ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಭಾರತೀಯ ವೇಗಿಯ ಪ್ರದರ್ಶನದ ಬಗ್ಗೆ ಕಳವಳ ವ್ಯಕ್ತಪಡಿಸಿದ ಆಕಾಶ್ ಚೋಪ್ರ

IPL 2022: Aakash Chopra concerned onT Natarajan said he lost rhythm

15ನೇ ಆವೃತ್ತಿಯಲ್ಲಿ ಪ್ಲೇಆಫ್‌ಗೇರುವ ನಾಲ್ಕು ತಂಡಗಳು ಯಾವುದು ಎಂಬುದು ಈಗಾಗಲೇ ಅಧಿಕೃವಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲು ಅನುಭವಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್‌ಗೆ ಪ್ರವೇಶ ಪಡೆಯುವ ಮೂಲಕ ಪ್ಲೇಆಫ್‌ಗೆ ಎಂಟ್ರಿ ಕೊಟ್ಟ ನಾಲ್ಕನೆಯ ತಂಡ ಎನಿಸಿಕೊಂಡಿದೆ. ಹೀಗಾಗಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಲೀಗ್ ಹಂತದ ಅಂತಿಮ ಪಂದ್ಯ ಯಾವುದೇ ಮಹತ್ವವಿಲ್ಲ ಎಂಬಂತಾಗಿದೆ.

ಈ ಲೀಗ್ ಹಂತದ ಅಂತಿಮ ಪಂದ್ಯಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗಿಯ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಕಳವಳ ವ್ಯಕ್ತಪಡಿಸಿದ್ದಾರೆ. ಗಾಯದಿಂದ ಚೇತರಿಸಿಕೊಂಡು ಬಳಿಕ ಐಪಿಎಲ್ 2022ಕ್ಕೆ ಮರಳಿದ ಬಳಿ ಈ ವೇಗಿ ಈ ಹಿಂದಿನಷ್ಟು ಪರಿಣಾಮಕಾರಿಯಾಗಿಲ್ಲ ಎಂದಿದ್ದಾರೆ ಆಕಾಶ್ ಚೋಪ್ರ.

ಮುಂಬೈ ವಿರುದ್ಧ ಸೋಲು; ಪಂತ್ ನಾಯಕತ್ವದ ಬಗ್ಗೆ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದೇನು?ಮುಂಬೈ ವಿರುದ್ಧ ಸೋಲು; ಪಂತ್ ನಾಯಕತ್ವದ ಬಗ್ಗೆ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದೇನು?

ಹಾಗಾದರೆ ಆಕಾಶ್ ಚೋಪ್ರ ಈ ರೀತಿಯ ಅಭಿಪ್ರಾಯವನ್ನು ವ್ಯಕ್ರಪಡಿಸಿದ್ದು ಯಾರ ಬಗ್ಗೆ? ಮುಂದೆ ಓದಿ..

ಟಿ ನಟರಾಜನ್ ಬಗ್ಗೆ ಚೋಪ್ರ ಕಳವಳ

ಟಿ ನಟರಾಜನ್ ಬಗ್ಗೆ ಚೋಪ್ರ ಕಳವಳ

ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗದ ಬೌಲರ್ ಟಿ ನಟರಾಜನ್ ಬಗ್ಗೆ ಈ ರೀತಿಯ ಕಳವಳವನ್ನು ವ್ಯಕ್ತಪಡಿಸಿದ್ದರೆ. ಇತ್ತೀಚಿನ ಪಂದ್ಯಗಳಲ್ಲಿ ನಟರಾಜನ್ ದುಬಾರಿಯಾಗುತ್ತಿದ್ದು ತಂಡಕ್ಕೆ ಕೂಡ ಹಿನ್ನಡೆಯಾಗಿದೆ. ಗಾಯದಿಂದಾಗಿ ಎರಡು ಪಂದ್ಯವನ್ನು ಕಳೆದುಕೊಂಡಿದ್ದ ನಟರಾಜನ್ ಬಳಿಕ ತಂಡಕ್ಕೆ ಮರಳಿದ್ದರು. ಆದರೆ ಅದಾದ ಬಳಿಕ ನಡರಾಜನ್ ದುಬಾರಿಯಾಗುತ್ತಿದ್ದಾರೆ. ಅದರಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧ ಆಡಿದ್ದ ಪಂದ್ಯದಲ್ಲಿ ನಟರಾಜನ್ ನಾಲ್ಕು ಓವರ್‌ಗಳ ತಮ್ಮ ಕೋಟಾದಲ್ಲಿ ಬರೊಬ್ಬರಿ 60 ರನ್‌ಗಳನ್ನು ಬಿಟ್ಟುಕೊಡುವ ಮೂಲಕ ದೊಡ್ಡ ಆಘಾತ ನೀಡಿದ್ದರು.

ಲಯ ಕಳೆದುಕೊಂಡಿದ್ದಾರೆ ನಟರಾಜನ್

ಲಯ ಕಳೆದುಕೊಂಡಿದ್ದಾರೆ ನಟರಾಜನ್

"ಟಿ ನಟರಾಜನ್ ಗಾಯದಿಂದ ಮರಳಿದ ಬಳಿಕ ತಮ್ಮ ಲಯವನ್ನು ಕಳೆದುಕೊಂಡಿದ್ದಾರೆ. ಅದು ತಂಡಕ್ಕೆ ದೊಡ್ಡ ಸಮಸ್ಯೆಯನ್ನುಂಡು ಮಾಡುತ್ತಿದೆ. ಅವರು ಕಳೆದ ಪಂದ್ಯದಲ್ಲಿ ಯಾರ್ಕರ್‌ಗಳನ್ನು ಸೂಕ್ತ ಸ್ಥಳಗಳಿಗೆ ಎಸೆಯಲು ವಿಫಲವಾಗುತ್ತಿದ್ದರು. ಅವರು ಸಾಕಷ್ಟು ಪ್ರಯತ್ನ ಪಡುತ್ತಿದ್ದರೂ ಅದು ಅವರಿಂದ ಸಾಧ್ಯವಾಗುತ್ತಿರಲಿಲ್ಲ" ಎಂದು ಟಿ ನಟರಾಜನ್ ಬಗ್ಗೆ ಆಕಾಶ್ ಚೋಪ್ರ ಪ್ರತಿಕ್ರಿಯೆ ನೀಡಿದ್ದಾರೆ.

ಭುವಿ ಉಮ್ರಾನ್ ಬಗ್ಗೆಯೂ ಚೋಪ್ರ ಮಾತು

ಭುವಿ ಉಮ್ರಾನ್ ಬಗ್ಗೆಯೂ ಚೋಪ್ರ ಮಾತು

ಮುಂದುವರಿದ ಆಕಾಶ್ ಚೋಪ್ರ ಸನ್‌ರೈಸರ್ಸ್ ಹೈದರಾಬಾದ್ ತಂಡದ ಅನುಭವಿ ಆಟಗಾರ ಭುವನೇಶ್ವರ್ ಕುಮಾರ್ ಹಾಗೂ ವೇಗದ ಅಸ್ತ್ರ ಉಮ್ರಾನ್ ಮಲಿಕ್ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. "ಭುವಿ ಟೂರ್ನಿಯುದ್ದಕ್ಕೂ ಎಕನಾಮಿಕಲ್ ಬೌಲರ್ ಆಗಿ ಯಶಸ್ವಿಯಾಗಿದ್ದಾರೆ. ಅವರಿಂದ ಮುಂದೆಯೂ ಅಂಥಾದ್ದೇ ಪ್ರದರ್ಶನವನ್ನು ನಿರೀಕ್ಷಿಸಲಾಗುತ್ತಿದೆ. ಇನ್ನು ಉಮ್ರಾನ್ ಮಲಿಕ್ ವೇಗದ ಅಸ್ತ್ರವಾಗಿದ್ದು ಸ್ಥಿರ ಪ್ರದರ್ಶನ ನೀಡಲು ವಿಫಲವಾಗುತ್ತಿದ್ದಾರೆ, ಅವರು ಒಂದೋ ನಾಲ್ಕು ಓವರ್‌ಗಳಲ್ಲಿ 40ಕ್ಕೂ ಅಧಿಕ ರನ್‌ ನೀಡುತ್ತಿದ್ದಾರೆ ಇಲ್ಲವೇ 3 ವಿಕೆಟ್ ಪಡೆಯುತ್ತಾರೆ ಎಂದಿದ್ದಾರೆ ಆಕಾಶ್ ಚೋಪ್ರ.

Rohit Sharma ಹೀಗೆ ಯಾವ IPLನಲ್ಲೂ ಆಡಿಲ್ಲ | #Cricket | Oneindia Kannada
ಪಂಜಾಬ್ ವಿರುದ್ಧ SRH ಆಡುವ ಬಳಗ

ಪಂಜಾಬ್ ವಿರುದ್ಧ SRH ಆಡುವ ಬಳಗ

ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಪ್ರಿಯಾಂ ಗಾರ್ಗ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೊಮಾರಿಯೋ ಶೆಫರ್ಡ್, ವಾಷಿಂಗ್ಟನ್ ಸುಂದರ್, ಜಗದೀಶ ಸುಚಿತ್, ಭುವನೇಶ್ವರ್ ಕುಮಾರ್ (ನಾಯಕ), ಫಜಲ್ಹಕ್ ಫಾರೂಕಿ, ಉಮ್ರಾನ್ ಮಲಿಕ್
ಬೆಂಚ್: ಟಿ ನಟರಾಜನ್, ಗ್ಲೆನ್ ಫಿಲಿಪ್ಸ್, ಸೀನ್ ಅಬಾಟ್, ರವಿಕುಮಾರ್ ಸಮರ್ಥ್, ಶ್ರೇಯಸ್ ಗೋಪಾಲ್, ಶಶಾಂಕ್ ಸಿಂಗ್, ವಿಷ್ಣು ವಿನೋದ್, ಕಾರ್ತಿಕ್ ತ್ಯಾಗಿ, ಮಾರ್ಕೊ ಜಾನ್ಸೆನ್, ಅಬ್ದುಲ್ ಸಮದ್, ಸುಶಾಂತ್ ಮಿಶ್ರಾ

Story first published: Sunday, May 22, 2022, 20:22 [IST]
Other articles published on May 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X