ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿಆರ್‌ಎಸ್‌ ಎಂಎಲ್‌ಎಯಿಂದ ಐಪಿಎಲ್ ಪಂದ್ಯಗಳ ನಿಲ್ಲಿಸುವ ಬೆದರಿಕೆ!

IPL 2021: TRS MLA threatens to stop IPL matches in Hyderabad

ಹೈದರಾಬಾದ್: ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಆವೃತ್ತಿಗೆ ಸಿದ್ಧತೆಗಳಾಗುತ್ತಿವೆ. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) 14ನೇ ಆವೃತ್ತಿಯ ಐಪಿಎಲ್‌ಗಾಗಿ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಈ ಬಾರಿಯ ಐಪಿಎಲ್ ಆವೃತ್ತಿ ಭಾರತದಲ್ಲೇ ನಡೆಯುವ ನಿರೀಕ್ಷೆಯಿದೆ. ಕಳೆದ ಐಪಿಎಲ್ ಸೀಸನ್‌ ಕೊರೊನಾ ಕಾರಣದಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದಿತ್ತು.

 ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ಟೀಮ್ ಇಂಡಿಯಾ ಪ್ರಕಟ! ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ಟೀಮ್ ಇಂಡಿಯಾ ಪ್ರಕಟ!

ಭಾರತದಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ಸರಣಿಗಳು, ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್) ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಟೂರ್ನಿಗಳು ನಡೆಯುತ್ತಿವೆ. ಹೀಗಾಗಿ ಐಪಿಎಲ್‌ ಅನ್ನು ಕೂಡ ಭಾರತದಲ್ಲೇ ನಡೆಸುವ ಆಲೋಚನೆಯಲ್ಲಿ ಬಿಸಿಸಿಐ ಇದೆ.

ಭಾರತಕ್ಕೆ ಟಿ20 ವಿಶ್ವಕಪ್ ಸ್ಥಳಾಂತರದ ಬೆದರಿಕೆಯೊಡ್ಡಿದ ಪಾಕ್ ಕ್ರಿಕೆಟ್ ಮಂಡಳಿ ಮುಖ್ಯಸ್ಥಭಾರತಕ್ಕೆ ಟಿ20 ವಿಶ್ವಕಪ್ ಸ್ಥಳಾಂತರದ ಬೆದರಿಕೆಯೊಡ್ಡಿದ ಪಾಕ್ ಕ್ರಿಕೆಟ್ ಮಂಡಳಿ ಮುಖ್ಯಸ್ಥ

ಅಂದ್ಹಾಗೆ ಐಪಿಎಲ್‌ಗೆ ದಿನಗಳು ಹತ್ತಿರವಾಗುತ್ತಿದ್ದಂತೆ ಐಪಿಎಲ್ ಪಂದ್ಯಗಳನ್ನು ನಿಲ್ಲಿಸುವ ಬೆದರಿಕೆ ಎಂಎಲ್‌ಎ ಒಬ್ಬರಿಂದ ಕೇಳಿಬಂದಿದೆ.

ಐಪಿಎಲ್ ಪಂದ್ಯಗಳು ನಡೆಯೋದೆಲ್ಲಿ?

ಐಪಿಎಲ್ ಪಂದ್ಯಗಳು ನಡೆಯೋದೆಲ್ಲಿ?

ಈ ಬಾರಿಯ ಐಪಿಎಲ್ ಭಾರತದಲ್ಲಿ ನಡೆಯೋದಾದ್ರೆ ಎಲ್ಲಿ ನಡೆಯುತ್ತವೆ? ಐಪಿಎಲ್‌ನ ಲೀಗ್‌ ಹಂತದ ಎಲ್ಲಾ ಪಂದ್ಯಗಳು ಮುಂಬೈಯ ಮೂರು ತಾಣಗಳಲ್ಲಿ ಮತ್ತು ನಾಕೌಟ್ ಹಂತದ ಪಂದ್ಯಗಳು ಅಹ್ಮದಾಬಾದ್‌ನ ಮೊಟೆರಾ ಸ್ಟೇಡಿಯಂನಲ್ಲಿ ನಡೆಯಲಿವೆ ಎಂದು ಐಪಿಎಲ್ ಫ್ರಾಂಚೈಸಿ ಮೂಲವೊಂದು ತಿಳಿಸಿದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟಗೊಂಡಿಲ್ಲ.

ಐಪಿಎಲ್ ನಿಲ್ಲಿಸುವ ಬೆದರಿಕೆ!

ಐಪಿಎಲ್ ನಿಲ್ಲಿಸುವ ಬೆದರಿಕೆ!

ಹೈದರಾಬಾದ್‌ನ ಖೈರತ್‌ಬಾದ್‌ನಲ್ಲಿರುವ ಟಿಆರ್‌ಎಸ್‌ ಎಂಎಲ್‌ಎ ದನಮ್ ನಾಗೇಂದರ್ ಅವರು ಹೈದರಾಬಾದ್‌ನಲ್ಲಿ ಐಪಿಎಲ್‌ ಪಂದ್ಯಗಳನ್ನು ನಿಲ್ಲಿಸುವ ಬೆದರಿಕೆಯೊಡ್ಡಿದ್ದಾರೆ. 2021ರ ಆಟಗಾರರ ಹರಾಜಿನ ವೇಳೆ ಸ್ಥಳೀಯ ಆಟಗಾರರನ್ನು ಹೈದರಾಬಾದ್ ಫ್ರಾಂಚೈಸಿ ಆರಿಸಿಲ್ಲ ಎಂಬ ಕಾರಣಕ್ಕಾಗಿ ಹೈದರಾಬಾದ್‌ನಲ್ಲಿ ಪಂದ್ಯ ನಡೆಯಲು ಬಿಡುವುದಿಲ್ಲ ಎಂದು ನಾಗೇಂದರ್ ಬೆದರಿಕೆಯೊಡ್ಡಿದ್ದಾರೆ.

'ಒಬ್ಬನೇ ಒಬ್ಬ ಆಟಗಾರನಿಲ್ಲ'

'ಒಬ್ಬನೇ ಒಬ್ಬ ಆಟಗಾರನಿಲ್ಲ'

ಶನಿವಾರ ಫಿಲ್ಮ್‌ನಗರಲ್ಲಿ ನಡೆದ ಟಿಆರ್‌ಎಸ್ ಸದಸ್ಯತ್ವ ಸಭೆಯಲ್ಲಿ ಮಾತನಾಡಿದ ದನಮ್ ನಾಗೇಂದರ್, 'ಬೇರೆ ತಂಡಗಳನ್ನು ಗಮನಿಸಿದರೆ ಪ್ರತೀ ತಂಡದಲ್ಲೂ ಅವರ ಸ್ಥಳೀಯ ಆಟಗಾರರಿದ್ದಾರೆ. ಆದರೆ ಜಾಗತಿಕವಾಗಿ ಮೆಚ್ಚುಗೆಗೆ ಪಾತ್ರವಾಗಿರುವ ಹೈದರಾಬಾದ್‌ನಲ್ಲಿ ಸಾಕಷ್ಟು ಪ್ರತಿಭಾನ್ವಿತ ಆಟಗಾರರಿದ್ದರೂ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಒಬ್ಬನೇ ಒಬ್ಬ ಸ್ಥಳೀಯ ಆಟಗಾರನಿಲ್ಲ' ಎಂದು ದೂರಿದ್ದಾರೆ.

ವಾರ್ನರ್‌ಗೆ ನಾಯಕತ್ವ ಬೇಡ

ವಾರ್ನರ್‌ಗೆ ನಾಯಕತ್ವ ಬೇಡ

ಮಾತು ಮುಂದುವರೆಸಿದ ನಾಗೇಂದರ್, 'ಮೊಹಮ್ಮದ್ ಸಿರಾಜ್ ಒಬ್ಬರೇ ಅಲ್ಲ, ರಣಜಿ ಟ್ರೋಫಿ, ಅಂಡರ್ 19ನಲ್ಲಿ ಆಡಿದ ಸಾಕಷ್ಟು ಆಟಗಾರರು ಇಲ್ಲಿದ್ದಾರೆ. ಅವರನ್ನೆಲ್ಲ ಸನ್ ರೈಸರ್ಸ್ ಹೈದರಾಬಾದ್ ಪ್ರೋತ್ಸಾಹಿಸಬೇಕು. ಚೆಂಡು ವಿರೂಪ ಪ್ರಕರಣದಲ್ಲಿ ಪಾಲ್ಗೊಂಡ ಡೇವಿಡ್ ವಾರ್ನರ್ ಹೈದರಾಬಾದ್ ತಂಡದ ನಾಯಕರಾಗಿದ್ದಾರೆ. ಅವರು ಹೈದರಾಬಾದ್ ನಾಯಕರಾಗಿರುದನ್ನು ನಾವು ವಿರೋಧಿಸುತ್ತೇವೆ,' ಎಂದೂ ಹೇಳಿದ್ದಾರೆ.

Story first published: Sunday, February 21, 2021, 19:14 [IST]
Other articles published on Feb 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X