ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಬ್ಬರಿಸುತ್ತಿದ್ದಾರೆ ಫ್ರಾಂಚೈಸಿಗಳು ನಂಬದೇ ಕೈಬಿಟ್ಟ 5 ಆಟಗಾರರು; ಆರ್‌ಸಿಬಿಯಿಂದ ಹೊರಬಿದ್ದ ಆಟಗಾರನೇ ಟಾಪ್!

IPL 2022: 5 players who should have been retained by their previous teams

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯ್ ಲೀಗ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ಈ ಎರಡು ನೂತನ ತಂಡಗಳ ಆಗಮನವಾದ ಕಾರಣ ಟೂರ್ನಿಯ ಆರಂಭಕ್ಕೂ ಮುನ್ನವೇ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಿತು, ಐಪಿಎಲ್ ನಿಯಮದ ಪ್ರಕಾರ ಅಸ್ತಿತ್ವದಲ್ಲಿದ್ದ ತಂಡಗಳು ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿಯನ್ನು ಹೊಂದಿದ್ದವು. ಅದರಂತೆ ಫ್ರಾಂಚೈಸಿಗಳು ತಮಗೆ ಅತ್ಯಗತ್ಯವಾದ ಆಟಗಾರರನ್ನು ರಿಟೈನ್ ಮಾಡಿಕೊಂಡು ಉಳಿದ ಆಟಗಾರರನ್ನು ಕೈಬಿಟ್ಟವು.

ಇದೆಂಥ ನಡವಳಿಕೆ: ಔಟ್ ಆಗಿ ಮೆಕ್ಕಲಮ್ ಜೊತೆ ಮೈದಾನದಲ್ಲೇ ವಾದಕ್ಕಿಳಿದ ಶ್ರೇಯಸ್ ಐಯ್ಯರ್ ವಿರುದ್ಧ ಕಿಡಿ!ಇದೆಂಥ ನಡವಳಿಕೆ: ಔಟ್ ಆಗಿ ಮೆಕ್ಕಲಮ್ ಜೊತೆ ಮೈದಾನದಲ್ಲೇ ವಾದಕ್ಕಿಳಿದ ಶ್ರೇಯಸ್ ಐಯ್ಯರ್ ವಿರುದ್ಧ ಕಿಡಿ!

ಹೀಗೆ ಫ್ರಾಂಚೈಸಿಗಳು ಕೈಬಿಟ್ಟ ಆಟಗಾರರ ಪೈಕಿ ತಂಡಗಳಿಗೆ ಹಲವಾರು ಟೂರ್ನಿಗಳಲ್ಲಿ ಆಸರೆಯಾಗಿದ್ದ ಆಟಗಾರರೂ ಸಹ ಇದ್ದರು. ಇನ್ನು ಕೆಲ ಫ್ರಾಂಚೈಸಿಗಳು ತಮ್ಮ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದ ಆಟಗಾರರ ಮೇಲೆ ನಂಬಿಕೆಯನ್ನಿಟ್ಟು ಮೆಗಾ ಹರಾಜಿನಲ್ಲಿ ಅವರನ್ನು ಖರೀದಿಸಿ ಮರಳಿ ತಂಡಕ್ಕೆ ಸೇರಿಸಿಕೊಂಡರೆ, ಇನ್ನೂ ಕೆಲ ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಹಲವಾರು ಬಾರಿ ಆಸರೆಯಾಗಿದ್ದ ಆಟಗಾರರನ್ನು ನಂಬದೇ ಕೈಬಿಟ್ಟಿದ್ದಾರೆ. ಹೀಗೆ ತಂಡಗಳಿಂದ ಹೊರಬಿದ್ದ ಆಟಗಾರರು ಬೇರೆ ತಂಡಗಳನ್ನು ಸೇರಿದ್ದು, ಅದರಲ್ಲಿ ಕೆಲ ಆಟಗಾರರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚುತ್ತಿದ್ದಾರೆ.

ಕೆಕೆಆರ್ ವಿರುದ್ಧ ರಾಜಸ್ಥಾನ್ ಗೆದ್ದ ನಂತರ ಅಂಕಪಟ್ಟಿ ಹೇಗಿದೆ? ಆರೆಂಜ್, ಪರ್ಪಲ್ ಕ್ಯಾಪ್ ಎರಡೂ ರಾಯಲ್ಸ್ ಪಾಲು!ಕೆಕೆಆರ್ ವಿರುದ್ಧ ರಾಜಸ್ಥಾನ್ ಗೆದ್ದ ನಂತರ ಅಂಕಪಟ್ಟಿ ಹೇಗಿದೆ? ಆರೆಂಜ್, ಪರ್ಪಲ್ ಕ್ಯಾಪ್ ಎರಡೂ ರಾಯಲ್ಸ್ ಪಾಲು!

ಇನ್ನು ಸದ್ಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರನ್ನು ನಂಬದೇ ಕೈಬಿಟ್ಟ ಹಳೆಯ ಫ್ರಾಂಚೈಸಿಗಳು ಕೈಸುಟ್ಟುಕೊಂಡಿದ್ದು, ಅಂತಹ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

1. ಕ್ವಿಂಟನ್ ಡಿ ಕಾಕ್

1. ಕ್ವಿಂಟನ್ ಡಿ ಕಾಕ್

2016ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ತಂಡದ ಪರ ಕಣಕ್ಕಿಳಿದು 13 ಪಂದ್ಯಗಳನ್ನಾಡಿ 445 ರನ್ ಕಲೆಹಾಕಿದ್ದ ಕ್ವಿಂಟನ್ ಡಿ ಕಾಕ್ ಅಬ್ಬರಿಸಿ ಹೆಸರು ಮಾಡಿದರು. ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿ ಹೇಳಿಕೊಳ್ಳುವಂತ ಪ್ರದರ್ಶನ ನೀಡುವಲ್ಲಿ ಎಡವಿದ ಕ್ವಿಂಟನ್ ಡಿ ಕಾಕ್ 2019ರಲ್ಲಿ ಮುಂಬೈ ಇಂಡಿಯನ್ಸ್ ಸೇರಿದರು. ಆ ಆವೃತ್ತಿಯಲ್ಲಿ 16 ಪಂದ್ಯಗಳನ್ನಾಡಿ 529 ರನ್ ಕಲೆಹಾಕಿದ್ದ ಕ್ವಿಂಟನ್ ಡಿ ಕಾಕ್ ಮುಂಬೈ ಇಂಡಿಯನ್ಸ್ ತನ್ನ ನಾಲ್ಕನೇ ಟ್ರೋಫಿ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅಷ್ಟೇ ಅಲ್ಲದೇ ನಂತರ ನಡೆದ 202೦ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ 16 ಪಂದ್ಯಗಳನ್ನಾಡಿ 503 ರನ್ ಕಲೆಹಾಕಿದ ಡಿ ಕಾಕ್ ಮುಂಬೈ ಇಂಡಿಯನ್ಸ್ ಐದನೇ ಟ್ರೋಫಿ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಇನ್ನು 2021ರ ಐಪಿಎಲ್ ಟೂರ್ನಿಯಲ್ಲಿ 11 ಪಂದ್ಯಗಳನ್ನಾಡಿ 297 ರನ್ ಕಲೆಹಾಕಿದ ಕ್ವಿಂಟನ್ ಡಿ ಕಾಕ್ ಉತ್ತಮ ಪ್ರದರ್ಶನವನ್ನೇನೂ ನೀಡಲಿಲ್ಲ ಹಾಗೂ ಮುಂಬೈ ಇಂಡಿಯನ್ಸ್ ಕೂಡ ಹೇಳಿಕೊಳ್ಳುವಂತ ಪ್ರದರ್ಶನ ನೀಡುವಲ್ಲಿ ಎಡವಿ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿತ್ತು. ಹೀಗೆ ಒಂದು ಟೂರ್ನಿಯಲ್ಲಿ ಸಾಧಾರಣ ಪ್ರದರ್ಶನ ನೀಡಿದ ಕ್ವಿಂಟನ್ ಡಿ ಕಾಕ್ ಅವರನ್ನು ಕೈಬಿಟ್ಟ ಮುಂಬೈ ಇಂಡಿಯನ್ಸ್ ಇದೀಗ ಕೈಸುಟ್ಟುಕೊಂಡಿದೆ. ಮುಂಬೈ ಇಂಡಿಯನ್ಸ್‌ನಿಂದ ಹೊರಬಿದ್ದ ಕ್ವಿಂಟನ್ ಡಿ ಕಾಕ್ ಈ ಬಾರಿಯ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸೇರಿರುವ ಕ್ವಿಂಟನ್ ಡಿ ಕಾಕ್ 6 ಪಂದ್ಯಗಳನ್ನಾಡಿ 212 ರನ್ ಕಲೆಹಾಕಿ ಮಿಂಚುತ್ತಿದ್ದಾರೆ.

2. ಫಾಫ್ ಡು ಪ್ಲೆಸಿಸ್

2. ಫಾಫ್ ಡು ಪ್ಲೆಸಿಸ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಣಕ್ಕಿಳಿದು 16 ಪಂದ್ಯಗಳಲ್ಲಿ 633 ರನ್ ಚಚ್ಚಿದ್ದ ಫಾಫ್ ಡು ಪ್ಲೆಸಿಸ್ ಆರೆಂಜ್ ಕ್ಯಾಪ್ ವಿಜೇತನಾಗುವುದನ್ನು ಕೇವಲ 2 ರನ್‌ಗಳಿಂದ ಕೈತಪ್ಪಿಸಿಕೊಂಡಿದ್ದರು. ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 59 ಎಸೆತಗಳಲ್ಲಿ೦ 86 ರನ್ ಕಲೆಹಾಕಿದ್ದ ಫಾಫ್ ಡು ಪ್ಲೆಸಿಸ್ ತಂಡ ಟ್ರೋಫಿ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ ಡು ಪ್ಲೆಸಿಸ್ ಅವರನ್ನು ಕೈಬಿಟ್ಟಿದ್ದು, ಪ್ರಸ್ತುತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿರುವ ಫಾಫ್ ನಾಯಕನಾಗಿ ಆಯ್ಕೆಯಾಗಿದ್ದು, 6 ಪಂದ್ಯಗಳನ್ನಾಡಿ 154 ರನ್ ಗಳಿಸಿದ್ದಾರೆ.

3. ಅವೇಶ್ ಖಾನ್

3. ಅವೇಶ್ ಖಾನ್

2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 16 ಪಂದ್ಯಗಳನ್ನಾಡಿ 24 ವಿಕೆಟ್ ಪಡೆದು ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದ ಅವೇಶ್ ಖಾನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಉಳಿಸಿಕೊಳ್ಳದೇ ಕೈಬಿಟ್ಟಿತು. ಹೀಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬಿದ್ದ ಅವೇಶ್ ಖಾನ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿದಿದ್ದು, 6 ಪಂದ್ಯಗಳಲ್ಲಿ 11 ವಿಕೆಟ್ ಪಡೆದು ಮಿಂಚುತ್ತಿದ್ದಾರೆ.

4. ಶುಬ್‌ಮನ್ ಗಿಲ್

4. ಶುಬ್‌ಮನ್ ಗಿಲ್

2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ 14 ಪಂದ್ಯಗಳಲ್ಲಿ 440 ರನ್ ಕಲೆಹಾಕಿದ್ದ ಶುಬ್‌ಮನ್ ಗಿಲ್ 2021ರ ಟೂರ್ನಿಯಲ್ಲಿಯೂ ಕೆಕೆಆರ್ ಪರ ಕಣಕ್ಕಿಳಿದು 17 ಪಂದ್ಯಗಳಲ್ಲಿ 478 ರನ್ ಕಲೆಹಾಕಿದ್ದರು. ಹೀಗೆ ತಂಡದ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದ ಶುಬ್‌ಮನ್ ಗಿಲ್ ಅವರನ್ನು ಕೋಲ್ಕತ್ತಾ ಫ್ರಾಂಚೈಸಿ ಹೊರಗಿಟ್ಟ ಪರಿಣಾಮ ಈ ಬಾರಿ ಗುಜರಾತ್ ಟೈಟನ್ಸ್ ಪರ ಕಣಕ್ಕಿಳಿದು ಆಡಿರುವ 6 ಪಂದ್ಯಗಳ ಪೈಕಿ 200 ರನ್ ಕಲೆಹಾಕಿ ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ.

5. ಯುಜುವೇಂದ್ರ ಚಹಲ್

5. ಯುಜುವೇಂದ್ರ ಚಹಲ್

2013ರಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವ ಮೂಲಕ ಇಂಡಿಯನ್ ಪ್ರೀಮಿಯ್ ಲೀಗ್‌ಗೆ ಪದಾರ್ಪಣೆ ಮಾಡಿದ್ದ ಯುಜುವೇಂದ್ರ ಚಹಲ್ ನಂತರದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿ 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯವರೆಗೂ ಆರ್‌ಸಿಬಿ ತಂಡವನ್ನೆ ಪ್ರತಿನಿಧಿಸಿದರು. ಈ ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ ಅಸ್ತ್ರವಾಗಿದ್ದ ಯುಜುವೇಂದ್ರ ಚಾಹಲ್ ಅವರನ್ನು ಫ್ರಾಂಚೈಸಿ ರಿಟೈನ್ ಮಾಡಿಕೊಳ್ಳದೇ ಹೊರಗಿಟ್ಟಿದ್ದು, ಸದ್ಯ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿರುವ ಚಹಾಲ್ 6 ಪಂದ್ಯಗಳಲ್ಲಿ 17 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಟಾಪ್‌ನಲ್ಲಿದ್ದಾರೆ.

Story first published: Tuesday, April 19, 2022, 15:30 [IST]
Other articles published on Apr 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X