ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB vs LSG: ಈ ಮೂವರು ಇಲ್ಲದಿದ್ದರೆ ಲಕ್ನೋ ವಿರುದ್ಧ ಆರ್‌ಸಿಬಿ ಗೆದ್ದು ಕ್ವಾಲಿಫೈಯರ್ 2ಕ್ಕೆ ಮುನ್ನುಗ್ಗುತ್ತಿರಲಿಲ್ಲ!

IPL 2022: 3 players who helped RCB to register memorable win against LSG in the eliminator match

ಪ್ರಸ್ತುತ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ಲೇ ಆಫ್ ಪಂದ್ಯಗಳು ಜರುಗುತ್ತಿದ್ದು, ಬುಧವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ರನ್‌ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಎಂಟ್ರಿ ಕೊಟ್ಟು ತನ್ನ ಟ್ರೋಫಿ ಗೆಲ್ಲುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಆರ್‌ಸಿಬಿಗೆ ಮತ್ತೆ ಬರ್ತಿದ್ದೇನೆ ಎಂದ ಎಬಿಡಿ: ಯಾವ ಪಾತ್ರ ಎಂಬುದರ ಕುರಿತು ಸುಳಿವು ಕೊಟ್ಟ ಮಿ.360!ಆರ್‌ಸಿಬಿಗೆ ಮತ್ತೆ ಬರ್ತಿದ್ದೇನೆ ಎಂದ ಎಬಿಡಿ: ಯಾವ ಪಾತ್ರ ಎಂಬುದರ ಕುರಿತು ಸುಳಿವು ಕೊಟ್ಟ ಮಿ.360!

ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಜತ್ ಪಾಟಿದಾರ್ ಆಕರ್ಷಕ ದಾಖಲೆಯ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 208 ರನ್‌ಗಳ ಕಠಿಣ ಗುರಿಯನ್ನು ನೀಡಿತು.

ಡು ಪ್ಲೆಸಿಸ್ ಮಾಡುತ್ತಿರುವ ಈ ತಪ್ಪು ಆರ್‌ಸಿಬಿಯ ಟ್ರೋಫಿ ಕನಸನ್ನು ಭಗ್ನಗೊಳಿಸಬಹುದು; ಕೊಹ್ಲಿಗೂ ಹಿಂಸೆ!ಡು ಪ್ಲೆಸಿಸ್ ಮಾಡುತ್ತಿರುವ ಈ ತಪ್ಪು ಆರ್‌ಸಿಬಿಯ ಟ್ರೋಫಿ ಕನಸನ್ನು ಭಗ್ನಗೊಳಿಸಬಹುದು; ಕೊಹ್ಲಿಗೂ ಹಿಂಸೆ!

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೀಡಿದ ಈ ಕಠಿಣ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕಿ 14 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತು. ಫಾಫ್ ಡು ಪ್ಲೆಸಿಸ್ ಪಡೆ ಈ ಭರ್ಜರಿ ಗೆಲುವಿನ ಮೂಲಕ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದ್ದು, ಶುಕ್ರವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಾಟವನ್ನು ನಡೆಸಲಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನೆಲಕಚ್ಚಿದ ಲಕ್ನೋ ಸೂಪರ್ ಜೈಂಟ್ಸ್ ಟೂರ್ನಿಯಿಂದ ಹೊರಬಿದ್ದಿದೆ. ಇನ್ನು ಫಾಫ್ ಡು ಪ್ಲೆಸಿಸ್ ಪಡೆ ಗೆ ಈ ಗೆಲುವು ಸುಲಭದ್ದಾಗಿರಲಿಲ್ಲ, ಒಂದೆಡೆ ಮಳೆಯ ಹೊಡೆತ, ಮತ್ತೊಂದೆಡೆ ಬಲಿಷ್ಠ ಎದುರಾಳಿ, ಹೀಗಿದ್ದರೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಶಸ್ವಿಯಾಗಿ ಗೆದ್ದು ಮುಂದಿನ ಪಂದ್ಯಕ್ಕೆ ಪ್ರವೇಶ ಪಡೆದುಕೊಳ್ಳುವಲ್ಲಿ ಈ ಕೆಳಕಂಡ ಮೂವರು ಆಟಗಾರರು ಪ್ರಮುಖ ಪಾತ್ರ ನಿರ್ವಹಿಸಿದರು.

1. ರಜತ್ ಪಟಿದಾರ್

1. ರಜತ್ ಪಟಿದಾರ್

ಗೆಲ್ಲಲೇಬೇಕಾದ ಈ ಮಹತ್ವದ ಪಂದ್ಯದಲ್ಲಿ ಆರಂಭಿಕರಾಗಿ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಕಣಕ್ಕಿಳಿದರು. ನಾಯಕ ಫಾಫ್ ಡು ಪ್ಲೆಸಿಸ್ ಮೊದಲ ಓವರ್‌ನಲ್ಲಿಯೇ ಗೋಲ್ಡನ್ ಡಕ್ ಔಟ್ ಆಗಿ ನಿರ್ಗಮಿಸಿದರು. ಈ ಸಂದರ್ಭದಲ್ಲಿ ತಂಡ 4 ರನ್‌ಗೆ 1 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಇಂಥ ಸಮಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಜತ್ ಪಟಿದಾರ್ ಒತ್ತಡದ ನಡುವೆಯೂ ವಿಕೆಟ್ ಕಾಯ್ದುಕೊಂಡು ಅಬ್ಬರದ ಬ್ಯಾಟಿಂಗ್ ನಡೆಸಿದರು. ವಿರಾಟ್ ಕೊಹ್ಲಿ ಜತೆ 66 ರನ್‌ಗಳ ಜತೆಯಾಟವಾಡಿದ ಪಟಿದಾರ್ 49 ಎಸೆತಗಳಿಗೆ 101 ರನ್ ಚಚ್ಚಿ ಐಪಿಎಲ್ ಪ್ಲೇ ಆಫ್ ಸುತ್ತಿನಲ್ಲಿ ವೇಗದ ಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಬರೆದರು. ದಿನೇಶ್ ಕಾರ್ತಿಕ್ ಮತ್ತು ಪಟಿದಾರ್ 92 ರನ್‌ಗಳ ಅಬ್ಬರದ ಜತೆಯಾಟವಾಡಿದರು. ಅಂತಿಮವಾಗಿ 54 ಎಸೆತಗಳಲ್ಲಿ ಅಜೇಯ 112 ರನ್‌ಗಳನ್ನು ರಜತ್ ಪಟಿದಾರ್ ಕಲೆಹಾಕಿದರು. ಹೀಗೆ ತಂಡದ ಪ್ರಮುಖ ಆಟಗಾರರೇ ಬೃಹತ್ ಮೊತ್ತ ಕಲೆಹಾಕುವಲ್ಲಿ ವಿಫಲರಾಗಿ ನಿರಾಸೆ ಮೂಡಿಸಿದಾಗ ರಜತ್ ಪಟಿದಾರ್ ದೊಡ್ಡ ಇನ್ನಿಂಗ್ಸ್ ಕಟ್ಟದೇ ಇದ್ದಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಈ ಗೆಲುವು ಲಭಿಸುತ್ತಿರಲಿಲ್ಲ ಎಂದೇ ಹೇಳಬಹುದು.

2. ಹರ್ಷಲ್ ಪಟೇಲ್

2. ಹರ್ಷಲ್ ಪಟೇಲ್

ಹರ್ಷಲ್ ಪಟೇಲ್ ಡೆತ್ ಓವರ್ ಸ್ಪೆಷಲಿಸ್ಟ್ ಎಂದು ಚೆನ್ನಾಗಿ ಅರಿತಿದ್ದ ನಾಯಕ ಫಾಫ್ ಡು ಪ್ಲೆಸಿಸ್ ಆತನ 2 ಓವರ್‌ಗಳನ್ನು ಉಳಿಸಿಕೊಂಡಿದ್ದರು. ಅಂತಿಮವಾಗಿ 18 ಎಸೆತಗಳಿಗೆ 41 ರನ್ ಬೇಕಿದ್ದಾಗ 18ನೇ ಓವರ್ ಆರಂಭಿಸಿದ ಹರ್ಷಲ್ ಪಟೇಲ್ ಸತತ 2 ವೈಡ್ ಎಸೆಯುವ ಮೂಲಕ 6 ರನ್ ಬಿಟ್ಟುಕೊಟ್ಟರು. ಆದರೆ ನಂತರ ಮಾರ್ಕಸ್ ಸ್ಟಾಯಿನಿಸ್ ವಿಕೆಟ್ ಪಡೆದ ಹರ್ಷಲ್ ಪಟೇಲ್ ಮುಂದಿನ ಎಸೆತಗಳಲ್ಲಿ ಕೇವಲ 2 ರನ್ ನೀಡಿ ಹಿಡಿತ ಸಾಧಿಸಿದರು. ಈ ಮೂಲಕ ಲಕ್ನೋ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 12 ಎಸೆತಗಳಿಗೆ 33 ರನ್ ಬಾರಿಸಬೇಕಾದ ಅನಿವಾರ್ಯತೆ ಇತ್ತು. ಇನ್ನು ಪಂದ್ಯದ ಅಂತಿಮ ಓವರ್‌ನಲ್ಲಿ ಲಕ್ನೋಗೆ ಗೆಲ್ಲಲು 24 ರನ್‌ಗಳ ಅಗತ್ಯತೆ ಇತ್ತು. ಈ ಸಂದರ್ಭದಲ್ಲಿ ಕೊನೆಯ ಓವರ್ ಎಸೆದ ಹರ್ಷಲ್ ಪಟೇಲ್ ಕೇವಲ 9 ರನ್ ನೀಡಿ ತಂಡಕ್ಕೆ ಜಯ ತಂದಿಡುವಲ್ಲಿ ಯಶಸ್ವಿ ಪಾತ್ರ ನಿರ್ವಹಿಸಿದರು.

3. ಜೋಶ್ ಹೇಜಲ್ ವುಡ್

3. ಜೋಶ್ ಹೇಜಲ್ ವುಡ್

ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಜೋಶ್ ಹೇಜಲ್ ವುಡ್ ತಂಡದ ಗೆಲುವಿಗೆ ಕಾರಣಕರ್ತರಾದ ಮತ್ತೋರ್ವ ಪ್ರಮುಖ ಆಟಗಾರ. ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲ್ಲಲು 12 ಎಸೆತಗಳಲ್ಲಿ 33 ರನ್ಬಾರಿಸಬೇಕಾದ ಅಗತ್ಯವಿದ್ದಾಗ 19ನೇ ಓವರ್ ಬೌಲಿಂಗ್ ಮಾಡಿದ ಜೋಶ್ ಹೇಜಲ್ ವುಡ್ ನೆಲಕಚ್ಚಿ ನಿಂತಿದ್ದ ಕೆಎಲ್ ರಾಹುಲ್ ಅವರ ವಿಕೆಟ್ ಪಡೆದರು ಹಾಗೂ ಕೂಡಲೇ ಕಣಕ್ಕಿಳಿದ ಕೃನಾಲ್ ಪಾಂಡ್ಯಾರನ್ನು ಕೂಡ ಬಂದ ದಾರಿಯಲ್ಲಿಯೇ ಹಿಂತಿರುಗುವಂತೆ ಮಾಡಿದರು. ಆ ಓವರ್‌ನಲ್ಲಿ ಹೇಜಲ್ ವುಡ್ 3 ವೈಡ್ ಸಹಿತ ಕೇವಲ 9 ರನ್ ಬಿಟ್ಟುಕೊಟ್ಟರು. ಹೀಗೆ ಈ ಮೂವರು ಆಟಗಾರರ ಅತ್ಯಮೂಲ್ಯ ಪ್ರದರ್ಶನ ಇಲ್ಲದೇ ಇದ್ದಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಮಹತ್ವದ ಪಂದ್ಯವನ್ನು ಗೆಲ್ಲಲು ಆಗುತ್ತಿರಲಿಲ್ಲ ಎಂದು ಹೇಳಬಹುದು.

Story first published: Thursday, May 26, 2022, 14:49 [IST]
Other articles published on May 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X