ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022 Playoffs : ಪ್ಲೇಆಫ್, ಫೈನಲ್‌ನ ವೇಳಾಪಟ್ಟಿ, ಸ್ಥಳ ಅಂತಿಮಗೊಳಿಸಿದ ಬಿಸಿಸಿಐ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ಪಂದ್ಯಾವಳಿಯು ಅಂತಿಮ ಹಂತಕ್ಕೆ ತಲುಪುತ್ತಿರುವಾಗ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ಲೇಆಫ್‌ಗಳು ಮತ್ತು ಅಂತಿಮ ಹಣಾಹಣಿಯ (ಫೈನಲ್) ವೇಳಾಪಟ್ಟಿ ಮತ್ತು ಸ್ಥಳಗಳನ್ನು ಪ್ರಕಟಿಸಿದೆ.

ಐಪಿಎಲ್ ಬಿಡುಗಡೆ ಮಾಡಿರುವ ಮಾಧ್ಯಮ ಹೇಳಿಕೆ ಪ್ರಕಾರ, ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳು ಮೇ 24ರಿಂದ ಮೇ 29, 2022 ರವರೆಗೆ ಕೋಲ್ಕತ್ತಾ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿವೆ.

IPL 2022: BCCI Announces Schedule and Venues for TATA IPL Playoffs and Final

ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳ ವಿವರ
ಕ್ವಾಲಿಫೈಯರ್-1 ಮೇ 24ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಅದರ ನಂತರ ಮೇ 25ರಂದು ಎಲಿಮಿನೇಟರ್ ನಡೆಯಲಿದೆ. ಕ್ವಾಲಿಫೈಯರ್- 2 ಮತ್ತು ಫೈನಲ್‌ ಪಂದ್ಯಕ್ಕೆ ಸಂಬಂಧಿಸಿದಂತೆ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಕ್ರಮವಾಗಿ ಮೇ 27 ಮತ್ತು 29ರಂದು ಆತಿಥ್ಯ ವಹಿಸಲಿದೆ.

IPL 2022: BCCI Announces Schedule and Venues for TATA IPL Playoffs and Final

ಪ್ರಸ್ತುತ, ಎಲ್ಲಾ ಲೀಗ್ ಪಂದ್ಯಗಳು ಮಹಾರಾಷ್ಟ್ರ ರಾಜ್ಯದಲ್ಲಿ ನಡೆಯುತ್ತಿವೆ ಮತ್ತು ನಾಲ್ಕು ಸ್ಥಳಗಳಲ್ಲಿ ಹರಡಿಕೊಂಡಿವೆ. ಮುಂಬೈನ ಎರಡು ಸ್ಟೇಡಿಯಂ, ಒಂದು ನವಿ ಮುಂಬೈ ಮತ್ತು ಪುಣೆಯ ಒಂದು ಸ್ಟೇಡಿಯಂನಲ್ಲಿ ಲೀಗ್ ಪಂದ್ಯಗಳು ನಡೆಯುತ್ತಿವೆ. ಮುಂಬೈನ ವಾಂಖೆಡೆ ಸ್ಟೇಡಿಯಂ ಮತ್ತು ಬ್ರಬೋರ್ನ್ ಸ್ಟೇಡಿಯಂ, ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಪುಣೆಯ ಗಹುಂಜೆಯ ಎಂಸಿಎ ಸ್ಟೇಡಿಯಂ ಪ್ರಸ್ತುತ ಲೀಗ್ ಪಂದ್ಯಗಳ ಸ್ಥಳಗಳಾಗಿವೆ.

IPL 2022: BCCI Announces Schedule and Venues for TATA IPL Playoffs and Final

ಮಹಿಳಾ ಟಿ20 ಚಾಲೆಂಜ್ ಪುನರಾರಂಭ

Virat Kohli ಹಂಚಿಕೊಂಡ ವಿಶೇಷ GYM ವಿಡಿಯೋ | Oneindia Kannada

ಇನ್ನು ಇದೇ ಸಂದರ್ಭದಲ್ಲಿ ಈ ವರ್ಷ ಮಹಿಳಾ ಟಿ20 ಚಾಲೆಂಜ್ ಪುನರಾರಂಭಗೊಳ್ಳಲಿದ್ದು, ಪುಣೆ ನಾಲ್ಕನೇ ಆವೃತ್ತಿಯ ಪಂದ್ಯಾವಳಿಗೆ ಆತಿಥ್ಯ ವಹಿಸಲಿದೆ. ಮಹಿಳಾ ಟಿ20 ಚಾಲೆಂಜ್ ಪಂದ್ಯಗಳು ಮೇ 23, ಮೇ 24, ಮೇ 26 ಮತ್ತು ಮೇ 28ರಂದು ಫೈನಲ್ ಪಂದ್ಯ ನಡೆಯಲಿವೆ ಎಂದು ಬಿಸಿಸಿಐ ತಿಳಿಸಿದೆ.

Story first published: Wednesday, May 4, 2022, 10:17 [IST]
Other articles published on May 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X