ಐಪಿಎಲ್ 2022 ಮೆಗಾ ಹರಾಜು: ಆಟಗಾರರ ನೋಂದಣಿಗೆ ಅಂತಿಮ ದಿನಾಂಕ ಪ್ರಕಟಿಸಿದ ಬಿಸಿಸಿಐ

ಸದ್ಯ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಸರಣಿ ನಡೆಯುತ್ತಿದ್ದು, ಇತ್ತಂಡಗಳ ನಡುವಿನ ತೃತೀಯ ಟೆಸ್ಟ್ ಪಂದ್ಯ ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿದ್ದರೆ, ಮತ್ತೊಂದೆಡೆ ಈ ವರ್ಷ ನಡೆಯಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮುನ್ನವೇ ಸಾಕಷ್ಟು ಸುದ್ದಿ ಹಾಗೂ ಚರ್ಚೆಗಳಿಗೆ ಕಾರಣವಾಗಿದೆ.

ಹೌದು, ಈ ವರ್ಷ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಾಕಷ್ಟು ವಿಶೇಷತೆಗಳಿಂದ ಕೂಡಿರಲಿದ್ದು, ಟ್ರೋಫಿಗಾಗಿ ಹತ್ತು ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಕಳೆದ ವರ್ಷ ನಡೆದ ಫ್ರಾಂಚೈಸಿಗಳ ಹರಾಜು ಪ್ರಕ್ರಿಯೆಯಲ್ಲಿ ಲಕ್ನೋ ಮತ್ತು ಅಹಮದಾಬಾದ್ ನೂತನ ಫ್ರಾಂಚೈಸಿಗಳಾಗಿ ಆಯ್ಕೆಯಾದ ನಂತರ ಸಾಕಷ್ಟು ಚಟುವಟಿಕೆಗಳು ಗರಿಗೆದರಿದವು.

ಭಾರತ vs ದ.ಆಫ್ರಿಕಾ: ಮೈದಾನದಲ್ಲಿ ಮಯಾಂಕ್ ಕುರಿತು ಅಸಮಾಧಾನ ಹೊರಹಾಕಿದ ಕೊಹ್ಲಿಭಾರತ vs ದ.ಆಫ್ರಿಕಾ: ಮೈದಾನದಲ್ಲಿ ಮಯಾಂಕ್ ಕುರಿತು ಅಸಮಾಧಾನ ಹೊರಹಾಕಿದ ಕೊಹ್ಲಿ

ಮೊದಲಿಗೆ ಅಸ್ತಿತ್ವದಲ್ಲಿರುವ ಫ್ರಾಂಚೈಸಿಗಳು ತಮಗೆ ಬೇಕಾದ ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬ ನಿಯಮದಡಿಯಲ್ಲಿ ರಿಟೆನ್ಷನ್ ಪ್ರಕ್ರಿಯೆ ಜರುಗಿತು. ಹೀಗೆ ನಡೆದ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಅಸ್ತಿತ್ವದಲ್ಲಿರುವ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರಿಟೇನ್ ಮಾಡಿಕೊಂಡು ಉಳಿದ ಆಟಗಾರರನ್ನು ತಂಡದಿಂದ ಕೈಬಿಟ್ಟಿವೆ. ಹೀಗೆ ರಿಟೈನ್ ಆಗದೇ ಇರುವ ಆಟಗಾರರು ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದು ಈಗಾಗಲೇ ಬಿಸಿಸಿಐ ಮೆಗಾ ಹರಾಜು ಪ್ರಕ್ರಿಯೆ ನಡೆಯುವ ದಿನಾಂಕವನ್ನು ಕೂಡ ನಿಗದಿಪಡಿಸಿದೆ.

ಇನ್ನು ಬೆಂಗಳೂರು ನಗರದಲ್ಲಿ ಫೆಬ್ರವರಿ 12 ಹಾಗೂ 13ರಂದು ಮೆಗಾ ಹರಾಜು ಪ್ರಕ್ರಿಯೆ ನಡೆಸಲು ಬಿಸಿಸಿಐ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸಿ ರಿಟೆನ್ಷನ್ ಪ್ರಕ್ರಿಯೆಯಲ್ಲಿ ರಿಟೈನ್ ಆಗದೇ ಹೊರಬಿದ್ದಿರುವ ಆಟಗಾರರ ಜೊತೆ ಮತ್ತೊಂದಷ್ಟು ನೂತನ ಆಟಗಾರರು ಕೂಡ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಿಸಿಸಿಐ ತಿಳಿಸಿರುವ ಪ್ರಕಾರ ಈ ಬಾರಿ ನಡೆಯಲಿರುವ ಮೆಗಾ ಹರಾಜು ಪ್ರಕ್ರಿಯೆ ದೊಡ್ಡ ಮಟ್ಟದಲ್ಲಿ ಇರಲಿದ್ದು, ಬರೋಬ್ಬರಿ 1000 ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆಯೇ ಈ ವಿಷಯವನ್ನು ತಿಳಿಸಿದ್ದ ಬಿಸಿಸಿಐ ವಿವಿಧ ದೇಶಗಳ ಕ್ರಿಕೆಟ್ ಬೋರ್ಡ್‌ಗಳು ಹಾಗೂ ಭಾರತ ದೇಶದಲ್ಲಿನ ಹಲವಾರು ರಾಜ್ಯಗಳ ಕ್ರಿಕೆಟ್ ಬೋರ್ಡ್‌ಗಳಿಗೆ ಈಗಾಗಲೇ ಮೆಗಾ ಹರಾಜಿನ ಕುರಿತು ವಿಷಯವನ್ನು ತಿಳಿಸಿದ್ದು ಆದಷ್ಟು ಬೇಗ ಆಟಗಾರರ ಪಟ್ಟಿಯನ್ನು ಸಲ್ಲಿಸುವಂತೆ ಸೂಚನೆಯನ್ನು ನೀಡಲಾಗಿದೆ ಎಂದು ತಿಳಿಸಿತ್ತು.

ಭಾರತದ ಈ ‌ಅಟಗಾರನಿಗೆ ಮರ್ಯಾದೆ ಕೊಡಿ ಎಂದು ಬಿಸಿಸಿಐಗೆ ಬುದ್ಧಿ ಹೇಳಿದ ದ.ಆಫ್ರಿಕಾದ ಪೊಲಾಕ್!ಭಾರತದ ಈ ‌ಅಟಗಾರನಿಗೆ ಮರ್ಯಾದೆ ಕೊಡಿ ಎಂದು ಬಿಸಿಸಿಐಗೆ ಬುದ್ಧಿ ಹೇಳಿದ ದ.ಆಫ್ರಿಕಾದ ಪೊಲಾಕ್!

ಈ ವಿಷಯದ ಕುರಿತಾಗಿ ಇದೀಗ ಮತ್ತೊಂದು ಮಹತ್ವದ ಪ್ರಕಟಣೆಯನ್ನು ಹೊರಡಿಸಿರುವ ಬಿಸಿಸಿಐ ಮೆಗಾ ಹರಾಜಿಗೆ ಆಟಗಾರರ ಹೆಸರನ್ನು ನೋಂದಾಯಿಸುವುದಕ್ಕೆ ಅಂತಿಮ ದಿನಾಂಕವನ್ನು ನಿಗದಿಪಡಿಸಿದೆ. ಜನವರಿ 17 ಮೆಗಾ ಹರಾಜಿಗೆ ಆಟಗಾರರ ಹೆಸರನ್ನು ನೋಂದಾಯಿಸುವುದಕ್ಕೆ ಅಂತಿಮ ದಿನವಾಗಿದೆ ಎಂದು ಬಿಸಿಸಿಐ ಪತ್ರದ ಮೂಲಕ ವಿವಿಧ ದೇಶಗಳ ಕ್ರಿಕೆಟ್ ಬೋರ್ಡ್‌ ಹಾಗೂ ರಾಜ್ಯಗಳ ಕ್ರಿಕೆಟ್‌ ಬೋರ್ಡ್‌ಗಳಿಗೆ ತಿಳಿಸಿದೆ.

ಇನ್ನು ಬಿಸಿಸಿಐ ನೀಡಿರುವ ಮಾಹಿತಿಯ ಪ್ರಕಾರ ಬರೋಬ್ಬರಿ 1000 ಆಟಗಾರರು ಈ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದು, ಈ ಪೈಕಿ 250 ಆಟಗಾರರು ಮಾತ್ರ ಹರಾಜಾಗಲಿದ್ದಾರೆ. ಇದರ ಜೊತೆಗೆ ನೂತನ ಫ್ರಾಂಚೈಸಿಗಳಾದ ಆಯ್ಕೆಯಾಗಿರುವ ಲಕ್ನೋ ಮತ್ತು ಅಹಮದಬಾದ್ ತಂಡಗಳು ಈ ಮೆಗಾ ಹರಾಜು ಪ್ರಕ್ರಿಯೆ ಹೊರತುಪಡಿಸಿ ಹೊರಗಿನಿಂದ ಗರಿಷ್ಠ ಮೂವರು ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದಾಗಿದ್ದು, ತಾವು ಯಾವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಿದ್ದೇವೆ ಎಂಬುದನ್ನು ಜನವರಿ 22ರೊಳಗೆ ತಿಳಿಸಬೇಕು ಎಂದು ಬಿಸಿಸಿಐ ಸೂಚಿಸಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, January 13, 2022, 21:17 [IST]
Other articles published on Jan 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X