ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಈ ಆವೃತ್ತಿಯಲ್ಲಿ 4 ಆಟಗಾರರಿಗಿಲ್ಲ ಆಡುವ ಅವಕಾಶ!

IPL 2022: 4 Players Who Have Played In Every IPL Season But Wont Play In IPL 2022

ಐಪಿಎಲ್ 15ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು ಕೆಲ ತಂಡಗಳು ಈಗಾಗಲೇ ಪೂರ್ವಸಿದ್ಧತೆಯನ್ನು ಆರಂಭಿಸಿದೆ. ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಸೂರತ್‌ನಲ್ಲಿ ಅಭ್ಯಾಸವನ್ನು ನಡೆಸುತ್ತಿದ್ದು ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಇನ್ನು ಈ ಬಾರಿಯ ಟೂರ್ನಿಯಲ್ಲಿ ಎರಡು ಹೊಸ ತಂಡಗಳು ಸೇರ್ಪಡೆಯಾಗಿದ್ದು ಟೂರ್ನಿಯ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಇನ್ನು ಈ ಬಾರಿಯ ಐಪಿಎಲ್ ಟೂರ್ನಿಗಾಗಿ ಮೆಗಾ ಹರಾಜು ಪ್ರಕ್ರಿಯೆ ಫೆಬ್ರವರಿ ತಿಂಗಳಿನಲ್ಲಿ ನಡೆಯಿತು. ಎರಡು ದಿನಗಳ ಕಾಲ ನಡೆದ ಹರಾಜು ಪ್ರಕ್ರಿಯೆಯಲ್ಲಿ 204 ಆಟಗಾರರು 10 ತಂಡಗಳ ಪಾಲಾಗಿದ್ದಾರೆ. ಒಟ್ಟು 551.7 ಕೋಟಿ ಮೊತ್ತವನ್ನು ಈ ಫ್ರಾಂಚೈಸಿಗಳು ಆಟಗಾರರನ್ನು ಕೊಂಡುಕೊಳ್ಳಲು ಖರ್ಚು ಮಾಡಿದೆ. ಇಶಾನ್ ಕಿಶನ್ 15.25 ಕೋಟಿಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಹರಾಜಾಗುವ ಮೂಲಕ ಅತಿ ದೊಡ್ಡ ಮೊತ್ತಕ್ಕೆ ಹರಾಜಾದ ಆಟಗಾರ ಎನಿಸಿದರೆ ಎರಡನೇ ಅತೀ ಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರನಾಗಿ ದೀಪಕ್ ಚಾಹರ್ ಗುರುತಿಸಿಕೊಂಡಿದ್ದಾರೆ.

ಆದರೆ ಈ ಬಾರಿಯ ಹರಾಜಿನಲ್ಲಿ ಕೆಲ ಪ್ರಮುಖ ಆಟಗಾರರು ಹರಾಜಾಗದೆ ಉಳಿಯುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಐಪಿಎಲ್‌ನಲ್ಲಿ ಸಾಕಷ್ಟು ದಾಖಲೆ ಬರೆದಿರುವ ಕ್ರಿಕೆಟಿಗ ಮಿಸ್ಟರ್ ಐಪಿಎಲ್ ಎಂದೇ ಖ್ಯಾತವಾಗಿದ್ದ ಸುರೇಶ್ ರೈನಾ ಸಹಿತ ಕೆಲ ಆಟಗಾರರು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಡಲು ಇಳಿಯುತ್ತಿಲ್ಲ. ಆದರೆ 2020ರ ಆವೃತ್ತಿಯಲ್ಲಿ ಸುರೇಶ್ ರೈನಾ ಕೌಟುಂಬಿಕ ಕಾರಣದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದ. ಐಪಿಎಲ್ ಟೂರ್ನಿಯ ಆರಂಭಿಕ ಆವೃತ್ತಿಯಿಂದ ಎಲ್ಲಾ ಆವೃತ್ತಿಯಲ್ಲೂ ಕಣಕ್ಕಿಳಿದಿದ್ದ ಪ್ರಮುಖ ನಾಲ್ಕು ಆಟಗಾರರು ಈ ಬಾರಿಯ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಆ ಆಟಗಾರರು ಯಾರು? ಮುಂದೆ ಓದಿ...

ಕ್ರಿಕೆಟ್‌ನ 3 ಪ್ರಮುಖ ನಿಯಮಗಳನ್ನು ಬದಲಾಯಿಸಿದ ಎಂಸಿಸಿ: ಇನ್ಮುಂದೆ ಈ ರೀತಿ ಮಾಡೋ ಹಾಗಿಲ್ಲ!ಕ್ರಿಕೆಟ್‌ನ 3 ಪ್ರಮುಖ ನಿಯಮಗಳನ್ನು ಬದಲಾಯಿಸಿದ ಎಂಸಿಸಿ: ಇನ್ಮುಂದೆ ಈ ರೀತಿ ಮಾಡೋ ಹಾಗಿಲ್ಲ!

ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ

ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ

ಐಪಿಎಲ್ ಇತಿಹಾಸದಲ್ಲಿ ಮೂರು ಹ್ಯಾಟ್ರಿಕ್ ವಿಕೆಟ್ ಪಡೆದ ಏಕೈಕ ಬೌಲರ್ ಅಮಿತ್ ಮಿಶ್ರಾ. ಐಪಿಎಲ್‌ನಲ್ಲಿ ಅತ್ಯಂತ ಯಶಸ್ವೀ ಸ್ಪಿನ್ನರ್ ಎನಿಸಿರುವ ಅಮಿತ್ ಮಿಶ್ರಾ ಟೂರ್ನಿಯ ಇತಿಹಾಸದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಅಗ್ರ ಸ್ಥಾನದಲ್ಲಿರುವ ಲಸಿತ್ ಮಲಿಂಗಾ ಅವರಿಗಿಂತ ಕೇವಲ 5 ವಿಕೆಟ್‌ಗಳಷ್ಟು ಮಾತ್ರವೇ ಹಿಂದಿದ್ದಾರೆ. ಕಳದದ 14 ಆವೃತ್ತಿಯಲ್ಲಿ ಮಿಶ್ರಾ ಡೆಲ್ಲಿ ಕ್ಯಾಪಿಟಲ್ಸ್, ಡೆಕ್ಕನ್ ಚಾರ್ಜರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಈ ಮೂರು ತಂಡಗಳ ಪರವಾಗಿ ಆಡಿದ್ದಾರೆ. ಆದರೆ ಈ ಬಾರಿಯ ಹರಾಜಿನಲ್ಲಿ ಅಮಿತ್ ಮಿಶ್ರಾ ಯಾವುದೇ ತಂಡಕ್ಕೂ ಹರಾಜಾಗದೆ ಉಳಿದುಕೊಂಡಿದ್ದಾರೆ. ಹೀಗಾಗಿ ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಡಲು ಇಳಿಯುವ ಅವಕಾಶ ಕಳೆದುಕೊಂಡಿದ್ದಾರೆ.

ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ

ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ

33ರ ಹರೆಯದ ಸ್ಪಿನ್ನರ್ ಪಿಯೂಷ್ ಚಾವ್ಲಾ ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 165 ಪಂದ್ಯಗಳಲ್ಲಿ ಚಾವ್ಲಾ 157 ವಿಕೆಟ್ ಸಂಪಾದಿಸಿದ್ದಾರೆ. ಐಪಿಎಲ್‌ನ ಮೊದಲ ಆರು ಆವೃತ್ತಿಗಳಲ್ಲಿ ಕಿಂಗ್ಸ್ XI ಪಂಜಾಬ್(ಈಗ ಪಂಜಾಬ್ ಕಿಂಗ್ಸ್) ಪರವಾಗಿ ಆಡಿದ್ದ ಚಾವ್ಲಾ 87 ಪಂದ್ಯಗಳಲ್ಲಿ 84 ವಿಕೆಟ್ ಪಡೆದಿದ್ದರು. ಈ ತಂಡವನ್ನು ತೊರೆದು 8 ವರ್ಷ ಕಳೆದಿದ್ದರೂ ಈಗಲೂ ಪಂಜಾಬ್ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಪಿಯೂಷ್ ಚಾವ್ಲಾ ಹೆಸರಿನಲ್ಲಿದೆ. ನಂತರ 2014ರಲ್ಲಿ ಕೆಕೆಆರ್ ತಂಡಕ್ಕೆ ಸೇರ್ಪಡೆಯಾಗಿದ್ದ ಅವರು 2020ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದರೆ 2021ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದರು. ಆದರೆ ಈ ಬಾರಿಯ ಆವೃತ್ತಿಯಲ್ಲಿ ಪಿಯೂಷ್ ಚಾವ್ಲಾ ಯಾವುದೇ ತಂಡದ ಪರವಾಗಿ ಆಡುತ್ತಿಲ್ಲ.

ವೇಗದ ಬೌಲರ್ ಧವಳ್ ಕುಲ್ಕರ್ಣಿ

ವೇಗದ ಬೌಲರ್ ಧವಳ್ ಕುಲ್ಕರ್ಣಿ

ಧವಳ್ ಕುಲ್ಕರ್ಣಿ ಐಪಿಎಲ್‌ನ ಆರಂಭಿಕ ಆವೃತ್ತಿಯಿಂದಲೂ ಭಾಗಿಯಾಗಿದ್ದು ಈ ಬಾರಿಯ ಆವೃತ್ತಿಯಿಂದ ಹೊರಗುಳಿದ ಮತ್ತೋರ್ವ ಕ್ರಿಕೆಟಿಗನಾಗಿದ್ದಾರೆ. ಐಪಿಎಲ್‌ನ ಆರಂಭಿಕ ಹಂತದಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಆಡಿದ್ದ ಧವಳ್ ಕುಲ್ಕರ್ಣಿ 2013ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು. ನಂತರ ಗುಜರಾತ್ ಲಯನ್ಸ್ ತಂಡದ ಪರವಾಗಿ ರೈನಾ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಅವರು 2016ರ ಐಪಿಎಲ್‌ನ ಕ್ವಾಲಿಫೈಯರ್‌ ಸುತ್ತಿನಲ್ಲಿ ಆರ್‌ಸಿಬಿ ವಿರುದ್ಧ 14 ರನ್‌ಗಳಿಗೆ 4 ವಿಕೆಟ್ ಕಿತ್ತು ಐಪಿಎಲ್‌ನಲ್ಲಿ ವೈಯಕ್ತಿಕ ಅತ್ಯುತ್ತಮ ಬೌಲಿಂಗ್ ಸಾಧನೆ ಮಾಡಿದರು. ಇನ್ನು 2019ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಿಂದ ಮತ್ತೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ ಧವಳ್ ಕುಲ್ಕರ್ಣಿ ಕಳೆದ ಎರಡು ಆವೃತ್ತಿಗಳಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರವೇ ಆಡುವ ಅವಕಾಶ ಪಡೆದರು. 2022ರ ಆವರತ್ತಿಗೂ ಮುನ್ನ ಹರಾಜಿಗೆ ಬಿಡುಗಡೆಯಾದ ಧವಳ್ ಕುಲ್ಕರ್ಣಿ ಹರಾಜಾಗದೆ ಉಳಿದುಕೊಂಡಿದ್ದಾರೆ.

ಎಂಎಸ್ ಧೋನಿ ಅಭ್ಯಾಸದಲ್ಲಿ ತೊಡಗಿರುವ ವಿಡಿಯೋ ವೈರಲ್ | Oneindia Kannada
ಆರ್‌ಸಿಬಿ ಆಪತ್ಬಾಂಧವ ಎಬಿ ಡಿವಿಲಿಯರ್ಸ್

ಆರ್‌ಸಿಬಿ ಆಪತ್ಬಾಂಧವ ಎಬಿ ಡಿವಿಲಿಯರ್ಸ್

ಇನ್ನು ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿರುವ ಮತ್ತೋರ್ವ ಆಟಗಾರ ಆರ್‌ಸಿಬಿ ತಂಡದ ಆಪತ್ಬಾಂಧವನೆಂದೇ ಖ್ಯಾತವಾಗಿದ್ದ ಎಬಿ ಡಿವಿಲಿಯರ್ಸ್. ಏಕಾಂಗಿಯಾಗಿ ಪಂದ್ಯದ ಫಲಿತಾಂಶವನ್ನು ತಂಡದ ಪರವಾಗಿ ಮಾಡುವ ಸಾಮರ್ಥ್ಯ ಹೊಂದಿದ್ದ ಎಬಿಡಿ ವಿಲಿಯರ್ಸ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡುತ್ತಿದ್ದ ಆಟಗಾರ. ಕಳೆದ 14 ಆವೃತ್ತಿಗಳಲ್ಲಿಯೂ ಐಪಿಎಲ್‌ನ ಭಾಗವಾಗಿದ್ದ ಎಬಿ ಡಿವಿಲಿಯರ್ಸ್ ಈವರೆಗೆ ಒಟ್ಟು 170 ಐಪಿಎಲ್ ಇನ್ನಿಂಗ್ಸ್‌ನಲ್ಲಿ ಆಡಿದ್ದು 151.69ರ ಸ್ಟ್ರೈಕ್‌ರೇಟ್‌ನಲ್ಲಿ 5162 ರನ್‌ಗಳಿಸಿದ್ದಾರೆ. ಇದರಲ್ಲಿ 40 ಅರ್ಧ ಶತಕ ಸಿಡಿಸಿರುವ ಎಬಿಡಿ 3 ಭರ್ಜರಿ ಶತಕವನ್ನು ದಾಖಲಿಸಿದ್ದಾರೆ. ಐಪಿಎಲ್‌ನ ಆರಂಭೀಕ ಮೂರು ಆವೃತ್ತಿಗಳನ್ನು ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಪರವಾಗಿ ಆಡಿದ್ದ ಎಬಿಡಿ ಉಳಿದ 11 ಆವೃತ್ತಿಗಳನ್ನು ಆರ್‌ಸಿಬಿ ಪರವಾಗಿ ಆಡಿದ್ದಾರೆ. 2016ರ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಜೊತೆಗೆ 229 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗುವ ಮೂಲಕ ಅತಿ ಹೆಚ್ಚು ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದ ದಾಖಲೆಯನ್ನು ಹೊಂದಿದ್ದಾರೆ. ಆದರೆ ಈ ಬಾರಿಯ ಆವೃತ್ತಿಗೂ ಮುನ್ನ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ್ದಾರೆ.

Story first published: Thursday, March 10, 2022, 15:54 [IST]
Other articles published on Mar 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X