ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ಗೆ ಇನ್ನೆರಡು ತಂಡಗಳು ಸೇರ್ಪಡೆ, ಮೇನಲ್ಲಿ ಹರಾಜು

IPL 2021: Two new IPL teams to be auctioned in May

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ಗೆ ಇನ್ನೆರಡು ಫ್ರಾಂಚೈಸಿಗಳು ಸೇರ್ಪಡೆಗೊಳ್ಳಲಿವೆ. ಅಂದರೆ 2022ರ ಐಪಿಎಲ್ ಆವೃತ್ತಿ ವೇಳೆ ಒಟ್ಟು 10 ತಂಡಗಳು ಕಣಕ್ಕಿಳಿಯಲಿವೆ. ಈ ಹೆಚ್ಚುವರಿ ಎರಡು ತಂಡಗಳಿಗಾಗಿ 2021ರ ಮೇನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ (ಚಿತ್ರಕೃಪೆ: ಇಂಡಿಯನ್ ಪ್ರೀಮಿಯರ್ ಲೀಗ್).

ರೋಡ್‌ ಸೇಫ್ಟಿ ಸೀರೀಸ್: ಸಚಿನ್, ಯುವಿ ಅಬ್ಬರದ ಆಟಕ್ಕೆ ಬೆದರಿದ ದಕ್ಷಿಣ ಆಫ್ರಿಕಾ ದಿಗ್ಗಜರುರೋಡ್‌ ಸೇಫ್ಟಿ ಸೀರೀಸ್: ಸಚಿನ್, ಯುವಿ ಅಬ್ಬರದ ಆಟಕ್ಕೆ ಬೆದರಿದ ದಕ್ಷಿಣ ಆಫ್ರಿಕಾ ದಿಗ್ಗಜರು

2021ರ ಐಪಿಎಲ್ ಏಪ್ರಿಲ್ 9ರಿಂದ ಮೇ 30ರ ವರೆಗೆ ನಡೆಯಲಿವೆ. 14ನೇ ಆವೃತ್ತಿಯ ಐಪಿಎಲ್ ಅಂತಿಮ ಹೊತ್ತಿನಲ್ಲಿರುವಾಗಲೇ ನೂತನ ಎರಡು ತಂಡಗಳಿಗೆ ಹರಾಜು ನಡೆಸಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ನಿರ್ಧರಿಸಿದೆ.

ಬಿಸಿಸಿಐ ಅಥ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ ಶಾ, ಶನಿವಾರ (ಮಾರ್ಚ್ 13) ಸಭೆ ನಡೆಸಿದ್ದಾರೆ. ಸಭೆಯಲ್ಲಿ ವರ್ಷದ ಆರಂಭದಲ್ಲಿ ಐಪಿಎಲ್ ಆಡಳಿತ ಮಂಡಳಿಯು ಅನುಮೋದಿಸಿದ ವಿವಿಧ ನೀತಿ ನಿರ್ಧಾರಗಳ ಅನುಷ್ಠಾನದ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ.

ಭಾರತ vs ಇಂಗ್ಲೆಂಡ್ 1st t20: ದಾಖಲೆ ಬರೆದ ಪ್ರೇಕ್ಷಕರ ಹಾಜರಾತಿಭಾರತ vs ಇಂಗ್ಲೆಂಡ್ 1st t20: ದಾಖಲೆ ಬರೆದ ಪ್ರೇಕ್ಷಕರ ಹಾಜರಾತಿ

'ಮುಂದಿನ ವರ್ಷದಿಂದ 10 ಐಪಿಎಲ್ ತಂಡಗಳು ಟೂರ್ನಿಯಲ್ಲಿ ಸ್ಪರ್ಧಿಸಲಿವೆ. ಈ ವರ್ಷ ಮೇ ತಿಂಗಳಲ್ಲಿ ನೂತನ ಫ್ರಾಂಚೈಸಿಗಳ ಬಿಡ್ಡಿಂಗ್ ಮತ್ತು ಅಂತಿಮ ಗೊಳಿಸುವಿಕೆಯ ಪ್ರಕ್ರಿಯೆ ನಡೆಯಲಿದೆ,' ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ಮಾಹಿತಿ ನೀಡಿದೆ. ಸದ್ಯ ಭಾರತ-ಇಂಗ್ಲೆಂಡ್ ಸರಣಿ ನಡೆಯುತ್ತಿದ್ದು ಇದರ ಮುಕ್ತಾಯದ ಬಳಿಕ ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ಐಪಿಎಲ್ ಆರಂಭಗೊಳ್ಳಲಿದೆ.

Story first published: Sunday, March 14, 2021, 15:33 [IST]
Other articles published on Mar 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X