ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ಬಯೋಬಬಲ್ ಬಿಟ್ಟು ಹೊರ ನಡೆದ ಇಬ್ಬರು ಸ್ಟಾರ್ ಕ್ರಿಕೆಟಿಗರು: ಟ್ವೀಟ್‌ನಲ್ಲಿ ಭಾವುಕ ಸಂದೇಶ

IPL 2021: Wanindu Hasaranga and Dushmantha Chameera left RCB bio bubble with heartfelt note

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪ್ಕೇಆಫ್ ಹಂತಕ್ಕೇರಿದ್ದು ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಈ ಹಂತದಲ್ಲಿ ಶ್ರೀಲಂಕಾದ ಇಬ್ಬರು ಆಟಗಾರರು ಆರ್‌ಸಿಬಿ ತಂಡದ ಬಯೋಬಬಲ್ ತೊರೆದಿದ್ದಾರೆ. ಹಾಗಂತ ಇದೇನೂ ದಿಢೀರ್ ಬೆಳವಣಿಗೆಯಲ್ಲ. ಶ್ರೀಲಂಕಾ ತಂಡದ ಆಟಗಾರರು ಟಿ20 ವಿಶ್ವಕಪ್‌ನ ಹಿನ್ನಡೆಯಲ್ಲಿ ರಾಷ್ಟ್ರೀಯ ತಂಡದ ಕರ್ತವ್ಯಕ್ಕೆ ತೆರಳಬೇಕಿರುವ ಹಿನ್ನೆಲೆಯಲ್ಲಿ ಲಂಕಾ ಮಂಡಳಿ ಲೀಗ್ ಹಂತದ ಪಂದ್ಯಗಳ ಬಳಿಕ ರಾಷ್ಟ್ರೀಯ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿತ್ತು. ಅದರಂತೆ ಆರ್‌ಸಿಬಿ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದ ವನಿಂದು ಹಸರಂಗ ಹಾಗೂ ದುಷ್ಮಂತಾ ಚಮೀರಾ ಈಗ ಶ್ರೀಲಂಕಾ ಬಯೋಬಬಲ್‌ಗೆ ಸೇರ್ಪಡೆಗೊಳ್ಳುವ ಸಲುವಾಗಿ ಆರ್‌ಸಿಬಿ ಬಯೋಬಬಲ್ ತೊರೆದಿದ್ದಾರೆ.

ಶ್ರೀಲಂಕಾ ತಂಡದ ಈ ಇಬ್ಬರು ಆಟಗಾರರನ್ನು ಆರ್‌ಸಿಬಿ ಈ ಬಾರಿಯ ಐಪಿಎಲ್‌ನ ಎರಡನೇ ಚರಣಕ್ಕೆ ಮುನ್ನ ತಂಡಕ್ಕೆ ಸೇರ್ಪಡೆಗೊಳಿಸಿತ್ತು. ಬದಲಿ ಇವರು ಆಟಗಾರರಾಗಿ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದರು. ಈಗ ವಿಶ್ವಕಪ್‌ಗೆ ಸಿದ್ಧವಾಗುವ ಹಿನ್ನಲೆಯಲ್ಲಿ ಆರ್‌ಸಿಬಿ ಬಯೋಬಬಲ್‌ಅನ್ನು ಈ ಆಟಗಾರರು ತೊರೆಯುತ್ತಿರುದಾಗಿ ಆರ್‌ಸಿಬಿ ಅಧಿಕೃತವಾಗಿ ಮಾಹಿತಿ ನೀಡಿದೆ.

ಐಪಿಎಲ್ 2021: ಅಪರೂಪದ ದಾಖಲೆಗಳ ಬರೆದ ಚೆನ್ನೈ ಸೂಪರ್ ಕಿಂಗ್ಸ್!ಐಪಿಎಲ್ 2021: ಅಪರೂಪದ ದಾಖಲೆಗಳ ಬರೆದ ಚೆನ್ನೈ ಸೂಪರ್ ಕಿಂಗ್ಸ್!

ಭಾವನಾತ್ಮಕ ಟ್ವೀಟ್ ಮಾಡಿದ ಹಸರಂಗ

ಭಾವನಾತ್ಮಕ ಟ್ವೀಟ್ ಮಾಡಿದ ಹಸರಂಗ

ಐಪಿಎಲ್‌ನಲ್ಲಿ ಆರ್‌ಸಿಬಿ ಪರವಾಗಿ ಇದೇ ಮೊದಲ ಬಾರಿಗೆ ಕಣಕ್ಕಿಳಿದಿದ್ದ ವನಿಂದು ಹಸರಂಗ ಆರ್‌ಸಿಬಿ ಬಯೋಬಬಲ್ ಬಿಟ್ಟು ಹೊರನಡೆಯುತ್ತಿರುವ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಆರ್‌ಸಿಬಿ ಜೊತೆಗಿನ ಬಾಂಧವ್ಯವನ್ನು ಭಾವುಕವಾಗಿ ಬರೆದುಕೊಂಡಿದ್ದಾರೆ. ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಆರ್‌ಸಿಬಿ ಪ್ರಶಸ್ತಿ ಗೆಲ್ಲುವ ಅವಕಾಶವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ನಾನು ಆರ್‌ಸಿಬಿ ಕುಟುಂಬಕ್ಕೆ ಸಹ ಆಟಗಾರರಿಗೆ ಹೃದಯಾಂತರಾಳದಿಂದ ಧನ್ಯವಾದವನ್ನು ಸಲ್ಲಿಸುತ್ತೇನೆ. ಜೊತೆಗೆ ಪ್ಲೇ ಆಫ್ ಹಂತಕ್ಕೆ ತಂಡದ ಸದಸ್ಯರಿಗೆ ಶುಭ ಹಾರೈಸುತ್ತೇನೆ. ಈ ವರ್ಷ ನಾವು ಬಹುಶಃ ಪ್ರಶಸ್ತಿಯನ್ನು ಗೆಲ್ಲಲಿದ್ದೇವೆ. ತಂಡದ ಮ್ಯಾನೇಜ್‌ಮೆಂಟ್‌ನಿಂದ ಹಿಡುದು ಎಲಲ್ಆ ವಿಚಾರಗಳಲ್ಲಿಯೂ ಅನುಭವ ತುಂಬಾ ಅದ್ಭುತವಾಗಿದೆ. ಆಟಗಾರರ ಮಧ್ಯೆ ತುಂಬಾ ಬಲಿಷ್ಠವಾದ ಭ್ರಾತೃತ್ವ ಹಾಗೂ ಗೆಳೆತನ ಬೆಳೆದಿದೆ. ಈ ಅವಕಾಶಕ್ಕೆ ನಾನು ನಿಜವಾಗಿಯೂ ಸಂತಸಗೊಂಡಿದ್ದೇನೆ" ಎಂದು ಹಸರಂಗ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಮಿಂಚಲು ವಿಫಲವಾದ ಲಂಕಾ ಆಟಗಾರ

ಮಿಂಚಲು ವಿಫಲವಾದ ಲಂಕಾ ಆಟಗಾರ

ಈ ಬಾರಿಯ ಐಪಿಎಲ್‌ನ ಯುಎಇ ಆವೃತ್ತಿಗೆ ಮುನ್ನ ಆರ್‌ಸಿಬಿ ಶ್ರೀಲಂಕಾ ಆಟಗಾರರಾದ ವನಿಂದು ಹಸರಂಗ ಹಾಗೂ ದುಷ್ಮಂತ ಚಮೀರಾ ಆವರನ್ನು ಸೇರ್ಪಡೆಗೊಳಿಸಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಪಿನ್ನರ್ ಆಗಿ ಅದ್ಭುತ ಫಾರ್ಮ್‌ನಲ್ಲಿದ್ದು ಮಿಂಚಿರುವ ಹಸರಂಗ ಐಪಿಎಲ್‌ನಲ್ಲಿ ವಿಫಲವಾಗಿದ್ದಾರೆ. ಆರ್‌ಸಿಬಿ ಪರವಾಗಿ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಗಳಿಸಿರುವ ಹಸರಂಗ ಒಂದು ವಿಕೆಟ್ ಪಡೆಯುವಲ್ಲಿಯೂ ಸಫಲವಾಗಿಲ್ಲ. ಇನ್ನು ಬ್ಯಾಟ್‌ನಲ್ಲಿ ಹಸರಂಗ ಗಳಿಸಿದ್ದು ಕೇವಲ ಒಂದು ರನ್ ಮಾತ್ರ.

ಆಡುವ ಅವಕಾಶವನ್ನೇ ಗಳಿಸದ ಚಮೀರಾ

ಆಡುವ ಅವಕಾಶವನ್ನೇ ಗಳಿಸದ ಚಮೀರಾ

ಮತ್ತೊಂದೆಡೆ ದುಷ್ಮಂತ ಚಮೀರಾ ಕೂಡ ಈ ಬಾರಿಯ ಐಪಿಎಲ್‌ಗೆ ಆರ್‌ಸಿಬಿ ಪರವಾಗಿ ಮೊದಲ ಬಾರಿಗೆ ಪಾಲ್ಗೊಳ್ಳುವ ಅವಕಾಶ ಗಳಿಸಿಕೊಂಡಿದ್ದರು. ಆದರೆ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಚಮೀರಾ ವಿಫಲವಾಗಿದ್ದಾರೆ. ಆರ್‌ಸಿಬಿ ಬೌಲಿಂಗ್ ವಿಭಾಗದಲ್ಲಿ ಹೆಚ್ಚಿನ ಬದಲಾವಣೆ ಮಾಡಲು ಬಯಸದ ಹಿನ್ನೆಲೆಯಲ್ಲಿ ಚಮೀರಾ ಲೀಗ್ ಹಂತದಲ್ಲಿ ಸಂಪೂರ್ಣವಾಗಿ ಬೆಂಚ್ ಕಾಯುವಂತಾಯ್ತು.

ಗ್ರೂಪ್ ಹಂತದಲ್ಲಿ ಪಾಲ್ಗೊಳ್ಳಬೇಕಿದೆ ಶ್ರೀಲಂಕಾ

ಗ್ರೂಪ್ ಹಂತದಲ್ಲಿ ಪಾಲ್ಗೊಳ್ಳಬೇಕಿದೆ ಶ್ರೀಲಂಕಾ

ಈ ಬಾರಿಯ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ ಗ್ರೂಫ್ ಹಂತದಲ್ಲಿ ಪಾಲ್ಗೊಳ್ಳಬೇಕಿದೆ. ಹೀಗಾಗಿ ಶ್ರೀಲಂಕಾ ಕ್ರಿಕೆಟ್ ತಂಡದ ಅಭಿಯಾನ ಮುಂದಿನ ಸೋಮವಾರದಿಂದಲೇ ಆರಂಭವಾಗಲಿದೆ. ಗ್ರೂಫ್ ಹಂತದಲ್ಲಿ ದುರ್ಬಲ ತಂಡಗಳ ವಿರುದ್ಧ ಸೆಣೆಸಿ ಗೆದ್ದ ಬಳಿಕ ಸೂಪರ್ 12 ಹಂತಕ್ಕೆ ಪ್ರವೇಶ ಪಡೆಯಲು ಸಾಧ್ಯವಿದೆ. ಬಾಂಗ್ಲಾದೇಶ ಕೂಡ ಈ ಗ್ರೂಫ್ ಹಂತದಲ್ಲಿ ಆಡಿದ ಬಳಿಕ ಅರ್ಹತೆ ಸಂಪಾದಿಸಬೇಕಿರುವ ಮತ್ತೊಂದು ಟೆಸ್ಟ್ ಮಾನ್ಯತೆ ಪಡೆದ ದೇಶವಾಗಿದೆ. ಸೂಪರ್ 12 ಹಂತದ ಪಂದ್ಯಗಳು ಅಕ್ಟೋಬರ್ 23ರ ಬಳಿಕ ಆರಂಭವಾಗಲಿದೆ.

Story first published: Monday, October 11, 2021, 16:10 [IST]
Other articles published on Oct 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X