ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ಗೆ ಪದಾರ್ಪಣೆ ಮಾಡಿ ವಿಶೇಷ ದಾಖಲೆ ಬರೆದ ಟಿಮ್ ಡೇವಿಡ್

IPL 2021: Tim David makes IPL debut for RCB against CSK

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡದ ಪರವಾಗಿ ಟಿಮ್ ಡೇವಿಡ್ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಟಿಮ್ ಡೇವಿಡ್ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. 14 ಆವೃತ್ತಿಗಳಲ್ಲಿ ಐಪಿಎಲ್‌ನಲ್ಲಿ ಭಾಗವಹಿಸುತ್ತಿರುವ ಸಿಂಗಪೂರ್‌ನ ಪ್ರಥಮ ಆಟಗಾರ ಎನಿಸಿದ್ದಾರೆ ಟಿಮ್ ಡೇವಿಡ್. ಸ್ಪೋಟಕ ಆಟಗಾರನಾಗಿ ಗಮನಸೆಳೆದಿರುವ ಡೇವಿಡ್ ಮೇಲೆ ಆರ್‌ಸಿಬಿ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದಾರೆ.

ಟಿಮ್ ಡೇವಿಡ್ ಸದ್ಯ ಸಿಂಗಾಪುರ್ ರಾಷ್ಟ್ರೀಯ ತಂಡದ ಪರ ಆಡುತ್ತಿದ್ದಾರೆ. 25ರ ಹರೆಯದ ಡೇವಿಡ್, ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ ಫಿನ್ ಅಲೆನ್ ಬದಲಾಗಿ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದರು. ಐಪಿಎಲ್‌ನಲ್ಲಿ ಅದರಲ್ಲೂ ಆರ್‌ಸಿಬಿ ತಂಡ ಸೇರಿಕೊಂಡಿರುವುದರಿಂದ ಟಿಮ್ ಡೇವಿಡ್ ಮೇಲೆ ಕ್ರಿಕೆಟ್ ಲೋಕದ ಚಿತ್ತ ನೆಟ್ಟಿದೆ.

ಕೊಹ್ಲಿ, ಗೇಲ್, ಎಬಿಡಿಗಿಂತ ಈತ ಐಪಿಎಲ್‌ನಲ್ಲಿ ಡೇಂಜರಸ್ ಆಟಗಾರ ಎಂದ ಗೌತಮ್ ಗಂಭೀರ್ಕೊಹ್ಲಿ, ಗೇಲ್, ಎಬಿಡಿಗಿಂತ ಈತ ಐಪಿಎಲ್‌ನಲ್ಲಿ ಡೇಂಜರಸ್ ಆಟಗಾರ ಎಂದ ಗೌತಮ್ ಗಂಭೀರ್

ಒಟ್ಟು 11 ಟಿ20ಐ ಪಂದ್ಯಗಳನ್ನಾಡಿರುವ ಬ್ಯಾಟಿಂಗ್‌ ಆಲ್ ರೌಂಡರ್ ಡೇವಿಡ್, 11 ಟಿ20ಐ ಪಂದ್ಯಗಳಲ್ಲಿ 47.67ರ ಸರಾಸರಿಯಲ್ಲಿ 429 ರನ್ ಗಳಿಸಿದ್ದಾರೆ. 157.72 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 92 ಅತ್ಯಧಿಕ ರನ್ ಗಳಿಸಿರುವ ಟಿಮ್, 3 ಅರ್ಧ ಶತಕಗಳನ್ನೂ ಬಾರಿಸಿದ್ದಾರೆ. ಒಟ್ಟಾರೆಯಾಗಿ 49 ಟಿ20 ಪಂದ್ಯಗಳನ್ನಾಡಿರುವ ಟಿಮ್, 155 ಸ್ಟ್ರೈಕ್‌ ರೇಟ್‌ನಂತೆ 1171 ರನ್ ಗಳಿಸಿದ್ದಾರೆ. ಬಿಗ್‌ಬ್ಯಾಷ್ ಲೀಗ್‌ (ಬಿಬಿಎಲ್) ಮತ್ತು ಪಾಕಿಸ್ತಾನ್ ಸೂಪರ್ ಲೀಗ್‌ (ಪಿಎಸ್‌ಎಲ್)ನಲ್ಲೂ ಟಿಮ್ ಉತ್ತಮ ಪ್ರದರ್ಶನ ನೀಡಿದ್ದಾರೆ.

ಲಿಸ್ಟ್‌ ಎ ಪಂದ್ಯವೊಂದರಲ್ಲಿ ಟಿಮ್ 140 ರನ್ ವೈಯಕ್ತಿಕ ಅತ್ಯಧಿಕ ರನ್ ದಾಖಲೆ ಹೊಂದಿದ್ದಾರೆ. ವೆಸ್ಟರ್ನ್ ಆಸ್ಟ್ರೇಲಿಯಾ XI, ಪರ್ತ್ ಸ್ಕಾರ್ಚರ್ಸ್, ಸಿಂಗಾಪುರ್, ಹೋಬರ್ಟ್ ಹರಿಕೇನ್ಸ್, ಲಾಹೋರ್ ಕಲಂದರ್ಸ್, ಸರ್ರೆ, ಸೇಂಟ್ ಲೂಸಿಯಾ ಕಿಂಗ್ಸ್, ಸೌತ್ ಬ್ರೇವ್ ಪರ ಆಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದ್ವಿತೀಯ ಹಂತದ ಐಪಿಎಲ್‌ಗೆ ತಂಡದಲ್ಲಿ ಒಂದಿಷ್ಟು ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡಿರುವುದರಿಂದ ಯುಎಇಯಲ್ಲಿ ಆರ್‌ಸಿಬಿ ಪ್ರದರ್ಶನದತ್ತ ಅಭಿಮಾನಿಗಳ ಚಿತ್ತವಿದೆ.

ಐಪಿಎಲ್: ಮಹೇಂದ್ರ ಸಿಂಗ್ ಧೋನಿ ದಾಖಲೆ ಮುರಿದ ದಿನೇಶ್ ಕಾರ್ತಿಕ್ಐಪಿಎಲ್: ಮಹೇಂದ್ರ ಸಿಂಗ್ ಧೋನಿ ದಾಖಲೆ ಮುರಿದ ದಿನೇಶ್ ಕಾರ್ತಿಕ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI ವಿರಾಟ್ ಕೊಹ್ಲಿ (ಸಿ), ದೇವದತ್ ಪಡಿಕ್ಕಲ್, ಶ್ರೀಕರ್ ಭಾರತ್ (ಡಬ್ಲ್ಯೂ), ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್, ಟಿಮ್ ಡೇವಿಡ್, ವಾನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಯುಜ್ವೇಂದ್ರ ಚಾಹಲ್.

ಚೆನ್ನೈ ವಿರುದ್ಧ ಸೋಲಿಗೆ ವಿರಾಟ್ ನೇರವಾಗಿ ದೂರಿದ್ದು ಯಾರನ್ನು ಗೊತ್ತಾ? | Oneindia Kannada

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ XI ಋತುರಾಜ್ ಗಾಯಕವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಅಂಬಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ (ಡಬ್ಲ್ಯೂ/ಸಿ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಜೋಶ್ ಹೇಜಲ್‌ವುಡ್.

Story first published: Saturday, September 25, 2021, 10:32 [IST]
Other articles published on Sep 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X