ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಭಾರತದ 5 ಬೌಲಿಂಗ್ ಆಲ್‌ರೌಂಡರ್ಸ್ ಮೇಲೆ ಫ್ರಾಂಚೈಸಿಗಳ ಕಣ್ಣು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಯ ಮೇಲೆ ಇಡೀ ಕ್ರಿಕೆಟ್ ಲೋಕವು ಕಣ್ಣಿಟ್ಟಿದ್ದು, ಈಗಾಗಲೇ ಆಟಗಾರರ ರೀಟೈನ್ ಪ್ರಕ್ರಿಯೆಯು ಮುಗಿದಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ ಕೂಡ ನಡೆಯಲಿದೆ.

Bowling allrounders

ಐಪಿಎಲ್ 2022ರ ಸೀಸನ್‌ನಲ್ಲಿ 10 ತಂಡಗಳು ಭಾಗವಹಿಸುತ್ತಿದ್ದು, ಲಕ್ನೋ ಮತ್ತು ಅಹಮದಾಬಾದ್ ತಂಡಗಳು ಐಪಿಎಲ್‌ನಲ್ಲಿ ತಮ್ಮ ಮೊದಲ ಹೆಜ್ಜೆಯನ್ನಿಡಲಿವೆ. ಹಳೆಯ ಎಂಟು ತಂಡಗಳು ಈಗಾಗಲೇ 27 ಆಟಗಾರರನ್ನು ರೀಟೈನ್ ಮಾಡಿಕೊಂಡಿವೆ.

ಚುಟುಕು ಕ್ರಿಕೆಟ್‌ನಲ್ಲಿ ಆಲ್‌ರೌಂಡರ್‌ಗಳ ಪಾತ್ರ ತಂಡದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಪ್ರತಿ ತಂಡವು ಉತ್ತಮ ಆಲ್‌ರೌಂಡರ್‌ಗಳನ್ನ ಹೊಂದಲು ಬಿಡ್ಡಿಂಗ್‌ನಲ್ಲಿ ಪ್ರಯತ್ನ ನಡೆಸುತ್ತವೆ. ಆದ್ರೆ ಈ ಆಲ್‌ರೌಂಡರ್‌ಗಳಲ್ಲಿ ಕೆಲವೇ ಕೆಲವರು ಪೇಸ್ ಆಲ್‌ರೌಂಡರ್‌ಗಳಿದ್ದು, ಉಳಿದ ಬಹುತೇಕರು ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ಗಳಾಗಿದ್ದಾರೆ

ಹೀಗಾಗಿ IPL 2022ರಲ್ಲಿ ಫಾಸ್ಟ್‌ ಬೌಲಿಂಗ್ ಆಲ್‌ರೌಂಡರ್‌ಗಳು ಫ್ರಾಂಚೈಸಿಗಳನ್ನ ಆಕರ್ಷಿಸಲಿದ್ದಾರೆ. ಇದೇ ರೀತಿಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಐದು ಭಾರತೀಐ ಫಾಸ್ಟ್ ಬೌಲಿಂಗ್‌ ಆಲ್‌ರೌಂಡರ್‌ಗಳನ್ನ ಮುಂದಿನ ಹರಾಜು ಪ್ರಕ್ರಿಯೆಯಲ್ಲಿ ಸಾಕಷ್ಟು ಬೇಡಿಕೆಗೆ ಕಾರಣವಾಗಲಿದ್ದಾರೆ. ಆ ಐದು ಪೇಸ್ ಆಲ್‌ರೌಂಡರ್‌ಗಳ ಮಾಹಿತಿ ಈ ಕೆಳಗಿದೆ.

ಶಾರ್ದೂಲ್ ಠಾಕೂರ್

ಶಾರ್ದೂಲ್ ಠಾಕೂರ್

ಐಪಿಎಲ್ 2022ರ ಹರಾಜು ಪ್ರಕ್ರಿಯೆಯಲ್ಲಿ ಫ್ರಾಂಚೈಸಿಗಳನ್ನ ಅಟ್ರ್ಯಾಕ್ಟ್ ಮಾಡುವಲ್ಲಿ ಶಾರ್ದೂಲ್ ಠಾಕೂರ್ ಮೊದಲಿಗರಾಗಿದ್ದಾರೆ. ಬಲಗೈ ಬೌಲಿಂಗ್ ಆಲ್‌ರೌಂಡರ್ ಶಾರ್ದೂಲ್‌, 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಪರ ಆಟವಾಡಿದ್ರು. ಸಿಎಸ್‌ಕೆ ಪರ ಅದ್ಭುತ ಪ್ರದರ್ಶನ ನೀಡಿದ ಶಾರ್ದೂಲ್ ಠಾಕೂರ್ 16 ಪಂದ್ಯಗಳಲ್ಲಿ 25.09ರ ಸರಾಸರಿಯಲ್ಲಿ 21 ವಿಕೆಟ್ ಕಬಳಿಸಿದ್ರು. ಬೌಲಿಂಗ್ ಜೊತೆಗೆ ಈತ ಉತ್ತಮ ಕೆಳಕ್ರಮಾಂಕದ ಬ್ಯಾಟ್ಸ್‌ಮನ್ ಕೂಡ ಹೌದು.

ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ

ಮುಂಬೈ ಇಂಡಿಯನ್ಸ್ ಹಲವಾರ ಸೀಸನ್‌ಗಳಲ್ಲಿ ಭಾಗಿಯಾಗಿದ್ದ ಬರೋಡಾ ಮೂಲದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್ 2022ರ ಸೀಸನ್‌ನಲ್ಲಿ ಬಹುಬೇಡಿಕೆಗೆ ಆಲ್‌ರೌಂಡರ್ ಆಗಿದ್ದಾರೆ. 2021ರ ಐಪಿಎಲ್‌ ಸೀಸನ್‌ನಲ್ಲಿ ಬ್ಯಾಟಿಂಗ್‌ನಲ್ಲೂ ಅಷ್ಟು ಮಿಂಚದ ಪಾಂಡ್ಯ, ಮುಂಬೈ ಪರ ಬೌಲಿಂಗ್ ಮಾಡಿದ್ದೇ ಕಡಿಮೆ. ಈಗಾಗಲೇ ಮುಂಬೈ ಪಾಂಡ್ಯರನ್ನ ರಿಲೀಸ್ ಮಾಡಿದ್ದು ರೀಟೈನ್ ಮಾಡಿಕೊಂಡಿಲ್ಲ.

ಕಳೆದ ಸೀಸನ್‌ನಲ್ಲಿ 11 ಇನ್ನಿಂಗ್ಸ್‌ಗಳಲ್ಲಿ 127ರನ್ ಕಲೆಹಾಕಿದ ಹಾರ್ದಿಕ್ ಬೌಲಿಂಗ್‌ ಮಾಡದಿದ್ರೂ ಸ್ಫೋಟಕ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಈ ಬಾರಿ ಐಪಿಎಲ್ ಹರಾಜಿನಲ್ಲಿ ಫ್ರಾಂಚೈಸಿಗಳ ಕಣ್ಣು ಈತನ ಮೇಲಿದೆ.

ಕೆ.ಎಲ್ ರಾಹುಲ್ ಉಪನಾಯಕನಾಗಿ ಆಯ್ಕೆಗೊಂಡಿದ್ದು ಸರಿಯಾದ ನಿರ್ಧಾರ: ಸಾಬಾ ಕರೀಂ

ಶಿವಂ ದುಬೆ

ಶಿವಂ ದುಬೆ

ಭಾರತದ ಯುವ ಪ್ರತಿಭಾನ್ವಿತ ಆಲ್‌ರೌಂಡರ್‌ಗಳಲ್ಲಿ ಒಬ್ಬನಾದ ಶಿವಂ ದುಬೆ ಐಪಿಎಲ್ 2022ರ ಹರಾಜಿನಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಪ್ಲೇಯರ್. ಕಳೆದ ವರ್ಷ 4.4 ಕೋಟಿ ರೂಪಾಯಿಗೆ ರಾಜಸ್ತಾನ್ ರಾಯಲ್ಸ್ ಫ್ರಾಂಚೈಸಿ ದುಬೆರನ್ನ ಖರೀದಿಸಿತ್ತು. ಎಡಗೈ ಬ್ಯಾಟ್ಸ್‌ಮನ್ 9 ಇನ್ನಿಂಗ್ಸ್‌ಗಳಲ್ಲಿ 28.75ರ ಬ್ಯಾಟಿಂಗ್ ಸರಾಸರಿಯಲ್ಲಿ 230 ರನ್ ಕಲೆಹಾಕಿದ್ರು. ಕಳೆದ ಸೀಸನ್‌ನಂತೆ ಮುಂದಿನ ಐಪಿಎಲ್ ಆವೃತ್ತಿಯಲ್ಲೂ ದುಬೆ ಹೆಚ್ಚು ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ.

ಭಾರತ vs ದ. ಆಫ್ರಿಕಾ: ಮೊದಲ ಟೆಸ್ಟ್‌ನ ಆಡುವ ಬಳಗದಲ್ಲಿ ಯಾರಿಗೆಲ್ಲಾ ಸ್ಥಾನ? ರಹಾನೆ, ವಿಹಾರಿ ಮೇಲೆ ಕಣ್ಣು!

ದೀಪಕ್ ಚಹಾರ್

ದೀಪಕ್ ಚಹಾರ್

ಚೆನ್ನೈ ಸೂಪರ್ ಕಿಂಗ್ಸ್ ಮತ್ತೋರ್ವ ಬೌಲಿಂಗ್ ಆಲ್‌ರೌಂಡರ್ ದೀಪಕ್ ಚಹಾರ್ ಬೌಲಿಂಗ್ ಜೊತೆಗೆ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಕೌಶಲ್ಯವನ್ನು ಹೊಂದಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಲವು ಅತ್ಯಾಕರ್ಷಕ ಇನ್ನಿಂಗ್ಸ್‌ಗಳು ಅವರನ್ನ ಐಪಿಎಲ್‌ನಲ್ಲಿ ಫ್ರಾಂಚೈಸಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ. 2021ರ ಸೀಸನ್‌ನಲ್ಲಿ 15 ಪಂದ್ಯಗಳಲ್ಲಿ 14 ವಿಕೆಟ್ ಪಡೆದಿರುವ ದೀಪಕ್ ಚಹಾರ್‌ರನ್ನ ಸಿಎಸ್‌ಕೆ ರಿಲೀಸ್ ಮಾಡಿದೆ.

ಲಲಿತ್ ಯಾದವ್

ಲಲಿತ್ ಯಾದವ್

ಐಪಿಎಲ್ 2021ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಲಲಿತ್ ಯಾದವ್ ಮೀಡಿಯಂ ಪೇಸ್ ಬೌಲಿಂಗ್ ಮಾಡುತ್ತಾರೆ. 7 ಪಂದ್ಯಗಳಲ್ಲಿ 68 ರನ್‌ ಕಲೆಹಾಕಿರುವ ಈತ ನಾಲ್ಕು ವಿಕೆಟ್ ಗಳನ್ನ ಕೂಡ ಕಲೆಹಾಕಿದ್ದಾರೆ. ತನ್ನ ಚೊಚ್ಚಲ ಸೀಸನ್‌ನಲ್ಲಿ ಇವರ ಉತ್ತಮ ಆಲ್‌ರೌಂಡ್‌ ಪ್ರದರ್ಶನವು ಮುಂದಿನ ಸೀಸನ್‌ನಲ್ಲಿ ಯಾವುದಾದರೂ ಫ್ರಾಂಚೈಸಿಯನ್ನ ಆಕರ್ಷಿಸುವ ಸಾಧ್ಯತೆ ಹೆಚ್ಚಿದೆ.

Story first published: Tuesday, December 21, 2021, 9:31 [IST]
Other articles published on Dec 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X