ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೆಲ್ಲಿ ವಿರುದ್ಧ ಕೆಕೆಆರ್ ಸೋಲಿಗೆ ಕಾರಣ ಹೇಳಿದ ಇಯಾನ್ ಮಾರ್ಗನ್

IPL 2021: We were slow off the blocks, says KKR skipper Eoin Morgan

ಗುರುವಾರ ನಡೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತೊಂದು ನೀರಸ ಪ್ರದರ್ಶನ ನೀಡಿ ಸೋಲು ಕಂಡಿತು. ಈ ಮೂಲಕ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನವನ್ನು ಮುಂದುವರಿಸಿದೆ. ಈ ಸೋಲಿನ ಬಳಿಕ ನಾಯಕ ಇಯಾನ್ ಮಾರ್ಗನ್ ಮಾತನಾಡಿ ಸೋಲಿಗೆ ಕಾರಣವನ್ನು ಹೇಳಿದ್ದಾರೆ. ನಿಧಾನಗತಿಯ ಬ್ಯಾಟಿಂಗ್‌ನ ಕಾರಣದಿಂದಾಗಿ ಕೆಕೆಆರ್ ಸೋಲು ಕಂಡಿದೆ ಎಂದಿದ್ದಾರೆ.

ಅಹ್ಮದಾಬಾದ್‌ನ ನರೆಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ನೀಡಿದ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಅಬ್ಬರದ ಆರಂಭವನ್ನು ಪಡೆದುಕೊಂಡಿತು. ಶಿವಂ ಮಾವಿ ಎಸೆದ ಮೊದಲ ಓವರ್‌ನಲ್ಲಿಯೇ ಪೃಥ್ವಿ ಶಾ ಎಲ್ಲಾ ಆರು ಎಸೆತಗಳನ್ನು ಬೌಂಡರಿಗಟ್ಟಿ ದಾಖಲೆ ಬರೆದರು. ಇದರಿಂದಾಗಿ ಡೆಲ್ಲಿ ಆರಂಭದಿಂದಲೇ ಮೇಲುಗೈ ಸಾಧಿಸುತ್ತಾ ಸಾಗಿತ್ತು.

ಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್, ಕೋಲ್ಕತ್ತಾ ವಿರುದ್ಧ ಡೆಲ್ಲಿಗೆ ಗೆಲುವುಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್, ಕೋಲ್ಕತ್ತಾ ವಿರುದ್ಧ ಡೆಲ್ಲಿಗೆ ಗೆಲುವು

"ಶಾ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ನಮಗೆ ಹೆಚ್ಚಿನದೇನೂ ಮಾಡುವ ಅವಕಾಶ ನೀಡಲಿಲ್ಲ. ಪಿಚ್ ಕೂಡ ಎಷ್ಟು ಚೆನ್ನಾಗಿದೆ ಎಂದು ಅವರು ತೋರಿಸಿಕೊಟ್ಟರು. ನಾವು ಎಲ್ಲಾ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದೆವು" ಎಂದಿದ್ದಾರೆ ಇಯಾನ್ ಮಾರ್ಗನ್.

"ಫಲಿತಾಂಶವನ್ನು ನಮ್ಮತ್ತ ತಿರುಗಿಸುವ ಅವಕಾಶ ನಮಗಿದೆ. ನಮ್ಮ ಬಳಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರತಿಭಾನ್ವಿತ ಆಟಗಾರರು ಇದ್ದಾರೆ. ಪ್ರತಿಭೆ ಮಾತ್ರವೇ ನಿಮ್ಮನ್ನು ಮೇಲಕ್ಕೆತ್ತಲಾರದು. ಯೋಜನೆಗಳ ಅನುಷ್ಟಾನ ಮಾಡುವ ರೀತಿ ಬಹಳ ಮುಖ್ಯವಾಗುತ್ತದೆ" ಎಂದು ಇಂಗ್ಲೆಂಡ್‌ನ ವಿಶ್ವಕಪ್ ವಿಜೇತ ತಂಡದ ನಾಯಕ ಪ್ರತಿಕ್ರಿಯಿಸಿದ್ದಾರೆ.

Story first published: Friday, April 30, 2021, 16:47 [IST]
Other articles published on Apr 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X