ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಈ ಐಪಿಎಲ್ ಟೂರ್ನಿಯ ಐದು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನಗಳಿವು!

IPL 2021: Top 5 best Batting performances of IPL 2021 season

14ನೇ ಆವೃತ್ತಿಯ ಐಪಿಎಲ್ ಮುಕ್ತಾಯದ ಹಂತವನ್ನು ತಲುಪಿದೆ. ಶುಕ್ರವಾರ ರಾತ್ರಿ ಈ ಐಪಿಎಲ್‌ನ ವಿಜೇತರು ಯಾರು ಎಂಬುದು ಅಧಿಕೃತವಾಗಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನಯಟ್ ರೈಡರ್ಸ್ ತಂಡಗಳು ಈ ಫೈನಲ್ ಪಂದ್ಯದಲ್ಲಿ ಸೆಣೆಸಾಡಲಿದೆ. ಆದರೆ ಈ ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಪಂದ್ಯಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಸಾಕಷ್ಟು ರೋಮಾಂಚನಕಾರಿ ಪ್ರದರ್ಶನಗಳನ್ನು ಕಂಡಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿಯೂ ಎಂದಿನಂತೆಯೇ ಅನೇಕ ಅದ್ಭುತ ಪ್ರದರ್ಶನಗಳು ಬಂದಿದೆ. ಕೆಲ ಸಂದರ್ಭಗಳಲ್ಲಿ ಬ್ಯಾಟ್ಸ್‌ಮನ್‌ಗಳು ತಮ್ಮ ನಿರ್ಣಾಯಕ ಪ್ರದರ್ಶನ ನಿಡುವ ಮೂಲಕ ಪಂದ್ಯವನ್ನು ತಮ್ಮ ತಂಡದ ಪರವಾಗುವಂತೆ ಮಾಡಿದ್ದರೆ ಇನ್ನೂ ಕೆಲ ಸಂದರ್ಭಗಳಲ್ಲಿ ಬೌಲರ್‌ಗಳಿಂದ ಇಂತಾ ಅದ್ಭುತ ಪ್ರದರ್ಶನಗಳು ಬಂದಿದೆ.

T20 World Cup: ಭಾರತದ ಅಪಾಯಕಾರಿ ಆಟಗಾರನ ಹೆಸರಿಸಿದ ಹೌರಿಟ್ಜ್T20 World Cup: ಭಾರತದ ಅಪಾಯಕಾರಿ ಆಟಗಾರನ ಹೆಸರಿಸಿದ ಹೌರಿಟ್ಜ್

ಇಂದು ಈ ವರದಿಯಲ್ಲಿ ಈ ಬಾರಿಯ ಐಪಿಎಲ್‌ನಲ್ಲಿ ಬ್ಯಾಟಿಂಗ್ ಮೂಲಕ ಅದ್ಭುತ ಪ್ರದರ್ಶನ ನೀಡಿ ಮಿಂಚಿದ ಐದು ಅದ್ಭುತ ಬ್ಯಾಟಿಂಗ್ ಪ್ರದರ್ಶನಗಳನ್ನು ನೋಡೋಣ:

ಋತುರಾಜ್ ಗಾಯಕ್ವಾಡ್- 101* vs ರಾಜಸ್ಥಾನ

ಋತುರಾಜ್ ಗಾಯಕ್ವಾಡ್- 101* vs ರಾಜಸ್ಥಾನ

ಋತುರಾಜ್ ಗಾಯಕ್ವಾಡ್ ಈ ಬಾರಿಯ ಐಪಿಎಲ್‌ನಲ್ಲಿ ಬೆಳಕಿಗೆ ಬಂದ ಯುವ ಪ್ರತಿಭೆ. ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ ಋತುರಾಜ್ ಗಾಯಕ್ವಾಡ್. ಈಗ ಋತುರಾಜ್ ಗಾಯಕ್ವಾಡ್ ಈ ಭಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸುವ ಮೂಲಕ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಳ್ಳಲು ಇನ್ನು ಕೇವಲ 24 ರನ್‌ಗಳ ಅಗತ್ಯವಿದೆ. ಮಹಾರಾಷ್ಟ್ರ ಮೂಲಕ ಈ ಆರಂಭಿಕ ಆಟಗಾರ ಈ ಋತುವಿನಲ್ಲಿ ಕೆಲವು ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಇದರಲ್ಲಿ ತಮ್ಮ ಚೊಚ್ಚಲ ಶತಕ ಗಾಯಕ್ವಾಡ್ ಪ್ರಮುಖ ಹೈಲೈಟ್ಸ್ ಆಗಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಋತುರಾಜ್ ಗಾಯಕ್ವಾಡ್ ಚೆಂಡನ್ನು ಮೂಲೆಮೂಲೆಗೆ ಅಟ್ಟುವಲ್ಲಿ ಯಶಸ್ವಿಯಾದರು. ಈ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಶತಕ ದಾಖಲಿಸಿ ಸಂಭ್ರಮಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಶತಕ ಗಳಿಸಿದ ಏಳನೇ ಆಟಗಾರನಾಗಿದ್ದಾರೆ ಋತುರಾಜ್ ಗಾಯಕ್ವಾಡ್.

2. ಕೆಎಲ್ ರಾಹುಲ್- 98* vs ಚೆನ್ನೈ ಸೂಪರ್ ಕಿಂಗ್ಸ್

2. ಕೆಎಲ್ ರಾಹುಲ್- 98* vs ಚೆನ್ನೈ ಸೂಪರ್ ಕಿಂಗ್ಸ್

ಐಪಿಎಲ್‌ನಲ್ಲಿ ಸದಾ ಮಿಂಚು ಹರಿಸುವ ಕೆಎಲ್ ರಾಹುಲ್ ಈ ಬಾರಿಯ ಟೂರ್ನಿಯಲ್ಲಿಯೂ ರನ್ ಹೊಳೆ ಹರಿಸಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ರಾಹುಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಪಂಜಾಬ್ ಕಿಂಗ್ಸ್ ತಂಡ ಪ್ಲೇಆಪ್ ಹಂತಕ್ಕೆ ಪ್ರವೇಶ ಪಡೆಯಲು ವಿಫಲವಾದರೂ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರಾಹುಲ್ ಅದ್ಭುತವಾದ ಇನ್ನಿಂಗ್ಸ್ ಮೂಲಕ ಈ ಆವೃತ್ತಿಯನ್ನು ಮುಗಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಕೆಎಲ್ ರಾಹುಲ್ ಕೇವಲ 42 ಎಸೆತಗಳಲ್ಲಿ ಭರ್ಜರಿ ಅಜೇಯ 98 ರನ್‌ಗಳಿಸಿದರು. ಈ ಪಂದ್ಯದಲ್ಲಿ ಗೆಲುವಿಗೆ 136 ರನ್ ಗುರಿ ಪಡೆದಿದ್ದ ಪಂಜಾಬ್ ಕೀಂಗ್ಸ್ ಇದನ್ನು 14 ಓವರ್‌ಗೂ ಮುನ್ನವೇ ಸಾಧಿಸಿ ಗೆದ್ದು ಬೀಗಿತ್ತು. ಈ ಮೂಲಕ ಸ್ಮರಣೀಯ ಇನ್ನಿಂಗ್ಸ್ ನೀಡಿದರು ರಾಹುಲ್.

3. ದೇವದತ್ ಪಡಿಕ್ಕಲ್- 101* vs ರಾಜಸ್ಥಾನ ರಾಯಲ್ಸ್

3. ದೇವದತ್ ಪಡಿಕ್ಕಲ್- 101* vs ರಾಜಸ್ಥಾನ ರಾಯಲ್ಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಭಾರತದಲ್ಲಿ ನಡೆದ ಮೊದಲ ಚರಣದ ಪಂದ್ಯದಲ್ಲಿಯುವ ಆಟಗಾರ ದೇವತ್ ಪಡಿಕ್ಕಲ್ ಅದ್ಭುತ ಪ್ರದರ್ಶನ ನಿಡಿ ಮಿಂಚಿದ್ದಾರೆ. ಈ ಯುವ ಎಡಗೈ ಆಟಗಾರ ವಾಂಖೇಡೆ ಮೈದಾನದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಗೆಲುವಿಗೆ 180ಕ್ಕೂ ಅಧಿಕ ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಪರವಾಗಿ ನಾಯಕ ವಿರಾಟ್ ಕೊಹ್ಲಿ ಹಾಗೂ ಪಡಿಕ್ಕಲ್ ಅದ್ಭುತ ಪ್ರದರ್ಶನ ನೀಡಿದರು. ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಈ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಸಂಪೂರ್ಣವಾಗಿ ಪ್ರದರ್ಶಿಸಿದರು. ಆರ್‌ಆರ್ ತಂಡದ ಅನುಭವಿ ಬೌಲರ್‌ಗಳ ವಿರುದ್ಧವೂ ಪಡಿಕ್ಕಲ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದರು.

4. ಕಿರಾನ್ ಪೊಲಾರ್ಡ್- 87* vs ಚೆನ್ನೈ ಸೂಪರ್ ಕಿಂಗ್ಸ್

4. ಕಿರಾನ್ ಪೊಲಾರ್ಡ್- 87* vs ಚೆನ್ನೈ ಸೂಪರ್ ಕಿಂಗ್ಸ್

ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಯಾವಾಗಲೂ ಸಾಕಷ್ಟು ರೋಚಕತೆಯಿಂದ ಕೂಡಿಸುತ್ತದೆ. ಈ ಪಂದ್ಯದಲ್ಲಿ ಸೋಲು ಹಾಗೂ ಗೆಲುವು ಎರಡು ತಂಡಗಳ ಪರವಾಗಿಯೂ ಕಣ್ಣಾಮುಚ್ಆಲೆಯಾಡುತ್ತಿತ್ತು. ಇಂತಾ ಸಂದರ್ಭದಲ್ಲಿ ಕ್ರೀಸ್‌ಗಿಳಿದಿದ್ದು ಕಿರಾನ್ ಪೊಲಾರ್ಡ್. ಬೌಂಡರಿ ಮೇಲೆ ಬೌಂಡರಿ ಬಾರಿಸುತ್ತಾ ಸಾಗಿದ್ದರು. ಅಂತಿಮವಾಗಿ 34 ಎಸೆತಗಳಲ್ಲಿ ಅಜೇಯ 87 ರನ್‌ ಬಾರಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲುವು ತಂದಿತ್ತರು. ಇದು ಈ ಬಾರಿಯ ಐಪಿಎಲ್‌ನ ಮತ್ತೊಂದು ಅಮೋಘ ಪ್ರದರ್ಶನವಾಗಿದೆ.

IPL ಚಾಂಪಿಯನ್ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು? RCBಗೆ ಎಷ್ಟು ಸಿಕ್ತು? | Oneindia Kannada
5. ಫಾಫ್ ಡು ಪ್ಲೆಸಿಸ್- 95* vs ಕೋಲ್ಕತಾ ನೈಟ್ ರೈಡರ್ಸ್

5. ಫಾಫ್ ಡು ಪ್ಲೆಸಿಸ್- 95* vs ಕೋಲ್ಕತಾ ನೈಟ್ ರೈಡರ್ಸ್

ಐಪಿಎಲ್ 2021ರಲ್ಲಿ ಅಮೋಘ ಪ್ರದರ್ಶನ ನೀಡಿದ ಆಟಗಾರರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಆಟಗಾರ ಫಾಫ್ ಡು ಪ್ಲೆಸಿಸ್ ಕೂಡ ಒಬ್ಬರು. ಫಾಫ್ ಟೂರ್ನಿಯುದ್ದಕ್ಕೂ ಅತ್ಯಂತ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗುದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಅದ್ಭುತ ಪ್ರದರ್ಶನದ ಹಿಂದೆ ಫಾಫ್ ನೀಡಿದ ಆಟವೂ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಟೂರ್ನಿಯಲ್ಲಿ ಬಹುತೇಕ ಪಂದ್ಯಗಳಲ್ಲಿ ಫಾಫ್ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮೊದಲ ಸುತ್ತಿನ ಪಂದ್ಯದಲ್ಲಿ ಶತಕಗಳಿಸುವ ಅವಕಾಶವನ್ನು ಕೂಡ ಪಡೆದುಕೊಂಡಿದ್ದರು. ಈ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ 95 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಪಂದ್ಯದಲ್ಲಿ ಸಿಎಸ್‌ಕೆ 220 ರನ್ ಗಳಿಸಿ 18 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು.

Story first published: Saturday, October 16, 2021, 11:27 [IST]
Other articles published on Oct 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X