ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL ನಲ್ಲಿ ಉತ್ತಮ ಪ್ರದರ್ಶನ: ಭಾರತ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಬಲ್ಲ ಮೂವರು ದ. ಆಫ್ರಿಕಾ ಪ್ಲೇಯರ್ಸ್

India vs south africa

ಇಂಡಿಯನ್ ಪ್ರೀಮಿಯರ್ ಲೀಗ್‌ ಸೀಸನ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ತಮ್ಮ ರಾಷ್ಟ್ರೀಯ ತಂಡಕ್ಕೆ ಮರಳಿರುವ ಹಲವು ಆಟಗಾರರಿದ್ದಾರೆ. ಅದೇ ರೀತಿಯಲ್ಲಿ ಅನೇಕ ದೇಶೀಯ ಹಾಗೂ ವಿದೇಶಿ ಆಟಗಾರರಿಗೆ ವೃತ್ತಿ ಬದುಕು ಕಟ್ಟಿರುವ ಕೀರ್ತಿ ಐಪಿಎಲ್‌ಗಿದೆ. ಹೀಗಾಗಿಯೇ ಐಪಿಎಲ್‌ನಂತಹ ಬೃಹತ್ ಟಿ20 ಟೂರ್ನಮೆಂಟ್‌ನಲ್ಲಿ ಆಡಲು ವಿದೇಶಿ ಆಟಗಾರರು ತುದಿಗಾಲಲ್ಲಿ ನಿಂತಿರುತ್ತಾರೆ.

ಐಪಿಎಲ್ 2022ರ ಸೀಸನ್‌ನಲ್ಲಿ ದಕ್ಷಿಣ ಆಫ್ರಿಕಾದ ಈ ಮೂವರು ಆಟಗಾರರು ಮಿಂಚಿನ ಪರ್ಫಾಮೆನ್ಸ್ ನೀಡುತ್ತಿದ್ದಾರೆ. ಹೀಗಾಗಿ ಮುಂಬರುವ ಭಾರತ ವಿರುದ್ಧದ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಈ ಮೂವರ ಮೇಲೆ ಪ್ರೊಟಿಸ್ ಆಯ್ಕೆ ಮಂಡಳಿ ಕಣ್ಣಿಟ್ಟಿದೆ. ಹಾಗಿದ್ದರೆ ಆ ಆಟಗಾರರು ಯಾರು? ಅವರ ಫರ್ಫಾಮೆನ್ಸ್ ಏನು ಎಂಬುದನ್ನ ಈ ಕೆಳಗೆ ತಿಳಿಯಿರಿ.

ಭಾರತ vs ದಕ್ಷಿಣ ಆಫ್ರಿಕಾ 5 ಪಂದ್ಯಗಳ ಟಿ20 ಸರಣಿ

ಭಾರತ vs ದಕ್ಷಿಣ ಆಫ್ರಿಕಾ 5 ಪಂದ್ಯಗಳ ಟಿ20 ಸರಣಿ

ಮುಂಬರುವ ಜೂನ್ ತಿಂಗಳಿನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ದಕ್ಷಿಣ ಆಫ್ರಿಕಾ ಭಾರತ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ ಆಡಲಿದೆ. ಈ ಸರಣಿಯು ಜೂನ್ 9 ರಿಂದ ಆರಂಭಗೊಳ್ಳಲಿದ್ದು, ಐಪಿಎಲ್ 2022ರ ಸೀಸನ್‌ ಮುಗಿದು ಕೇವಲ 10 ದಿನಗಳಲ್ಲಿ ಆರಂಭಗೊಳ್ಳಲಿದೆ.

ಐಸಿಸಿ ಟಿ20 ವಿಶ್ವಕಪ್ 2021ರ ಬಳಿಕ ದಕ್ಷಿಣ ಆಫ್ರಿಕಾ ತಂಡಕ್ಕೆ ಇದು ಮೊದಲ ಟಿ20 ಸರಣಿಯಾಗಿದೆ. ಹೀಗಾಗಿ ಸಾಕಷ್ಟು ಜಿದ್ದಾಜಿದ್ದಿನ ಹೋರಾಟವನ್ನ ನಿರೀಕ್ಷಿಸಬಹುದಾಗಿದೆ.

ಯುಎಇನಲ್ಲಿ ನಡೆದ ಕಳೆದ ಟಿ20 ವಿಶ್ವಕಪ್‌ನಲ್ಲಿ ಟೆಂಬಾ ಬವುಮಾ ನಾಯಕತ್ವದಲ್ಲಿ ಮುನ್ನಡೆದ ದ.ಆಫ್ರಿಕಾ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೂಲಕ ಟೂರ್ನಿಯಿಂದ ನಿರ್ಗಮಿಸಿತು. ಇದಾದ ಬಳಿಕ ಇದೇ ವರ್ಷ ಜನವರಿಯಲ್ಲಿ ಭಾರತ ಹರಿಣಗಳ ನಾಡಿಗೆ ಪ್ರವಾಸ ಬೆಳೆಸಿತ್ತು. ಈ ವೇಳೆಯಲ್ಲಿ ಟೆಸ್ಟ್ ಸರಣಿಯಲ್ಲಿ 2-1, ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ಭರ್ಜರಿ ಜಯಗಳಿಸಿತು.

KKR vs MI: ಮುಂಬೈ ವಿರುದ್ಧ ಗೆದ್ದ ಕೆಕೆಆರ್ ಪ್ಲೇ ಆಫ್ ಜೀವಂತ, ಪಾಯಿಂಟ್ಸ್ ಎಷ್ಟು?

ದ.ಆಫ್ರಿಕಾದ ಆರು ಆಟಗಾರರು ಬಾಂಗ್ಲಾ ಪ್ರವಾಸಕ್ಕೆ ಗೈರು

ದ.ಆಫ್ರಿಕಾದ ಆರು ಆಟಗಾರರು ಬಾಂಗ್ಲಾ ಪ್ರವಾಸಕ್ಕೆ ಗೈರು

ಐಪಿಎಲ್ 2022ರ ಸೀಸನ್‌ನಲ್ಲಿ ಭಾಗಿಯಾಗುವ ಸಲುವಾಗಿ ದ.ಆಫ್ರಿಕಾ ಆರು ಆಟಗಾರರು ಬಾಂಗ್ಲಾದೇಶ ಪ್ರವಾಸದಿಂದ ಹಿಂದೆ ಸರಿದಿದ್ದರು. ಕ್ವಿಂಟನ್ ಡಿಕಾಕ್, ಡೇವಿಡ್ ಮಿಲ್ಲರ್, ಡ್ವೇನ್ ಪ್ರಿಟೋರಿಯಸ್, ಮಾರ್ಕೊ ಜಾನ್ಸನ್‌ ನಂತಹ ಆಟಗಾರರು ಐಪಿಎಲ್‌ನಲ್ಲಿ ಭಾಗಿಯಾಗಿ ಮಿಂಚಿದ್ರು. ಹಾಗಿದ್ರೆ ಮುಂಬರುವ ಟಿ20 ಸರಣಿಯಲ್ಲಿ ಯಾರೆಲ್ಲಾ ಸ್ಥಾನ ಪಡೆಯಬಹುದು ಎಂಬುದನ್ನ ಈ ಕೆಳಗೆ ತಿಳಿಯಿರಿ

LSG vs GT: ಪಂದ್ಯದ ಸಂಭಾವ್ಯ ಪ್ಲೇಯಿಂಗ್ 11, ಡ್ರೀಂ ಟೀಮ್, ಫ್ಯಾಂಟೆಸಿ ಟಿಪ್ಸ್‌

1) ಏಡನ್ ಮಕ್ರಾಮ್

1) ಏಡನ್ ಮಕ್ರಾಮ್

ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಪರ ಉತ್ತಮ ಆಟ ಪ್ರದರ್ಶಿಸುತ್ತಿರುವ ದಕ್ಷಿಣ ಆಫ್ರಿಕಾದ ಬ್ಯಾಟರ್ ಏಡನ್ ಮಕ್ರಾಮ್ 149.43ರ ಸ್ಟ್ರೈಕ್‌ರೇಟ್‌ನಲ್ಲಿ 263 ರನ್ ಕಲೆಹಾಕಿದ್ದಾರೆ. ಕೆಕೆಆರ್ ವಿರುದ್ಧ 68ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಹೈದ್ರಾಬಾದ್ 3 ವಿಕೆಟ್ ನಷ್ಟಕ್ಕೆ 176ರನ್ ಚೇಸ್ ಮಾಡಿತ್ತು.

ಆರಂಭದಲ್ಲಿ ಟೆಸ್ಟ್‌ ಸ್ಕ್ವಾಡ್‌ನಲ್ಲಿ ಮಾತ್ರ ಸ್ಥಾನ ಪಡೆಯುತ್ತಿದ್ದ ಮಕ್ರಾಂ್ 2021ರಿಂದ ದ. ಆಫ್ರಿಕಾ ಟಿ20 ತಂಡದಲ್ಲೂ ಸ್ಥಾನ ಪಡೆಯುತ್ತಿದ್ದಾರೆ. ಹೀಗಾಗಿ ಭಾರತ ವಿರುದ್ಧ ಈತನ ಆಯ್ಕೆ ಬಹು ಖಚಿತವಾಗಿದೆ.

2) ಮಾರ್ಕೊ ಜಾನ್ಸನ್

2) ಮಾರ್ಕೊ ಜಾನ್ಸನ್

6.8 ಇಂಚಿನ ಉದ್ದದ ದಕ್ಷಿಣ ಆಫ್ರಿಕಾದ ಎಡಗೈ ಬೌಲರ್ ಮಾರ್ಕೊ ಜಾನ್ಸನ್ ಕೂಡ ಐಪಿಎಲ್ 2022ರ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಪರ ಕಣಕ್ಕಿಳಿಯುತ್ತಾರೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದ ಮಕ್ರಾಮ್ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ಅನುರಾಜ್ ರಾವತ್ ವಿಕೆಟ್ ಪಡೆದು ಐಪಿಎಲ್‌ನಲ್ಲಿ ಬೆಸ್ಟ್ ಬೌಲಿಂಗ್ ಫಿಗರ್ 3/25 ದಾಖಲಿಸಿದ್ದರು.

ಈಗಾಗಲೇ ಏಕದಿನ ಹಾಗೂ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ ಮಾರ್ಕೊ ಜಾನ್ಸನ್, ದಕ್ಷಿಣ ಆಫ್ರಿಕಾ ಪರ ಟಿ20 ಫಾರ್ಮೆಟ್‌ನಲ್ಲಿ ಅವಕಾಶ ಪಡೆಯಲು ಎದುರು ನೋಡುತ್ತಿದ್ದಾರೆ. ಎನ್ರಿಕ್ ನೊರ್ಕಿಯಾ ಇಂಜ್ಯುರಿಯಿಂದ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿರುವ ಹಿನ್ನಲೆಯಲ್ಲಿ ಈ ಯುವ ಎಡಗೈ ಬೌಲರ್‌ಗೆ ಟಿ20 ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

Rohit Sharma ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada
3) ಡೆವಾಲ್ಡ್ ಬ್ರೆವಿಸ್

3) ಡೆವಾಲ್ಡ್ ಬ್ರೆವಿಸ್

ಬೇಬಿ ಎಬಿಡಿ ಖ್ಯಾತಿ ಯುವ ಸ್ಫೋಟಕ ಆಟಗಾರ ಡೆವಾಲ್ಡ್‌ ಬ್ರೆವಿಸ್, ಮುಂಬೈ ಇಂಡಿಯನ್ಸ್ ಪರ ಕೆಲವು ಪಂದ್ಯಗಳಲ್ಲಿ ಮಿಂಚಿನ ಆಟವಾಡಿದ್ರು. 19 ವರ್ಷದ ಈ ಯುವ ಆಟಗಾರ ಕಳೆದ ಅಂಡರ್ -19 ವಿಶ್ವಕಪ್‌ನಲ್ಲಿ 84.33ರ ಸರಾಸರಿಯಲ್ಲಿ 506 ರನ್ ಸಿಡಿಸಿದ್ದನು.

ಹೀಗಾಗಿಯೇ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಈತನನ್ನ ತನ್ನ ತೆಕ್ಕೆಗೆ ಹಾಕಿಕೊಂಡಿತು. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ರಾಹುಲ್ ಚಹಾರ್‌ಗೆ ಒಂದೇ ಓವರ್‌ನಲ್ಲಿ 4 ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದ ಮರೆಯುವ ಹಾಗಿಲ್ಲ. ಆದ್ರೆ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ಮಿಸ್ ಮಾಡಿರುವ ಈ ಯುವ ಕ್ರಿಕೆಟಿಗನು ಸೀನಿಯರ್ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ.

Story first published: Tuesday, May 10, 2022, 9:21 [IST]
Other articles published on May 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X