ಐಪಿಎಲ್ 2022: ಮೆಗಾ ಆಕ್ಷನ್ ಕಣದಲ್ಲಿ 1,214 ಆಟಗಾರರು: ಮೂಲ ಬೆಲೆ ಹಾಗೂ ಆಟಗಾರರ ಪಟ್ಟಿ

ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಮಹಾ ಹರಾಜು ಪ್ರಕ್ರಿಯೆ ನಡೆಯಲಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಹರಾಜಿಗೆ ಮುನ್ನ ಆಟಗಾರರ ನೋಂದಣಿ ಪ್ರಕ್ರಿಯೆ ಸಂಪೂರ್ಣವಾಗಿದೆ. ಈ ಬಾರಿ ನಡೆಯಲಿರುವ ಹರಾಜು ಪ್ರಕ್ರಿಯೆಗೆ ಒಟ್ಟು 1,214 ಆಟಗಾರರು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಮೆಗಾ ಹರಾಜಿನಲ್ಲಿ ಎರಡು ಹೊಸ ತಂಡಗಳು ಸೇರಿದಂತೆ ಒಟ್ಟು 10 ತಂಡಗಳು ಆಟಗಾರರಿಗಾಗಿ ಪೈಪೋಟಿ ನಡೆಸಲಿದ್ದಾರೆ.

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಭಾಗಿಯಾಗಲಿರುವ ಆಟಗಾರರ ಪಟ್ಟಿಯಲ್ಲಿ 270 ಕ್ಯಾಪ್‌ಡ್ ಆಟಗಾರರು ಇದ್ದರೆ ಅನ್‌ಕ್ಯಾಪ್‌ಡ್ ಆಟಗಾರರು ಮತ್ತು 41 ಅಸೋಸಿಯೇಟೆಡ್ ಆಟಗಾರರು ಇದ್ದಾರೆ. ಭಾರತದ 61 ಕ್ಯಾಪ್‌ಡ್ ಆಟಗಾರರು, 209 ಕ್ಯಾಪ್‌ಡ್ ಅಂತಾರಾಷ್ಟ್ರೀಯ ಆಟಗಾರರು ಇದ್ದಾರೆ. ಇನ್ನು ಈ ಪೈಕಿ 143 ಅನ್‌ಕ್ಯಾಪ್‌ಡ್ ಭಾರತೀಯ ಆಟಗಾರರು ಈಗಾಗಲೇ ಐಪಿಎಲ್‌ನಲ್ಲಿ ಭಾಗಿಯಾಗಿರುವ ಅನುಭವ ಹೊಂದಿದ್ದರೆ 6 ಅನ್‌ಕ್ಯಾಪ್‌ಡ್ ವಿದೇಶಿ ಆಟಗಾರರು ಕೂಡ ಐಪಿಎಲ್‌ನಲ್ಲಿ ಈಗಾಗಲೇ ಆಡಿದವರಾಗಿದ್ದಾರೆ.

ನಾಯಕತ್ವದ ನಿಜವಾದ ಒತ್ತಡ ರೋಹಿತ್‌ಗೆ ಆ ಪಂದ್ಯದಲ್ಲಿ ಅರ್ಥವಾಗಲಿದೆ ಎಂದು ಎಚ್ಚರಿಸಿದ ಮಾಜಿ ಕ್ರಿಕೆಟಿಗ!ನಾಯಕತ್ವದ ನಿಜವಾದ ಒತ್ತಡ ರೋಹಿತ್‌ಗೆ ಆ ಪಂದ್ಯದಲ್ಲಿ ಅರ್ಥವಾಗಲಿದೆ ಎಂದು ಎಚ್ಚರಿಸಿದ ಮಾಜಿ ಕ್ರಿಕೆಟಿಗ!

ಇನ್ನು ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ನೊಂದಾಯಿಸಿರುವ ಆಟಗಾರರ ಪೈಕಿ 2 ಕೋಟಿ, 1.5 ಕೋಟಿ ಹಾಗೂ 1 ಕೋಟಿ ಮೂಲ ಬೆಲೆ ವಿಭಾಗದಲ್ಲಿ ಹೆಸರು ನೊಂದಾಯಿಸಿರುವ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ.

2 ಕೋಟಿ ಮೂಲ ಬೆಲೆಯ ಆಟಗಾರರ ಪಟ್ಟಿ

2 ಕೋಟಿ ಮೂಲ ಬೆಲೆಯ ಆಟಗಾರರ ಪಟ್ಟಿ

ಭಾರತೀಯ ಆಟಗಾರರು: ಆರ್ ಅಶ್ವಿನ್, ಸುರೇಶ್ ರೈನಾ, ರಾಬಿನ್ ಉತ್ತಪ್ಪ, ಮೊಹಮ್ಮದ್ ಶಮಿ, ಯುಜುವೇಂದ್ರ ಚಹಾಲ್, ದೀಪಕ್ ಚಹಾರ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಇಶಾನ್ ಕಿಶನ್, ಭುವನೇಶ್ವರ್ ಕುಮಾರ್, ದೇವದತ್ ಪಡಿಕ್ಕಲ್, ಕೃನಾಲ್ ಪಾಂಡ್ಯ, ಹರ್ಷಲ್ ಪಟೇಲ್, ಅಂಬಾಟಿ ರಾಯುಡು ಪಟೇಲ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್.

ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಇವರೇ, ಇದಕ್ಕೆಲ್ಲಾ ವಿರಾಟ್ ಭಯ ಪಡಬಾರದು: ಮಾಜಿ ಕ್ರಿಕೆಟಿಗ!

ವಿದೇಶಿ ಆಟಗಾರರು: ಮುಜೀಬ್ ಜದ್ರಾನ್, ಆಷ್ಟನ್ ಅಗರ್, ನಾಥನ್ ಕೌಲ್ಟರ್-ನೈಲ್, ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್, ಮಿಥ್‌ಸೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಮ್ ಝಂಪಾ, ಶಕೀಬ್ ಅಲ್ ಹಸನ್, ಮುಸ್ತಾಫಿಜುರ್ ರೆಹಮಾನ್, ಸ್ಯಾಮ್ ಬಿಲ್ಲಿಂಗ್ಸ್, ಕ್ರಿಸ್ ಜೋರ್ಡನ್, ಸಕೀಬ್ ಮಹಮೂದ್ , ಕ್ರೇಗ್ ಓವರ್‌ಟನ್, ಆದಿಲ್ ರಶೀದ್, ಜೇಸನ್ ರಾಯ್, ಜೇಮ್ಸ್ ವಿನ್ಸ್, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಟ್ರೆಂಟ್ ಬೌಲ್ಟ್, ಲೂಕಿ ಫರ್ಗುಸನ್, ಕ್ವಿಂಟನ್ ಡಿ ಕಾಕ್, ಮಾರ್ಚಾಂಟ್ ಡಿ ಲ್ಯಾಂಗೆ, ಫಾಫ್ ಡು ಪ್ಲೆಸಿಸ್, ಕಗಿಸೊ ರಬಾಡಾ, ಇಮ್ರಾನ್ ತಾಹಿರ್, ಫ್ಯಾಬಿಯನ್ ಅಲೆನ್, ಡ್ವೇನ್ ಬ್ರಾವೋ, ಎವಿನ್ ಲೆವಿಸ್, ಓಡಿಯನ್ ಸ್ಮಿತ್.

1.5 ಕೋಟಿ ಮೂಲ ಬೆಲೆಯ ಆಟಗಾರರ ಪಟ್ಟಿ

1.5 ಕೋಟಿ ಮೂಲ ಬೆಲೆಯ ಆಟಗಾರರ ಪಟ್ಟಿ

ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ವಾಷಿಂಗ್ಟನ್ ಸುಂದರ್, ಆರನ್ ಫಿಂಚ್, ಕ್ರಿಸ್ ಲಿನ್, ನಾಥನ್ ಲಿಯಾನ್, ಕೇನ್ ರಿಚರ್ಡ್ಸನ್, ಜಾನಿ ಬೈರ್‌ಸ್ಟೋ, ಅಲೆಕ್ಸ್ ಹೇಲ್ಸ್, ಇಯಾನ್ ಮಾರ್ಗನ್, ಡೇವಿಡ್ ಮಲನ್, ಆಡಮ್ ಮಿಲ್ನೆ, ಕಾಲಿನ್ ಮುನ್ರೊ, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಟಿಮ್ ಸೌಥಿ, ಕಾಲಿನ್ ಇಂಗ್ರಾಮ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ನಿಕೋಲಸ್ ಪೂರನ್.

1 ಕೋಟಿ ಮೂಲ ಬೆಲೆಯ ಆಟಗಾರರ ಪಟ್ಟಿ

1 ಕೋಟಿ ಮೂಲ ಬೆಲೆಯ ಆಟಗಾರರ ಪಟ್ಟಿ

ಪಿಯೂಷ್ ಚಾವ್ಲಾ, ಕೇದಾರ್ ಜಾಧವ್, ಪ್ರಸಿದ್ಧ್ ಕೃಷ್ಣ, ಟಿ ನಟರಾಜನ್, ಮನೀಶ್ ಪಾಂಡೆ, ಅಜಿಂಕ್ಯ ರಹಾನೆ, ನಿತೀಶ್ ರಾಣಾ, ವೃದ್ಧಿಮಾನ್ ಸಾಹಾ, ಕುಲದೀಪ್ ಯಾದವ್, ಜಯಂತ್ ಯಾದವ್, ಮೊಹಮ್ಮದ್ ನಬಿ, ಜೇಮ್ಸ್ ಫಾಕ್ನರ್, ಮೊಯಿಸಸ್ ಹೆನ್ರಿಕ್ಸ್, ಮಾರ್ನಸ್ ಲ್ಯಾಬುಶೈನ್, ರಿಲೆ ಮೆರೆಡಿತ್, ಜೋಶ್ ಫಿಲಿಪ್, ಡಿ'ಆರ್ಸಿ ಶಾರ್ಟ್, ಆಂಡ್ರ್ಯೂ ಟೈ, ಡಾನ್ ಲಾರೆನ್ಸ್, ಲಿಯಾಮ್ ಲಿವಿಂಗ್‌ಸ್ಟನ್, ಟೈಮಲ್ ಮಿಲ್ಸ್, ಆಲಿ ಪೋಪ್, ಡೆವೊನ್ ಕಾನ್ವೇ, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್, ಏಡನ್ ಮಾರ್ಕ್ರಾಮ್, ರಿಲೀ ರೂಸೌ, ತಬ್ರೈಜ್ ಶಮ್ಸಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ವನಿಂದು ಹಸರಂಗಾ, ರೋಸ್ಟನ್ ಚೇಸ್, ಶೆರ್ಫೇನ್ ರುದರ್‌ಫೋರ್ಡ್

ಈ ಬಾರಿಯ ಹರಾಜಿನಿಂದ ಹೊರಗುಳಿಯುವ ಪ್ರಮುಖ ಆಟಗಾರರು

ಈ ಬಾರಿಯ ಹರಾಜಿನಿಂದ ಹೊರಗುಳಿಯುವ ಪ್ರಮುಖ ಆಟಗಾರರು

ಕ್ರಿಸ್ ಗೇಲ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಮಿಚೆಲ್ ಸ್ಟಾರ್ಕ್, ಕ್ರಿಸ್ ವೋಕ್ಸ್.

ವೈರಲ್ ಆಯ್ತು ವಾಮಿಕ ವಿರಾಟ್ ಫೋಟೋ | Oneindia Kannada

For Quick Alerts
ALLOW NOTIFICATIONS
For Daily Alerts
Story first published: Sunday, January 23, 2022, 13:20 [IST]
Other articles published on Jan 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X