ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021ರ ಪಂದ್ಯಗಳು ಯುಎಇಗೆ ಸ್ಥಳಾಂತರ, ಆರಂಭದ ದಿನಾಂಕ ಪ್ರಕಟ!

IPL 2021 will tentatively start in 3rd week of September in UAE

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಸೀಸನ್‌ ಕೋವಿಡ್-19 ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಬಯೋ ಬಬಲ್ ಒಳಗಿದ್ದ ಐಪಿಎಲ್ 4 ಫ್ರಾಂಚೈಸಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) 14ನೇ ಆವೃತ್ತಿಯ ಐಪಿಎಲ್ ಅನ್ನು ಅರ್ಧಕ್ಕೆ ನಿಲ್ಲಿಸಿತ್ತು. ನಿಲ್ಲಿಸಲ್ಪಟ್ಟಿದ್ದ ಐಪಿಎಲ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಮುಂದುವರೆಯಲಿದೆ.

ವಾಸಿಮ್ ಜಾಫರ್ ಈ ತಮಾಷೆಯ ಮೀಮ್‌ ಹಿಂದೆ ಗಂಭೀರ ಕತೆಯಿದೆ!ವಾಸಿಮ್ ಜಾಫರ್ ಈ ತಮಾಷೆಯ ಮೀಮ್‌ ಹಿಂದೆ ಗಂಭೀರ ಕತೆಯಿದೆ!

ಮಂಗಳವಾರ ಪಿಟಿಐಗೆ ಮಾಹಿತಿ ನೀಡಿರುವ ಬಿಸಿಸಿಐ ಅಧಿಕಾರಿಗಳು ಐಪಿಎಲ್ ಯುಎಇಯಲ್ಲಿ ನಡೆಯುತ್ತಿರುವುದನ್ನು ಖಾತರಿಪಡಿಸಿದ್ದಾರೆ. ಸೆಪ್ಟೆಂಬರ್‌ ಮೂರನೇ ವಾರದಲ್ಲಿ ಐಪಿಎಲ್ ಆರಂಭಗೊಳ್ಳಲಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಎಷ್ಟು ಪಂದ್ಯಗಳು ಬಾಕಿ?

ಎಷ್ಟು ಪಂದ್ಯಗಳು ಬಾಕಿ?

ಭಾರತದಲ್ಲಿ ನಡೆದಿದ್ದ ಐಪಿಎಲ್‌ನಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಆದರೆ ಟೂರ್ನಿ ಅರ್ಧಕ್ಕೆ ನಿಲುಗಡೆಯಾಗಿದ್ದರಿಂದ ಇನ್ನೂ 31 ಪಂದ್ಯಗಳು ಬಾಕಿ ಉಳಿದಿದ್ದವು. ಈ ಪಂದ್ಯಗಳೆಲ್ಲ ಯುಎಇಯಲ್ಲಿ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಲಿವೆ. 2020ರ ಸೀಸನ್ ಕೂಡ ಯುಎಇಯಲ್ಲಿ ಯಶಸ್ವಿಯಾಗಿ ನಡೆದಿತ್ತು.

ಯಾವಾಗ ಆರಂಭ?

ಯಾವಾಗ ಆರಂಭ?

ನಿಲುಗಡೆಯಾಗಿರುವ ಐಪಿಎಲ್ 14ನೇ ಆವೃತ್ತಿ ಯುಎಇಯಲ್ಲಿ ಸೆಪ್ಟೆಂಬರ್ 18 ಅಥವಾ 19ಕ್ಕೆ ಆರಂಭಗೊಳ್ಳಲಿದೆ. ಮೂರು ವಾರಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 10 ಡಬಲ್ ಹೆಡರ್ ಪಂದ್ಯಗಳಿರಲಿವೆ ಎಂದು ಹೇಳಲಾಗುತ್ತಿದೆ. ಫೈನಲ್ ಪಂದ್ಯ ಅಕ್ಟೋಬರ್ 9 ಅಥವಾ 10ಕ್ಕೆ ನಡೆಯಲಿದೆ.

ಮುಂದೂಡಲು ಪ್ರಮುಖ ಕಾರಣ

ಮುಂದೂಡಲು ಪ್ರಮುಖ ಕಾರಣ

ಭಾರತದಲ್ಲಿ ಆರಂಭಗೊಂಡಿದ್ದ ಐಪಿಎಲ್‌ನ ಬಯೋಬಬಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್, ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ, ಸನ್ ರೈಸರ್ಸ್ ಹೈದರಾಬಾದ್‌ನ ವೃದ್ಧಿಮಾನ್ ಸಾಹ, ಡೆಲ್ಲಿ ಕ್ಯಾಪಿಟಲ್ಸ್‌ನ ಅಮಿತ್ ಮಿಶ್ರಾ ಅವರಿಗೆ ಸೋಂಕು ತಗುಲಿತ್ತು. ಹೀಗಾಗಿ 2021ರ ಐಪಿಎಲ್ ಅನ್ನು ಮೇ 4ರಂದು ಅಮಾನತುಗೊಳಿಸಲಾಗಿತ್ತು.

Story first published: Tuesday, July 27, 2021, 15:44 [IST]
Other articles published on Jul 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X