ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPLನಲ್ಲಿ 100 ವಿಕೆಟ್ ಪಡೆದ ಅಕ್ಷರ್ ಪಟೇಲ್: ಜಡೇಜಾ ಬಳಿಕ ಈ ರೀತಿಯ ಸಾಧನೆ ಮಾಡಿದ 2ನೇ ಆಟಗಾರ

Axar patel

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್‌ರೌಂಡರ್ ಅಕ್ಷರ್ ಪಟೇಲ್ ವಿಶೇಷ ಸಾಧನೆಯೊಂದನ್ನ ಮಾಡಿದ್ದಾರೆ. ಪಂಜಾಬ್ ಕಿಂಗ್ಸ್‌ ವಿರುದ್ಧ ಸೋಮವಾರ(ಮೇ.16) ನಡೆದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಐಪಿಎಲ್‌ನಲ್ಲಿ 100 ವಿಕೆಟ್ ಪಡೆದರು.

ಅಕ್ಷರ್ ಪಟೇಲ್ 100 ವಿಕೆಟ್ ಪಡೆಯುತ್ತಿದ್ದಂತೆ ರವೀಂದ್ರ ಜಡೇಜಾ ಬಳಿಕ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ಎಡಗೈ ಬೌಲರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಸಿಎಸ್‌ಕೆ ತಂಡದ ಆಲ್‌ರೌಂಡರ್ ಜಡೇಜಾ 132 ಐಪಿಎಲ್ ವಿಕೆಟ್‌ಗಳನ್ನ ಪಡೆದಿದ್ದಾರೆ.

ಕ್ರಿಸ್‌ಗೇಲ್‌ ಮತ್ತು ಎಬಿಡಿಗೆ RCBಯ ಹಾಲ್‌ ಆಫ್ ಫೇಮ್ ಗೌರವ: ಭಾವುಕನಾದ ಎಬಿಡಿಕ್ರಿಸ್‌ಗೇಲ್‌ ಮತ್ತು ಎಬಿಡಿಗೆ RCBಯ ಹಾಲ್‌ ಆಫ್ ಫೇಮ್ ಗೌರವ: ಭಾವುಕನಾದ ಎಬಿಡಿ

ಐಪಿಎಲ್ 15ನೇ ಸೀಸನ್‌ನ 64ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಈ ಮೈಲಿಗಲ್ಲನ್ನು ತಲುಪಿರುವ ಅಕ್ಷರ್ ಪಟೇಲ್, ಅತಿ ಕಡಿಮೆ ಅವಧಿಯಲ್ಲಿ ಈ ಸಾಧನೆ ಮಾಡಿದ ಸ್ಪಿನ್ನರ್ ಆಗಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧ 4 ಓವರ್‌ಗಳ ಪೂರ್ಣ ಖೋಟಾ ಬೌಲಿಂಗ್‌ನಲ್ಲಿ ಕೇವಲ 14ರನ್ ನೀಡಿದ ಅಕ್ಷರ್ ಪಟೇಲ್ ಎರಡು ವಿಕೆಟ್ ಕಬಳಿಸಲು ಯಶಸ್ವಿಯಾದರು. ಪಂಜಾಬ್ ಕಿಂಗ್ಸ್‌ ತಂಡವನ್ನು 142 ರನ್‌ಗಳಿಗೆ ಕಟ್ಟಿಹಾಕಿದ ಡೆಲ್ಲಿ ಕ್ಯಾಪಿಟಲ್ಸ್ 17ರನ್‌ಗಳಿಂದ ಪಂದ್ಯವನ್ನ ಗೆದ್ದು ಬೀಗಿತು.

ಪಂದ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ಬೌಲಿಂಗ್ ಮಾಡಿದ ಶಾರ್ದೂಲ್ ಠಾಕೂರ್ 36 ರನ್ ನೀಡಿ 4 ವಿಕೆಟ್ ಕಬಳಿಸಿದರು.

Team India ಸೇರಲು ಈ ಆಟಗಾರರಿಗೆ ಅವಕಾಶ | Oneindia Kannada

2014 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಪಾದಾರ್ಪಣೆ ಮಾಡಿದ ಅಕ್ಷರ್ ಪಟೇಲ್, ಲೀಗ್‌ನ ಇತಿಹಾಸದಲ್ಲಿ 100 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ 17 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು 121 ಪಂದ್ಯಗಳಲ್ಲಿ 101 ವಿಕೆಟ್‌ಗಳ ಮೈಲಿಗಲ್ಲನ್ನು ಸಾಧಿಸಿದರು ಮತ್ತು ಅವರು 30.27 ರ ಸರಾಸರಿಯಲ್ಲಿ, 7.24 ರ ಎಕಾನಮಿ ಮತ್ತು 25.10 ರ ಸ್ಟ್ರೈಕ್ ರೇಟ್‌ನಲ್ಲಿ ತಮ್ಮ ವಿಕೆಟ್‌ಗಳನ್ನು ಪಡೆದರು. ಇನ್ನು ಬ್ಯಾಟಿಂಗ್‌ನಲ್ಲಿ 18.92ರ ಸರಾಸರಿಯಲ್ಲಿ 1116 ರನ್ ಕಲೆಹಾಕಿದ್ದು, 128.13ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.

Story first published: Tuesday, May 17, 2022, 14:23 [IST]
Other articles published on May 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X