ ಕ್ಷಣಗಳನ್ನು ತಮ್ಮ ಸ್ಮೃತಿಪಟಲದಲ್ಲಿ ಅಭಿಮಾನಿಗಳು ಹೊಂದಿದ್ದಾರೆ.

14ನೇ ಐಪಿಎಲ್ ಆವೃತ್ತಿಗೆ ಕೊರೊನಾವೈರಸ್ ಆಘಾತ ನೀಡಿದ ಕಾರಣದಿಂದಾಗಿ ಪ್ರಥಮ ಬಾರಿಗೆ ಟೂರ್ನಿ ಅರ್ಧಕ್ಕೆ ನಿಂದು ಬಳಿಕ ಯುಎಇನಲ್ಲಿ ನಡೆಸಲಾಯಿತು. ಈ ಎರಡು ಚರಣದಲ್ಲಿಯೂ ಅಭಿಮಾನಿಗಳು ಸಾಕಷ್ಟು ರೋಮಾಂಚನಕಾರಿ ಅನುಭವವನ್ನು ಪಡೆದುಕೊಂಡಿದ್ದಾರೆ. ಆದರೆ ಇಡೀ ಟೂರ್ನಿಯಲ್ಲಿ ಆಟಗಾರರ ಪ್ರದರ್ಶನವನ್ನು ದೃಷ್ಟಿಯಲ್ಲಿಟ್ಟು ನೋಡಿದಾಗ ಕೆಲ ಅತ್ಯಂತ ವಿಶೇಷ ಕ್ಷಣಗಳು ದಾಖಲಾಗಿದೆ. ಕಳೆದ 13 ವರ್ಷಗಳ ಐಪಿಎಲ್ ಆವೃತ್ತಿಯಲ್ಲಿ ಎಂದೂ ದಾಖಲಾಗದ ವಿಶೇಷ ದಾಖಲೆ, ಮೈಲಿಗಲ್ಲು, ವಿಶೇಷ ಕ್ಷಣಗಳು ಈ ಬಾರಿಯ ಐಪಿಎಲ್‌ನಲ್ಲಿ ದಾಖಲಾಗಿದೆ.

ರವಿಶಾಸ್ತ್ರಿ ನಂತರ ಯಾರು ಟೀಮ್ ಇಂಡಿಯಾ ಕೋಚ್ ಆಗುತ್ತಿದ್ದಾರೋ ಗೊತ್ತಿಲ್ಲ!: ವಿರಾಟ್ ಕೊಹ್ಲಿರವಿಶಾಸ್ತ್ರಿ ನಂತರ ಯಾರು ಟೀಮ್ ಇಂಡಿಯಾ ಕೋಚ್ ಆಗುತ್ತಿದ್ದಾರೋ ಗೊತ್ತಿಲ್ಲ!: ವಿರಾಟ್ ಕೊಹ್ಲಿ

ಐಪಿಎಲ್ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಆರ್‌ಸಿಬಿ ಆಟಗಾರನಿಗೆ ಪರ್ಪಲ್ ಕ್ಯಾಪ್

ಐಪಿಎಲ್ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಆರ್‌ಸಿಬಿ ಆಟಗಾರನಿಗೆ ಪರ್ಪಲ್ ಕ್ಯಾಪ್

ಈ ಬಾರಿಯ ಐಪಿಎಲ್‌ನಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ದೊರೆಯುವ ಪರ್ಪಲ್ ಕ್ಯಾಪ್ ಆರ್‌ಸಿಬಿ ತಂಡದ ವೇಗಿ ಹರ್ಷಲ್ ಪಟೇಲ್ ಮುಡಿಗೇರಿದೆ. ಆರ್‌ಸಿಬಿ ತಂಡದ ಈ ವೇಗಿ ಈ ಬಾರಿ ದಾಖಲೆಯ 32 ವಿಕೆಟ್ ಪಡೆದು ಮಿಂಚಿದ್ದಾರೆ. ಈ ಮೂಲಕ ಐಪಿಎಲ್‌ನ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬ್ರಾವೋ ದಾಖಲೆಯನ್ನು ಸರಿದೂಗಿಸಿದ್ದಾರೆ. ಈ ಮೂಲಕ ಹರ್ಷಲ್ ಪಟೇಲ್ ಐಪಿಎಲ್ ಇತಿಹಾಸದಲ್ಲಿ ಪ್ರಥಮ ಬಾರಿಗೆ ಆರ್‌ಸಿಬಿ ಬೌಲರ್ ಓರ್ವ ಪರ್ಪಲ್ ಕ್ಯಾಪ್ ಪಡೆದ ಸಾಧನೆ ಮಾಡಿದ್ದಾರೆ.

ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಮೊದಲ ಅನ್‌ಕ್ಯಾಪ್ಡ್ ಆಟಗಾರ

ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಮೊದಲ ಅನ್‌ಕ್ಯಾಪ್ಡ್ ಆಟಗಾರ

ಇನ್ನು ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ವೇಗಿ ಹರ್ಷಲ್ ಪಟೇಲ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕೂಡ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಮೊದಲ ಅನ್‌ಕ್ಯಾಪ್‌ಡ್ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

ಕೊನೆಯ ಸ್ಥಾನ ಪಡೆದ ಸನ್‌ರೈಸರ್ಸ್ ಹೈದರಾಬಾದ್

ಕೊನೆಯ ಸ್ಥಾನ ಪಡೆದ ಸನ್‌ರೈಸರ್ಸ್ ಹೈದರಾಬಾದ್

ಇನ್ನು ಐಪಿಎಲ್‌ನಲ್ಲಿ ಸದಾ ಅಪಾಯಕಾರಿ ತಂಡ ಎನಿಸಿರುವ ಸನ್‌ರೈಸರ್ಸ್ ಹೈದರಾಬಾದ್ ಈ ಬಾರಿ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಟೂರ್ನಿಯಲ್ಲಿ ಸೋಲಿನ ಮೇಲೆ ಸೋಲು ಕಂಡ ಸನ್‌ರೈಸರ್ಸ್ ಹೈದರಾಬಾದ್ ಪ್ಲೇಆಫ್ ಹಂತಕ್ಕೇರುವಲ್ಲಿ ವಿಫಲವಾದ ಮೊದಲ ತಂಡ ಎನಿಸಿತು. ಅಲ್ಲದೆ ಲೀಗ್ ಹಂತದ ಅಂತ್ಯಕ್ಕಾಗುವ ವೇಳೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿತು. ಈ ಮೂಲಕ ಹೈದರಾಬಾದ್ ಮೂಲದ ಫ್ರಾಂಚೈಸಿ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.

ಮಧ್ಯದಲ್ಲಿ ಸ್ಥಗಿತವಾಯ್ತು ಐಪಿಎಲ್

ಮಧ್ಯದಲ್ಲಿ ಸ್ಥಗಿತವಾಯ್ತು ಐಪಿಎಲ್

ಇನ್ನು ಈ ಬಾರಿಯ ಐಪಿಎಲ್ ಹಿಂದೆಂದೂ ನಡೆಯಲಾರದ ರೀತಿಯಲ್ಲಿ ಟೂರ್ನಿಯ ಅರ್ಧಕ್ಕಾಗುವ ವೇಳೆ ಸ್ಥಗಿತವಾಗಿತ್ತು. ಭಾರತದಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 29 ಪಂದ್ಯಗಳು ಅಂತ್ಯವಾದ ಬಳಿಕ ಐಪಿಎಲ್ ಬಯೋಬಬಲ್‌ನ ಒಳಗೆ ಕೊರೊನಾವೈರಸ್ ಕಾಣಿಸಿಕೊಂಡಿತ್ತು. ಹೀಗಾಗಿ ಟೂರ್ನಿಯನ್ನು ತಕ್ಷಣವೇ ಮೊಟಕುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು. ನಂತರ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸಲಾಯಿತು.

ಪರ್ಪಲ್ ಪಟೇಲ್ ಗೆ 3 ಪ್ರಶಸ್ತಿ ಜೊತೆಗೆ ಸಿಕ್ಕ ದುಡ್ಡು ಅಷ್ಟಿಷ್ಟಲ್ಲ!! | Oneindia Kannada
ಐಪಿಎಲ್ ಟ್ರೋಫಿ ಗೆದ್ದ ನಿವೃತ್ತ ಭಾರತೀಯ ಕ್ರಿಕೆಟಿಗ

ಐಪಿಎಲ್ ಟ್ರೋಫಿ ಗೆದ್ದ ನಿವೃತ್ತ ಭಾರತೀಯ ಕ್ರಿಕೆಟಿಗ

ಇನ್ನು ಈ ಬಾರಿಯ ಐಪಿಎಲ್ ಟ್ರೋಫಿಯನ್ನು ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದುಕೊಂಡಿದೆ. ಈಗಾಗಲೇ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಯಿಂದಲೂ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಸಿಎಸ್‌ಕೆ ನಾಯಕ ಧೊನಿ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಐಪಿಎಲ್ ಟ್ರೋಫಿ ಗೆದ್ದ ಮೊದಲ ಆಟಗಾರ ಎನಿಸಿದ್ದಾರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ. ಇದು ಕೂಡ ಐಪಿಎಲ್‌ನ ಕಳೆದ 13 ಆವೃತ್ತಿಗಳಲ್ಲಿ ಇದೆ ಮೊದಲ ಬಾರಿಗೆ ನಡೆದ ಅಪರೂಪದ ಸಾಧನೆಯಾಗಿದೆ.

Story first published: Monday, October 18, 2021, 10:12 [IST]
Other articles published on Oct 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X