IPL 2022: ಒಂದೇ ಒಂದು ಪಂದ್ಯದಲ್ಲಿಯೂ ಆಡುವ ಅವಕಾಶ ಸಿಗದೇ ಮೂಲೆಗುಂಪಾದ 5 ಉತ್ತಮ ಆಟಗಾರರು!

ಕಳೆದ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಿದ್ದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇಂದು ( ಮೇ 29 ) ನಡೆಯುತ್ತಿರುವ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಫೈನಲ್ ಪಂದ್ಯದ ಮೂಲಕ ತೆರೆ ಬೀಳುತ್ತಿದೆ.

IPL 2022 Final: ಬಲಿಷ್ಠ ಗುಜರಾತ್ ವಿರುದ್ಧ ಕಣಕ್ಕಿಳಿಯುವ ಈ ರಾಜಸ್ಥಾನ್ ರಾಯಲ್ಸ್ ತಂಡ ಗೆಲ್ಲುತ್ತಾ?IPL 2022 Final: ಬಲಿಷ್ಠ ಗುಜರಾತ್ ವಿರುದ್ಧ ಕಣಕ್ಕಿಳಿಯುವ ಈ ರಾಜಸ್ಥಾನ್ ರಾಯಲ್ಸ್ ತಂಡ ಗೆಲ್ಲುತ್ತಾ?

ಹೀಗೆ 2 ತಿಂಗಳುಗಳ ಕಾಲ ನಡೆದ ಈ ಬೃಹತ್ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಯಲ್ಲಿ ಹಲವಾರು ಯುವ ಕ್ರಿಕೆಟಿಗರು ಅವಕಾಶ ಪಡೆದುಕೊಂಡು ಉತ್ತಮ ಪ್ರದರ್ಶನ ನೀಡಿ ಬೆಳಕಿಗೆ ಬಂದಿದ್ದರೆ, ತೆರೆಮರೆಗೆ ಸರಿದಿದ್ದ ಹಲವು ಹಿರಿಯ ಕ್ರಿಕೆಟಿಗರು ಕೂಡ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಆದರೆ ಟೂರ್ನಿಯಲ್ಲಿ ಕೆಲವೊಂದಷ್ಟು ಆಟಗಾರರಿಗೆ ಕಣಕ್ಕಿಳಿಯುವ ಅವಕಾಶ ಸಿಗದೇ ಸಂಪೂರ್ಣವಾಗಿ ಬೆಂಚ್ ಕಾದಿದ್ದಾರೆ.

IPL 2022: ಕೊಹ್ಲಿಯ '973 ರನ್' ಬೃಹತ್ ದಾಖಲೆ ಮುರಿಯಲು ಬಟ್ಲರ್ ಫೈನಲ್‌ನಲ್ಲಿ ಎಷ್ಟು ರನ್ ಬಾರಿಸಬೇಕು?IPL 2022: ಕೊಹ್ಲಿಯ '973 ರನ್' ಬೃಹತ್ ದಾಖಲೆ ಮುರಿಯಲು ಬಟ್ಲರ್ ಫೈನಲ್‌ನಲ್ಲಿ ಎಷ್ಟು ರನ್ ಬಾರಿಸಬೇಕು?

ಹೌದು, ಯಾವುದೇ ಪಂದ್ಯದಲ್ಲಿಯೂ ಸಹ ಆಡುವ ಅವಕಾಶ ಸಿಗದೇ ಬೆಂಚ್ ಕಾದಿರುವ ಆಟಗಾರರ ಪೈಕಿ ಉತ್ತಮ ಪ್ರದರ್ಶನ ನೀಡುವ ತಾಕತ್ತು ಇದ್ದ ಆಟಗಾರರು ಕೂಡ ಇದ್ದಾರೆ. ಹೀಗೆ ಟಿ ಟ್ವೆಂಟಿ ಮಾದರಿಯಲ್ಲಿ ಉತ್ತಮ ಆಟಗಾರ ಎನಿಸಿಕೊಂಡಿದ್ದರೂ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯದಲ್ಲಿಯೂ ಆಡುವ ಅವಕಾಶ ಸಿಗದೇ ಬೆಂಚ್ ಕಾದ ಐವರು ಆಟಗಾರರ ಪಟ್ಟಿ ಕೆಳಕಂಡಂತಿದೆ.

1. ಮೊಹಮ್ಮದ್ ನಬಿ

1. ಮೊಹಮ್ಮದ್ ನಬಿ

ಅಫ್ಘಾನಿಸ್ತಾನದ ಆಲ್ ರೌಂಡರ್ ಮೊಹಮ್ಮದ್ ನಬಿ ವಿಶ್ವದ ಅನೇಕ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತಾವು ಆಡಿರುವ ಅನೇಕ ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿರುವ ಇವರು ಇತ್ತೀಚೆಗಷ್ಟೇ ನಡೆದ ಬಿಗ್ ಬ್ಯಾಶ್ ಲೀಗ್ ಹಾಗೂ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಗಳಲ್ಲಿಯೂ ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಇನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ 1 ಕೋಟಿಗೆ ಈತನನ್ನು ಖರೀದಿಸಿದ ಕೋಲ್ಕತ್ತ ನೈಟ್ ರೈಡರ್ಸ್ ಫ್ರಾಂಚೈಸಿ ಯಾವುದೇ ಪಂದ್ಯದಲ್ಲಿಯೂ ಕಣಕ್ಕಿಳಿಯುವ ಅವಕಾಶವನ್ನು ನೀಡಿಲ್ಲ. ತಂಡದಲ್ಲಿ ಆಲ್ ರೌಂಡರ್ ಆಟಗಾರರಾದ ಆ್ಯಂಡ್ರೆ ರಸೆಲ್ ಮತ್ತು ಸುನಿಲ್ ನರೈನ್ ಇದ್ದ ಕಾರಣ ಈತನಿಗೆ ಕಣಕ್ಕಿಳಿಯುವ ಅವಕಾಶ ಸಿಗಲಿಲ್ಲ ಎನ್ನಬಹುದು. ಒಟ್ಟಾರೆ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ 4996 ರನ್ ಮತ್ತು 302 ವಿಕೆಟ್ ಕಬಳಿಸಿರುವ ಮೊಹಮ್ಮದ್ ನಬಿ ಕಣಕ್ಕಿಳಿಯುವ ಅರ್ಹತೆಯನ್ನು ಹೊಂದಿದ್ದ ಆಟಗಾರನಾಗಿದ್ದಾರೆ.

2. ಲುಂಗಿ ಎನ್ ಗಿಡಿ

2. ಲುಂಗಿ ಎನ್ ಗಿಡಿ

ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ಖಾಯಂ ಸದಸ್ಯನಾಗಿರುವ ಲುಂಗಿ ಎನ್ ಗಿಡಿ ಕಳೆದ 3 ಐಪಿಎಲ್ ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಉತ್ತಮ ಆಟವನ್ನಾಡಿದ್ದರು. ಒಟ್ಟು 14 ಐಪಿಎಲ್ ಪಂದ್ಯಗಳನ್ನಾಡಿ 25 ವಿಕೆಟ್ ಪಡೆದಿರುವ ಇವರು 2018ರ ಆವೃತ್ತಿಯಲ್ಲಿ 7 ಪಂದ್ಯಗಳನ್ನಾಡಿ 11 ವಿಕೆಟ್ ಪಡೆದು ಮಿಂಚಿದ್ದರು. ಹೀಗೆ ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರ ಎನಿಸಿಕೊಂಡಿದ್ದರೂ ಸಹ ಇವರಿಗೆ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆಡುವ ಅವಕಾಶ ಸಿಕ್ಕೇ ಇಲ್ಲ. ಈ ಬಾರಿಯ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 50 ಲಕ್ಷಕ್ಕೆ ಲುಂಗಿ ಎನ್ ಗಿಡಿ ಅವರನ್ನು ಖರೀದಿಸಿತ್ತು.

3. ಇಶಾನ್ ಪೊರೆಲ್

3. ಇಶಾನ್ ಪೊರೆಲ್

ದೇಸಿ ಕ್ರಿಕೆಟ್‍ನಲ್ಲಿ 4 ವರ್ಷಗಳ ಅನುಭವವಿರುವ ಪ್ರತಿಭಾವಂತ ವೇಗಿ ಇಶಾನ್ ಪೊರೆಲ್ ಕಳೆದ 3 ಆವೃತ್ತಿಗಳಲ್ಲಿಯೂ ಪಂಜಾಬ್ ಕಿಂಗ್ಸ್ ತಂಡದ ಸದಸ್ಯನಾಗಿದ್ದರು. ಕಳೆದ ಆವೃತ್ತಿಯ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ಪದಾರ್ಪಣೆ ಮಾಡಿದ್ದ ಇವರು 39 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಇನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ಮತ್ತೆ ಇಶಾನ್ ಪೊರೆಲ್ 25 ಲಕ್ಷಕ್ಕೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಪಾಲಾದರು. ಆದರೆ ಈ ಬಾರಿ ತಂಡದಲ್ಲಿ ವೇಗಿಗಳ ಸಂಖ್ಯೆ ಹೆಚ್ಚಿದ್ದರಿಂದ ಯಾವುದೇ ಪಂದ್ಯದಲ್ಲಿಯೂ ಆಡುವ ಅವಕಾಶ ಇಶಾನ್ ಪೊರೆಲ್ ಅವರಿಗೆ ಸಿಗಲಿಲ್ಲ. ಭಾರತ ಎ ತಂಡದ ಆಟಗಾರನಾಗಿರುವ ಇವರು ಹಿರಿಯ ಕ್ರಿಕೆಟಿಗರ ತಂಡದ ನೆಟ್ ಬೌಲರ್ ಆಗಿದ್ದಾರೆ. ತಾನಾಡಿರುವ ಒಟ್ಟು 22 ಟಿ ಟ್ವೆಂಟಿ ಪಂದ್ಯಗಳಲ್ಲಿ ಇಶಾನ್ ಪೊರೆಲ್ 30 ವಿಕೆಟ್ ಕಬಳಿಸಿದ್ದಾರೆ.

4. ಬಿನ್ನಿ ಹೊವೆಲ್

4. ಬಿನ್ನಿ ಹೊವೆಲ್

ಇಂಗ್ಲೆಂಡ್ ಮೂಲದ ಆಲ್ ರೌಂಡರ್ ಬಿನ್ನಿ ಹೊವೆಲ್ ಈ ಬಾರಿ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದರು. 2021ರ ಬ್ಲಾಸ್ಟ್ ಲೀಗ್‌ನಲ್ಲಿ 246 ರನ್ ಚಚ್ಚಿದ್ದ ಬಿನ್ನಿ ಹೊವೆಲ್ ಆ ಆವೃತ್ತಿಯಲ್ಲಿ 15 ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂದು ಕೂಡ ಹೆಸರು ಮಾಡಿದ್ದರು. ಆದರೆ ಈ ಆಲ್ ರೌಂಡರ್ ಆಟಗಾರನಿಗೆ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಕಣಕ್ಕಿಳಿಯುವ ಅವಕಾಶವನ್ನು ಪಂಜಾಬ್ ಕಿಂಗ್ಸ್ ನೀಡಲೇ ಇಲ್ಲ.

IPL Final ಪಂದ್ಯಕ್ಕೂ ಮುನ್ನ ನಡೆದ ವಿಶೇಷ ಕಾರ್ಯಕ್ರಮಗಳು | OneIndia Kannada
5. ಜೇಸನ್ ಬೆಹ್ರೆಂಡಾರ್ಫ್

5. ಜೇಸನ್ ಬೆಹ್ರೆಂಡಾರ್ಫ್

ಪವರ್ ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ಉತ್ತಮ ಗುಣಮಟ್ಟದ ಪ್ರದರ್ಶನ ನೀಡಬಲ್ಲ ಈ ವೇಗಿ ಬಿಗ್ ಬಾಶ್ ಲೀಗ್ ಟೂರ್ನಿಯಲ್ಲಿ ಪರ್ತ್ ಸ್ಕಾರ್ಚರ್ಸ್ ಪರ ಹಲವು ಆವೃತ್ತಿಗಳಲ್ಲಿ ಮಿಂಚಿದ್ದಾರೆ. ಕಳೆದ ಬಾರಿಯ ಬಿಗ್ ಬಾಶ್ ಲೀಗ್ ಆವೃತ್ತಿಯಲ್ಲಿ 13 ಪಂದ್ಯಗಳನ್ನಾಡಿ 16 ವಿಕೆಟ್ ಪಡೆದಿದ್ದ ಈತನನ್ನು ಈ ಬಾರಿಯ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 75 ಲಕ್ಷಕ್ಕೆ ಖರೀದಿ ಮಾಡಿತ್ತು. ಆದರೆ ಟೂರ್ನಿಯ ಯಾವುದೇ ಪಂದ್ಯದಲ್ಲಿಯೂ ಕೂಡ ಈತನಿಗೆ ಆಡುವ ಅವಕಾಶವನ್ನು ಮಾತ್ರ ನೀಡಲಿಲ್ಲ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, May 29, 2022, 15:02 [IST]
Other articles published on May 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X