ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಬಾರಿಯ ಐಪಿಎಲ್‌ ಟೂರ್ನಿಯ ಮಧ್ಯದಲ್ಲೇ ಕೊಹ್ಲಿ ಕೈಬಿಟ್ಟು ಹೊಸ ನಾಯಕನನ್ನು ಆರಿಸಲಿದೆ ಆರ್‌ಸಿಬಿ!?

IPL 2021: Virat Kohli might be Removed as RCB Captain in Mid-Way of the tournament says Ex cricketer

ಇತ್ತೀಚೆಗಷ್ಟೇ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಬಳಿಕ ಭಾರತಕ್ಕೆ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಣೆಯನ್ನು ಮಾಡಿದ್ದ ವಿರಾಟ್ ಕೊಹ್ಲಿ ಇದೀಗ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ದ್ವಿತೀಯ ಭಾಗ ಆರಂಭವಾಗುವ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿಯೂ ಹೇಳಿಕೆಯನ್ನು ನೀಡಿ ಅಭಿಮಾನಿಗಳಲ್ಲಿ ಬೇಸರವನ್ನುಂಟುಮಾಡಿದ್ದರು.

ಮತ್ತದೇ ಕಥೆ; ರಾಜಸ್ಥಾನ್ ವಿರುದ್ಧದ ಸೋಲಿಗೆ ಕಾರಣ ಯಾರೆಂಬುದನ್ನು ತಿಳಿಸಿದ ಕೆಎಲ್ ರಾಹುಲ್ಮತ್ತದೇ ಕಥೆ; ರಾಜಸ್ಥಾನ್ ವಿರುದ್ಧದ ಸೋಲಿಗೆ ಕಾರಣ ಯಾರೆಂಬುದನ್ನು ತಿಳಿಸಿದ ಕೆಎಲ್ ರಾಹುಲ್

ಹೌದು ಈ ಬಾರಿಯ ಐಪಿಎಲ್ ಟೂರ್ನಿಯ ದ್ವಿತೀಯ ಭಾಗ ಯುಎಇಯಲ್ಲಿ ಆರಂಭವಾಗಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯಕ್ಕೂ ಮುನ್ನ ಮಹತ್ತರವಾದ ಘೊಷಣೆಯೊಂದನ್ನು ಮಾಡಿದ್ದ ವಿರಾಟ್ ಕೊಹ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಗಿದ ನಂತರ ತಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಹೇಳಿಕೆಯನ್ನು ನೀಡಿದ್ದರು.

ಅಷ್ಟೇ ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದಿಂದ ಕೆಳಗಿಳಿದ ನಂತರವೂ ಬೆಂಗಳೂರು ತಂಡದ ಓರ್ವ ಆಟಗಾರನಾಗಿ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಆಡಲಿದ್ದೇನೆ ಹೊರತು ಬೇರೆ ಯಾವುದೇ ತಂಡಕ್ಕೂ ಹೋಗುವುದಿಲ್ಲ ಎಂದು ವಿರಾಟ್ ಕೊಹ್ಲಿ ಭರವಸೆ ನೀಡಿದ್ದರು. ಹೀಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಗಿದ ನಂತರ ಬೆಂಗಳೂರು ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ವಿರಾಟ್ ಕೊಹ್ಲಿ ತಮ್ಮ ನಿರ್ಧಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.

ಆರ್‌ಸಿಬಿ ಹೀನಾಯ ಸೋಲಿಗೆ ಕಾರಣನಾದ ಈತ ಮುಂದೆ ಭಾರತದ ಪ್ರಮುಖ ಆಟಗಾರ ಆಗ್ತಾನೆ ಎಂದ ಕೊಹ್ಲಿಆರ್‌ಸಿಬಿ ಹೀನಾಯ ಸೋಲಿಗೆ ಕಾರಣನಾದ ಈತ ಮುಂದೆ ಭಾರತದ ಪ್ರಮುಖ ಆಟಗಾರ ಆಗ್ತಾನೆ ಎಂದ ಕೊಹ್ಲಿ

ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿರುವುದರ ಕುರಿತಾಗಿ ಮಾತನಾಡಿದ್ದ ಕೊಹ್ಲಿ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ ಅತಿಯಾದ ಒತ್ತಡದಿಂದ ವಿರಾಟ್ ಕೊಹ್ಲಿ ಈ ರೀತಿಯ ನಿರ್ಧಾರವನ್ನು ಕೈಗೊಳ್ಳುತ್ತಿದ್ದಾರೆ ಎಂದು ನಾಯಕತ್ವದಿಂದ ಕೆಳಗಿಳಿಯುವ ಕೊಹ್ಲಿ ತೀರ್ಮಾನದ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದರು. ಹೌದು, ಟೀಮ್ ಇಂಡಿಯಾ ನಾಯಕತ್ವದ ಕಡೆ ಹೆಚ್ಚಿನ ಗಮನಹರಿಸಲಾಗುತ್ತಿಲ್ಲ ಮತ್ತು ಕುಟುಂಬಸ್ಥರಿಗೆ ಸಮಯವನ್ನು ನೀಡಲಾಗುತ್ತಿಲ್ಲ ಎಂಬ ಕಾರಣಕ್ಕೆ ವಿರಾಟ್ ಕೊಹ್ಲಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ರಾಜ್ ಕುಮಾರ್ ಶರ್ಮಾ ಹೇಳಿಕೆ ನೀಡಿದ್ದರು.

ಹೀಗೆ ವಿರಾಟ್ ಕೊಹ್ಲಿ ಈ ವರ್ಷದ ಐಪಿಎಲ್ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ತ್ಯಜಿಸಲಿದ್ದು, ಈ ಬಾರಿಯಾದರೂ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಬೆಂಗಳೂರು ತಂಡ ಕಪ್ ಗೆಲ್ಲಲ್ಲಿ ಎಂದು ಆಶಿಸುತ್ತಿದ್ದ ಅಭಿಮಾನಿಗಳಿಗೆ ಇದೀಗ ಬೇಸರದ ಸುದ್ದಿಯೊಂದು ಹರಿದು ಬಂದಿದೆ. ಹೌದು ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿಯನ್ನು ನಾಯಕ ಸ್ಥಾನದಿಂದ ಬೆಂಗಳೂರು ತಂಡ ಕೆಳಗಿಳಿಸಲಿದೆ ಎಂಬ ಗಾಢವಾದ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಈ ಕುರಿತಾದ ಮತ್ತೊಂದಿಷ್ಟು ಮಾಹಿತಿ ಮುಂದೆ ಇದೆ ಓದಿ..

ಪಂಜಾಬ್ ವಿರುದ್ಧ RR ಗೆಲ್ಲೋದಕ್ಕೆ ಕಾರಣವಾದ ಟರ್ನಿಂಗ್ ಪಾಯಿಂಟ್ | Oneindia Kannada
ಬೆಂಗಳೂರು ಫ್ರಾಂಚೈಸಿ ಕೊಹ್ಲಿಯನ್ನು ಟೂರ್ನಿ ಮಧ್ಯದಲ್ಲೇ ನಾಯಕ ಸ್ಥಾನದಿಂದ ಕೆಳಗಿಳಿಸಲಿದೆ ಎಂದ ಮಾಜಿ ಕ್ರಿಕೆಟಿಗ

ಬೆಂಗಳೂರು ಫ್ರಾಂಚೈಸಿ ಕೊಹ್ಲಿಯನ್ನು ಟೂರ್ನಿ ಮಧ್ಯದಲ್ಲೇ ನಾಯಕ ಸ್ಥಾನದಿಂದ ಕೆಳಗಿಳಿಸಲಿದೆ ಎಂದ ಮಾಜಿ ಕ್ರಿಕೆಟಿಗ

ಈ ಕುರಿತಾಗಿ ಮಾಜಿ ಕ್ರಿಕೆಟಿಗರೊಬ್ಬರು ಮಾಹಿತಿಯನ್ನು ನೀಡಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಧ್ಯದಲ್ಲಿಯೇ ವಿರಾಟ್ ಕೊಹ್ಲಿಯನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿ ಬೇರೊಬ್ಬ ಆಟಗಾರನನ್ನು ನಾಯಕ ಸ್ಥಾನಕ್ಕೆ ನೇಮಿಸಲಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಆ ಮಾಜಿ ಕ್ರಿಕೆಟಿಗ ಇತ್ತೀಚಿಗಷ್ಟೆ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತೀರಾ ಕಳಪೆ ಪ್ರದರ್ಶನವನ್ನು ನೀಡಿದರು, ಕೊಹ್ಲಿ ಸಾಕಷ್ಟು ಒತ್ತಡದಿಂದ ಬ್ಯಾಟ್ ಮಾಡುತ್ತಿದ್ದಾರೆ ಎಂಬುದು ಅವರ ಪ್ರದರ್ಶನವನ್ನು ನೋಡಿದರೆ ಎಂಥವರಿಗೂ ತಿಳಿಯುತ್ತಿತ್ತು. ಹೀಗಾಗಿ ಕೊಹ್ಲಿಗೆ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಬೆಂಗಳೂರು ತಂಡ ಈ ನಿರ್ಧಾರವನ್ನು ಟೂರ್ನಿ ಮಧ್ಯದಲ್ಲಿಯೇ ಕೈಗೊಳ್ಳಲಿದೆ ಎಂದು ಮಾಜಿ ಕ್ರಿಕೆಟಿಗರೊಬ್ಬರು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಈ ರೀತಿಯ ನಾಯಕ ಬದಲಾವಣೆ ಇದೇ ಮೊದಲೇನಲ್ಲ

ಈ ರೀತಿಯ ನಾಯಕ ಬದಲಾವಣೆ ಇದೇ ಮೊದಲೇನಲ್ಲ

ಇನ್ನೂ ಮುಂದುವರೆದು ಈ ಕುರಿತಾಗಿ ಮಾತನಾಡಿರುವ ಆ ಮಾಜಿ ಕ್ರಿಕೆಟಿಗ ಈ ರೀತಿ ಟೂರ್ನಿ ಮಧ್ಯೆ ನಾಯಕನನ್ನು ಬದಲಾಯಿಸುತ್ತಿರುವುದು ಇದೇ ಮೊದಲೇನಲ್ಲ ಈ ಹಿಂದೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಬದಲು ಇಯಾನ್ ಮಾರ್ಗನ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿ ಕೇನ್ ವಿಲಿಯಮ್ಸನ್ ಅವರ ಹೆಗಲಿಗೆ ನಾಯಕನ ಜವಾಬ್ದಾರಿಯನ್ನು ಇದೇ ರೀತಿ ಟೂರ್ನಿ ಮಧ್ಯದಲ್ಲಿಯೇ ಹಾಕಲಾಗಿತ್ತು ಎಂದು ನಿದರ್ಶನವನ್ನು ನೀಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂದಿನ ಪಂದ್ಯ ಯಾವಾಗ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂದಿನ ಪಂದ್ಯ ಯಾವಾಗ?

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ದ್ವಿತೀಯ ಭಾಗ ಆರಂಭವಾಗಿದ್ದು ಇತ್ತೀಚೆಗಷ್ಟೇ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹೀನಾಯವಾಗಿ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯದಲ್ಲಿ ಸೆಪ್ಟೆಂಬರ್ 24ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಸೆಣಸಾಡಲಿದೆ.

Story first published: Wednesday, September 22, 2021, 12:20 [IST]
Other articles published on Sep 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X