ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ನಟರಾಜನ್‌ಗೆ ತಾತ್ಕಾಲಿಕ ಬದಲಿಯಾಗಿ ಎಸ್‌ಆರ್‌ಹೆಚ್‌ಗೆ ಸೇರ್ಪಡೆಯಾದ ಉಮ್ರಾನ್ ಮಲಿಕ್

IPL 2021: Umran Malik joins SRH as short-term COVID-19 replacement for T Natarajan

ಸನ್‌ರೈಸರ್ಸ್ ಹೈದರಾಬಾದ್ ಈ ಬಾರಿಯ ಐಪಿಎಲ್‌ನ ಎರಡನೇ ಚರಣದ ಆರಂಭದಲ್ಲಿಯೇ ಕೊರೊನಾವೈರಸ್ ಆತಂಕಕ್ಕೆ ಒಳಗಾಗಿದೆ. ಹೈದರಾಬಾದ್ ತಂಡದ ಆಟಗಾರ ಟಿ ನಟರಾಜನ್‌ಗೆ ಕೋವಿಡ್ ದೃಢಪಟ್ಟಿದ್ದು ಕ್ವಶರಂಟೈನ್‌ಗೆ ಒಳಗಾಗಿದ್ದಾರೆ. ಹೀಗಾಗಿ ತಂಡಕ್ಕೆ ತಾತ್ಕಾಲಿಕವಾಗಿ ಬೇರೊಬ್ಬ ಆಟಗಾರನನ್ನು ಹೈದರಾಬಾದ್ ತಂಡ ಸೇರ್ಪಡೆಗೊಳಿಸಿದೆ. ತಂಡದ ಉಳಿದ ಆಟಗಾರರೆಲ್ಲರೂ ನೆಗೆಟಿವ್ ವರದಿ ಪಡೆದುಕೊಂಡಿದ್ದು ಕಠಿಣ ಬಯೋಬಬಲ್‌ನಲ್ಲಿದ್ದಾರೆ.

ಮಧ್ಯಮ ವೇಗದ ಬೌಲರ್ ಉಮ್ರಾನ್ ಮಲಿಕ್ ತಾತ್ಕಾಲಿಕವಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಕ್ವಾಡ್‌ಗೆ ಸೇರಿಕೊಂಡಿದ್ದಾರೆ. ಈಗಾಗಲೇ ಹೈದರಾಬಾದ್ ತಂಡದ ಜೊತೆಗೆ ನೆಟ್ ಬೌಲರ್ ಆಗಿ ಬಯೋಬಬಲ್‌ನಲ್ಲಿದ್ದ ಮಲಿಕ್‌ಗೆ ಹೊಸ ಅವಕಾಶ ದೊರೆತಿದೆ. ಆದರೆ ಇದು ನಟರಾಜನ್ ಕ್ವಾರಂಟೈನ್ ಅವಧಿಯನ್ನು ಮುಗಿಸಿಕೊಂಡು ವಾಪಾಸ್ ಬರಯವವರೆಗೆ ಮಾತ್ರ.

'ದಾಖಲೆ ಮಾಡಿಬಿಟ್ರೆ ಆಗಲ್ಲ, ಪಂದ್ಯದ ದಿನ ಚೆನ್ನಾಗಿ ಆಡಬೇಕು'; ದಾಖಲೆ ಎನ್ನುವವರಿಗೆ ಕುಟುಕಿದ ರೋಹಿತ್'ದಾಖಲೆ ಮಾಡಿಬಿಟ್ರೆ ಆಗಲ್ಲ, ಪಂದ್ಯದ ದಿನ ಚೆನ್ನಾಗಿ ಆಡಬೇಕು'; ದಾಖಲೆ ಎನ್ನುವವರಿಗೆ ಕುಟುಕಿದ ರೋಹಿತ್

ಐಪಿಎಲ್ ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದು ತಾತ್ಕಾಲಿಕ ಬದಲಿ ಆಟಗಾರನಾಗಿ ಸೇರ್ಪಡೆಗಿಳಿಸುವ ಬಗ್ಗೆ ವಿವರಿಸಿದೆ. ಕಳೆದ ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಮುನನ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರರ ಕೋವಿಡ್ ಪರೀಕ್ಷೆಯ ವೇಳೆ ನಟರಾಜನ್ ಕೋವಿಡ್‌ಗೆ ಒಳಗಾಗಿರುವುದು ಪತ್ತೆಯಾಗಿತ್ತು. ಹೀಗಾಗಿ ಎಲ್ಲಾ ಆಟಗಾರರ ಪರೀಕ್ಷೆಯನ್ನು ನಡೆಸಲಾಗಿದ್ದು ಆಟಗಾರರ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಆದರೆ ನಟರಾಜನ್ ಮಾತ್ರ ತಂಡದಿಂದ ತಾತ್ಕಾಲಿಕವಾಗಿ ಹೊರಗುಳಿದಿದ್ದಾರೆ.

ಏಕದಿನ ನಾಯಕತ್ವವನ್ನೂ ಬಿಟ್ಟುಕೊಡುವಂತೆ ಕೇಳಿದ್ರು ಶಾಸ್ತ್ರಿ; ಕೋಚ್ ಮಾತಿಗೆ ಕೊಹ್ಲಿ ಹೇಳಿದ್ದಿಷ್ಟುಏಕದಿನ ನಾಯಕತ್ವವನ್ನೂ ಬಿಟ್ಟುಕೊಡುವಂತೆ ಕೇಳಿದ್ರು ಶಾಸ್ತ್ರಿ; ಕೋಚ್ ಮಾತಿಗೆ ಕೊಹ್ಲಿ ಹೇಳಿದ್ದಿಷ್ಟು

ಸನ್‌ರೈಸರ್ಸ್ ಹೈದರಾಬಾದ್ ತಂಡದ ಎಡಗೈ ವೇಗಿ ನಟರಾಜನ್ ಈಗ 10 ದಿನಗಳ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಮತ್ತೆ ತಂಡದ ಬಯೋಬಬಲ್‌ಗೆ ಸೇರ್ಪಡೆಯಾಗುವ ಮುನ್ನ ಎರಡು ಕೋವಿಡ್ ಪರೀಕ್ಷೆಯಲ್ಲಿ ನಟರಾಜನ್ ನೆಗೆಟಿವ್ ವರದಿಯನ್ನು ಪಡೆದುಕೊಳ್ಳಬೇಕಾಗಿದೆ. 30ರ ಹರೆಯದ ನಟರಾಜನ್ ಈವರೆಗೆ 24 ಪಂದ್ಯಗಳಲ್ಲಿ ಆಡಿದ್ದು 20 ವಿಕೆಟ್ ಪಡೆದುಕೊಂಡಿದ್ದಾರೆ.

ಇನ್ನು ಬದಲಿ ಆಟಗಾರನಾಗಿ ಸೇರ್ಪಡೆಯಾಗಿರುವ ಉಮ್ರಾನ್ ಮಲಿಕ್ ಜಮ್ಮು ಮತ್ತು ಕಾಶ್ಮೀರದ ಆಟಗಾರನಾಗಿದ್ದು ಎಸ್‌ಆರ್‌ಹೆಚ್ ತಂಡದ ನೆಟ್‌ ಬೌಲರ್ ಆಗಿದ್ದರು. ಈಗ ನಟರಾಜನ್ ಕೋವಿಡ್‌ಗೆ ಒಳಗಾಗಿರುವ ಕಾರಣದಿಂದಾಗಿ ನಟರಾಜನ್ ಮರಳುವವರೆಗೆ ಬದಲಿ ಆಟಗಾರನಾಗಿ ಮುಂದುವರಿಯಲಿದ್ದಾರೆ.

ಐಪಿಎಲ್ ರದ್ದು ಭೀತಿ; ಚೆನ್ನೈ ಆಟಗಾರರನ್ನು ಮುದುಕರಿಗೆ ಹೋಲಿಸಿದ ವಿರೇಂದ್ರ ಸೆಹ್ವಾಗ್!ಐಪಿಎಲ್ ರದ್ದು ಭೀತಿ; ಚೆನ್ನೈ ಆಟಗಾರರನ್ನು ಮುದುಕರಿಗೆ ಹೋಲಿಸಿದ ವಿರೇಂದ್ರ ಸೆಹ್ವಾಗ್!

ಬುಧವಾರ ದುಬೈಯ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 33ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಡೆಲ್ಲಿ 13 ಎಸೆತಗಳನ್ನು ಉಳಿಸಿ 8 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿತ್ತು. ತಂಡ ಈವರೆಗೆ ಆಡಿರುವ 8 ಪಂದ್ಯಗಳಲ್ಲಿ 1 ಪಂದ್ಯದಲ್ಲಷ್ಟೇ ಗೆದ್ದು ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಇನ್ನುಳಿದ ಆರು ಪಂದ್ಯಗಳನ್ನು ಗೆದ್ದರೂ ಕೂಡ ಎಸ್‌ಆರ್‌ಎಚ್‌ನ ಪ್ಲೇ ಆಫ್‌ ಕನಸು ಈಡೇರೋದಕ್ಕೆ ಗ್ಯಾರಂಟಿಯಿಲ್ಲ.

ಐಪಿಎಲ್: ಮಹೇಂದ್ರ ಸಿಂಗ್ ಧೋನಿ ದಾಖಲೆ ಮುರಿದ ದಿನೇಶ್ ಕಾರ್ತಿಕ್ಐಪಿಎಲ್: ಮಹೇಂದ್ರ ಸಿಂಗ್ ಧೋನಿ ದಾಖಲೆ ಮುರಿದ ದಿನೇಶ್ ಕಾರ್ತಿಕ್

ಆರಂಭಿಕ ಪಂದ್ಯಗಳನ್ನು ಸೋತು ಸೋತು ಸುಣ್ಣವಾಗಿರುವ ಈ ಪಂದ್ಯದಲ್ಲಾದರೂ ಗೆದ್ದು ಮತ್ತೆ ಕಮ್‌ಬ್ಯಾಕ್ ಮಾಡುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಎಂದಿನಂತೆ ಈ ಬಾರಿ ಕೂಡ ಹೈದರಾಬಾದ್ ಸೋತು ನಿರಾಸೆ ಅನುಭವಿಸಿದೆ. ಈ ಮೊದಲು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ನಾಯಕರಾಗಿದ್ದರು. ತಂಡದ ಕಳಪೆ ಪ್ರದರ್ಶನದಿಂದ ವಾರ್ನರ್ ಅವರನ್ನು ಕೆಳಗಿಳಿಸಲಾಗಿತ್ತು. ಈಗ ನ್ಯೂಜಿಲೆಂಡ್‌ ನಾಯಕ ಕೇನ್ ವಿಲಿಯಮ್ಸನ್ ತಂಡದ ನಾಯಕರಾಗಿದ್ದಾರೆ. ಆದರೂ ಎಸ್‌ಆರ್‌ಎಚ್ ಸೋಲಿನ ಹಾದಿ ತಪ್ಪಿಲ್ಲ.

Story first published: Friday, September 24, 2021, 22:19 [IST]
Other articles published on Sep 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X