ವಿಶ್ವಕಪ್‌ನಲ್ಲಿ ಸ್ಪೋಟಕ ಆಟ: ಐಪಿಎಲ್ ಹರಾಜಿನಲ್ಲಿ ಭಾರೀ ಮೊತ್ತ ಪಡೆಯಲಿದ್ದಾರೆ ಈ 4 ದಾಂಡಿಗರು!

ಬಿಸಿಸಿಐ ಆಯೋಜನೆ ಮಾಡಿದ ಟಿ20 ವಿಶ್ವಕಪ್ 2021 ಅತ್ಯಂತ ಯಶಸ್ವಿಯಾಗಿ ಅಂತ್ಯವಾಗಿದೆ. ಆಸ್ಟ್ರೇಲಿಯಾ ತಂಡ ಈ ಬಾರಿಯ ಟೂರ್ನಿಯಲ್ಲಿ ಚಾಂಪಿಯನ್ ತಂಡವಾಗಿ ಮೆರೆದಿದೆ. ನ್ಯೂಜಿಲೆಂಡ್ ತಂಡ ರನ್ನರ್‌ಅಪ್ ಸ್ಥಾನ ಪಡೆದುಕೊಂಡಿದೆ. ಚಾಂಪಿಯನ್ ಆದ ಆಸ್ಟ್ರೇಲಿಯಾ ತಂಡದ ಆಟಗಾರರು ಸಾಕಷ್ಟು ಗಮನಸೆಳೆಯುವ ಪ್ರದರ್ಶನ ನೀಡಿದ್ದಾರೆ. ಆದರೆ ಈ ಮಹಾ ಟೂರ್ನಿಯಲ್ಲಿ ಇತರ ತಂಡಗಳ ಕೆಲ ಆಟಗಾರರು ಕೂಡ ಕ್ರಿಕೆಟ್ ಪ್ರೇಮಿಗಳ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನಿಡಿದ ಕೆಲ ಆಟಗಾರರು ತಮ್ಮ ದೇಶದ ಪರವಾಗಿ ಮಾತ್ರವಲ್ಲ ಐಪಿಎಲ್ ದೃಷ್ಟಿಕೋನದಿಂದಲೂ ಈಗ ನಿರೀಕ್ಷೆಯಿಟ್ಟುಕೊಳ್ಳುವಂತಾಗಿದೆ. ಮುಂದಿನ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಐಪಿಎಲ್ 2022ರ ಆವೃತ್ತಿಗೆ ಮಹಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿನಲ್ಲಿ ಕೆಲ ಆಟಗಾರರು ದೊಡ್ಡ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ.

ಭಾರತ vs ನ್ಯೂಜಿಲೆಂಡ್ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಮತ್ತು ತಂಡಗಳ ವಿವರಭಾರತ vs ನ್ಯೂಜಿಲೆಂಡ್ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಮತ್ತು ತಂಡಗಳ ವಿವರ

ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚಿದ ಮುಂದಿನ ಐಪಿಎಲ್‌ನಲ್ಲಿ ದೊಡ್ಡ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಿರುವ ನಾಲ್ವರು ಆಟಗಾರರ ಬಗ್ಗೆ ಈ ವರದಿಯಲ್ಲಿ ನೋಡೋಣ:

ಡ್ಯಾರೆಲ್ ಮಿಚೆಲ್

ಡ್ಯಾರೆಲ್ ಮಿಚೆಲ್

ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರನಾಗಿರುವ ಡ್ಯಾರೆಲ್ ಮಿಚೆಲ್ ಈ ಮುನ್ನವೇ ಐಪಿಎಲ್ ಹರಾಜಿಗೆ ಸೇರ್ಪಡೆಯಾಗಿದ್ದರೂ ಯಾವುದೇ ತಂಡ ಕೂಡ ಅವರನ್ನು ಆಯ್ಕೆ ಮಾಡಿಕೊಂಡಿರಲಿಲ್ಲ. ಆದರೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಮಿಚೆಲ್ ನೀಡಿದ ಪ್ರದರ್ಶನದಿಂದಾಗಿ ಮುಂದಿನ ಹರಾಜಿನಲ್ಲಿ ಮಿಚೆಲ್ ಹರಾಜಾಗದೆ ಉಳಿಯುವ ಸಾಧ್ಯತೆಯಿಲ್ಲ. ನ್ಯೂಜಿಲೆಮಡ್ ತಂಡ ಸೆಮಿಫೈನಲ್‌ಗೆ ಪ್ರವೇಶಿಸಲು ನ್ಯೂಜಿಲೆಂಡ್ ತಂಡ ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಅದರಲ್ಲೂ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ಮಿಚೆಲ್ ಆಡಿದ ಅದ್ಭುತ ಇನ್ನಿಂಗ್ಸ್ ಪ್ರಮುಖ ಕಾರಣವಾಗಿತ್ತು. ಈ ಟಿ20 ವಿಶ್ವಕಪ್‌ನಲ್ಲಿ ಆಡಿದ 7 ಪಂದ್ಯಗಳಲ್ಲಿ ಮಿಚೆಲ್ 208 ರನ್‌ಗಳಿಸಿದ್ದು 140.54ರಷ್ಟು ಅತ್ಯುತ್ತಮ ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಇವರ ಒಟ್ಟಾರೆ ಸ್ಟ್ರೈಕ್‌ರೇಟ್ ಕೂಡ 139ರಷ್ಟಿರುವುದು ಗಮನಾರ್ಹ ಸಂಗತಿ. ಹೀಗಾಗಿ ಐಪಿಎಲ್ ಫ್ರಾಂಚೈಸಿಗಳು ಮಿಚೆಲ್ ಅವರನ್ನು ಸೇರ್ಪಡೆಗೊಳಿಸಲು ಪೈಪೋಟಿ ನಡೆಸುವ ಸಾಧ್ಯತೆಯಿದೆ.

ಚರಿತ್ ಅಸಲಂಕ

ಚರಿತ್ ಅಸಲಂಕ

24ರ ಹರೆಯದ ಶ್ರೀಲಂಕಾದ ಮಧ್ಯಮ ಕ್ರಮಾಂಕದ ಆಟಗಾರ ಅಸಲಂಕಾ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. 231 ರನ್‌ಘಳೀಸುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಐದನೇ ಆಟಗಾರ ಎನಿಸಿದ್ದಾರೆ. 147ಕ್ಕೂ ಅಧಿಕ ಸ್ಟ್ರೇಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಅವರು ಎರಡು ಅರ್ಧ ಶತಕ ಸಿಡಿಸಿದ್ದಾರೆ. ತಮ್ಮ ನಿರ್ಭೀತ ಹಾಗೂ ಅಸಾಂಪ್ರದಾಯಿದ ಹೊಡೆತಗಳ ಮೂಲಕ ಎದುರಾಳಿ ಬೌಲರ್‌ಗಳನ್ನು ಕಂಗೆಡಿಸುವ ಸಾಮರ್ಥ್ಯ ಚರಿತ್ ಅಸಲಂಕ ಅವರಿಗಿದೆ. ಹೀಗಾಗಿ ಶ್ರೀಲಂಕಾದ ಈ ಆಟಗಾರ ಐಪಿಎಲ್‌ನಲ್ಲಿ ಉತ್ತಮ ಮೊತ್ತವನ್ನು ಪಡೆಯುವ ಸಾಧ್ಯತೆಯಿದೆ.

ಭಾನುಕ ರಾಜಪಕ್ಸ

ಭಾನುಕ ರಾಜಪಕ್ಸ

ಶ್ರೀಲಂಕಾ ತಂಡದ ಮತ್ತೋರ್ವ ಆಕ್ರಮಣಕಾರಿ ಆಟಗಾರ ಭಾನುಕ ರಾಜಪಕ್ಸ. ಟಿ20 ಕ್ರಿಕೆಟ್ ಮಾದರಿಯಲ್ಲಿ ರಾಜಪಕ್ಸ ಉತ್ತಮ ಅನುಭವ ಹೊಂದಿದ್ದಾರೆ. ಭಾನುಕ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಆಡಿದ 5 ಪಂದ್ಯಗಳಿಂದ 143.51 ಸ್ಟ್ರೈಕ್ ರೇಟ್‌ನಲ್ಲಿ 155 ರನ್ ಗಳಿಸಿದ್ದಾರೆ. ಶ್ರೀಲಂಕಾ ತಂಡ ಕ್ವಾಲಿಫೈಯರ್‌ನಿಂದ ಸೂಪರ್ 12 ಗೆ ಅರ್ಹತೆ ಪಡೆಯಲು ರಾಜಪಕ್ಸ ನೀಡಿದ ಪ್ರದರ್ಶನ ಗಮನಾರ್ಹವಾಗಿತ್ತು. ಪರಿಸ್ಥಿತಿಯನ್ನು ಲೆಕ್ಕಿಸದೆ ರನ್‌ ಕಲೆಹಾಕುವ ಸಾಮರ್ಥ್ಯ ಇರುವ ದಾಂಡಿಗನಾಗಿರುವ ಕಾರಣ ಐಪಿಎಲ್ ಫ್ರಾಂಚೈಸಿಗಳು ಲಂಕಾ ತಮಡದ ಈ ಆಟಗಾರನ ಮೇಲೆ ಕೂಡ ಪೈಪೋಟಿ ನಡೆಸುವ ಸಾಧ್ಯತೆ ದಟ್ಟವಾಗಿದೆ.

ಪಂತ್-ಅಯ್ಯರ್ ನಡುವೆ ಭಾರೀ ಪೈಪೋಟಿ:ಯಾರಿಗೆ ಸಿಗುತ್ತೆ ಚಾನ್ಸ್ | Oneindia Kannada
ನಜಿಬುಲ್ಲಾ ಜಡ್ರಾನ್

ನಜಿಬುಲ್ಲಾ ಜಡ್ರಾನ್

ಅಫ್ಘಾನಿಸ್ತಾ ಕ್ರಿಕೆಟ್ ತಂಡದ ಪ್ರತಿಭಾನ್ವಿತ ಆಟಗಾರರ ಪೈಕಿ 28ರ ಹರೆಯದ ಜಡ್ರಾನ್ ಕೂಡ ಒಬ್ಬರು. ಈ ಆಟಗಾರ ಐಪಿಎಲ್‌ನಲ್ಲಿ ಈವರೆಗೆ ಹರಾಜಾಗದೆ ಇರುವುದು ಕೂಡ ಆಶ್ಚರ್ಯಕರ ಸಂಗತಿ. ಜಡ್ರಾನ್ ಈವರೆಗೆ 68 ಅಂತಾರಾಷ್ಟ್ರೀಯ T20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. 33 ರ ಸರಾಸರಿಯಲ್ಲಿ ಮತ್ತು 141 ರ ಸ್ಟ್ರೈಕ್ ರೇಟ್‌ನಲ್ಲಿ 1232 ರನ್‌ಗಳನ್ನು ಕಲೆಹಾಕಿದ್ದಾರೆ ನಜಿಬುಲ್ಲಾ ಜಡ್ರಾನ್. ಅಫ್ಘಾನಿಸ್ತಾನ ತಂಡದ ಈ ಬ್ಯಾಟರ್ ಸೂಪರ್ 12 ಹಂತದಲ್ಲಿ 5 ಪಂದ್ಯಗಳನ್ನು ಆಡಿದ್ದು 2 ಅರ್ಧಶತಕಗಳಿಸಿದ್ದಾರೆ. 135ರ ಸ್ಟ್ರೈಕ್-ರೇಟ್‌ನಲ್ಲಿ 172 ರನ್‌ಗಳಿಸಿದ್ದಾರೆ. ವಿಶ್ವದ ಅನೇಕ ಲೀಗ್‌ ಕ್ರಿಕೆಟ್‌ಗಳಲ್ಲಿ ಆಡಿದ ಅನುಭವ ಹೊಂದಿರುವ ಜಡ್ರಾನ್ ಐಪಿಎಲ್‌ನಲ್ಲಿ ಆಡುವ ಅವಕಾಶ ಪಡೆದುಕೊಂಡಿರಲಿಲ್ಲ. ಆದರೆ ಈ ಬಾರಿ ಯುಎಇನಲ್ಲಿ ನಡೆದ ವಿಶ್ವಕಪ್‌ನಲ್ಲಿ ಐಪಿಎಲ್ ಫ್ರಾಂಚೈಸಿಗಳು ಜಡ್ರಾನ್ ಆಟವನ್ನು ಹತ್ತಿರದಿಂದ ನೋಡಿರುವ ಸಾಧ್ಯತೆಯಿದ್ದು ಹರಾಜಿನಲ್ಲಿ ತಮ್ಮ ತಂಡಕ್ಕೆ ಸೆಳೆದುಕೊಳ್ಳಲು ಯೋಜನೆಗಳನ್ನು ರೂಪಿಸಲಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, November 17, 2021, 13:53 [IST]
Other articles published on Nov 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X