ಐಪಿಎಲ್ 2021 ಪುನರಾರಂಭ, ಫೈನಲ್‌ನ ಪಕ್ಕಾ ದಿನಾಂಕ ಪ್ರಕಟ!

ನವದೆಹಲಿ: ಭಾರತದಲ್ಲಿ ಆರಂಭವಾಗಿದ್ದ 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಕೋವಿಡ್-19 ಸೋಂಕಿನ ಭೀತಿಯಿಂದಾಗಿ ಅರ್ಧದಿಂದಲೇ ನಿಲ್ಲಿಸಲ್ಪಟ್ಟಿತ್ತು. ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ನಲ್ಲಿ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಐಪಿಎಲ್ 14ನೇ ಆವೃತ್ತಿ ಇನ್ನುಳಿದ ಪಂದ್ಯಗಳು ನಡೆಯಲಿವೆ ಎಂದು ಹೇಳಲಾಗಿತ್ತಾದರೂ ಯಾವತ್ತು ಆರಂಭವಾಗಲಿದೆ, ಯಾವತ್ತು ಫೈನಲ್‌ ನಡೆಯಲಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇರಲಿಲ್ಲ.

ಸರ್ಕಾರಿ ಹುದ್ದೆ ಹೊಂದಿರುವ ಭಾರತೀಯ 7 ಖ್ಯಾತ ಕ್ರಿಕೆಟಿಗರಿವರು!ಸರ್ಕಾರಿ ಹುದ್ದೆ ಹೊಂದಿರುವ ಭಾರತೀಯ 7 ಖ್ಯಾತ ಕ್ರಿಕೆಟಿಗರಿವರು!

ನಿಲ್ಲದ ಕೋವಿಡ್-19 ಸೋಂಕಿನ ಪ್ರಕರಣಗಳು, ಟಿ20 ವಿಶ್ವಕಪ್‌ ಆಯೋಜನೆ ಬಗೆಗಿನ ಗೊಂದಲ, ಅಂತಾರಾಷ್ಟ್ರೀಯ ಸರಣಿಗಳು ಮತ್ತು ವಿದೇಶಿ ಆಟಗಾರರ ಲಭ್ಯತೆ ಈ ಎಲ್ಲಾ ವಿಚಾರಗಳಿಂದಾಗಿ ಐಪಿಎಲ್ 2021ರ ಇನ್ನುಳಿದ ಪಂದ್ಯಗಳ ಆರಂಭ, ಅಂತ್ಯದ ದಿನಾಂಕವನ್ನು ಭಾರತೀಯ ಕ್ರಿಕೆಟ್ ಬೋರ್ಡ್ ಪ್ರಕಟಿಸಿರಲಿಲ್ಲ.

ಐಪಿಎಲ್ ಪುನರಾರಂಭ ಯಾವತ್ತು?

ಐಪಿಎಲ್ ಪುನರಾರಂಭ ಯಾವತ್ತು?

ಬೋರ್ಡ್ ಆಫ್‌ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧಿಕೃತವಾಗಿ ಐಪಿಎಲ್ ಆರಂಭ, ಅಂತ್ಯದ ದಿನಾಂಕ ತಿಳಿಸಿಲ್ಲವಾದರೂ, ಬಿಸಿಸಿಐಗೆ ಹತ್ತಿರದ ಮೂಲವೊಂದು 14ನೇ ಆವೃತ್ತಿಯ ಐಪಿಎಲ್‌ನ ಆರಂಭ ಅಂತ್ಯದ ದಿನಾಂಕ ಬಹಿರಂಗಪಡಿಸಿದೆ. ಯುಎಇಯಲ್ಲಿ ಸೆಪ್ಟೆಂಬರ್ 19ರಂದು ಆರಂಭಗೊಳ್ಳುವ ಐಪಿಎಲ್, ಅಕ್ಟೋಬರ್‌ 15ರಂದು ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

25 ದಿನಗಳಲ್ಲಿ ಟೂರ್ನಿ ಮುಕ್ತಾಯ

25 ದಿನಗಳಲ್ಲಿ ಟೂರ್ನಿ ಮುಕ್ತಾಯ

'ಎಮಿರೇಟ್ಸ್‌ ಕ್ರಿಕೆಟ್ ಬೋರ್ಡ್ (ಇಸಿಬಿ)ಯೊಂದಿಗಿನ ನಮ್ಮ ಮಾತುಕತೆ ಚೆನ್ನಾಗಿ ನಡೆಯುತ್ತಿದೆ. ಈಗಾಗಲೇ ನಮಗೆ ಯುಎಇಯಲ್ಲಿ ಟೂರ್ನಿ ನಡೆಸಲು ಇಸಿಬಿ ಮಾತಿನ ಮೂಲಕ ಗ್ರೀನ್ ಸಿಗ್ನಲ್ ನೀಡಿದೆ. ಕಳೆದ ವಾರದಿಂದ ಇಸಿಬಿ ಐಪಿಎಲ್ ಬಗೆಗಿನ ಮಾತುಕತೆ ಅಂತಿಮ ಗೊಳಿಸುತ್ತಿದೆ. ನಿಲ್ಲಿಸಲ್ಪಟ್ಟ ಟೂರ್ನಿಯ ಮೊದಲ ಪಂದ್ಯ ಸೆಪ್ಟೆಂಬರ್‌ 19ರಂದು ನಡೆಯಲಿದೆ. ಫೈನಲ್‌ ಪಂದ್ಯ ಅಕ್ಟೋಬರ್‌ 15ರಂದು ನಡೆಯಲಿದೆ. ಬಿಸಿಸಿಐ ಎಲ್ಲಾ ಉಳಿದ ಪಂದ್ಯಗಳನ್ನು 25 ದಿನಗಳೊಳಗೆ ಮುಗಿಸುವ ಯೋಚನೆಯಲ್ಲಿದೆ,' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ.

ವಿದೇಶಿ ಆಟಗಾರರು ಆಡ್ತಾರಾ?

ವಿದೇಶಿ ಆಟಗಾರರು ಆಡ್ತಾರಾ?

ಐಪಿಎಲ್ ಆರಂಭ, ಅಂತ್ಯದ ದಿನಾಂಕದ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಯಲ್ಲಿ ವಿದೇಶಿ ಆಟಗಾರರ ಲಭ್ಯತೆ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ, 'ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಬಹುತೇಕ ವಿದೇಶಿ ಆಟಗಾರರು ಲಭ್ಯರಿರಲಿದ್ದಾರೆ. ಕೆಲ ಆಟಗಾರರು ಮತ್ತೆ ಆಡೋದು ಸಾಧ್ಯವಾಗದಿದ್ದರೆ ನಾವು ಅದರ ಬಗ್ಗೆ ಮತ್ತೆ ಚರ್ಚಿಸಿ ನಿರ್ಧರಿಸುತ್ತೇವೆ. ಆದರೆ ಈಗಿನವರೆಗಿನ ಮಾಹಿತಿಯಂತೆ ಬಹುತೇಕ ವಿದೇಶಿ ಆಟಗಾರರು ಯುಎಇಯಲ್ಲಿ ನಡೆಯುವ ಐಪಿಎಲ್ 14ನೇ ಆವೃತ್ತಿಯ ಇನ್ನುಳಿದ ಪಂದ್ಯಗಳಲ್ಲಿ ಆಡ್ತಾರೆ,' ಎಂದರು.

ಎಷ್ಟು ಪಂದ್ಯಗಳು ಬಾಕಿ?

ಎಷ್ಟು ಪಂದ್ಯಗಳು ಬಾಕಿ?

ಐಪಿಎಲ್ 2021ರ ಆವೃತ್ತಿ ಆರಂಭಗೊಂಡ ಮೂರು ವಾರಗಳಲ್ಲಿ ಐಪಿಎಲ್ ಬಯೋಬಬಲ್ ಒಳಗೆ ಕೋವಿಡ್ ಸೋಂಕಿನ ಪ್ರಕರಣಗಳು ಕಾಣಸಿಕ್ಕವು. ಕೋಲ್ಕತ್ತಾ ನೈಟ್ ರೈಡರ್ಸ್‌ನ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್, ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ, ಡೆಲ್ಲಿ ಕ್ಯಾಪಿಟಲ್ಸ್‌ನ ಅಮಿತ್ ಮಿಶ್ರಾ ಮತ್ತು ಸನ್ ರೈಸರ್ಸ್ ಹೈದರಾಬಾದ್‌ನ ವೃದ್ಧಿಮಾನ್ ಸಾಹ ಅವರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿತ್ತು. ಹೀಗಾಗಿ ಟೂರ್ನಿಯನ್ನು ನಿಲ್ಲಿಸುವ ನಿರ್ಧಾರಕ್ಕೆ ಬಿಸಿಸಿಐ ಬಂದಿತ್ತು. ಒಟ್ಟು 29 ಪಂದ್ಯಗಳು ನಡೆದಿದ್ದು ಇನ್ನು 31 ಪಂದ್ಯಗಳು ಯುಎಇಯಲ್ಲಿ ನಡೆಯಲಿವೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, June 7, 2021, 17:21 [IST]
Other articles published on Jun 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X