ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸನ್ ರೈಸರ್ಸ್‌ನಿಂದ ಹೊರಬಿದ್ದ ವಾಷಿಂಗ್ಟನ್ ಸುಂದರ್ ಬದಲು ಕಣಕ್ಕಿಳಿಯಲು ಕನ್ನಡಿಗರ ನಡುವೆ ಪೈಪೋಟಿ!

IPL 2022: 3 Players who can replace Washington Sundar in SRH playing 11

ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಹೀನಾಯ ಸೋಲು ಕಂಡು ಲೀಗ್ ಹಂತದಲ್ಲಿಯೇ ಹೊರಬಿದ್ದ ಸನ್ ರೈಸರ್ಸ್ ಹೈದರಾಬಾದ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಸೋಲುವುದರ ಮೂಲಕ ಕಳಪೆ ಆರಂಭವನ್ನು ಪಡೆದುಕೊಂಡಿತ್ತು. ಹೀಗೆ ಟೂರ್ನಿಯಲ್ಲಿನ ತನ್ನ ಮೊದಲೆರಡು ಪಂದ್ಯಗಳಲ್ಲಿ ಸೋತು ಈ ಬಾರಿಯೂ ಕಳಪೆ ಪ್ರದರ್ಶನ ನೀಡುವಂತೆ ತೋರುತ್ತಿದ್ದ ಸನ್ ರೈಸರ್ಸ್ ಹೈದರಾಬಾದ್ ನಂತರ ನಡೆದ ಪಂದ್ಯಗಳಲ್ಲಿ 4 ಬಾರಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿರುವ ಬಲಿಷ್ಟ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿತು ಹಾಗೂ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸೋಲನ್ನೇ ಕಾಣದೇ ಇದ್ದ ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದು ಯಶಸ್ಸಿನ ಹಾದಿಯಲ್ಲಿದೆ.

IPL 2022: ಧೋನಿ, ಜಡೇಜಾ ಅಲ್ಲ, ಸಿಎಸ್‌ಕೆ ಸಾಲುಸಾಲು ಪಂದ್ಯ ಸೋಲುತ್ತಿರುವುದು ಈತನಿಂದ!IPL 2022: ಧೋನಿ, ಜಡೇಜಾ ಅಲ್ಲ, ಸಿಎಸ್‌ಕೆ ಸಾಲುಸಾಲು ಪಂದ್ಯ ಸೋಲುತ್ತಿರುವುದು ಈತನಿಂದ!

ಹೀಗೆ ಸತತ ಎರಡು ಪಂದ್ಯಗಳಲ್ಲಿ ಗೆದ್ದು ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸುವ ಯೋಜನೆಯಲ್ಲಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಇದೀಗ ತಮ್ಮ ಪ್ರಮುಖ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್‌ ಅಲಭ್ಯರಾಗಿರುವುದು ಹಿನ್ನಡೆಯನ್ನುಂಟುಮಾಡಿದೆ. ಹೌದು, ವಾಷಿಂಗ್ಟನ್ ಸುಂದರ್ ಮೊಣಕೈ ಗಾಯಕ್ಕೆ ಒಳಗಾಗಿರುವ ಕಾರಣ ಮುಂದಿನ ಎರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಸ್ವತಃ ಸನ್ ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಟಾಮ್ ಮೂಡಿ ತಿಳಿಸಿದ್ದಾರೆ.

RCB vs CSK: ಪಂದ್ಯದಲ್ಲಿ ಗೆಲ್ಲಬೇಕೆಂದರೆ ನಿಮ್ಮ ಡ್ರೀಮ್ ಟೀಮ್‌ನಿಂದ ಈ ಮೂವರನ್ನು ತಪ್ಪದೇ ಹೊರಗಿಡಿ!RCB vs CSK: ಪಂದ್ಯದಲ್ಲಿ ಗೆಲ್ಲಬೇಕೆಂದರೆ ನಿಮ್ಮ ಡ್ರೀಮ್ ಟೀಮ್‌ನಿಂದ ಈ ಮೂವರನ್ನು ತಪ್ಪದೇ ಹೊರಗಿಡಿ!

ಏಪ್ರಿಲ್ 15ರಂದು ನಡೆಯಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಮತ್ತು ಏಪ್ರಿಲ್ 17ರಂದು ನಡೆಯಲಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಗಳಿಗೆ ವಾಷಿಂಗ್ಟನ್ ಸುಂದರ್ ಅಲಭ್ಯರಾಗಿದ್ದು, ಈ ಎರಡು ಪಂದ್ಯಗಳಲ್ಲಿ ಸುಂದರ್ ಬದಲಾಗಿ ಯಾವ ಆಟಗಾರರು ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿವೆ. ಹೀಗೆ ವಾಷಿಂಗ್ಟನ್ ಸುಂದರ್ ಬದಲಾಗಿ ಈ ಪಂದ್ಯಗಳಲ್ಲಿ ಕಣಕ್ಕಿಳಿಯಲು ಮೂವರು ಆಟಗಾರರು ಸಜ್ಜಾಗಿದ್ದು, ಈ ಮೂವರ ಪೈಪೋಟಿಯಲ್ಲಿ ಯಾವ ಆಟಗಾರ ಸುಂದರ್ ಬದಲು ಕಣಕ್ಕಿಳಿಯುವ ಅವಕಾಶ ಪಡೆದುಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಇನ್ನು ವಾಷಿಂಗ್ಟನ್ ಸುಂದರ್ ಬದಲು ತಂಡದಲ್ಲಿ ಕಣಕ್ಕಿಳಿಯಲು ಪೈಪೋಟಿ ಏರ್ಪಟ್ಟಿರುವ ಮೂವರು ಆಟಗಾರರ ವಿವರ ಈ ಕೆಳಕಂಡಂತಿದೆ.

1. ಶ್ರೇಯಸ್ ಗೋಪಾಲ್

1. ಶ್ರೇಯಸ್ ಗೋಪಾಲ್

ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದು ಮೂರು ಪಂದ್ಯಗಳನ್ನಾಡಿ ಯಾವುದೇ ವಿಕೆಟ್ ಪಡೆಯದೇ ಮಂಕಾಗಿದ್ದ ಶ್ರೇಯಸ್ ಗೋಪಾಲ್ ಈ ಬಾರಿ ಅವಕಾಶ ಸಿಗದೇ ಬೆಂಚ್ ಕಾಯುತ್ತಿದ್ದಾರೆ. ಆದರೆ ಶ್ರೇಯಸ್ ಗೋಪಾಲ್ ಈಗಾಗಲೇ ತನ್ನ ಸಾಮರ್ಥ್ಯವೇನು ಎಂಬುದನ್ನು ಐಪಿಎಲ್‌ನಲ್ಲಿ ಹಲವಾರು ಬಾರಿ ಸಾಬೀತುಪಡಿಸಿದ್ದು, ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ರನ್ ಕಲೆಹಾಕುವ ಕಲೆ ಬಲ್ಲ ಆಟಗಾರ ಕೂಡ ಆಗಿದ್ದಾರೆ. 2019ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 14 ಪಂದ್ಯಗಳಲ್ಲಿ ಕಣಕ್ಕಿಳಿದು, 20 ವಿಕೆಟ್ ಪಡೆದು ಮಿಂಚಿದ್ದ ಶ್ರೇಯಸ್ ಗೋಪಾಲ್ ಇದೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಮಾರ್ಕಸ್ ಸ್ಟಾಯ್ನಿಸ್ ಅವರ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು. ಇನ್ನು 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 14 ಪಂದ್ಯಗಳನ್ನಾಡಿ 10 ವಿಕೆಟ್ ಪಡೆದಿದ್ದ ಶ್ರೇಯಸ್ ಗೋಪಾಲ್ ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಪರ 3 ಪಂದ್ಯಗಳನ್ನಾಡಿ 11 ವಿಕೆಟ್ ಪಡೆದು ಮಿಂಚಿದ್ದರು. ಹೀಗೆ ಉತ್ತಮ ಅಂಕಿಅಂಶಗಳನ್ನು ಹೊಂದಿರುವ ಶ್ರೇಯಸ್ ಗೋಪಾಲ್ ವಾಷಿಂಗ್ಟನ್ ಸುಂದರ್ ಸ್ಥಾನ ತುಂಬಬಲ್ಲ ಆಟಗಾರನಾಗಿದ್ದಾರೆ.

2. ಜಗದೀಶ ಸುಚಿತ್

2. ಜಗದೀಶ ಸುಚಿತ್

2015ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ 13 ಪಂದ್ಯಗಳಲ್ಲಿ ಕಣಕ್ಕಿಳಿದು 10 ವಿಕೆಟ್ ಪಡೆದಿದ್ದ ಜಗದೀಶ ಸುಚಿತ್ ತಂಡ ಯಶಸ್ವಿಯಾಗಿ ಫೈನಲ್ ತಲುಪಿ ಟ್ರೋಫಿ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ನಂತರದ ಆವೃತ್ತಿಗಳಲ್ಲಿ ಹೆಚ್ಚು ಅವಕಾಶ ಸಿಗದ ಕನ್ನಡಿಗ ಜಗದೀಶ ಸುಚಿತ್ ಕಳೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕದ ಪರ 5 ಪಂದ್ಯಗಳನ್ನಾಡಿ 7 ವಿಕೆಟ್ ಪಡೆದಿದ್ದರು ಹಾಗೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 7 ಪಂದ್ಯಗಳನ್ನಾಡಿ 6 ವಿಕೆಟ್ ಪಡೆದಿದ್ದರು. ಹೀಗೆ ಐಪಿಎಲ್‌ನಲ್ಲಿ ಒಳ್ಳೆಯ ಅನುಭವವಿರುವ ಜಗದೀಶ ಸುಚಿತ್ ಅವರಿಗೆ ವಾಷಿಂಗ್ಟನ್ ಸುಂದರ್ ಬದಲು ಅವಕಾಶ ನೀಡುವ ಸಾದ್ಯತೆಗಳಿವೆ.

RCB ಆಟಗಾರರು ಯಾರ ನೆನಪಿನಲ್ಲಿ ಕಪ್ಪು ಪಟ್ಟಿ ಧರಿಸಿದ್ದರು | CSK vs RCB | Harshal Patel | Oneindia Kannada
3. ಅಬ್ದುಲ್ ಸಮದ್

3. ಅಬ್ದುಲ್ ಸಮದ್

ಈ ಬಾರಿಯ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಮೊದಲೆರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅಬ್ದುಲ್ ಸಮದ್ ಕೇವಲ 4 ರನ್ ಗಳಿಸಿದ್ದರು. ಹೀಗೆ ಕಳಪೆ ಪ್ರದರ್ಶನ ನೀಡಿದ ಕಾರಣದಿಂದಾಗಿ ಅಬ್ದುಲ್ ಸಮದ್ ನಂತರದ ಪಂದ್ಯಗಳಲ್ಲಿ ಅವಕಾಶ ಕಳೆದುಕೊಂಡಿದ್ದರೂ ಸಹ ಈ ಬಾರಿ ತಂಡದಲ್ಲಿಯೇ ರಿಟೇನ್ ಆದ ಕಾರಣ ತಂಡದ ನಂಬಿಕಸ್ಥ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನು 2020 ಮತ್ತು 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ತಲಾ 111 ರನ್ ಕಲೆಹಾಕಿ ಆ ಆವೃತ್ತಿಗಳಲ್ಲಿ ಬ್ಯಾಟಿಂಗ್‌ನಲ್ಲಿ ದೊಡ್ಡ ವಿಫಲತೆ ಕಂಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಸರೆಯಾಗಿದ್ದ ಅಬ್ದುಲ್ ಸಮದ್ ಕಳೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಮ್ಮು ಕಾಶ್ಮೀರದ ಪರ ಕಣಕ್ಕಿಳಿದು 5 ಪಂದ್ಯಗಳಲ್ಲಿ 127 ರನ್ ಗಳಿಸಿ ಮಿಂಚಿದ್ದು, ವಾಷಿಂಗ್ಟನ್ ಸುಂದರ್ ಸ್ಥಾನ ತುಂಬುವ ಸಾಧ್ಯತೆಗಳಿವೆ.

Story first published: Tuesday, April 12, 2022, 17:53 [IST]
Other articles published on Apr 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X