ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇನ್ನೂ 100 ಬಾರಿ ಆಡಿದ್ರೂ ಆ ಸಿಂಗಲ್ ತೆಗೆದುಕೊಳ್ಳುವುದಿಲ್ಲ: ಸ್ಯಾಮ್ಸನ್

IPL 2021 : Would never take that single if I got PBKS match 100 times says Sanju Samson

ಏಪ್ರಿಲ್ 12ರಂದು ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ರೋಚಕ ಗೆಲುವನ್ನು ದಾಖಲಿಸಿತ್ತು. 222 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ 63 ಎಸೆತಗಳಿಗೆ 119 ರನ್ ಬಾರಿಸಿ ಕೊನೆಯ ಎಸೆತದವರೆಗೂ ಹೋರಾಡಿದರು. ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗೆಲ್ಲಲು ಕೊನೆಯ 2 ಎಸೆತಗಳಲ್ಲಿ 5 ರನ್‌ಗಳ ಅವಶ್ಯಕತೆ ಇತ್ತು. ಕೊನೆಯ ಓವರ್‌ನ ಐದನೇ ಎಸೆತ ಎದುರಿಸಿದ ಸಂಜು ಸ್ಯಾಮ್ಸನ್ ರನ್ ಓಡುವ ಪ್ರಯತ್ನ ಮಾಡಲಿಲ್ಲ.

ಇತ್ತ ಕ್ರಿಸ್ ಮೋರಿಸ್ ಐದನೇ ಎಸೆತದಲ್ಲಿ ಸಿಂಗಲ್ ಓಡುವ ಪ್ರಯತ್ನವನ್ನು ಮಾಡಿದರು. ಆದರೆ ಕ್ರಿಸ್ ಮೋರಿಸ್ ಕರೆಯನ್ನು ನಿರಾಕರಿಸಿದ ಸಂಜು ಸ್ಯಾಮ್ಸನ್ ಯಾವುದೇ ರನ್ ಓಡದೆ ಸ್ಟ್ರೈಕ್ ಕಾಯ್ದುಕೊಂಡರು. ಪಂದ್ಯದ ಕೊನೆಯ ಎಸೆತದಲ್ಲಿ ಸಿಕ್ಸ್ ಬಾರಿಸುವ ಅಗತ್ಯವಿದ್ದಾಗ ಸಂಜು ಸ್ಯಾಮ್ಸನ್ ವಿಕೆಟ್ ಒಪ್ಪಿಸಿ ಪಂದ್ಯವನ್ನು ಕೈಚೆಲ್ಲಿದರು. ಪಂದ್ಯದ ಕೊನೆಯಲ್ಲಿ ಸಂಜು ಸ್ಯಾಮ್ಸನ್ ನಡೆದುಕೊಂಡ ರೀತಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದವು. ಅದರಲ್ಲಿಯೂ ರಾಜಸ್ಥಾನ್ ರಾಯಲ್ಸ್ ತಂಡ ಈ ಬಾರಿಯ ಐಪಿಎಲ್ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕ್ರಿಸ್ ಮೋರಿಸ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಗೆಲುವು ಸಾಧಿಸಿದ ನಂತರ ಸ್ಯಾಮ್ಸನ್ ಮೇಲಿನ ಟೀಕೆ ಹೆಚ್ಚಾಯಿತು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕ್ರಿಸ್ ಮೊರಿಸ್ 18 ಎಸೆತಗಳಿಗೆ ಅಜೇಯ 36 ರನ್ ಗಳಿಸಿದರು. ಪಂದ್ಯದ ಕಡೆಯ 2 ಓವರ್‌ಗಳಲ್ಲಿ ಮೊರಿಸ್ ಸಿಡಿಸಿದ 4 ಸಿಕ್ಸರ್ ನೋಡಿದ ಕ್ರೀಡಾಭಿಮಾನಿಗಳು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಸಿಂಗಲ್ ತೆಗೆದುಕೊಂಡು ಕ್ರಿಸ್ ಮೊರಿಸ್ ಅವರಿಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಬೇಕಿತ್ತು ಎಂದು ಸಾಕಷ್ಟು ಟೀಕೆ ಮಾಡಿದರು.

ಇಷ್ಟೆಲ್ಲ ಟೀಕೆಗಳು ಬಂದರೂ ಸಹ ಮಾತನಾಡಿದ ಸಂಜು ಸ್ಯಾಮ್ಸನ್ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ರೀತಿ ಇನ್ನೂ ನೂರು ಪಂದ್ಯಗಳು ಬಂದರೂ ಸಹ ನಾನು ಯಾವುದೇ ಕಾರಣಕ್ಕೂ ಆ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳುವುದಿಲ್ಲ ಎಂದು ದೃಢವಾದ ಹೇಳಿಕೆ ನೀಡಿದ್ದಾರೆ. ಪ್ರತಿ ಪಂದ್ಯ ಮುಗಿದ ನಂತರ ಪಂದ್ಯದಲ್ಲಿ ಏನೆಲ್ಲ ನಡೆಯಿತು ಎಂಬುದನ್ನು ನಾನು ಕುಳಿತು ಪುನಃ ಯೋಚಿಸುತ್ತೇನೆ, ಪಂಜಾಬ್ ಕಿಂಗ್ಸ್ ವಿರುದ್ಧ ಸಿಂಗಲ್ ತೆಗೆದುಕೊಳ್ಳದೆ ಇದ್ದದ್ದು ತಪ್ಪಲ್ಲ ಎಂದು ಸಂಜು ಸ್ಯಾಮ್ಸನ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

Story first published: Saturday, April 17, 2021, 19:44 [IST]
Other articles published on Apr 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X