ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ಒಬ್ಬ ಫೆರಾರಿಯಲ್ಲಿ ಇನ್ನೊಬ್ಬ ಸೈಕಲ್‌ನಲ್ಲಿ ಹೋದಂಗಿತ್ತು": ರಾಹುಲ್ ಬ್ಯಾಟಿಂಗ್ ಬಗ್ಗೆ ಮಾಜಿ ಕ್ರಿಕೆಟಿಗ ಹೀಗಂದಿದ್ಯಾಕೆ?

IPL 2022: Aakash Chopra statement on De Kock and Rahul partnership against Kolkata Knight Riders

ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಸೆಣೆಸಾಟ ಈ ಬಾರಿಯ ಐಪಿಎಲ್‌ನ ಅತ್ಯಂತ ರೋಚಕ ಪಂದ್ಯ ಎನಿಸಿಕೊಂಡಿದೆ. ಎರಡು ತಂಡಗಳು ಕೂಡ ಈ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನಿಡಿದ್ದು ಅಂತಿಮ ಎಸೆತದವರೆಗೂ ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಎಲ್‌ಎಸ್‌ಜಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಎಲ್‌ಎಸ್‌ಜಿ ನಾಯಕ ಕೆಎಲ್ ರಾಹುಲ್ ಹಾಗೂ ಕ್ವಿಂಟನ್ ಡಿಕಾಕ್ ದಾಖಲೆಯ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ.

ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಈ ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದರು. 70 ಎಸೆತಗಳನ್ನು ಎದುರಿಸಿದ ಡಿಕಾಕ್ 140 ರನ್‌ಗಳಿಸಿ ಅಜೇಯವಾಗುಳಿದರು. ಇನ್ನೊಂದು ತುದಿಯಲ್ಲಿ ಕ್ರೀಸ್‌ನಲ್ಲಿದ್ದ ಕೆಎಲ್ ರಾಹುಲ್ 51 ಎಸೆತಗಳಲ್ಲಿ 68 ರನ್‌ಗಳಿಸಿ ಅಜೇಯವಾಗಿಳಿದಿದ್ದರು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 210 ರನ್‌ಗಳಿಸುವ ಮೂಲಕ ಬೃಹತ್ ಗುರಿಯನ್ನು ಕೆಕೆಆರ್ ಮುಂದಿಟ್ಟಿತ್ತು.

RCB vs GT: ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ; ಈ ಆಟಗಾರನದ್ದೇ ದೊಡ್ಡ ಚಿಂತೆ!RCB vs GT: ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ; ಈ ಆಟಗಾರನದ್ದೇ ದೊಡ್ಡ ಚಿಂತೆ!

ಆದರೆ ಈ ಪ್ರದರ್ಶನದ ಬಗ್ಗೆ ಮಾತನಾಡಿದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಕ್ವಿಂಟನ್ ಡಿಕಾಕ್ ಬ್ಯಾಟಿಂಗ್ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಆದರೆ ಕೆಎಲ್ ರಾಹುಲ್ ಆಡಿದ ರೀತಿಯ ಬಗ್ಗೆ ಮಾತ್ರ ಭಿನ್ನರಾಗ ಹಾಡಿದ್ದಾರೆ. ಹಾಗಾದರೆ ಆಕಾಶ್ ಚೋಪ್ರ ಹೇಳಿದ್ದೇನು? ಮುಂದೆ ಓದಿ..

ಒಬ್ಬ ಫೆರಾರಿಯಲ್ಲಿ ಹೋಗುತ್ತಿದ್ದರೆ ಮತ್ತೋರ್ವ ಸೈಕಲ್‌ನಲ್ಲಿ!

ಒಬ್ಬ ಫೆರಾರಿಯಲ್ಲಿ ಹೋಗುತ್ತಿದ್ದರೆ ಮತ್ತೋರ್ವ ಸೈಕಲ್‌ನಲ್ಲಿ!

ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕ ಜೊತೆಯಾಟವನ್ನು ಪ್ರಶಂಸಿಸುತ್ತಲೇ ಕೆಎಲ್ ರಾಹುಲ್ ಬ್ಯಾಟಿಂಗ್ ಬಗ್ಗೆ ಆಕಾಶ್ ಚೋಪ್ರ ಕುಟುಕಿದ್ದಾರೆ. ಈ ಆರಂಭಿಕ ಆಟಗಾರರಿಬ್ಬರ ಬ್ಯಾಟಿಂಗ್ ನೋಡಿದರೆ ಓರ್ವ ಫೆರಾರಿಕಾರ್‌ನಲ್ಲಿ ಹೋಗುತ್ತಿದ್ದರೆ ಮತ್ತೋರ್ವ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದಂರೆ ಭಾಸವಾಯಿತು ಎಂದಿದ್ದಾರೆ ಆಕಾಶ್ ಚೋಪ್ರ. ಹತ್ತು ವಿಕೆಟ್‌ಗಳು ಇದ್ದಂತಾ ಸಂದರ್ಭದಲ್ಲಿ ಕೆಎಲ್ ರಾಹುಲ್ ಮತ್ತಷ್ಟು ವೇಗವಾಗಿ ಬ್ಯಾಟಿಂಗ್ ನಡೆಸಬಹುದಾಗಿತ್ತು ಎಂದಿದ್ದಾರೆ ಆಕಾಶ್ ಚೋಪ್ರ.

ಕ್ವಿಂಟನ್ ಡಿಕಾಕ್ ಬಗ್ಗೆ ಪ್ರಶಂಸೆ

ಕ್ವಿಂಟನ್ ಡಿಕಾಕ್ ಬಗ್ಗೆ ಪ್ರಶಂಸೆ

ಇನ್ನು ಈ ಸಂದರ್ಭದಲ್ಲಿ ಆಕಾಶ್ ಚೋಪ್ರ ಕ್ವಿಂಟನ್ ಡಿಕಾಕ್ ಬ್ಯಾಟಿಂಗ್ ಬಗ್ಗೆ ಮುಕ್ತಕಂಠಿದಿಂದ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಇದು ಐಪಿಎಲ್ ಇತಿಹಾಸದ ಮೂರನೇ ಅತಿ ಹೆಚ್ಚಿ ವೈಯಕ್ತಿಕ ಸ್ಕೋರ್ ಆಗಿದೆ. ಗೈಲ್, ಮೆಕ್ಕಲಮ್ ನಂತರ ಡಿಕಾಕ್ ಅವರ 140 ರನ್‌ ಮೂರನೇ ಸ್ಥಾನದಲ್ಲಿದೆ. ಯಾರನ್ನೂ ಕೂಡ ಬಿಡದೆ ಈ ಪಂದ್ಯದಲ್ಲಿ ಡಿಕಾಕ್ ದಂಡಿಸಿದ್ದಾರೆ. ಎಲ್ಲರ ಎಸೆತಗಳಲ್ಲಿಯೂ ಬೌಂಡರಿ ಸಿಕ್ಸರ್‌ಗಳನ್ನು ಡಿಕಾಕ್ ಗಳಿಸಿದ್ದಾರೆ" ಎಂದಿದ್ದಾರೆ ಆಕಾಶ್ ಚೋಪ್ರ.

230 ರನ್‌ಗಳನ್ನು ಗಳಿಸುವ ಸಾಧ್ಯತೆಯಿತ್ತು

230 ರನ್‌ಗಳನ್ನು ಗಳಿಸುವ ಸಾಧ್ಯತೆಯಿತ್ತು

ಇನ್ನು ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡಿದ ರೀತಿಯ ಬಗ್ಗೆ ಮಾತನಾಡಿದ ಆಕಾಶ್ ಚೋಪ್ರ ಎಲ್‌ಎಸ್‌ಜಿ ತಂಡದ ನಾಯಕನಿಂದ ಬಂದ ಪ್ರಯತ್ನ ಸಾಕಾಗಲಿಲ್ಲ ಎಂದಿದ್ದಾರೆ. ಅವರು ಒಂದು ವಿಕೆಟ್‌ ಕೂಡ ಕಳೆದುಕೊಳ್ಳದಿದ್ದಾಗ ಅವರು ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಗಳಿಸಬೇಕಾಗಿತ್ತು ಎಂದಿದ್ದಾರೆ. "ಕೆಎಲ್ ರಾಹುಲ್ ಮತ್ತೊಂದು ತುದಿಯಲ್ಲಿದ್ದರು. 51 ಎಸೆತಗಳನ್ನು ಎದುರಿಸಿ ಅವರು 68 ರನ್‌ಗಳನ್ನು ಗಳಿಸಿದ್ದರು. ಅವರು ಗಳಿಸಿದ ಈ ಮೊತ್ತ ಸಾಕಾಗುತ್ತದೆಯೇ ಎಂದು ಕೇಳಿದರೆ ನನ್ನ ಪ್ರಕಾರ ಅದು ಸಾಕಾಗಲಿಲ್ಲ. ಯಾಕೆಂದರೆ ಅವರು ಯಾವಿದೇ ವಿಕೆಟ್ ಕಳೆದುಕೊಂಡಿರಲಿಲ್ಲ. ಹಾಗಿದ್ದಾಗಲೂ ಅವರಿಂದ 225 ಅಥವಾ 240 ರನ್‌ಗಳನ್ನು ಯಾಕೆ ಗಳಿಸಲು ಸಾಧ್ಯವಾಗಲಿಲ್ಲ. ನೀವು 210 ರನ್‌ಗಳಿಸಿದ್ದೀರಿ ನಿಜ. ಆದರೆ 230 ರನ್‌ಗಳನ್ನು ಗಳಿಸುವ ಸಾಧ್ಯತೆಯಿತ್ತು" ಎಂದಿದ್ದಾರೆ ಚೋಪ್ರ.

ಎಂಥಾ ಕ್ಯಾಚ್!!!ಮ್ಯಾಕ್ಸ್ವೆಲ್ ಹಿಡಿದ ಕ್ಯಾಚ್ ನೋಡಿ ಅಚ್ಚರಿಗೊಂಡ ಕ್ರಿಕೆಟ್ ಲೋಕ | OneIndia Kannada
ಪ್ಲೇಆಫ್‌ಗೇರಿದ ಲಕ್ನೋ ಸೂಪರ್ ಜೈಂಟ್ಸ್

ಪ್ಲೇಆಫ್‌ಗೇರಿದ ಲಕ್ನೋ ಸೂಪರ್ ಜೈಂಟ್ಸ್

ಇನ್ನು ಈ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಈ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ ಪ್ಲೇಆಫ್‌ಗೆ ಟಿಕೆಟ್ ಪಡೆದುಕೊಂಡ ಎರಡನೇ ತಂಡವಾಗಿದೆ ಕೆಎಲ್ ರಾಹುಲ್ ನೇತೃತ್ವದ ಎಲ್‌ಎಸ್‌ಜಿ. ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿಯೇ ಅದ್ಭುತ ಪ್ರದರ್ಶನ ನೀಡಿರುವ ಲಕ್ನೋ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

Story first published: Friday, May 20, 2022, 9:39 [IST]
Other articles published on May 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X