ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

20 ಲಕ್ಷಕ್ಕೆ ಆರ್‌ಸಿಬಿ ಸೇರಿಕೊಂಡಿದ್ದ ಪಾಟೀದಾರ್‌ಗೆ ಒಂದೇ ಪಂದ್ಯದಲ್ಲಿ 10 ಲಕ್ಷ ಬಹುಮಾನ!

Rajat patidar
ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಮೇಲೆ ರಜತ್ ಹೀಗೆ ಹೇಳ್ತಾರೆ ಅಂತ ಯಾರೂ ಅಂದ್ಕೊಂಡಿರ್ಲಿಲ್ಲ | #cricket | Oneindia

ರಜತ್ ಪಾಟೀದಾರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಸೂಪರ್ ಸ್ಟಾರ್‌. ಗೆಲ್ಲಲೇಬೇಕಾದ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲರ್‌ಗಳನ್ನ ಚಿಂದಿ ಉಡಾಯಿಸಿದ ಸ್ಫೋಟಕ ಬ್ಯಾಟ್ಸ್‌ಮನ್. ಮಧ್ಯಪ್ರದೇಶದ ಇಂದೋರ್ ಮೂಲಕ ಈ ಟಿ20 ಸ್ಪೆಷಲಿಸ್ಟ್‌ ಆರ್‌ಸಿಬಿ ಪರ ಮ್ಯಾಜಿಕ್ ಅನ್ನೇ ಮಾಡಿಬಿಟ್ಟಿದ್ದಾರೆ.

ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಕೇವಲ 49 ಎಸೆತಗಳಲ್ಲಿ ವೇಗದ ಶತಕ ದಾಖಲಿಸಿದ ರಜತ್ ಪಾಟೀದಾರ್ ಇನ್ನಿಂಗ್ಸ ಅನ್ನು ಲಕ್ಷಾಂತರ ಜನರು ಕಣ್ತುಂಬಿಕೊಂಡರು. ಆರ್‌ಸಿಬಿ ಪರ ಮೂರನೇ ಕ್ರಮಾಂಕದಲ್ಲಿ ಸೆನ್ಷೇಷನ್ ಬ್ಯಾಟಿಂಗ್ ಮಾಡುತ್ತಿರುವ ರಜತ್ ಪಾಟೀದಾರ್ ಅಜೇಯ 112ರನ್‌ಗೆ ಗಳಿಸಿದ್ದು ಬರೋಬ್ಬರಿ 10 ಲಕ್ಷ ರೂಪಾಯಿ

20 ಲಕ್ಷ ಮೂಲ ಬೆಲೆ, ಒಂದೇ ಪಂದ್ಯಕ್ಕೆ 10 ಲಕ್ಷ ಬಹುಮಾನ!

20 ಲಕ್ಷ ಮೂಲ ಬೆಲೆ, ಒಂದೇ ಪಂದ್ಯಕ್ಕೆ 10 ಲಕ್ಷ ಬಹುಮಾನ!

ಹೌದು, ಇದನ್ನ ಓದಿದ್ರೆ ನಿಮಗೆ ಇಂಟ್ರೆಸ್ಟಿಂಗ್ ಎನಿಸಬಹುದು. ಆದ್ರೆ ರಜತ್ ಪಾಟೀದಾರ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಂತಹ ಒಂದು ಅದ್ಭುತ ಇನ್ನಿಂಗ್ಸ್ ಮೂಲಕ 10 ಲಕ್ಷ ರೂಪಾಯಿ ಬಾಚಿಕೊಂಡಿದ್ದಾರೆ. ಆರ್‌ಸಿಬಿ ತಂಡಕ್ಕೆ ಲವನೀತ್ ಸಿಸೋಡಿಯಾ ಬದಲಾಗಿ ಮೂಲ ಬೆಲೆ 20 ಲಕ್ಷ ರೂಪಾಯಿ ತಂಡವನ್ನ ಸೇರಿಕೊಂಡಿದ್ದ ಪಾಟೀದಾರ್ ಒಂದೇ ಪಂದ್ಯದಲ್ಲಿ 10 ಲಕ್ಷ ಬಹುಮಾನ ಪಡೆದಿದ್ದಾರೆ.

RCB vs LSG: ಈ ಮೂವರು ಇಲ್ಲದಿದ್ದರೆ ಲಕ್ನೋ ವಿರುದ್ಧ ಆರ್‌ಸಿಬಿ ಗೆದ್ದು ಕ್ವಾಲಿಫೈಯರ್ 2ಕ್ಕೆ ಮುನ್ನುಗ್ಗುತ್ತಿರಲಿಲ್ಲ!

ಅಮೋಘ ಇನ್ನಿಂಗ್ಸ್‌ಗೆ ಪಂದ್ಯ ಪುರಷೋತ್ತಮ ಪ್ರಶಸ್ತಿ ಪಡೆದ ಪಾಟೀದಾರ್ 5 ಲಕ್ಷ ರೂಪಾಯಿಗಳನ್ನು ಪಡೆದರು. ಇದರ ಜೊತೆಗೆ ಪಂದ್ಯದಲ್ಲಿ ಅತಿ ಹೆಚ್ಚು ಬೌಂಡರಿಗಳಿಗೆ 1 ಲಕ್ಷ, ಮೋಸ್ಡ್ ವ್ಯಾಲ್ಯುಯೆಬಲ್ ಅಸೆಟ್ ಆಫ್ ದಿ ಮ್ಯಾಚ್ಗೆ 1 ಲಕ್ಷ, ಅತಿ ಹೆಚ್ಚು ಸಿಕ್ಸರ್‌ ದಾಖಲಿಸಿದ್ದಕ್ಕಾಗಿ 1 ಲಕ್ಷ, ಗೇಮ್ ಚೇಂಜರ್ ಆಫ್ ದಿ ಮ್ಯಾಚ್ 1 ಲಕ್ಷ, ಜೊತೆಗೆ ಸೂಪರ್ ಸ್ಟ್ರೈಕರ್ ಆಫ್ ದಿ ಮ್ಯಾಚ್ 1 ಲಕ್ಷ ರೂಪಾಯಿ ಜೇಬಿಗಿಳಿಸಿದರು. ಈ ಮೂಲಕ ಒಟ್ಟಾರೆಯಾಗಿ ರಜತ್ ಪಾಟಿದಾರ್ 10 ಲಕ್ಷ ರೂಪಾಯಿಗಳನ್ನು ಒಂದೇ ಪಂದ್ಯದಲ್ಲಿ ಬಹುಮಾನವಾಗಿ ಪಡೆದುಕೊಂಡಿದ್ದಾರೆ.

ಪ್ಲೇ ಆಫ್‌ನಲ್ಲಿ ಶತಕ ದಾಖಲಿಸಿದ ಮೊದಲ ಅನ್‌ಕ್ಯಾಪ್ಡ್ ಪ್ಲೇಯರ್

ಪ್ಲೇ ಆಫ್‌ನಲ್ಲಿ ಶತಕ ದಾಖಲಿಸಿದ ಮೊದಲ ಅನ್‌ಕ್ಯಾಪ್ಡ್ ಪ್ಲೇಯರ್

ರಜತ್ ಪಾಟಿದಾರ್ ಐಪಿಎಲ್‌ನ ಪ್ಲೇಆಫ್‌ನಲ್ಲಿ ಶತಕ ಗಳಿಸಿದ ಮೊದಲ ಅನ್‌ಕ್ಯಾಪ್ ಆಟಗಾರನಾಗಿದ್ದಾನೆ. 2014ರ ಐಪಿಎಲ್‌ನ ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಮನೀಶ್ ಪಾಂಡೆ 50 ಎಸೆತಗಳಲ್ಲಿ 94 ರನ್ ಗಳಿಸಿದ್ದು ಅನ್‌ಕ್ಯಾಪ್ಡ್‌ ಪ್ಲೇಯರ್‌ ದಾಖಲಿಸಿದ ಹಿಂದಿನ ಗರಿಷ್ಠ ಸ್ಕೋರ್ ಆಗಿತ್ತು.

IPL 2022ರಲ್ಲಿ ಅನ್‌ಸೋಲ್ಡ್ ಆಗಿದ್ದ ರಜತ್ ಪಾಟೀದಾರ್ RCB ಹೀರೋ ಆಗಿದ್ದೇಗೆ?

ಐಪಿಎಲ್ ಪ್ಲೇ ಆಫ್‌ನಲ್ಲಿ ವೇಗವಾಗಿ ಶತಕ ದಾಖಲಿಸಿದ ಸಾಧನೆ

ಐಪಿಎಲ್ ಪ್ಲೇ ಆಫ್‌ನಲ್ಲಿ ವೇಗವಾಗಿ ಶತಕ ದಾಖಲಿಸಿದ ಸಾಧನೆ

ರಜತ್ ಪಾಟಿದಾರ್ ಅತ್ಯಂತ ವೇಗವಾಗಿ ಪ್ಲೇ ಆಫ್‌ನಲ್ಲಿ ಶತಕ ಸಿಡಿಸಿದ ದಾಖಲೆ ಮಾಡಿದ್ದಾರೆ. ಕೇವಲ 49 ಎಸೆತಗಳನ್ನು ತೆಗೆದುಕೊಂಡು ಮೂರಂಕಿ ದಾಟಿದ ಪಾಟೀದಾರ್, ಐಪಿಎಲ್‌ನ ಪ್ಲೇಆಫ್‌ಗಳಲ್ಲಿ ಯಾವುದೇ ಆಟಗಾರ ಗಳಿಸಿದ ಜಂಟಿ-ವೇಗದ ಶತಕವಾಗಿದೆ. 2014ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ 55 ಎಸೆತಗಳಲ್ಲಿ 115 ರನ್ ಗಳಿಸಿದ್ದ ವೃದ್ಧಿಮಾನ್ ಸಹಾ ಅವರ ದಾಖಲೆಯನ್ನು ಪಾಟಿದಾರ್ ಸರಿಗಟ್ಟಿದರು.

ಪ್ಲೇ ಆಫ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ ಆಟಗಾರರನ್ನು ಈ ಕೆಳಗೆ ಕಾಣಬಹುದು.

ರಜತ್ ಪಾಟೀದಾರ್ 49 ಎಸೆತ
ವೃದ್ದಿಮಾನ್ ಸಾಹಾ 49 ಎಸೆತ
ವೀರೇಂದ್ರ ಸೆಹ್ವಾಗ್ 50 ಎಸೆತ
ಮುರಳಿ ವಿಜಯ್ 51 ಎಸೆತ
ಶೇನ್ ವ್ಯಾಟ್ಸನ್ 51 ಎಸೆತ

ಅನ್‌ಕ್ಯಾಪ್ಡ್ ಆಟಗಾರನ ಮೂರನೇ ಗರಿಷ್ಠ ಸ್ಕೋರ್

ಅನ್‌ಕ್ಯಾಪ್ಡ್ ಆಟಗಾರನ ಮೂರನೇ ಗರಿಷ್ಠ ಸ್ಕೋರ್

ಇದು ಐಪಿಎಲ್‌ನಲ್ಲಿ ಅನ್‌ಕ್ಯಾಪ್ಡ್ ಆಟಗಾರನ ಮೂರನೇ ಗರಿಷ್ಠ ಸ್ಕೋರ್ ಆಗಿದೆ. ಕಳೆದ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ RCB ಪರ ದೇವದತ್ ಪಡಿಕ್ಕಲ್ ಗಳಿಸಿದ ಅಜೇಯ 101 ಅನ್ನು ರಜತ್ ಪಾಟಿದಾರ್ ಮುರಿದರು. ಮನೀಷ್ ಪಾಂಡೆ ಎರಡನೇ ಸ್ಥಾನದಲ್ಲಿದ್ದರೆ, ಪಾಲ್ ವಾಲ್ತಾಟಿ ಎಲ್ಲರಿಗಿಂತ ಅಗ್ರಸ್ಥಾನದಲ್ಲಿದ್ದಾರೆ.

Story first published: Thursday, May 26, 2022, 15:49 [IST]
Other articles published on May 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X