ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಧೋನಿ ಸಿಎಸ್‌ಕೆ ಪರ ಏನೂ ಮಾಡಿಲ್ಲ, ಆದರೂ ತಂಡ ಪ್ಲೇಆಫ್ ತಲುಪಿದೆ' ಎಂದ ಮಾಜಿ ಕ್ರಿಕೆಟಿಗ

IPL 2021: We havent seen MS Dhoni do anything for CSK in this tournament says Dale Steyn

ಸದ್ಯ ಯುಎಇಯಲ್ಲಿ ನಡೆಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಪಂದ್ಯಗಳು ಬಹುತೇಕ ಮುಗಿಯುವ ಹಂತಕ್ಕೆ ಬಂದು ತಲುಪಿದ್ದು ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಅಧಿಕೃತವಾಗಿ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಟ್ಟಿವೆ.

ತಂಡದಿಂದ ಹೊರಗಿಟ್ಟರೂ ಕ್ರೀಡಾಂಗಣಕ್ಕೆ ಬಂದು ಡೇವಿಡ್ ವಾರ್ನರ್ ಮಾಡಿದ ಕೆಲಸಕ್ಕೆ ಸಿಕ್ತು ಗೌರವತಂಡದಿಂದ ಹೊರಗಿಟ್ಟರೂ ಕ್ರೀಡಾಂಗಣಕ್ಕೆ ಬಂದು ಡೇವಿಡ್ ವಾರ್ನರ್ ಮಾಡಿದ ಕೆಲಸಕ್ಕೆ ಸಿಕ್ತು ಗೌರವ

ಹೌದು, ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನವನ್ನು ನೀಡಿ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವ ಮೂಲಕ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದ್ದ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸಾಲುಸಾಲು ಪಂದ್ಯಗಳಲ್ಲಿ ಗೆಲ್ಲುವುದರ ಮೂಲಕ ಎಲ್ಲಾ ತಂಡಗಳನ್ನು ಹಿಂದಿಕ್ಕಿ ಪ್ಲೇ ಆಫ್ ಹಂತವನ್ನು ಪ್ರವೇಶಿಸಿದ ಚೊಚ್ಚಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಫ್ ಹಂತವನ್ನು ಪ್ರವೇಶಿಸಿದ ನಂತರ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಅಧಿಕೃತವಾಗಿ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಟ್ಟಿತು. ನಂತರ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತೃತೀಯ ತಂಡವಾಗಿ ಪ್ಲೇ ಆಫ್ ಹಂತವನ್ನು ಅಧಿಕೃತವಾಗಿ ಪ್ರವೇಶಿಸಿತು. ಇನ್ನುಳಿದಂತೆ ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಪ್ಲೇ ಆಫ್ ಹಂತವನ್ನು ಪ್ರವೇಶಿಸಲು ಪೈಪೋಟಿ ಶುರುವಾಗಿದೆ.

ಮುಂಬೈ ಗೆಲುವಿನಾಸೆಗೆ ಮುಳುವಾದ ಅಶ್ವಿನ್, ಶ್ರೇಯಸ್; ಮುಂಬೈ ಇಂಡಿಯನ್ಸ್‌‌ ಪ್ಲೇಆಫ್ ಕಥೆಯೇನು?ಮುಂಬೈ ಗೆಲುವಿನಾಸೆಗೆ ಮುಳುವಾದ ಅಶ್ವಿನ್, ಶ್ರೇಯಸ್; ಮುಂಬೈ ಇಂಡಿಯನ್ಸ್‌‌ ಪ್ಲೇಆಫ್ ಕಥೆಯೇನು?

ಹೀಗೆ ಎಲ್ಲಾ ತಂಡಗಳನ್ನು ಹಿಂದಿಕ್ಕಿ ಅಧಿಕೃತವಾಗಿ ಮೊದಲು ಪ್ಲೇ ಆಫ್ ಪ್ರವೇಶಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಕುರಿತು ಮಾತನಾಡಿರುವ ದಕ್ಷಿಣ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ ಡೇಲ್ ಸ್ಟೇನ್ ಈ ಕೆಳಕಂಡಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಧೋನಿ ಏನೂ ಮಾಡದೇ ಇದ್ದರೂ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅವರೇ ಬಾಸ್

ಧೋನಿ ಏನೂ ಮಾಡದೇ ಇದ್ದರೂ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅವರೇ ಬಾಸ್

ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಬ್ಯಾಟ್ಸ್‌ಮನ್‌ ಆಗಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ, ಆದರೆ ಓರ್ವ ನಾಯಕನಾಗಿ ತಮ್ಮ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವುದಂತೂ ನಿಜ. ಈ ಕುರಿತಾಗಿಯೇ ಡೇಲ್ ಸ್ಟೇನ್ ಕೂಡ ಮಾತನಾಡಿದ್ದು 'ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಾಸ್. ನೀವು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಯೋಚಿಸಿದಾಗಲೆಲ್ಲ ಎಂಎಸ್ ಧೋನಿ ಕಣ್ಮುಂದೆ ಬರುತ್ತಾರೆ. ಹಾಗೂ ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಇನ್ನೂ ಹಲವಾರು ಲೀಗ್ ಪಂದ್ಯಗಳು ಬಾಕಿ ಇರುವಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಫ್ ಹಂತವನ್ನು ಪ್ರವೇಶಿಸಿಬಿಟ್ಟಿದೆ. ಆದರೆ ಇಷ್ಟು ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿಗೆ ಧೋನಿ ಯಾವುದೇ ಕೊಡುಗೆಗಳನ್ನು ನೀಡಿಲ್ಲ' ಎಂದು ಡೇಲ್ ಸ್ಟೇನ್ ಹೇಳಿದ್ದಾರೆ.

ಫೈನಲ್ ಪಂದ್ಯದಲ್ಲಿ ರನ್ ಬಾರಿಸಿದರೆ ಸಾಕು

ಫೈನಲ್ ಪಂದ್ಯದಲ್ಲಿ ರನ್ ಬಾರಿಸಿದರೆ ಸಾಕು

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಲೀಗ್ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಧೋನಿ ಯಾವುದೇ ದೊಡ್ಡ ಆಟವನ್ನು ಆಡಿಲ್ಲ ಎಂದು ಹೇಳಿಕೆ ನೀಡಿರುವ ಡೇಲ್ ಸ್ಟೇನ್ 'ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಏನಾದರೂ ಎಂಎಸ್ ಧೋನಿ ಹೆಚ್ಚಿನ ರನ್ ಗಳಿಸಿದರೆ ಖಂಡಿತವಾಗಿಯೂ ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಅವರೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಮುಂದುವರಿಯಲಿದ್ದಾರೆ' ಎಂದು ಹೇಳಿದ್ದಾರೆ.

David Warner ಸಾಧಾರಣ ಪ್ರೇಕ್ಷಕನಂತೆ ಪಂದ್ಯ ವೀಕ್ಷಿಸಿದರು | Oneindia Kannada
ಐಪಿಎಲ್ 2021ರಲ್ಲಿ ಎಂಎಸ್ ಧೋನಿ ಪ್ರದರ್ಶನ

ಐಪಿಎಲ್ 2021ರಲ್ಲಿ ಎಂಎಸ್ ಧೋನಿ ಪ್ರದರ್ಶನ


ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಓರ್ವ ಬ್ಯಾಟ್ಸ್‌ಮನ್‌ ಆಗಿ ಎಂಎಸ್ ಧೋನಿ ನೀರಸ ಪ್ರದರ್ಶನವನ್ನು ನೀಡಿರುವುದು ನಿಜ. ನಾಯಕನಾಗಿ ಯಶಸ್ಸು ಸಾಧಿಸಿರುವ ಎಂಎಸ್ ಧೋನಿ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ 12 ಪಂದ್ಯಗಳನ್ನಾಡಿದ್ದು ಕೇವಲ 66 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ.

Story first published: Monday, October 4, 2021, 16:11 [IST]
Other articles published on Oct 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X