ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿರ್ಬಂಧಗಳೊಂದಿಗೆ ಮುಂಬೈನಲ್ಲಿ ಐಪಿಎಲ್: ನವಾಬ್ ಮಲಿಕ್ ಖಾತರಿ

IPL 2021 to go ahead with restrictions in Mumbai, says Maharashtra Cabinet Minister Nawab Malik

ಮುಂಬೈ: ಕೊರೊನಾವೈರಸ್ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಆತಂಕಕಾರಿಯಾಗಿ ಹೆಚ್ಚುತ್ತಿದ್ದರೂ ಯೋಜನೆಯಂತೆ ಮುಂಬೈನಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ ಎಂದು ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ನವಾಬ್ ಮಲಿಕ್ ಖಾತರಿಪಡಿಸಿದ್ದಾರೆ. ಮುಂಬೈಯಲ್ಲಿ ಒಟ್ಟು 10 ಪಂದ್ಯಗಳು ನಡೆಯುವುದರಲ್ಲಿದೆ.

ಫಖರ್ ರನ್‌ಔಟ್, ಡಿ ಕಾಕ್ ಮೋಸದಾಟಕೆ ನೆಟ್ಟಿಗರು ಕಿಡಿ: ವಿಡಿಯೋಫಖರ್ ರನ್‌ಔಟ್, ಡಿ ಕಾಕ್ ಮೋಸದಾಟಕೆ ನೆಟ್ಟಿಗರು ಕಿಡಿ: ವಿಡಿಯೋ

ಏಪ್ರಿಲ್ 10ರಿಂದ ಏಪ್ರಿಲ್ 25ರ ವರೆಗೆ ಮುಂಬೈ ತಾಣದಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ. ಮುಂಬೈಯಲ್ಲಿ ಕೋವಿಡ್-19 ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇದೆ. ಹೀಗಾಗಿ ಮುಂಬೈ ತಾಣಕ್ಕೆ ಬದಲಾಗಿ ಬೇರೆ ತಾಣದಲ್ಲಿ ಪಂದ್ಯಗಳು ನಡೆಯಲಿವೆಯೋ ಎಂಬ ಅನುಮಾನ ಮೂಡಿತ್ತು. ಆದರೆ ಮುಂಬೈನಲ್ಲೇ ಎಲ್ಲಾ ಪಂದ್ಯಗಳು ನಡೆಯಲಿವೆ ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರದಲ್ಲಿ ರಾತ್ರಿ 8 pmನಿಂದ ಬೆಳಗ್ಗೆ 7 am ವರೆಗೆ ಕರ್ಫ್ಯೂ ವಿಧಿಸಲಾಗಿದೆ. ಏಪ್ರಿಲ್ 5ರ ಸೋಮವಾರದಿಂದಲೇ ಈ ನಿರ್ಬಂಧ ಜಾರಿಯಾಗಲಿದೆ. ಕರ್ಫ್ಯೂ ಏಪ್ರಿಲ್ 30ರ ವರೆಗೆ ನಡೆಯಲಿದೆ. ಐಪಿಎಲ್ ಪಂದ್ಯಗಳು ಖಾಲಿ ಮೈದಾನದಲ್ಲಿ ನಡೆಯಲಿರುವುದರಿಂದ ಈ ನಿರ್ಬಂಧದಿಂದ ನಗದು ಶ್ರೀಮಂತ ಟೂರ್ನಿಗೆ ತೊಂದರೆಯಾಗಲಾರದು.

ಕ್ರಿಸ್‌ಗೇಲ್ ಹೆಸರಿನಲ್ಲಿರುವ ವೇಗದ ಐಪಿಎಲ್ ಶತಕದ ದಾಖಲೆ ಮುರಿಯಬಲ್ಲ ಐವರು ಕ್ರಿಕೆಟಿಗರು ಇವರುಕ್ರಿಸ್‌ಗೇಲ್ ಹೆಸರಿನಲ್ಲಿರುವ ವೇಗದ ಐಪಿಎಲ್ ಶತಕದ ದಾಖಲೆ ಮುರಿಯಬಲ್ಲ ಐವರು ಕ್ರಿಕೆಟಿಗರು ಇವರು

ಕರ್ಫ್ಯೂ ಜೊತೆ ಜೊತೆಯಲ್ಲೇ ಐಪಿಎಲ್ ಪಂದ್ಯಗಳು ಕೂಡ ನಡೆಯಲಿದೆ ಎಂದು ಮಹಾರಾಷ್ಟ್ರದ ಕ್ಯಾಬಿನೆಟ್ ಮಿನಿಸ್ಟರ್ ನವಾಬ್ ಮಲಿಕ್ ಹೇಳಿದ್ದಾರೆ. ಇದಕ್ಕೂ ಮುನ್ನ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಐಪಿಎಲ್ ಮುಂಬೈಯಲ್ಲಿ ನಡೆಯುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು.

Story first published: Monday, April 5, 2021, 17:03 [IST]
Other articles published on Apr 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X