ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಸ್‌ಗೇಲ್‌ ಮತ್ತು ಎಬಿಡಿಗೆ RCBಯ ಹಾಲ್‌ ಆಫ್ ಫೇಮ್ ಗೌರವ: ಭಾವುಕನಾದ ಎಬಿಡಿ

Gayle and abd

ಲೆಜೆಂಡರಿ ಬ್ಯಾಟ್ಸ್‌ಮನ್‌ಗಳಾದ ಕ್ರಿಸ್‌ಗೇಲ್ ಮತ್ತು ಎಬಿ ಡಿವಿಲಿಯರ್ಸ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಫ್ರಾಂಚೈಸಿ ಹಾಲ್ ಆಫ್ ಫೇಮ್ ಗೌರವವನ್ನ ನೀಡಿದೆ. ಐಪಿಎಲ್‌ನಲ್ಲಿ ಈ ಗೌರವ ನೀಡಿದ ಮೊದಲ ಫ್ರಾಂಚೈಸಿ ಆರ್‌ಸಿಬಿ ಆಗಿದೆ.

ಐಪಿಎಲ್‌ ಇತಿಹಾಸದಲ್ಲಿ ಗೇಲ್ ಮತ್ತು ಎಬಿಡಿ ಅದ್ಭುತ ಇನ್ನಿಂಗ್ಸ್‌ಗಳನ್ನ ಆಟವಾಡಿದ್ದು , ಆಲ್‌ ಟೈಂ ಬೆಸ್ಟ್‌ ಆಟಗಾರರಾಗಿದ್ದಾರೆ. ಐಪಿಎಲ್‌ ಇಷ್ಟರ ಮಟ್ಟಿಗೆ ಬೆಳೆದು ನಿಲ್ಲಲು ಇವರ ಕೊಡುಗೆ ಅಪಾರ. ಆರ್‌ಸಿಬಿ ಪರ ಈ ಆಟಗಾರರಿಬ್ಬರ ಪರಿಣಾಮ ನಿಜಕ್ಕೂ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅಭಿಮಾನಿಗಳ ಮನಗೆದ್ದು ತನ್ನೆಡೆ ಸೆಳೆದ ಎಬಿಡಿ ಮತ್ತು ಗೇಲ್‌ಗೆ ಆರ್‌ಸಿಬಿ ಹಾಲ್ ಆಫ್ ಫೇಮ್ ಗೌರವ ನೀಡಿದೆ.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐಸಿಸಿ ಹಾಲ್ ಆಫ್ ಫೇಮ್ ಗೌರವವನ್ನು ನೀಡುವುದನ್ನು ನೀವು ಕಂಡಿದ್ದೀರಿ. ಆದ್ರೆ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಫ್ರಾಂಚೈಸಿಯೊಂದು ತನ್ನ ಬೆಸ್ಟ್ ಆಟಗಾರರಿಗೆ ಈ ಗೌರವ ನೀಡಿದೆ.

2011 ರಿಂದ 2017ರವರೆಗೆ ಆರ್‌ಸಿಬಿ ಪರ ಆಡಿದ್ದ ಗೇಲ್

2011 ರಿಂದ 2017ರವರೆಗೆ ಆರ್‌ಸಿಬಿ ಪರ ಆಡಿದ್ದ ಗೇಲ್

ಕ್ರಿಸ್ ಗೇಲ್ 2011 ರಲ್ಲಿ ಆರ್‌ಸಿಬಿ ತಂಡವನ್ನ ಸೇರಿಕೊಂಡರು. ಇದಕ್ಕೂ ಮೊದಲು ಮೂರು ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್ ಪರ ಆಡಿದ್ದರು. 2011 ರಿಂದ 2017 ರವರೆಗೆ ಆರ್‌ಸಿಬಿ ಪರ ಆಡಿರುವ ಗೇಲ್ ತಂಡದ ಪ್ರಮುಖ ಬ್ಯಾಟರ್ ಆಗಿ ಗುರುತಿಸಿಕೊಂಡರು.

ಗೇಲ್ RCB ಯಲ್ಲಿದ್ದಾಗ ಲೀಗ್‌ನಲ್ಲಿ ಪ್ರಾಬಲ್ಯ ಸಾಧಿಸಿದರು ಮತ್ತು 91 ಪಂದ್ಯಗಳಲ್ಲಿ 43.29 ರ ಸರಾಸರಿಯಲ್ಲಿ 3420 ರನ್ ಮತ್ತು 21 ಅರ್ಧಶತಕಗಳು ಮತ್ತು 5 ಶತಕಗಳು ಸೇರಿದಂತೆ 154.40 ರ ಸ್ಟ್ರೈಕ್ ರೇಟ್‌ಗಳನ್ನು ರನ್‌ಗಳನ್ನ ಕಲೆಹಾಕಿದರು. ಅಲ್ಲದೆ, ಅವರು ಆರ್‌ಸಿಬಿ ಪರ ಆಡುವಾಗ ಅಜೇಯ 175 ರನ್‌ಗಳನ್ನು ಹೊಡೆದಿದ್ದು, ಇದುವರೆಗೂ ಟೂರ್ನಿಯ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.

ಆರ್‌ಸಿಬಿಯ ಹಾರ್ಟ್‌ಬೀಟ್ ಆಗಿದ್ದ ಎಬಿಡಿ

ಆರ್‌ಸಿಬಿಯ ಹಾರ್ಟ್‌ಬೀಟ್ ಆಗಿದ್ದ ಎಬಿಡಿ

ಇನ್ನು ಆರ್‌ಸಿಬಿ ಪ್ರಮುಖ ಪಿಲ್ಲರ್ ಆಗಿದ್ದ ಎಬಿ ಡಿವಿಲಿಯರ್ಸ್ ಆರ್‌ಸಿಬಿ ಫ್ರಾಂಚೈಸಿಗೆ ಅಪಾರ ಕೊಡುಗೆ ನೀಡಿದ್ದಾರೆ. ಎಬಿಡಿ ಎಲ್ಲಾ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಿಸುವ ಮೊದಲು
2011 ರಿಂದ 2021 ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನ ಇತಿಹಾಸದಲ್ಲಿ ಆರ್‌ಸಿಬಿಗಾಗಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

ಎಬಿಡಿ ಆರ್‌ಸಿಬಿ ಪರ 157 ಪಂದ್ಯಗಳಲ್ಲಿ 41.10 ಸರಾಸರಿಯಲ್ಲಿ 4,522 ರನ್ ಮತ್ತು 2 ಸೊಗಸಾದ ಶತಕಗಳು ಮತ್ತು 37 ಅರ್ಧಶತಕಗಳನ್ನು ಒಳಗೊಂಡಂತೆ 158.33 ಸ್ಟ್ರೈಕ್ ರೇಟ್‌ನಿಂದ ರನ್ ಸಿಡಿಸಿದ್ದಾರೆ.

RCB Playoff Chances 2022: ಡೆಲ್ಲಿ ಗೆಲುವಿನ ನಂತರ ಆರ್‌ಸಿಬಿಗೆ ಅಗ್ನಿ ಪರೀಕ್ಷೆ: ಪ್ಲೇಆಫ್ ಹಾದಿ ಹೇಗಿದೆ?

ಆರ್‌ಸಿಬಿ ಬಗ್ಗೆ ನೆನೆದು ಭಾವುಕನಾದ ಎಬಿಡಿ

ವರ್ಚುವಲ್ ಕಾನ್ಫರೆನ್ಸ್ ಮೂಲಕ ಆರ್‌ಸಿಬಿ ಹಾಲ್ ಆಫ್ ಫೇಮ್ ಗೌರವದ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದ ಎಬಿ ಡಿವಿಲಿಯರ್ಸ್ ಈ ಗೌರವಕ್ಕೆ ಪಾತ್ರರಾಗಿದ್ದಕ್ಕೆ ಸಾಕಷ್ಟು ಭಾವುಕರಾದಂತೆ ಕಾಣುತ್ತಿತ್ತು.

''ಅಲ್ಲಿ ಕುಳಿತ ಹುಡುಗರಿಗೆ, ಎಂತಹ ಅದ್ಭುತ ಗೌರವ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಸಾಕಷ್ಟು ಭಾವನಾತ್ಮಕವಾಗಿದೆ. ನಿಮಗೆ ತಿಳಿದಿರುವಂತೆ ನಾನು ಕ್ರಿಕೆಟ್‌ನಿಂದ ಸ್ವಲ್ಪ ದೂರ ಉಳಿದಿದ್ದೇನೆ. ನಿಮ್ಮ(ಆರ್‌ಸಿಬಿ) ಹುಡುಗರನ್ನು ಟಿವಿಯಲ್ಲಿ ನೋಡುತ್ತಿದ್ದು, ಈ ಸೀಸನ್‌ನಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ನಿಜವಾಗಿಯೂ ಉತ್ಸುಕನಾಗಿದ್ದೇನೆ, ಇದು ವಿಶೇಷವಾದದ್ದು ಎಂದು ನಾನು ನಂಬುತ್ತೇನೆ''

"ವಿರಾಟ್, ಒಳ್ಳೆಯ ಮಾತುಗಳಿಗಾಗಿ ಮತ್ತು ಈ ಗೌರವ ನೀಡಿದ ಫ್ರಾಂಚೈಸಿಗೆ ಎಲ್ಲರಿಗೂ ಧನ್ಯವಾದಗಳು, ಇದು ನಿಜವಾಗಿಯೂ ವಿಶೇಷ ಸ್ಪರ್ಶವಾಗಿದೆ. ನಾವು ತಂಡವಾಗಿ ಕೆಲವು ಅದ್ಭುತ ಸಮಯವನ್ನು ಹೊಂದಿದ್ದೆವು. ನನಗೆ ಮತ್ತು ಕ್ರಿಸ್‌ಗೆ ಸೂರ್ಯ ಮರೆಯಾಗಿರಬಹುದು, ಆದರೆ ನಾವು ಕುಟುಂಬದ ಭಾಗವಾಗಿದ್ದೇವೆ'' ಎಂದು ಎಬಿಡಿ ಹೇಳಿದ್ದಾರೆ.

DC vs PBKS: ಕೊನೆಯ ನಿಮಿಷದಲ್ಲಿ ಸ್ಟ್ರೈಕ್‌ ಬದಲಿಸಿ ಗೋಲ್ಡನ್ ಡಕೌಟ್ ಆದ ಡೇವಿಡ್ ವಾರ್ನರ್

ಗುಜರಾತ್ ವಿರುದ್ಧ RCB ಈ ಮಾಸ್ಟರ್ ಪ್ಲ್ಯಾನ್ ಮಾಡಿದ್ರೇನೇ ಪ್ಲೇ ಆಫ್ ಎಂಟ್ರಿ ಸುಲಭ | Oneindia Kannada
ಆರ್‌ಸಿಬಿ ಫ್ರಾಂಚೈಸಿ ನನಗೆ ಬಹಳ ವಿಶೇಷವಾದದ್ದು: ಕ್ರಿಸ್‌ಗೇಲ್‌

ಆರ್‌ಸಿಬಿ ಫ್ರಾಂಚೈಸಿ ನನಗೆ ಬಹಳ ವಿಶೇಷವಾದದ್ದು: ಕ್ರಿಸ್‌ಗೇಲ್‌

ಆರ್‌ಸಿಬಿ ಫ್ರಾಂಚೈಸಿಯು ನನಗೆ ಅನೇಕ ನೆನಪುಗಳನ್ನು ಕಟ್ಟಿಕೊಟ್ಟಿದ್ದು, ಉತ್ತಮ ಸಮಯವನ್ನ ಕಳೆದಿದ್ದೇವೆ. ಆರ್‌ಸಿಬಿ ಫ್ರಾಂಚೈಸಿ ನನಗೆ ಬಹಳ ವಿಶೇಷವಾಗಿದೆ ಎಂದು ವಿಂಡೀಸ್ ದೈತ್ಯ, ಆರ್‌ಸಿಬಿ ಮಾಜಿ ಆಟಗಾರ ಕ್ರಿಸ್‌ಗೇಲ್ ಹೇಳಿದ್ದಾರೆ.

"ಆರ್‌ಸಿಬಿ ಫ್ರಾಂಚೈಸಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನಗೂ ಇದು ನಿಜವಾಗಿಯೂ ವಿಶೇಷವಾಗಿದೆ. ಆರ್‌ಸಿಬಿಯನ್ನು ನನ್ನ ಹೃದಯಕ್ಕೆ ಹತ್ತಿರವಾಗಿಟ್ಟುಕೊಳ್ಳುತ್ತೇನೆ. ನಾನು ಕೆಲವು ವಿಶೇಷ ಆಟಗಾರರು, ಕೆಲವು ವಿಶೇಷ ತರಬೇತುದಾರರೊಂದಿಗೆ ಕೆಲವು ನೆನಪುಗಳನ್ನು ಹಂಚಿಕೊಂಡಿದ್ದೇನೆ. "

"ವಿರಾಟ್, ಒಳ್ಳೆಯ ಮಾತುಗಳಿಗಾಗಿ ಧನ್ಯವಾದಗಳು, ನಿಮ್ಮೊಂದಿಗೆ ಡ್ರೆಸ್ಸಿಂಗ್ ರೂಮ್ ಅನ್ನು ಹಂಚಿಕೊಳ್ಳುವುದು ಅದ್ಭುತವಾಗಿದೆ. ಟೂರ್ನಿಯ ಉಳಿದ ಪಂದ್ಯಗಳಿಗೆ ನಾನು ನಿಮಗೆ ಶುಭ ಹಾರೈಸುತ್ತೇನೆ ಮತ್ತು ನೀವು ಅದ್ಭುತ ಮಾಡಬಹುದು ಎಂದು ನನಗೆ ಖಾತ್ರಿಯಿದೆ. ಆಶಾದಾಯಕವಾಗಿ, ಈ ವರ್ಷ ಆರ್‌ಸಿಬಿಯದ್ದಾಗಿದೆ'' ಎಂದು ಕ್ರಿಸ್‌ಗೇಲ್ ಹೇಳಿದ್ದಾರೆ.

ಒಟ್ಟಾರೆ ಆರ್‌ಸಿಬಿ ಕಳೆದ 14 ಸೀಸನ್‌ಗಳ ಕುರಿತು ನೆನಪುಗಳನ್ನ ಮೆಲುಕು ಹಾಕಿ ನೋಡಿದ್ರೆ, ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್‌ಗೇಲ್‌ ಆರ್‌ಸಿಬಿ ಪರ ಅನೇಕ ಅದ್ಭುತ ಇನ್ನಿಂಗ್ಸ್‌ಗಳನ್ನ ಆಡುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಅನೇಕ ಮರೆಯಲಾಗದ ಇನ್ನಿಂಗ್ಸ್‌ಗಳ ಮೂಲಕ ಸಿಹಿಯಾದ ನೆನಪಿನ ಗೂಡನ್ನು ಕಟ್ಟಿಕೊಟ್ಟಿದ್ದಾರೆ.

Story first published: Tuesday, May 17, 2022, 13:13 [IST]
Other articles published on May 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X