ಐಪಿಎಲ್ 2022: ಮೆಗಾ ಹರಾಜಿನಲ್ಲಿ ನೂತನ ನಾಯಕರನ್ನು ಖರೀದಿಸಲಿರುವ 5 ತಂಡಗಳಿವು

ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಈಗಾಗಲೇ ಸಾಕಷ್ಟು ದೊಡ್ಡ ಮಟ್ಟದ ಚರ್ಚೆಗಳಿಗೆ ಕಾರಣವಾಗುತ್ತಿದ್ದು, ದಿನದಿಂದ ದಿನಕ್ಕೆ ಕುತೂಹಲವನ್ನು ಹೆಚ್ಚಿಸುತ್ತಾ ಇದೆ.

ಏನು ನೋಡಿ ಈತನಿಗೆ ಟೀಮ್ ಇಂಡಿಯಾ ನಾಯಕತ್ವ ನೀಡಿದ್ದೀರ ಎಂದು ಕಿಡಿಕಾರಿದ ಭಾರತದ ಹಾಲಿ ಕ್ರಿಕೆಟಿಗ!ಏನು ನೋಡಿ ಈತನಿಗೆ ಟೀಮ್ ಇಂಡಿಯಾ ನಾಯಕತ್ವ ನೀಡಿದ್ದೀರ ಎಂದು ಕಿಡಿಕಾರಿದ ಭಾರತದ ಹಾಲಿ ಕ್ರಿಕೆಟಿಗ!

ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಾಕಷ್ಟು ವಿಶೇಷತೆಗಳಿಂದ ಕೂಡಿರಲಿದ್ದು ಟ್ರೋಫಿಗಾಗಿ ಹತ್ತು ತಂಡಗಳ ನಡುವೆ ಪೈಪೋಟಿ ಏರ್ಪಡಲಿದೆ. ಹೌದು, ಈ ಬಾರಿ ನಡೆಯಲಿರುವ ಐಪಿಎಲ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜಿಯಂಟ್ಸ್ ಮತ್ತು ಅಹ್ಮದಾಬಾದ್ ನೂತನ ತಂಡಗಳಾಗಿ ಸೇರ್ಪಡೆಯಾಗುತ್ತಿದ್ದು ಟ್ರೋಫಿಗಾಗಿ ನಡೆಯುವ ಪೈಪೋಟಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಇರಲಿದೆ. ಹೀಗೆ ನೂತನ ತಂಡಗಳ ಸೇರ್ಪಡೆಯಾಗಿರುವ ಕಾರಣ ಟೂರ್ನಿ ಆರಂಭಕ್ಕೂ ಮುನ್ನ ಕಡ್ಡಾಯವಾಗಿ ಮೆಗಾ ಹರಾಜು ಪ್ರಕ್ರಿಯೆಯನ್ನು ನಡೆಸಲೇಬೇಕಾಗಿದ್ದು, ಫೆಬ್ರವರಿ 12 ಮತ್ತು 13ರಂದು ಮೆಗಾ ಹರಾಜು ಪ್ರಕ್ರಿಯೆಗಳು ನಡೆಯಲಿವೆ.

ಧೋನಿಯೇ ಐಪಿಎಲ್‌ನ ಶ್ರೇಷ್ಠ ನಾಯಕ, ನಾನು ಸಿಎಸ್‌ಕೆ ಪರ ಆಡಬೇಕು ಎಂದ ಆರ್‌ಸಿಬಿಯ ಸ್ಟಾರ್ ಆಟಗಾರ!ಧೋನಿಯೇ ಐಪಿಎಲ್‌ನ ಶ್ರೇಷ್ಠ ನಾಯಕ, ನಾನು ಸಿಎಸ್‌ಕೆ ಪರ ಆಡಬೇಕು ಎಂದ ಆರ್‌ಸಿಬಿಯ ಸ್ಟಾರ್ ಆಟಗಾರ!

ಈ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಕಳೆದ ವರ್ಷ ನಡೆದ ಆಟಗಾರರ ರಿಟೆನ್ಷನ್ ಪ್ರಕ್ರಿಯೆಯಲ್ಲಿ ತಮ್ಮ ಫ್ರಾಂಚೈಸಿಗಳಿಂದ ರಿಟೈನ್ ಆಗದೆ ಹೊರಬಿದ್ದಿರುವ ಹಲವಾರು ಆಟಗಾರರು ಸೇರಿದಂತೆ ಸುಮಾರು 1200ಕ್ಕೂ ಹೆಚ್ಚು ಆಟಗಾರರು ಭಾಗವಹಿಸಲಿದ್ದು, ಈ ಹರಾಜು ಪ್ರಕ್ರಿಯೆಯಲ್ಲಿ ಅಸ್ತಿತ್ವದಲ್ಲಿರುವ ಕೆಲ ಫ್ರಾಂಚೈಸಿಗಳು ನಾಯಕತ್ವ ನಿರ್ವಹಿಸಬಲ್ಲ ಸಾಮರ್ಥ್ಯವಿರುವ ಆಟಗಾರರನ್ನು ಖರೀದಿಸುವ ಯೋಜನೆಯಲ್ಲಿವೆ. ಹೌದು, ಈ ಕೆಳಕಂಡ 5 ತಂಡಗಳು ಮೆಗಾ ಹರಾಜು ಪ್ರಕ್ರಿಯೆಯಲ್ಲಿ ನಾಯಕರನ್ನು ಖರೀದಿಸಲಿವೆ..

1. ರಾಯಲ್ ಚಾಲೆಂಜರ್ಸ್ ಬೆಂಗಳೂರು

1. ರಾಯಲ್ ಚಾಲೆಂಜರ್ಸ್ ಬೆಂಗಳೂರು

ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಯುಎಇಯಲ್ಲಿ ಮುಂದುವರಿಯುವುದಕ್ಕೂ ಮುನ್ನ ನಾಯಕ ವಿರಾಟ್ ಕೊಹ್ಲಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿ ಮಾತ್ರ ಕಣಕ್ಕಿಳಿಯಲಿದ್ದು ಈ ಟೂರ್ನಿ ಮುಗಿದ ನಂತರ ನಾಯಕತ್ವವನ್ನು ತ್ಯಜಿಸಲಿದ್ದೇನೆ ಎಂದು ಹೇಳಿಕೆಯನ್ನು ನೀಡಿದ್ದರು. ಹೀಗಾಗಿ ವಿರಾಟ್ ಕೊಹ್ಲಿ ಬದಲಿಗೆ ನೂತನ ನಾಯಕನ ಹುಡುಕಾಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದ್ದು ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ನಾಯಕತ್ವವನ್ನು ನಿಭಾಯಿಸಬಲ್ಲ ಆಟಗಾರನನ್ನು ಖರೀದಿಸಲಿದೆ.

2. ಕೋಲ್ಕತ್ತಾ ನೈಟ್ ರೈಡರ್ಸ್

2. ಕೋಲ್ಕತ್ತಾ ನೈಟ್ ರೈಡರ್ಸ್

2020ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕನಾಗಿದ್ದ ಇಯಾನ್ ಮಾರ್ಗನ್ ತಮ್ಮ ತಂಡವನ್ನು ಪ್ಲೇಆಫ್ ಸುತ್ತಿಗೆ ಕೊಂಡೊಯ್ಯುವಲ್ಲಿ ನಾಯಕನಾಗಿ ವಿಫಲರಾಗಿದ್ದರು. ಹಾಗೂ ಕಳೆದ ವರ್ಷ ಕೋಲ್ಕತಾ ನೈಟ್ ರೈಡರ್ಸ್ ತಂಡ ಫೈನಲ್ ಪ್ರವೇಶಿಸಿತಾದರೂ ಸಹ ಇದರಲ್ಲಿ ಇಯಾನ್ ಮಾರ್ಗನ್ ಬ್ಯಾಟಿಂಗ್ ಕೊಡುಗೆ ಏನೂ ಇರಲಿಲ್ಲ ಎಂಬುದು ತಿಳಿದಿರುವ ವಿಷಯವೇ. ಹೀಗಾಗಿಯೇ ಇಯಾನ್ ಮಾರ್ಗನ್ ಈ ಬಾರಿಯ ರಿಟೆನ್ಷನ್ ಪ್ರಕ್ರಿಯೆಯಲ್ಲಿ ರಿಟೈನ್ ಆಗದೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಹೊರಬಿದ್ದಿದ್ದು, ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೂಡ ನಾಯಕತ್ವವನ್ನು ನಿರ್ವಹಿಸಬಲ್ಲ ಸಾಮರ್ಥ್ಯವಿರುವ ಆಟಗಾರನನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲಿದೆ.

3. ಪಂಜಾಬ್ ಕಿಂಗ್ಸ್

3. ಪಂಜಾಬ್ ಕಿಂಗ್ಸ್

ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದ ಕೆಎಲ್ ರಾಹುಲ್ ಈ ಬಾರಿ ಬೇರೆ ತಂಡಕ್ಕೆ ತೆರಳಿರುವುದರಿಂದ ಪಂಜಾಬ್ ಕಿಂಗ್ಸ್ ಕೂಡ ಈ ಬಾರಿಯ ಮೆಗಾ ಹರಾಜಿನಲ್ಲಿ ನಾಯಕನ ಹುಡುಕಾಟದಲ್ಲಿದೆ. ಈ ಬಾರಿಯ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಅತಿ ಕಡಿಮೆ ಆಟಗಾರರನ್ನು ರಿಟೈನ್ ಮಾಡಿಕೊಂಡ ತಂಡ ಎನಿಸಿಕೊಂಡಿರುವ ಪಂಜಾಬ್ ಕಿಂಗ್ಸ್ ಮಯಾಂಕ್ ಅಗರ್ವಾಲ್ ರೀತಿಯ ನಾಯಕತ್ವ ನಿಭಾಯಿಸಬಲ್ಲ ಆಟಗಾರರನ್ನು ಹೊಂದಿದ್ದರೂ ಕೂಡ ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ನಾಯಕತ್ವದ ಜವಾಬ್ದಾರಿಯನ್ನು ಹೊರಬಲ್ಲ ಮತ್ತೊಬ್ಬ ಆಟಗಾರನನ್ನು ಖರೀದಿಸಲಿದೆ. ತನ್ನ ಬಳಿ ಹೆಚ್ಚು ಹಣವನ್ನು ಹೊಂದಿರುವ ಪಂಜಾಬ್ ಕಿಂಗ್ಸ್ ದೊಡ್ಡ ಆಟಗಾರನನ್ನು ಖರೀದಿಸುವುದು ಖಚಿತ ಎನ್ನಬಹುದು.

4. ಚೆನ್ನೈ ಸೂಪರ್ ಕಿಂಗ್ಸ್

4. ಚೆನ್ನೈ ಸೂಪರ್ ಕಿಂಗ್ಸ್

ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಎಂಎಸ್ ಧೋನಿ ರೀತಿಯ ಅತ್ಯದ್ಭುತ ನಾಯಕನಿದ್ದು, ಎಂಎಸ್ ಧೋನಿ ಇನ್ನೆರಡು ಆವೃತ್ತಿಗಳ ನಂತರ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ನಿವೃತ್ತಿ ಹೊಂದುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಈ ಬಾರಿಯ ಮೆಗಾ ಹರಾಜಿನಲ್ಲಿ ನಾಯಕತ್ವ ನಿಭಾಯಿಸಬಲ್ಲಂತಹ ಆಟಗಾರನನ್ನು ಖರೀದಿಸಲಿದ್ದು ಎಂಎಸ್ ಧೋನಿ ನಿವೃತ್ತಿಯ ನಂತರ ಆ ಆಟಗಾರನಿಗೆ ನಾಯಕತ್ವದ ಜವಾಬ್ದಾರಿಯನ್ನು ನೀಡುವ ಯೋಜನೆಯಲ್ಲಿದೆ.

5. ಸನ್ ರೈಸರ್ಸ್ ಹೈದರಾಬಾದ್

5. ಸನ್ ರೈಸರ್ಸ್ ಹೈದರಾಬಾದ್

ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಅತಿ ಹೆಚ್ಚಾಗಿ ವಿವಾದಕ್ಕೀಡಾದ ತಂಡ ಎಂದರೆ ಅದು ಸನ್ ರೈಸರ್ಸ್ ಹೈದರಾಬಾದ್ ತಂಡ. ಹೌದು ಡೇವಿಡ್ ವಾರ್ನರ್ ಅವರನ್ನು ಟೂರ್ನಿ ಮಧ್ಯದಲ್ಲಿಯೇ ನಾಯಕತ್ವದಿಂದ ಕೆಳಗಿಳಿಸಿದ ಹೈದರಾಬಾದ್ ಫ್ರಾಂಚೈಸಿ ನಂತರ ಕೇನ್ ವಿಲಿಯಮ್ಸನ್ ಹೆಗಲಿಗೆ ನಾಯಕತ್ವದ ಜವಾಬ್ದಾರಿಯನ್ನು ಹಾಕಿತು. ಹೀಗೆ ತಂಡದಲ್ಲಿ ಕೇನ್ ವಿಲಿಯಮ್ಸನ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ರಿಟೈನ್ ಮಾಡಿಕೊಂಡಿದ್ದರೂ ಕೂಡ ಮುಂಬರುವ ಆವೃತ್ತಿಗಳ ದೃಷ್ಟಿಯಿಂದ ನಾಯಕತ್ವವನ್ನು ನಿಭಾಯಿಸಬಲ್ಲಂತಹ ಸಾಮರ್ಥ್ಯವಿರುವ ಆಟಗಾರನನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಖರೀದಿಸುವುದು ಖಚಿತ.

For Quick Alerts
ALLOW NOTIFICATIONS
For Daily Alerts
Story first published: Friday, January 28, 2022, 14:05 [IST]
Other articles published on Jan 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X