ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಗದೇಕ ವೇಗಿ ಬೋಲ್ಟ್‌ರಿಂದ ಕೊಹ್ಲಿ, ಡಿ ವಿಲಿಯರ್ಸ್‌ಗೆ ಚಾಲೆಂಜ್ ಸಂದೇಶ

IPL 2021: Usain Bolt sends a message to Virat Kohli and AB de Villiers

ಕಿಂಗ್‌ಸ್ಟನ್: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಆರಂಭಕ್ಕಿನ್ನು ಒಂದು ದಿನ ಬಾಕಿಯಿರುವಾಗ ವೇಗದರಸ, ಜಮೈಕಾದ ಉಸೇನ್ ಬೋಲ್ಟ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್‌ಗೆ ಒಂದು ಸವಾಲಿನ ಸಂದೇಶ ರವಾನಿಸಿದ್ದಾರೆ.

ಐಪಿಎಲ್: 2020ರಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಐಪಿಎಲ್: 2020ರಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿ

ಆರ್‌ಸಿಬಿ ಜೆರ್ಸಿ ಧರಿಸಿ ಪೋಸ್ ನೀಡಿರುವ ಉಸೇನ್ ಬೋಲ್ಟ್, ಟ್ವೀಟ್ ಮೂಲಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಕಾಲೆಳೆದಿದ್ದಾರೆ. ಮೈದಾನದಲ್ಲಿ ಯಾರು ಹೆಚ್ಚು ವೇಗಿ ಅನ್ನೋದನ್ನು ನೋಡೋಣ ಎಂದು ಬೋಲ್ಟ್ ಬರೆದುಕೊಂಡಿದ್ದಾರೆ. ಹಿಂದೊಮ್ಮೆ ಬೋಲ್ಟ್ ತನಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ಲಭಿಸಿದ್ದರೆ ಆರ್‌ಸಿಬಿ ಪರ ಆಡಬಯಸುತ್ತೇನೆ ಎಂದಿದ್ದ ಮಾತನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.

ಬೋಲ್ಟ್ ಅವರ ಟ್ವೀಟ್‌ನಲ್ಲಿ, 'ಚಾಲೆಂಜರ್‌ಗಳೆ, ನಾನೀಗಲೂ ವಿಶ್ವದಲ್ಲಿ ಅತಿ ವೇಗದ ಚಿರತೆ ಅನ್ನೋದನ್ನು ನಾನು ನಿಮಗೆ ತಿಳಿಸಬಯಸುತ್ತೇನೆ,' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕೊಹ್ಲಿ ಮತ್ತು ಎಬಿಡಿಯನ್ನು ಈ ಟ್ವೀಟ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.

ಐಪಿಎಲ್ : 2020ರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 5 ಆಟಗಾರರುಐಪಿಎಲ್ : 2020ರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 5 ಆಟಗಾರರು

ಕ್ರಿಕೆಟ್‌ ಮೈದಾನದಲ್ಲಿ ವೇಗದ ರನ್, ಬೆಸ್ಟ್ ಫೀಲ್ಡಿಂಗ್‌ಗಾಗಿ ಕೊಹ್ಲಿ ಮತ್ತು ಎಬಿಡಿ ಹೆಸರಾಗಿರುವುದರಿಂದ ಮತ್ತು ಆರ್‌ಸಿಬಿ ಮೇಲಿನ ಪ್ರೀತಿಯಿಂದಾಗಿ ಬೋಲ್ಟ್ ಹೀಗೆ ಟ್ವೀಟ್ ಮಾಡಿದ್ದಾರೆ. ಅಂದ್ಹಾಗೆ ಬೋಲ್ಟ್ ಮಾಡಿದ ಈ ಟ್ವೀಟ್‌ಗೆ ಕೇವಲ 1 ಗಂಟೆಯ ಒಳಗೆ 6000 ಲೈಕ್ಸ್ ಸಿಕ್ಕಿವೆ. ಅಲ್ಲದೆ ಆರ್‌ಸಿಬಿ ಮತ್ತು ಬೋಲ್ಟ್ ಅಭಿಮಾನಿಗಳು ಈ ಟ್ವೀಟನ್ನು 1,410ಕ್ಕೂ ಹೆಚ್ಚು ಸಾರಿ ರೀ ಟ್ವೀಟ್ ಮಾಡಿದ್ದಾರೆ.

Story first published: Thursday, April 8, 2021, 10:00 [IST]
Other articles published on Apr 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X