ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಟೂರ್ನಿಯಿಂದ ಕೇನ್ ವಿಲಿಯಮ್ಸನ್ ಔಟ್; ಈ ಮೂವರಲ್ಲಿ ಯಾರಾಗ್ತಾರೆ ಸನ್‌ರೈಸರ್ಸ್ ನಾಯಕ?

IPL 2022: 3 players who can replace Kane Williamson as captain in Sunrisers HyderabadIPL 2022: 3 players who can replace Kane Williamson as captain in Sunrisers Hyderabad

ಸದ್ಯ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಸನಿಹಕ್ಕೆ ಬಂದಿದ್ದು, ಸನ್ ರೈಸರ್ಸ್ ಹೈದರಾಬಾದ್ ಟೂರ್ನಿಯಲ್ಲಿನ ತನ್ನ ಅಂತಿಮ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮೇ 22ರ ಭಾನುವಾರದಂದು ಸೆಣಸಾಟ ನಡೆಸಲಿದೆ. ಇನ್ನು ಈ ಬಾರಿಯ ಟೂರ್ನಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಸನ್ ರೈಸರ್ಸ್ ಹೈದರಾಬಾದ್ ನಂತರ ಸತತ ಐದು ಪಂದ್ಯಗಳಲ್ಲಿ ಗೆದ್ದು, ಐದು ಪಂದ್ಯಗಳಲ್ಲಿ ಸೋಲುವುದರ ಮೂಲಕ ಪ್ಲೇಆಫ್ ಪ್ರವೇಶಿಸುವುದರಿಂದ ದೂರ ಸರಿದಿದೆ. ಇನ್ನು ಇತ್ತೀಚೆಗಷ್ಟೆ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ಈ ಬಾರಿ ಕೇನ್ ವಿಲಿಯಮ್ಸನ್ ನಾಯಕತ್ವದಡಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿಲ್ಲ.

ಟೆಸ್ಟ್‌ ಕ್ರಿಕೆಟ್‌ನಲ್ಲಿ 199 ರನ್‌ಗೆ ಔಟ್ ಆಗಿ ದ್ವಿಶತಕ ಮಿಸ್ ಮಾಡಿಕೊಂಡ 12 ನತದೃಷ್ಟ ಆಟಗಾರರು ಇವರೇಟೆಸ್ಟ್‌ ಕ್ರಿಕೆಟ್‌ನಲ್ಲಿ 199 ರನ್‌ಗೆ ಔಟ್ ಆಗಿ ದ್ವಿಶತಕ ಮಿಸ್ ಮಾಡಿಕೊಂಡ 12 ನತದೃಷ್ಟ ಆಟಗಾರರು ಇವರೇ

ಇನ್ನು ಕೇನ್ ವಿಲಿಯಮ್ಸನ್ ಕೇವಲ ನಾಯಕನಾಗಿ ಮಾತ್ರವಲ್ಲದೇ ಓರ್ವ ಆಟಗಾರನಾಗಿಯೂ ಸಹ ಈ ಬಾರಿ ಕಳಪೆಯಾಗಿದ್ದು, ಇದೀಗ ಟೂರ್ನಿಯ ಅಂತಿಮ ಪಂದ್ಯಕ್ಕೂ ಮುನ್ನವೇ ಸನ್ ರೈಸರ್ಸ್ ಹೈದರಾಬಾದ್ ಕ್ಯಾಂಪ್ ತೊರೆದಿದ್ದಾರೆ. ಹೌದು, ತಮ್ಮ ಎರಡನೇ ಮಗುವಿನ ಜನನದ ಕಾರಣದಿಂದಾಗಿ ಕೇನ್ ವಿಲಿಯಮ್ಸನ್ ಐಪಿಎಲ್ ಬಯೋಬಬಲ್ ತೊರೆದಿದ್ದು, ಇದೀಗ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವವನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಪ್ರಶ್ನೆ ಎದ್ದಿದೆ.

ಐಪಿಎಲ್‌ನಲ್ಲಿ ಮಿಂಚುತ್ತಿರುವ ಈ ಮೂವರಲ್ಲಿ ಟೀಮ್ ಇಂಡಿಯಾಗೆ ಯಾರು ಆಯ್ಕೆಯಾಗ್ತಾರೋ ನೋಡೋಣ ಎಂದ ಗಂಗೂಲಿಐಪಿಎಲ್‌ನಲ್ಲಿ ಮಿಂಚುತ್ತಿರುವ ಈ ಮೂವರಲ್ಲಿ ಟೀಮ್ ಇಂಡಿಯಾಗೆ ಯಾರು ಆಯ್ಕೆಯಾಗ್ತಾರೋ ನೋಡೋಣ ಎಂದ ಗಂಗೂಲಿ

ಇನ್ನು ತಂಡದಲ್ಲಿ ನಾಯಕತ್ವವನ್ನು ನಿರ್ವಹಿಸಬಲ್ಲ ಈ ಕೆಳಕಂಡ ಮೂವರು ಆಟಗಾರರಲ್ಲೋರ್ವ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗುವ ಸಾಧ್ಯತೆಗಳು ಹೆಚ್ಚಿವೆ.

1. ಭುವನೇಶ್ವರ್ ಕುಮಾರ್

1. ಭುವನೇಶ್ವರ್ ಕುಮಾರ್

ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಆಟಗಾರನಾಗಿರುವ ಭುವನೇಶ್ವರ್ ಕುಮಾರ್ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ತಂಡವನ್ನು ಕೇನ್ ವಿಲಿಯಮ್ಸನ್ ನಾಯಕನಾಗಿ ಮುನ್ನಡೆಸುವ ಸಾಧ್ಯತೆಗಳು ಹೆಚ್ಚಿವೆ. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 140ಕ್ಕೂ ಹೆಚ್ಚು ಪಂದ್ಯಗಳಲ್ಲಿ 154 ವಿಕೆಟ್‌ಗಳನ್ನು ಪಡೆದಿದ್ದು, ಐಪಿಎಲ್‌ನಲ್ಲಿ 150 ವಿಕೆಟ್‌ಗಳ ಮೈಲಿಗಲ್ಲನ್ನು ಮುಟ್ಟಿದ ಭಾರತದ ಮೊದಲ ವೇಗಿ ಎಂಬ ದಾಖಲೆ ನಿರ್ಮಿಸಿದ್ದಾರೆ. ಇನ್ನು ಈ ಬಾರಿಯ ಟೂರ್ನಿಯಲ್ಲಿಯೂ ಮಿಂಚುತ್ತಿರುವ ಭುವನೇಶ್ವರ್ ಕುಮಾರ್ ಈ ಹಿಂದೆ 2019ರ ಐಪಿಎಲ್ ಟೂರ್ನಿಯಲ್ಲಿ ನಾಯಕನ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದರು ಹಾಗೂ ಶ್ರೀಲಂಕಾ ಪ್ರವಾಸದಲ್ಲಿಯೂ ಟೀಮ್ ಇಂಡಿಯಾದ ಉಪನಾಯಕನಾಗಿದ್ದರು. ಹೀಗೆ ಉತ್ತಮ ಅನುಭವವಿರುವ ಭುವನೇಶ್ವರ್ ಕುಮಾರ್ ಹೆಗಲಿಗೆ ಸನ್ ರೈಸರ್ಸ್ ನಾಯಕತ್ವ ಬೀಳುವ ಸಾಧ್ಯತೆಗಳು ಹೆಚ್ಚಿವೆ.

2.ನಿಕೋಲಸ್ ಪೂರನ್

2.ನಿಕೋಲಸ್ ಪೂರನ್

ವೆಸ್ಟ್ ಇಂಡೀಸ್ ತಂಡದ ಉತ್ತಮ ಫಿನಿಶರ್ ನಿಕೋಲಸ್ ಪೂರನ್ ಇತ್ತೀಚಿಗಷ್ಟೆ ವೆಸ್ಟ್ ಇಂಡೀಸ್ ಸೀಮಿತ ಓವರ್ ತಂಡಗಳ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇನ್ನು ಪಂದ್ಯದ ವೇಳೆ ಬೌಲರ್‌ಗಳ ಜೊತೆ ಚರ್ಚೆಗಳಲ್ಲಿ ಭಾಗಿಯಾಗುವ ನಿಕೋಲಸ್ ಪೂರನ್ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವವನ್ನು ನಿರ್ವಹಿಸುವ ಸಾಧ್ಯತೆಗಳು ಹೆಚ್ಚಿವೆ.

3. ಏಡನ್ ಮಾರ್ಕ್ರಮ್

3. ಏಡನ್ ಮಾರ್ಕ್ರಮ್

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಏಡನ್ ಮಾರ್ಕ್ರಮ್ ಕೇನ್ ವಿಲಿಯಮ್ಸನ್ ಅಲಭ್ಯತೆಯಲ್ಲಿ ಸನ್ ರೈಸರ್ಸ್ ತಂಡವನ್ನು ಮುನ್ನಡೆಸುವ ಸಂಭವವಿದೆ. ಈ ಹಿಂದೆ ದಕ್ಷಿಣ ಆಫ್ರಿಕಾ ಅಂಡರ್ 19 ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ಏಡನ್ ಮಾರ್ಕ್ರಮ್ 2014ರ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದಾರೆ ಹಾಗೂ ಫಾಫ್ ಡು ಪ್ಲೆಸಿಸ್ ಅಲಭ್ಯತೆಯ ಕೆಲ ಪಂದ್ಯಗಳಲ್ಲಿ ಮಾರ್ಕ್ತಮ್ ನಾಯಕತ್ವವನ್ನೂ ಸಹ ನಿರ್ವಹಿಸಿದ್ದಾರೆ.

Story first published: Wednesday, May 18, 2022, 16:30 [IST]
Other articles published on May 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X