ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂದು 1 ಕೋಟಿ, ಈಗ 12 ಕೋಟಿ; ಕಳೆದ ಆವೃತ್ತಿಗಿಂತ ಈ ಆವೃತ್ತಿಯಲ್ಲಿ ಹೆಚ್ಚು ಹಣ ಪಡೆದ 5 ಆಟಗಾರರು

IPL 2022: 5 players who got more salary compared to last year

ಲಖನೌ ಮತ್ತು ಅಹಮದಾಬಾದ್ ಎಂಬ 2 ಹೊಸ ಫ್ರಾಂಚೈಸಿಗಳು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸೇರ್ಪಡೆಗೊಳ್ಳುತ್ತಿರುವ ಕಾರಣ ಇದಕ್ಕೂ ಮುನ್ನ ಆಟಗಾರರ ಮೆಗಾ ಹರಾಜನ್ನು ಬಿಸಿಸಿಐ ನಡೆಸಲಿದೆ. ಹೀಗಾಗಿ ಈ ಮೆಗಾ ಹರಾಜಿಗೂ ಮುನ್ನ ಸದ್ಯ ಅಸ್ತಿತ್ವದಲ್ಲಿರುವ ಫ್ರಾಂಚೈಸಿಗಳಿಗೆ ತಂಡದಲ್ಲಿ ಯಾರಾದರೂ ನಾಲ್ವರು (ಗರಿಷ್ಠ) ಆಟಗಾರರನ್ನು ಉಳಿಸಿಕೊಳ್ಳುವ ಅನುಮತಿಯನ್ನು ಬಿಸಿಸಿಐ ನೀಡಿತ್ತು.

IPL 2022: ಫ್ರಾಂಚೈಸಿಗಳು ರೀಟೈನ್ ಮಾಡಿಕೊಳ್ಳದ ಭಾರತ ಹಾಗೂ ವಿದೇಶಿ ಸ್ಟಾರ್ ಆಟಗಾರರುIPL 2022: ಫ್ರಾಂಚೈಸಿಗಳು ರೀಟೈನ್ ಮಾಡಿಕೊಳ್ಳದ ಭಾರತ ಹಾಗೂ ವಿದೇಶಿ ಸ್ಟಾರ್ ಆಟಗಾರರು

ಹೀಗಾಗಿ ಯಾವ ಫ್ರಾಂಚೈಸಿಗಳು ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂಬ ಕುತೂಹಲ ಮತ್ತು ಚರ್ಚೆಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿಯೇ ನಡೆದಿದ್ದವು. ಕೆಲ ಮಾಜಿ ಕ್ರಿಕೆಟಿಗರು ವಿವಿಧ ಫ್ರಾಂಚೈಸಿಗಳಿಗೆ ಈ ಆಟಗಾರರನ್ನು ಉಳಿಸಿಕೊಳ್ಳುವುದು ಉತ್ತಮ ಎಂಬ ಸಲಹೆಗಳನ್ನು ಕೂಡ ನೀಡಿದ್ದರು. ಹೀಗೆ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಐಪಿಎಲ್ ರಿಟೆನ್ಷನ್ ಪ್ರಕ್ರಿಯೆಗೆ ತೆರೆ ಬಿದ್ದಿದ್ದು, ನವೆಂಬರ್‌ 30ರ ರಾತ್ರಿ ಯಾವ ಫ್ರಾಂಚೈಸಿಗಳು ಯಾವ ಆಟಗಾರರನ್ನು ಉಳಿಸಿಕೊಂಡಿವೆ ಎಂಬುದು ಬಹಿರಂಗವಾಗಿದೆ.

ಐಪಿಎಲ್: ರಿಟೈನ್ ನಂತರ ಆರ್‌ಸಿಬಿ ಅಭಿಮಾನಿಗಳಿಗೆ ಸಿರಾಜ್ ಸಂದೇಶ, ಮ್ಯಾಕ್ಸ್‌ವೆಲ್ ಭರವಸೆಐಪಿಎಲ್: ರಿಟೈನ್ ನಂತರ ಆರ್‌ಸಿಬಿ ಅಭಿಮಾನಿಗಳಿಗೆ ಸಿರಾಜ್ ಸಂದೇಶ, ಮ್ಯಾಕ್ಸ್‌ವೆಲ್ ಭರವಸೆ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ರವೀಂದ್ರ ಜಡೇಜಾ, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ 16 ಕೋಟಿ ಪಡೆಯುವುದರ ಮೂಲಕ ಈ ಬಾರಿಯ ಐಪಿಎಲ್ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಅತಿ ದೊಡ್ಡ ಮೊತ್ತ ಪಡೆದ ಆಟಗಾರರು ಎನಿಸಿಕೊಂಡರು. ಇನ್ನುಳಿದಂತೆ ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ ಕಡಿಮೆ ಮೊತ್ತ ಗಳಿಸಿದ್ದ ಕೆಲ ಆಟಗಾರರು ಈ ಬಾರಿಯ ರಿಟೆನ್ಷನ್ ಪ್ರಕ್ರಿಯೆಗೆ ಒಳಗಾಗುವುದರ ಮೂಲಕ ಹೆಚ್ಚಿನ ಮೊತ್ತವನ್ನು ಸಂಭಾವನೆಯಾಗಿ ಪಡೆದುಕೊಂಡಿದ್ದಾರೆ. ಹೀಗೆ ಕಳೆದ ಆವೃತ್ತಿಯಲ್ಲಿ ಕಡಿಮೆ ಮೊತ್ತ ಪಡೆದು ಈ ಬಾರಿ ಅದಕ್ಕಿಂತ ಹೆಚ್ಚಿನ ಮೊತ್ತ ಪಡೆದಿರುವ ಐವರು ಆಟಗಾರರ ಪಟ್ಟಿ ಈ ಕೆಳಕಂಡಂತಿದೆ..

1. ಮಯಾಂಕ್ ಅಗರ್ವಾಲ್

1. ಮಯಾಂಕ್ ಅಗರ್ವಾಲ್

ಈ ಬಾರಿಯ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಸಂತಸಗೊಂಡಿರುವ ಆಟಗಾರ ಯಾರೆಂದರೆ ಅದು ಮಯಾಂಕ್ ಅಗರ್ವಾಲ್ ಎಂದು ಧಾರಾಳವಾಗಿ ಹೇಳಬಹುದು. ಯಾಕೆಂದರೆ 2018ರಲ್ಲಿ 1 ಕೋಟಿ ನೀಡಿ ಮಯಾಂಕ್ ಅಗರ್ವಾಲ್ ಅವರನ್ನು ಖರೀದಿಸಿದ್ದ ಪಂಜಾಬ್ ಕಿಂಗ್ಸ್ ಈ ಬಾರಿ ಆತನನ್ನು ತಂಡದಲ್ಲಿಯೇ ಉಳಿಸಿಕೊಳ್ಳಲು ಬರೋಬ್ಬರಿ 12 ಕೋಟಿ ರೂ ನೀಡುತ್ತಿದೆ.

2. ಅರ್ಷದೀಪ್ ಸಿಂಗ್

2. ಅರ್ಷದೀಪ್ ಸಿಂಗ್

ಈ ಬಾರಿ ಪಂಜಾಬ್ ಕಿಂಗ್ಸ್ ರಿಟೈನ್ ಮಾಡಿಕೊಂಡಿರುವ ಇಬ್ಬರು ಆಟಗಾರರಲ್ಲಿ ಅರ್ಷದೀಪ್ ಸಿಂಗ್ ಕೂಡ ಒಬ್ಬರು. 2019ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಪದಾರ್ಪಣೆ ಮಾಡಿದ್ದ ಅರ್ಷದೀಪ್ ಸಿಂಗ್ 20 ಲಕ್ಷ ಸಂಭಾವನೆ ಪಡೆದಿದ್ದರು. ಆದರೆ ಈ ಬಾರಿ ಪಂಜಾಬ್ ಕಿಂಗ್ಸ್ ಅರ್ಷದೀಪ್ ಅವರನ್ನು ರಿಟೈನ್ ಮಾಡಿಕೊಳ್ಳಲು 4 ಕೋಟಿ ಘೋಷಣೆ ಮಾಡಿದೆ.

3. ಅಬ್ದುಲ್ ಸಮದ್

3. ಅಬ್ದುಲ್ ಸಮದ್

ಜಮ್ಮು ಕಾಶ್ಮೀರದ ಆಲ್ ರೌಂಡರ್ ಆಟಗಾರ ಅಬ್ದುಲ್ ಸಮದ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 20 ಲಕ್ಷ ನೀಡಿ ಖರೀದಿಸಿತ್ತು. ಆದರೆ ಇದೀಗ ಇದೇ ಆಟಗಾರನನ್ನು ಉಳಿಸಿಕೊಳ್ಳಲು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 4 ಕೋಟಿ ಹೂಡಿಕೆ ಮಾಡಿದೆ.

4. ರುತುರಾಜ್ ಗಾಯಕ್ವಾಡ್

4. ರುತುರಾಜ್ ಗಾಯಕ್ವಾಡ್

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ರಸ್ತುತ ಅತ್ಯುತ್ತಮ ಆರಂಭಿಕ ಆಟಗಾರ ಯಾರು ಎಂದರೆ ರುತುರಾಜ್ ಗಾಯಕ್ವಾಡ್ ಅವರ ಹೆಸರು ಕೇಳಿಬರುತ್ತದೆ. ಅಷ್ಟರಮಟ್ಟಿಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ರುತುರಾಜ್ ಗಾಯಕ್ವಾಡ್ ಉತ್ತಮ ಪ್ರದರ್ಶನವನ್ನು ನೀಡಿದರು. ಹೀಗಾಗಿಯೇ ಆರಂಭದಲ್ಲಿ 20 ಲಕ್ಷ ನೀಡಿ ರುತುರಾಜ್ ಗಾಯಕ್ವಾಡ್ ಅವರನ್ನು ಖರೀದಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಆತನನ್ನು ರಿಟೈನ್ ಮಾಡಿಕೊಳ್ಳಲು 6 ಕೋಟಿ ನೀಡಿದೆ.

ಬಹಿರಂಗವಾಗೇ ಎಲ್ಲರ ಮುಂದೆ ಬಂದು ನಿಂತ KL Rahul-Athiya Shetty | Oneindia Kannada
5. ವೆಂಕಟೇಶ್ ಅಯ್ಯರ್

5. ವೆಂಕಟೇಶ್ ಅಯ್ಯರ್

ಈ ವರ್ಷ ನಡೆದ ಐಪಿಎಲ್ ಟೂರ್ನಿಯ ಮೊದಲಾರ್ಧದಲ್ಲಿ ಮಂಕಾಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ದ್ವಿತೀಯಾರ್ಧದಲ್ಲಿ ಪುಟಿದೇಳಲು ತಂಡದ ಆಟಗಾರ ವೆಂಕಟೇಶ್ ಅಯ್ಯರ್ ಕೂಡಾ ಕಾರಣ. ಹೀಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ವೆಂಕಟೇಶ್ ಅಯ್ಯರ್ ಸದ್ಯ ಟೀಮ್ ಇಂಡಿಯಾದಲ್ಲಿಯೂ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೀಗೆ ಅಂತರರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಸಂತಸದಲ್ಲಿದ್ದ ವೆಂಕಟೇಶ ಅಯ್ಯರ್ ಅವರಿಗೆ ಈ ಬಾರಿಯ ಐಪಿಎಲ್ ರಿಟೆನ್ಷನ್ ಮತ್ತಷ್ಟು ಖುಷಿಯನ್ನು ನೀಡಿದೆ. ಕಳೆದ ಆವೃತ್ತಿಯಲ್ಲಿ 20 ಲಕ್ಷ ಪಡೆಯುವುದರ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪಾಲಾಗಿದ್ದ ವೆಂಕಟೇಶ ಅಯ್ಯರ್ ಈ ಬಾರಿ ನೆಡೆದ ರಿಟೆನ್ಷನ್ ಪ್ರಕ್ರಿಯೆಯಲ್ಲಿ 8 ಕೋಟಿ ಬಾಚಿಕೊಂಡಿದ್ದಾರೆ.

Story first published: Wednesday, December 1, 2021, 16:44 [IST]
Other articles published on Dec 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X