
ಜಾಣ್ಮೆಯಿಂದ ಹರಾಜು ಯೋಜನೆ
ಆರ್ಸಿಬಿ ಫ್ರಾಂಚೈಸಿ ಈ ಬಾರಿಯ ಮಹಾ ಹರಾಜಿಗೆ 57 ಕೋಟಿ ರೂಪಾಯಿಯನ್ನು ತನ್ನ ಪರ್ಸ್ನಲ್ಲಿ ಹೊಂದಿದ್ದು ಈ ಮೊತ್ತದಲ್ಲಿ ಜಾಣ್ಮೆಯಿಂದ ಆಟಗಾರರನ್ನು ವಶಕ್ಕೆ ಪಡೆಯಬೇಕಿದೆ. ಫೆಬ್ರವರಿ 12 ಹಾಗೂ 13ರಂದು ಐಪಿಎಲ್ ಮಹಾ ಹರಾಜು ಪ್ರಕ್ರಿಯೆ ನಡೆಯಲಿದ್ದು ಈ ಮಹತ್ವದ ಸಂದರ್ಭದಲ್ಲಿ ಆರ್ಸಿಬಿ ಈ ಮೂರು ಅಂಶಗಳನ್ನು ಖಂಡಿತಾ ಮಾಡಬಾರದು. ಏನದು ಮುಂದೆ ಓದಿ...

ಹೊಸ ಮುಖಗಳ ಮೇಲೆ ದೊಡ್ಡ ಮೊತ್ತ ಸುರಿದು ಅದೃಷ್ಠ ಪರೀಕ್ಷೆ ಬೇಡ
ಆರ್ಸಿಬಿ ಫ್ರಾಂಚೈಸಿ ಈ ತಪ್ಪನ್ನು ಹಿಂದೆ ಮಾಡಿ ಅದಕ್ಕೆ ಪ್ರತಿಫಲವನ್ನು ಅನುಭವಿಸಿದೆ. ಹೀಗಾಗಿ 2022ರಲ್ಲಿ ಹೊಸ ಮುಖಗಳನ್ನು ಗುರಿಯಾಗಿಸುವುದರಿಂದ ಹಿಂದಕ್ಕೆ ಸರಿಯಬೇಕಿದೆ. ಉಪಖಂಡದಲ್ಲಿ ಆಡಿದ ಯಾವುದೇ ಅನುಭವ ಇಲ್ಲದ ಕಾರಣ ಈ ಆಟಗಾರರು ವೈಫಲ್ಯವನ್ನು ಅನುಭವಿಸುವ ಸಾಧ್ಯತೆಯೇ ಹೆಚ್ಚಿರುತ್ತದೆ. ಹೀಗಾಗಿ ನಿರೀಕ್ಷೆಯನ್ನು ಹುಸಿಗೊಳಿಸುವುದು ಮಾತ್ರವಲ್ಲದೆ ಇಡೀ ತಂಡದ ಮೇಲೆ ಇದು ಕೆಟ್ಟ ಪರಿಣಾಮವುಂಟು ಮಾಡುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ 2017ರಲ್ಲಿ ಆರ್ಸಿಬಿ ಟೈಮಲ್ ಮಿಲ್ಸ್ ಮೇಲೆ 12 ಕೋಟಿ ಸುರಿದಿತ್ತು. ಅಂದರೆ ಅವರ ಮೂಲ ಬೆಲೆಗಿಂತ 12 ಪಟ್ಟು ಹೆಚ್ಚು. ಆದರೆ ಈ ನಿರ್ಧಾರ ಆರ್ಸಿಬಿ ಭಾರೀ ಏಟು ನೀಡಿತ್ತು. ಈ ಆವೃತ್ತಿಯಲ್ಲಿ ಕೇವಲ 5 ವಿಕೆಟ್ ಕಬಳಿಸಿದ್ದ ಟೈಮಲ್ 8ಕ್ಕೂ ಅಧಿಕ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು.

ಪರ್ಸ್ ಮೊತ್ತ ಕುಗ್ಗಿಸುವ ಆಟಗಾರರ ಮೇಲೆ ಬಿಡ್ ಬೇಡ
ಆರ್ಸಿಬಿ ಈ ಬಾರಿಯ ಐಪಿಎಲ್ನಲ್ಲಿ ನಾಯಕತ್ವ ವಹಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ಆಟಗಾರರ ಮೇಲೆ ಚಿತ್ತ ನೆಡುವ ಅನಿವಾರ್ಯತೆಯಿದೆ. ಆದರೆ ವಿರಾಟ್ ಕೊಹ್ಲಿಯನ್ನು ನಾಯಕತ್ವಕಗಕಾಗಿ ಮತ್ತೊಮ್ಮೆ ಮನವೊಲಿಸುವ ಸಾಧ್ಯತೆಯೂ ಇದೆ. ಆದರೆ ಇದು ಸಾಧ್ಯವಾಗದಿದ್ದರೆ ತಂಡವನ್ನು ಮುನ್ನಡೆಸಬಲ್ಲ ಆಟಗಾರರನ್ನು ಮಾತ್ರವೇ ಗುರಿಯಾಗಿಸಿಕೊಳ್ಳಬೇಕು. ಪ್ರಮುಖವಾಗಿ ಡೇವಿಡ್ ವಾರ್ನರ್ ಅಥವಾ ಶ್ರೇಯಸ್ ಐಯ್ಯರ್ ಮೇಲೆ ಗಮನ ಹರಿಸಬೇಕು. ಈ ಇಬ್ಬರು ಆಟಗಾರರಲ್ಲಿ ಒಬ್ಬರನ್ನು ತೆಕ್ಕೆಗೆ ಹಾಕಿಕೊಳ್ಳಲು ಸಾಧ್ಯವಾಗದಿದ್ದರೆ 2020-2021ರ ಆವೃತ್ತಿಯಲ್ಲಿ ಮಿಂಚಿದ ಆಟಗಾರರಾದ ಶಿಖರ್ ಧವನ್ ಅಥವಾ ಫಾಪ್ ಡು ಪ್ಲೆಸಿಸ್ ಮೇಲೆ ಗಮನಹರಿಸುವುದು ಉತ್ತಮ. ಆಟಗಾರರಾಗಿ ಮಾತ್ರವಲ್ಲದೆ ನಾಯಕನಾಗಿಯೂ ಮುನ್ನಡೆಸುವ ಕ್ರಿಕೆಟಿಗರ ಅವಶ್ಯಕತೆ ತಂಡಕ್ಕಿದೆ.

ಬೌಲಿಂಗ್ ವಿಭಾಗದ ಮೇಲೂ ಹೆಚ್ಚು ಗಮನ
ಆರ್ಸಿಬಿ ಐಪಿಎಲ್ನ ಆರಂಭದಿಂದಲೂ ಬ್ಯಾಟಿಂಗ್ ಪವರ್ಹೌಸ್ ಎನಿಸಿಕೊಂಡಿದೆ. ಆದರೆ ಇದು ಆರ್ಸಿಬಿಗೆ ದೊಡ್ಡ ಯಶಸ್ಸು ನೀಡಿಲ್ಲ ಎಂಬುದು ಕೂಡ ಸತ್ಯ. 2020 ಹಾಗೂ 2021ರ ಆವರತ್ತಿಯ ವರೆಗೂ ಆರ್ಸಿಬಿ ಬೌಲಿಂಗ್ ವಿಭಾಗ ಭಾರೀ ಹಿನ್ನಡೆಯನ್ನು ಅನುಭವಿಸಿತ್ತು. ಹೆಚ್ಚಾಗಿ ಬ್ಯಾಟಿಂಗ್ ವಿಭಾಗವನ್ನೇ ನೆಚ್ಚಿಕೊಂಡಿದ್ದು ಆರ್ಸಿಬಿಗೆ ಪ್ರತಿ ಬಾರಿಯೂ ಕಹಿ ಅನುಭವವನ್ನೇ ನೀಡಿತ್ತು. ಹೀಗಾಗಿ ಮುಂಬರುವ ಐಪಿಎಲ್ ಮಹಾ ಹರಾಜಿನಲ್ಲಿ ಆರ್ಸಿಬಿ ಫ್ರಾಂಚೈಸಿ ಮಾಡಲೇಬಾರದ ಮತ್ತೊಂದು ಪ್ರಮುಖ ತಪ್ಪು.