ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೇತರಿಕೆಯಲ್ಲಿ ವರುಣ್, ವಾರಿಯರ್: ಮುಂದಿನ ಪಂದ್ಯದಲ್ಲಿ ಕೆಕೆಆರ್‌ ಕಣಕ್ಕೆ?

IPL 2021: Varun Chakravarthy, Sandeep Warrier doing fine; KKR on course for their next match

ಅಹ್ಮದಾಬಾದ್: ಕೋಲ್ಕತ್ತಾ ನೈಟ್ ರೈಡರ್ಸ್‌ನಲ್ಲಿ ಕೋವಿಡ್-19 ಸೋಂಕಿಗೀಡಾಗಿದ್ದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಇಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕ್ವಾರಂಟೈನ್ ಮುಕ್ತಾಯದ ಬಳಿಕ ಕೆಕೆಆರ್ ತಂಡ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ ಎಂದು ಕೆಕೆಆರ್‌ ಸಿಇಒ ಮತ್ತು ಎಂಡಿ ವೆಂಕಿ ಮೈಸೂರ್ ಹೇಳಿದ್ದಾರೆ.

ದೆಹಲಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ಸ್ಥಗಿತಗೊಳಿಸುವಂತೆ ಕೋರ್ಟ್‌ಗೆ ಅರ್ಜಿದೆಹಲಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ಸ್ಥಗಿತಗೊಳಿಸುವಂತೆ ಕೋರ್ಟ್‌ಗೆ ಅರ್ಜಿ

ಸೋಮವಾರ (ಮೇ 3) ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಆರಂಭವಾಗುವುದಕ್ಕೆ 7 ಗಂಟೆ ಮುಂಚಿತವಾಗಿ ಕೆಕೆಆರ್‌ನ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ವೇಗಿ ಸಂದೀಪ್ ವಾರಿಯರ್‌ಗೆ ಕೊರೊನಾವೈರಸ್ ಸೋಂಕು ತಗುಲಿರುವುದು ಕಂಡುಬಂದಿತ್ತು.

ಆಟಗಾರರರಿಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಸೋಮವಾರದ ಪಂದ್ಯವನ್ನು ಮುಂದೂಡಲಾಗಿತ್ತು. ಆ ಬಳಿಕ ನಡೆಸಲಾದ ಪರೀಕ್ಷೆಯ ವೇಳೆ ಕೆಕೆಆರ್‌ ತಂಡದ ಇಬ್ಬರನ್ನು ಹೊರತುಪಡಿಸಿ ಉಳಿದ ಎಲ್ಲರ ಫಲಿತಾಂಶ ನೆಗೆಟಿವ್ ಬಂದಿತ್ತು. ಹೀಗಾಗಿ ಕೆಕೆಆರ್ ಶೀಘ್ರ ಮೈದಾನಕ್ಕಿಳಿಯುವ ಸಾಧ್ಯತೆಯನ್ನು ಮೈಸೂರ್ ಹೇಳಿಕೊಂಡಿದ್ದಾರೆ.

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಅತಿಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟ ಪಂದ್ಯ ಯಾವುದು ಗೊತ್ತಾ?ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಅತಿಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟ ಪಂದ್ಯ ಯಾವುದು ಗೊತ್ತಾ?

'ಸಂಕಷ್ಟದ ಸಮಯವಿದು. ಆದರೆ ವರುಣ್ ಮತ್ತು ಸಂದೀಪ್ ಇಬ್ಬರೂ ಚೇತರಿಸಿಕೊಳ್ಳುತ್ತಿರುವುದರಿಂದ ನಾನು ಖುಷಿಯಾಗಿದ್ದೇನೆ. ಆರೋಗ್ಯ ಸಿಬ್ಬಂದಿ ಸೂಚಿಸಿದ ಎಲ್ಲಾ ಮಾರ್ಗಸೂಚಿಗಳನ್ನು ನಾವು ಪಾಲಿಸುತ್ತಿದ್ದೇವೆ,' ಎಂದು ವೆಂಕಿ ಹೇಳಿದ್ದಾರೆ. ಕೆಕೆಆರ್‌ಗೆ 5 ದಿನಗಳ ಕ್ವಾರಂಟೈನ್ ನಡೆಯಲಿದೆ. ಅದು ಮುಗಿದ ಮೇಲೆ ಅಂದರೆ ಮೇ 8ಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೆಕೆಆರ್‌ ಕಣಕ್ಕಿಳಿಯುವ ನಿರೀಕ್ಷೆಯಿದೆ.

Story first published: Tuesday, May 4, 2021, 8:20 [IST]
Other articles published on May 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X