ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಕೆಕೆಆರ್ ಪ್ಲೇಆಫ್ ಹಂತಕ್ಕೆರುವ ವಿಶ್ವಾಸ ವ್ಯಕ್ತಪಡಿಸಿದ ಅಜಿಂಕ್ಯಾ ರಹಾನೆ

IPL 2022: Ajinkya Rahane backs to Kolkata Knight riders to qualify for playoffs

ಗಾಯಗೊಂಡಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಅನುಭವಿ ಆಟಗಾರ ಅಜಿಂಕ್ಯಾ ರಹಾನೆ ಐಪಿಎಲ್‌ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಈ ಟೂರ್ನಿಯ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಹಾನೆ ನಂತರ ಫಾರ್ಮ್‌ ಕಳೆದುಕೊಂಡಂತೆ ಭಾಸವಾಗಿದ್ದರು. ಆದರೆ ಟೂರ್ನಿಯ ಅಂತಿಮ ಹಂತದಲ್ಲಿ ಮಂಡಿರಜ್ಜು ಗಾಯದ ಕಾರಣದಿಂದಾಗಿ ಅಜಿಂಕ್ಯಾ ರಹಾನೆ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಈ ಸಂದರ್ಭದಲ್ಲಿ ಕೆಕೆಆರ್ ಜೊತೆಗಿನ ಈ ಪ್ರಯಾಣದ ಬಗ್ಗೆ ಮಾತನಾಡಿದ ರಹಾನೆ ಕೆಕೆಆರ್ ತಂಡ ಟೂರ್ನಿಯ ಮುಂದಿನ ಹಂತಕ್ಕೇರುವ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ತನ್ನ ಮೇಳೆ ನಂಬಿಕೆಯಿಟ್ಟು ತಂಡಕ್ಕೆ ಸೇರ್ಪಡೆಗೊಳಿಸಿರುವ ಬಗ್ಗೆ ಮ್ಯಾನೇಜ್‌ಮೆಂಟ್‌ಗೆ ಕೂಡ ಧನ್ಯವಾದವನ್ನು ಸಲ್ಲಿಸಿದ್ದಾರೆ ರಹಾನೆ. ಮುಂದಿನ ಆವೃತ್ತಿಯಲ್ಲಿ ಮತ್ತಷ್ಟು ಬಲಿಷ್ಠವಾಗಿ ಆಗಮಿಸುವ ಬಗ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

MI vs SRH: ಪಂದ್ಯದಲ್ಲಿ ನಿಮ್ಮ ಡ್ರೀಮ್ ಟೀಮ್ ಗೆಲ್ಲಲು ತಂಡವನ್ನು ಹೀಗೆ ರಚಿಸಿ, ಈತನಿಗೆ ನಾಯಕತ್ವ ನೀಡಿMI vs SRH: ಪಂದ್ಯದಲ್ಲಿ ನಿಮ್ಮ ಡ್ರೀಮ್ ಟೀಮ್ ಗೆಲ್ಲಲು ತಂಡವನ್ನು ಹೀಗೆ ರಚಿಸಿ, ಈತನಿಗೆ ನಾಯಕತ್ವ ನೀಡಿ

ಕೆಕೆಆರ್ ತಂಡದಲ್ಲಿದ್ದುಕೊಂಡು ಮೈದಾನದಲ್ಲಿ ಮತ್ತು ಹೊರಗೆ ನಾನು ನಿಜವಾಗಿಯೂ ಆನಂದಿಸಿದೆ. ಕ್ರಿಕೆಟಿಗನಾಗಿ ನಾನು ಜೀವನದ ಬಗ್ಗೆ ಹಲವು ವಿಚಾರದ ಬಗ್ಗೆ ಸಾಕಷ್ಟು ಕಲಿತಿದ್ದೇನೆ. ಎಲ್ಲಾ ಆಟಗಾರರು, ಸಿಬ್ಬಂದಿಗಳು, ವೆಂಕಿ ಸರ್ ಮತ್ತು ಮ್ಯಾನೇಜ್‌ಮೆಂಟ್‌ ನೀಡಿದ ಸಹಾಯ ಮತ್ತು ಬೆಂಬಲಕ್ಕಾಗಿ ಧನ್ಯವಾದ ಹೇಳಲು ಬಯಸುತ್ತೇನೆ. ಮುಂದಿನ ವರ್ಷ ನಾನು ಖಂಡಿತವಾಗಿಯೂ ಬಲಿಷ್ಠವಾಗಿ ಹಿಂತಿರುಗುತ್ತೇನೆ. ಮುಂದಿನ ಪಂದ್ಯದಲ್ಲಿ ನಾವು ತಂಡವಾಗಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ನನಗಿದೆ. ನಾವು ಪ್ಲೇಆಫ್ ಪಂದ್ಯಗಳನ್ನಾಡಲು ಕೊಲ್ಕತ್ತಾಗೆ ತೆರಳಲಿದ್ದೇವೆ ಎಂಬ ಭರವಸೆ ನನಗಿದೆ" ಎಂದು ಅಜಿಂಕ್ಯಾ ರಹಾನೆ ಹೇಳಿದರು.

ನನ್ನ ವೇಗದ ಬೌಲಿಂಗ್ ದಾಖಲೆಯನ್ನ ಉಮ್ರಾನ್‌ ಮಲ್ಲಿಕ್ ಮುರಿದ್ರೆ ಸಂತೋಷವಾಗಲಿದೆ: ಶೋಯೆಬ್ ಅಖ್ತರ್‌ನನ್ನ ವೇಗದ ಬೌಲಿಂಗ್ ದಾಖಲೆಯನ್ನ ಉಮ್ರಾನ್‌ ಮಲ್ಲಿಕ್ ಮುರಿದ್ರೆ ಸಂತೋಷವಾಗಲಿದೆ: ಶೋಯೆಬ್ ಅಖ್ತರ್‌

ಸದ್ಯ 13 ಪಂದ್ಯಗಳನ್ನು ಆಡಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಆರು ಗೆಲುವು ಹಾಗೂ ಏಳು ಸೋಲುಗಳೊಂದಿಗೆ 12 ಅಂಕಗಳನ್ನು ಗಳಿಸಿದ್ದು ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಹೀಗಾಗಿ ಪ್ಲೇಆಫ್‌ಗೇರುವ ಹಾದಿ ಕೆಕೆಆರ್ ತಂಡಕ್ಕೂ ದುರ್ಗಮವಾಗಿದೆ. ಉಳಿದ ಒಂದು ಪಂದ್ಯದಲ್ಲಿ ಕೆಕೆಆರ್ ಗೆಲುವು ಸಾಧಿಸುವ ಜೊತೆಗೆ ಅದೃಷ್ಟಕ್ಕೂ ನಿರೀಕ್ಷಿಸಬೇಕಾಗುತ್ತದೆ.

ಬೆಂಗಳೂರಲ್ಲಿ‌ ಮಹಾಮಳೆ:ಮನೆಗಳಿಗೆ ನುಗ್ಗಿದ‌ ನೀರು,ಜನಜೀವನ ಅಸ್ತವ್ಯಸ್ತ | Oneindia Kannada

ಕೊಲ್ಕತ್ತಾ ನೈಟ್ ರೈಡರ್ಸ್ ಸಂಪೂರ್ಣ ಬಳಗ: ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಶ್ರೇಯಸ್ ಅಯ್ಯರ್(ನಾಯಕ), ಪ್ಯಾಟ್ ಕಮ್ಮಿನ್ಸ್, ಅಭಿಜೀತ್ ತೋಮರ್, ಸ್ಯಾಮ್ ಬಿಲ್ಲಿಂಗ್ಸ್, ಆರೋನ್ ಫಿಂಚ್, ರಮೇಶ್ ಕುಮಾರ್, ಮೊಹಮ್ಮದ್ ನಬಿ, ಅಮನ್ ಖಾನ್, ಉಮೇಶ್ ಯಾದವ್, ನಿತೀಶ್ ರಾಣಾ, ಶಿವಂ ಮಾವಿ, ಶೆಲ್ಡನ್ ಜಾಕ್ಸನ್ , ರಿಂಕು ಸಿಂಗ್, ಅನುಕುಲ್ ರಾಯ್, ರಸಿಖ್ ದಾರ್, ಚಮಿಕಾ ಕರುಣಾರತ್ನೆ, ಬಾಬಾ ಇಂದ್ರಜಿತ್, ಅಶೋಕ್ ಶರ್ಮಾ, ಪ್ರಥಮ್ ಸಿಂಗ್.

Story first published: Tuesday, May 17, 2022, 17:35 [IST]
Other articles published on May 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X