ಐಪಿಎಲ್‌ನಲ್ಲಿ ಆರ್‌ಸಿಬಿ ಟ್ರೋಫಿ ಗೆಲ್ಲದಿರಲು ದೊಡ್ಡ ಕಾರಣ ಮುಂದಿಟ್ಟ ಗೌತಮ್ ಗಂಭೀರ್

ಬೆಂಗಳೂರು, ಸೆಪ್ಟೆಂಬರ್ 15: ಐಪಿಎಲ್‌ನಲ್ಲಿ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದಾಗಿದ್ದರೂ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಈವರೆಗೂ ಒಂದೇ ಒಂದು ಬಾರಿ ಚಾಂಪಿಯನ್ ಪಟ್ಟಕ್ಕೇರಲು ಸಾಧ್ಯವಾಗಿಲ್ಲ. ಸಾಕಷ್ಟು ಸ್ಟಾರ್ ಆಟಗಾರರ ದಂಡನ್ನೇ ಹೊಂದಿದ್ದರು ಕೂಡ ಕೊಹ್ಲಿ ಪಡೆಯ ಪಾಲಿಗೆ ಐಪಿಎಲ್ ಟ್ರೋಫಿ ಇನ್ನೂ ಕನಸಾಗಿಯೇ ಉಳಿದುಕೊಂಡಿದೆ. ಆದರೆ ಈ ಬಾರಿಯ ಟೈರ್ನಿಯ್ಲಲಿ ಆರ್‌ಸಿಬಿ ಆರಂಭದಿಂದೇ ಸಾಕಷ್ಟು ಅದ್ಭುತ ಪ್ರದರ್ಶನ ನೀಡುವ ಮೂಲಕ 14 ವರ್ಷಗಳ ಕನಸನ್ನು ನನಸು ಮಾಡುವ ಪ್ರಯತ್ನದಲ್ಲಿದೆ.

ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಲಿ ಸಂಸದ ಗೌತಮ್ ಗಂಭೀರ್ ಆರ್‌ಸಿಬಿ ತಂಡದ ವಿಚಾರವಾಗಿ ಮಾತನಾಡಿದ್ದಾರೆ. ಅತ್ಯುತ್ತಮ ಆಟಗಾರರ ತಂಡವನ್ನು ಹೊಮದಿದ್ದರೂ ಆರ್‌ಸಿಬಿ ಐಪಿಎಲ್ ಇತಿಹಾಸದಲ್ಲಿ ಯಾವ ಕಾರಣಕ್ಕಾಗಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ ಎಂದು ವಿಶ್ಲೇಷಣೆ ಮಾಡಿದ್ದಾರೆ. ಇದರಲ್ಲಿ ಒಂದು ಅಂಶವನ್ನು ಗೌತಮ್ ಗಂಭೀರ್ ಬಿಟ್ಟು ಮಾಡಿದ್ದು ಇದೇ ಕಾರಣದಿಂದಾಗಿ ಆರ್‌ಸಿಬಿಗೆ ಚಾಂಪಿಯನ್ ಪಟ್ಟಕ್ಕೇರಲು ಸಾಧ್ಯವಾಗಿಲ್ಲ ಎಂದು ವಿಶ್ಲೇಷಿಸಿದ್ದಾರೆ ಗೌತಮ್ ಗಂಭೀರ್.

ಹಾಗಾದರೆ ಗೌತಮ್ ಗಂಭೀರ್ ಹೇಳಿದ ಆ ಕಾರಣವೇನು? ಯಾವ ಕಾರಣಕ್ಕಾಗಿ ಒಂದು ಬಾರಿಯೂ ಐಪಿಎಲ್‌ನಲ್ಲಿ ಆರ್‌ಸಿಬಿ ಚಾಂಪಿಯನ್ ತಂಡ ಎನಿಸಿಲ್ಲ ಎಂದಿದ್ದಾರೆ ಗಂಭೀರ್? ಮುಂದೆ ಓದಿ..

ಟಿ ಟ್ವೆಂಟಿ ವಿಶ್ವಕಪ್ ನಂತರ ಟೀಮ್ ಇಂಡಿಯಾದಲ್ಲಿ ಈ ಮೂರು ಪ್ರಮುಖ ಬದಲಾವಣೆಗಳು ಖಚಿತಟಿ ಟ್ವೆಂಟಿ ವಿಶ್ವಕಪ್ ನಂತರ ಟೀಮ್ ಇಂಡಿಯಾದಲ್ಲಿ ಈ ಮೂರು ಪ್ರಮುಖ ಬದಲಾವಣೆಗಳು ಖಚಿತ

ಕೊಹ್ಲಿ, ಎಬಿಡಿಯಂತಾ ಆಟಗಾರರಿದ್ದರೂ ಟ್ರೋಫಿ ಗೆದ್ದಿಲ್ಲ: ಐಪಿಎಲ್ ಆರಂಭದ ಹಿನ್ನೆಲೆಯಲ್ಲಿ ಮಾತನಾಡಿರುವ ಗೌತಮ್ ಗಂಭೀರ್ ಆರ್‌ಸಿಬಿ ತಂಡದ ವಿಶ್ಲೇಷಣೆ ಮಾಡಿದ್ದಾರೆ. ಆರ್‌ಸಿಬಿ ತಂಡ ಸುದೀರ್ಘ ಕಾಲದಿಂದ ವಿರಾಟ್ ಕೊಹ್ಲಿ ಎಬಿ ಡಿವಿಲಿಯರ್ಸ್ ಅವರಂತಾ ಆಟಗಾರರನ್ನು ಹೊಂದಿದೆ. ಹಾಗಿದ್ದರೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಇದಕ್ಕೆ ಆರ್‌ಸಿಬಿ ತಂಡದಲ್ಲಿರುವ ಕೊರತೆಯೇ ಕಾರಣ ಎಂದಿದ್ದಾರೆ ಗೌತಮ್ ಗಂಭೀರ್.

ಕಪ್‌ ಗೆಲ್ಲದಿರಲು ಕಾರಣ ಹೇಳಿದ ಗೌತಿ: ಆರ್‌ಸಿಬಿ ಐಪಿಎಲ್‌ನಲ್ಲಿ ಒಂದು ಬಾರಿಯೂ ಕಪ್‌ ಗೆಲ್ಲದಿರಲು ಪ್ರಮುಖ ಕಾರಣವೇನೆಂಬುದನ್ನು ಗಂಭೀರ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಗುಣಮಟ್ಟದ ವೇಗದ ಬೌಲರ್‌ಗಳನ್ನು ಆರ್‌ಸಿಬಿ ತಂಡ ಹೊಂದಿಲ್ಲದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ಸ್ಟಾರ್‌ಸ್ಪೋರ್ಟ್ಸ್‌ನ ಗೇಮ್‌ಪ್ಲಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗೌತಮ್ ಗಂಭೀರ್ ಐಪಿಎಲ್‌ನ ಚಾಂಪಿಯನ್ ಪಟ್ಟಕ್ಕೇರಲು ಆರ್‌ಸಿಬಿಗೆ ಅಸಾಧ್ಯವಾಗಲು ಕಾರಣವಾದ ಅಂಶವನ್ನು ತಿಳಿಸಿದ್ದಾರೆ.

ಕೊಹ್ಲಿ, ಎಬಿಡಿ ಮೇಲೆ ಹೆಚ್ಚಿದ ಒತ್ತಡ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೀವು ಐದರಿಂದ ಆರು ಅಂತಾರಾಷ್ಟ್ರೀಯ ಗುಣಮಟ್ಟದ ಬೌಲರ್‌ಗಳನ್ನು ಹೊಂದಿರುತ್ತೀರಿ. ಆದರೆ ಐಪಿಎಲ್‌ನಲ್ಲಿ ನಿಮಗೆ ಆ ಸೌಲಭ್ಯ ದೊರೆಯುವುದಿಲ್ಲ. ಬಹುಶಃ ನೀವು ಇಬ್ಬರು ಅಥವಾ ಮೂವರು ಅಂತಾರಾಷ್ಟ್ರೀಯ ಗುಣಮಟ್ಟದ ಬೌಲರ್‌ಗಳನ್ನು ಹೊಂದಲು ಸಾಧ್ಯವಿದೆ. ಉಳಿದಂತೆ ನೀವು ದೇಶೀಯ ಬೌಲರ್‌ಗಳನ್ನು ಬಳಸಿಕೊಳ್ಳಬೇಕಿದೆ. ಇದೇ ಕಾರಣದಿಂದ ಬಹುಶಃ ವಿರಾಟ್ ಮತ್ತು ಎಬಿ ಡಿವಿಲಿಯರ್ಸ್ ಮೇಲೆ ಸಾಕಷ್ಟು ಒತ್ತಡವಿರಬಹುದು. ವರ್ಷದಿಂದ ವರ್ಷಕ್ಕೆ ನೀವು ಪ್ರಶಸ್ತಿಯನ್ನು ಗೆಲ್ಲದಿದ್ದರೆ ಒತ್ತಡ ಹೆಚ್ಚುತ್ತಲೇ ಇರುತ್ತದೆ. ಟ್ರೋಫಿ ಗೆಲ್ಲದಿರಲು ಇದು ಕೂಡ ಕಾರಣವಾಗಿರಬಹುದು" ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಗೌತಮ್ ಗಂಭೀರ್

ಐಸಿಸಿ ಟಿ20 ವಿಶ್ವಕಪ್: ಈ 4 ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿದೆ ಎಂದ ಆಕಾಶ್ ಚೋಪ್ರಐಸಿಸಿ ಟಿ20 ವಿಶ್ವಕಪ್: ಈ 4 ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿದೆ ಎಂದ ಆಕಾಶ್ ಚೋಪ್ರ

ಎಬಿ ಡಿವಿಲಿಯರ್ಸ್ ಹೊಗಳಿದ ಗಂಭೀರ್: ಇನ್ನು ಈ ಬಾರಿಯ ತಂಡದಲ್ಲಿ ಎಬಿ ಡಿವಿಲಿಯರ್ಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತಾ ಆಟಗಾರರು ತಂಡದಲ್ಲಿ ಇರುವುದು ವಿರಾಟ್ ಕೊಹ್ಲಿಗೆ ಹೆಚ್ಚಿನ ಶಕ್ತಿ ನೀಡಿದೆ ಎಂದಿದ್ದಾರೆ ಗೌತಮ್ ಗಂಭೀರ್. "ವಿರಾಟ್ ಕೊಹ್ಲಿಗೆ ಎಬಿ ಡಿವಿಲಿಯರ್ಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತಾ ಆಟಗಾರರು ಸಿಕ್ಕಿದ್ದಾರೆ. ಇದು ಪ್ರಶಸ್ತಿ ಗೆಲ್ಲಲು ದೊಡ್ಡ ಕಾರಣವಾಗಬಹುದು. ಗ್ಲೆನ್ ಮ್ಯಾಕ್ಸ್‌ವೆಲ್ ಇಲ್ಲದಿದ್ದರೂ ಎಬಿ ಡಿವಿಲಿಯರ್ಸ್ ಆರ್‌ಸಿಬಿ ಪಾಲಿಗೆ ದೊಡ್ಡ ಅಸ್ತ್ರವಾಗಿದ್ದಾರೆ. ಯಾಕೆಂದರೆ ಜಸ್ಪ್ರಿತ್ ಬೂಮ್ರಾ ಅವರಂತಾ ಬೌಲರ್ ವಿರುದ್ಧ ಸುಲಭವಾಗಿ ಆಡಬಲ್ಲಂತಾ ಆಟಗಾರನಿದ್ದರೆ ಅದು ಎಬಿ ಡಿವಿಲಿಯರ್ಸ್ ಮಾತ್ರ. ಈ ಪ್ರದರ್ಶನವನ್ನು ಎಬಿ ಡಿವಿಲಿಯರ್ಸ್ ನಿರಂತರವಾಗಿ ನೀಡಿಕೊಂಡು ಬಂದಿದ್ದಾರೆ" ಎಂದು ಆರ್‌ಸಿಬಿ ದಾಂಡಿಗನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ ಗೌತಮ್ ಗಂಭೀರ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ತಂಡ: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ದೇವದತ್ ಪಡಿಕ್ಕಲ್, ಯುಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಜಾರ್ಜ್ ಗಾರ್ಟನ್, ಆಕಾಶ್ ದೀಪ್, ಪವನ್ ದೇಶಪಾಂಡೆ, ಟಿಮ್ ಡೇವಿಡ್, ಶಹಬಾಜ್ ಅಹಮದ್, ನವದೀಪ್ ಸೈನಿ, ವನಿಂದು ಹಸರಂಗ, ಕೈಲ್ ಜೇಮಿಸನ್ , ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಸಚಿನ್ ಬೇಬಿ, ಮೊಹಮ್ಮದ್ ಅಜರುದ್ದೀನ್, ಡೇನಿಯಲ್ ಕ್ರಿಶ್ಚಿಯನ್, ಕೆಎಸ್ ಭರತ್, ಸುಯಾಶ್ ಪ್ರಭುದೇಸಾಯಿ, ದುಷ್ಮಂತ ಚಮೀರಾ, ಹರ್ಷಲ್ ಪಟೇಲ್

T20 World cup ನಲ್ಲಿ ಭಾರತವನ್ನು ಸೋಲಿಸೋಕೆ ಪಾಕಿಸ್ತಾನದ ಪ್ಲ್ಯಾನ್ ಏನು? | Oneindia Kannada

ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡದ ಮುಂದಿನ ಹಾದಿ: ಐಪಿಎಲ್‌ನಲ್ಲಿ ಒಂದು ಬಾರಿಯೂ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಸಫಲವಾಗದ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಈ ಬಾರಿಯ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿಕೊಂಡು ಬಂದಿದೆ. ಆಡಿದ ಏಳು ಪಂದ್ಯಗಳ ಪೈಕಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 2 ಪಂದ್ಯದಲ್ಲಿ ಮಾತ್ರವೇ ಸೋಲು ಕಂಡಿದೆ. ಹೀಗಾಗಿ ಆರ್‌ಸಿಬಿ ತಂಡ ಈ ಬಾರಿಯ ಪ್ಲೇಆಫ್ ಹಂತಕ್ಕೆ ಹತ್ತಿರದಲ್ಲಿದೆ. ಆದರೆ ಮುಂಬರುವ ಪಂದ್ಯಗಳಲ್ಲಿ ಮತ್ತಷ್ಟು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನ ಪಡೆಯುವ ಗುರಿಯನ್ನು ಹೊಂದಿದೆ ವಿರಾಟ್ ಪಡೆ. ಆದರೆ ಮುಂದಿನ ಹಂತಗಳಲ್ಲಿ ಎದುರಾಗುವ ಸವಾಲುಗಳನ್ನು ವಿರಾಟ್ ಕೊಹ್ಲಿ ಪಡೆ ಯಾವ ರೀತಿಯಾಗಿ ಎದುರಿಸಲಿದೆ ಎಂಬುದು ಈಗ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಮುಂದಿನ ಪಂದ್ಯಗಳಲ್ಲಿ ಆರ್‌ಸಿಬಿ ಪಂಜಾಬ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಲೀಗ್ ಹಂತದ ಪಂದ್ಯವನ್ನಾಡಬೇಕಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, September 15, 2021, 19:04 [IST]
Other articles published on Sep 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X