ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB ಪ್ಲೇ ಆಫ್‌ ಪ್ರವೇಶಿಸಿರುವುದು ಉಳಿದ 3 ತಂಡಗಳಿಗೆ ಭಯ ಹುಟ್ಟಿಸಿದೆ: ಇರ್ಫಾನ್ ಪಠಾಣ್

RCB

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2022ರ ಸೀಸನ್‌ನಲ್ಲಿ ಪ್ಲೇ ಆಫ್‌ಗೆ ನಾಲ್ಕನೇ ತಂಡವಾಗಿ ಅರ್ಹತೆ ಗಿಟ್ಟಿಸಿದ ತಂಡವಾಗಿದ್ದು, ಆರ್‌ಸಿಬಿ ಪ್ರವೇಶದಿಂದಾಗಿ ಉಳಿದ ಮೂರು ತಂಡಗಳು ತಲೆಕೆಡಿಸಿಕೊಂಡಿವೆ ಎಂದು ಭಾರತದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಹೇಳಿದ್ದಾರೆ.

ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಮಂಗಳವಾರ ಗುಜರಾತ್ ಟೈಟನ್ಸ್‌ ಮತ್ತು ರಾಜಸ್ತಾನ್ ರಾಯಲ್ಸ್ ನಡುವೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಪಂದ್ಯದ ರೋಚಕತೆ ಹೆಚ್ಚಿಸಿದೆ. ಬುಧವಾರ (ಮೇ. 25) ಇದೇ ಮೈದಾನದಲ್ಲಿ ಆರ್‌ಸಿಬಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಫಾಪ್ ಡುಪ್ಲೆಸಿಸ್ ಪಡೆಗೆ ಲಕ್ ಕೂಡ ಇದೆ

ಫಾಪ್ ಡುಪ್ಲೆಸಿಸ್ ಪಡೆಗೆ ಲಕ್ ಕೂಡ ಇದೆ

ಐಪಿಎಲ್‌ 2022ರ ಸೀಸನ್‌ನಲ್ಲಿ ಆರ್‌ಸಿಬಿ ಲಕ್‌ ಕೂಡ ಹೊಂದಿದೆ ಎಂದು ಇರ್ಫಾನ್ ಪಠಾಣ್ ಅಭಿಪ್ರಾಯ ಪಟ್ಟಿದ್ದಾರೆ. ಏಕೆಂದರೆ ಡೆಲ್ಲಿ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲ್ಲುವ ಮೂಲಕ ಡೆಲ್ಲಿ ತಂಡವನ್ನ ಪ್ಲೇ ಆಫ್‌ ರೇಸ್‌ನಿಂದ ಹೊರದಬ್ಬಿತು. ಮತ್ತೊಂದೆಡೆ ಇದ್ರಿಂದಾಗಿ ಲಾಭ ಪಡೆದ ಆರ್‌ಸಿಬಿ ಪ್ಲೇ ಆಫ್‌ ಹಂತಕ್ಕೇರಲು ಸಾಧ್ಯವಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲುತ್ತಿದ್ದಂತೆ ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆದ ಕೊನೆಯ ತಂಡವಾಯಿತು. ಅರ್ಹತೆ ಪಡೆಯಲು ಆರ್‌ಸಿಬಿಗೆ ಸ್ವಲ್ಪ ಅದೃಷ್ಟದ ಅಗತ್ಯವಿರಬಹುದು ಆದರೆ ತಂಡವು ತನ್ನ ದಿನದಲ್ಲಿ ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪಠಾಣ್ ನಂಬಿದ್ದಾರೆ.

ಕೊಹ್ಲಿ ಮಾಡುತ್ತಿದ್ದ ಈ ತಪ್ಪನ್ನು ಡು ಪ್ಲೆಸಿಸ್ ಮಾಡಲಿಲ್ಲ ಹೀಗಾಗಿ ಆರ್‌ಸಿಬಿ ಯಶಸ್ಸು ಕಂಡಿದೆ ಎಂದ ಸೆಹ್ವಾಗ್!

ಆರ್‌ಸಿಬಿ ಅಪಾಯಕಾರಿ ತಂಡವಾಗಿದೆ ಎಂದ ಪಠಾಣ್

ಆರ್‌ಸಿಬಿ ಅಪಾಯಕಾರಿ ತಂಡವಾಗಿದೆ ಎಂದ ಪಠಾಣ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇತ್ತೀಚಿನ ಪ್ರದರ್ಶನ ನೋಡಿದ್ರೆ, ಅತ್ಯಂತ ಡೇಂಜರಸ್ ತಂಡವಾಗಿದೆ ಎಂದು ಇರ್ಫಾನ್ ಪಠಾಣ್ ಅಭಿಪ್ರಾಯ ಪಟ್ಟಿದ್ದಾರೆ. ಫಾಫ್ ಡುಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡವು ಲೀಗ್ ಹಂತಗಳಲ್ಲಿ ಅವರ ಇತ್ತೀಚಿನ ಪ್ರದರ್ಶನವು ಆರ್‌ಸಿಬಿ ಅನ್ನು ಡೇಂಜರಸ್ ಆಗಿಸಿದೆ. ಜೊತೆಗೆ ತಂಡಗಳು ಅವರನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಪಠಾಣ್ ಹೇಳಿದ್ದಾರೆ.

GT vs RR ಕ್ವಾಲಿಫೈಯರ್ 1: ಮಳೆಗೆ ಪಂದ್ಯ ರದ್ದಾದರೆ ಯಾರು ವಿನ್ನರ್? ಆಯ್ಕೆ ಮಾಡಲು ಇವೆ 3 ವಿಧಾನಗಳು!

ಆರ್‌ಸಿಬಿ ಕುರಿತು ಉಳಿದ ತಂಡಗಳು ತಲೆಕೆಡಿಸಿಕೊಂಡಿವೆ!

ಆರ್‌ಸಿಬಿ ಕುರಿತು ಉಳಿದ ತಂಡಗಳು ತಲೆಕೆಡಿಸಿಕೊಂಡಿವೆ!

"ಆರ್‌ಸಿಬಿಯು ಟಾಟಾ ಐಪಿಎಲ್‌ನಲ್ಲಿ ಸತತ ಮೂರನೇ ಬಾರಿಗೆ ಎಲಿಮಿನೇಟರ್‌ನಲ್ಲಿ ಆಡುತ್ತಿದೆ. ಆದರೆ ಉಳಿದ ತಂಡಗಳು ಈಗ ಅವರನ್ನು ಕಂಡರೆ ಭಯಪಡುತ್ತಿವೆ. ಅವರು ತಮ್ಮ ಹಿಂದಿನ ಪಂದ್ಯದಲ್ಲಿ ಪ್ರಬಲವಾದ ಗೆಲುವಿನ ಹಿನ್ನಲೆಯಲ್ಲಿ ಕಂಬ್ಯಾಕ್ ಮಾಡಿದ್ದಾರೆ. ಪಂಜಾಬ್ ವಿರುದ್ಧ ಸೋತ ಬಳಿಕ ಬಲಿಷ್ಠ ಗುಜರಾತ್ ತಂಡವನ್ನೇ ಆರ್‌ಸಿಬಿ ಮಣಿಸಿದೆ. ವಿರಾಟ್ ಕೊಹ್ಲಿ ಫಾರ್ಮ್ ಮರಳಿ ಪಡೆದಂತೆ ತೋರುತ್ತಿದೆ. ಕೊಹ್ಲಿ ಫಾರ್ಮ್ ಇದು ಅತ್ಯಂತ ಧನಾತ್ಮಕವಾಗಿದೆ. ಅವರು ತಮ್ಮ ಮೊಜೊವನ್ನು ಮರಳಿ ಕಂಡುಕೊಂಡಿದ್ದಾರೆಂದು ತೋರುತ್ತದೆ. ಅವರ ಪಂದ್ಯ-ವಿಜೇತ ಅರ್ಧಶತಕ ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತದೆ. ಜೊತೆಗೆ ಉಳಿದ ಬ್ಯಾಟರ್‌ಗಳು ಸಹ ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತಾರೆ. ಆರ್‌ಸಿಬಿ ಯಂತಹ ತಂಡವನ್ನು ಯಾವುದೇ ತಂಡವು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಅವರ ಮೇಲಿನ ಎಲ್ಲಾ ಮೂರು ತಂಡಗಳು ಆರ್‌ಸಿಬಿ ಬಗ್ಗೆ ಎಚ್ಚರದಿಂದಿರುತ್ತವೆ." ಎಂದು ಇರ್ಫಾನ್ ಪಠಾಣ್ ಸ್ಟಾರ್‌ ಸ್ಪೋರ್ಟ್ಸ್‌ನ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಗ್ರೇಮ್ ಸ್ವಾನ್ ಕೂಡ ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ಪ್ಲೇಆಫ್‌ಗೆ ನುಸುಳಿದ ನಂತರ ಉಳಿದ ತಂಡಗಳಿಗೆ ಭಯ ಹುಟ್ಟಿಸಿರಬಹುದು ಎಂದು ನಂಬಿದ್ದಾರೆ.

Story first published: Wednesday, May 25, 2022, 10:08 [IST]
Other articles published on May 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X