ರೋಹಿತ್ ಶರ್ಮಾ, ಕೊಹ್ಲಿ ಕಳಪೆ ಫಾರ್ಮ್ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದೇನು?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಕಳಪೆ ಫಾರ್ಮ್ ಕಾಳಜಿಯ ವಿಷಯವಲ್ಲ. ಏಕೆಂದರೆ ಅವರು ಶೀಘ್ರದಲ್ಲೇ ರನ್‌ ಗಳಿಸುವ ಮೂಲಕ ಫಾರ್ಮ್‌ಗೆ ಮರಳುತ್ತಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ದಾಖಲೆಯ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ 14 ಇನ್ನಿಂಗ್ಸ್‌ಗಳಿಂದ 19.14 ಸರಾಸರಿ ಮತ್ತು 120.17 ಸ್ಟ್ರೈಕ್-ರೇಟ್‌ನೊಂದಿಗೆ 268 ರನ್‌ಗಳು ಗಳಿಸಿದ ನಂತರ ಅವರ ತಂಡವು ಈ ಋತುವಿನಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಈ ಋತುವನ್ನು ಕೊನೆಗಳಿಸಿತು.

ಪ್ರಚಾರ ಕಾರ್ಯಕ್ರಮವೊಂದರಲ್ಲಿ ರೋಹಿತ್ ಶರ್ಮಾ ಫಾರ್ಮ್ ಬಗ್ಗೆ ಮಾತನಾಡಿದ ಸೌರವ್ ಗಂಗೂಲಿ, "ಎಲ್ಲರೂ ಮನುಷ್ಯರೇ, ತಪ್ಪುಗಳಾಗುತ್ತವೆ. ಆದರೆ ನಾಯಕನಾಗಿ ರೋಹಿತ್ ದಾಖಲೆ ಅತ್ಯುತ್ತಮವಾಗಿದೆ. ಐದು ಐಪಿಎಲ್ ಪ್ರಶಸ್ತಿಗಳು, ಏಷ್ಯಾಕಪ್ ವಿಜೇತರು, ಅವರು ನಾಯಕತ್ವ ವಹಿಸಿದ್ದನ್ನು ಗೆದ್ದಿದ್ದಾರೆ. ಆದ್ದರಿಂದ ನಾಯಕರಾಗಿ ಅವರ ದಾಖಲೆಯು ಅತ್ಯುತ್ತಮವಾಗಿದೆ. ಅವರೆಲ್ಲರೂ ಮನುಷ್ಯರೇ ಆಗಿರುವುದರಿಂದ ತಪ್ಪುಗಳು ಸಂಭವಿಸುತ್ತವೆ," ಎಂದು ತಿಳಿಸಿದರು.

ಈ ಬಾರಿಯ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್

ಈ ಬಾರಿಯ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್

ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಕೊನೆಯ ಪಂದ್ಯಕ್ಕೂ ಮುನ್ನ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ 13 ಇನ್ನಿಂಗ್ಸ್‌ಗಳಲ್ಲಿ ಮೂರು ಗೋಲ್ಡನ್ ಡಕ್‌ಗಳನ್ನು ಒಳಗೊಂಡಂತೆ 236 ರನ್‌ಗಳೊಂದಿಗೆ ಈ ಬಾರಿಯ ಐಪಿಎಲ್‌ನಲ್ಲಿ ಕಳಪೆ ಬ್ಯಾಟಿಂಗ್ ಮಾಡಿದ್ದಾರೆ.

ಈ ಜೋಡಿಯನ್ನು ಬೆಂಬಲಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, "ಅವರು ಉತ್ತಮ ಆಟಗಾರರು. ಅವರು ರನ್‌ಗಳ ಮೂಲಕ ಮತ್ತೆ ಫಾರ್ಮ್‌ಗೆ ಮರಳುತ್ತಾರೆ ಎಂದು ನನಗೆ ಖಾತ್ರಿಯಿದೆ. ಅವರು ತುಂಬಾ ಕ್ರಿಕೆಟ್ ಆಡುತ್ತಾರೆ, ಕೆಲವೊಮ್ಮೆ ಅವರು ಫಾರ್ಮ್‌ನಿಂದ ಹೊರಗುಳಿಯುತ್ತಾರೆ. ಕೊಹ್ಲಿ ಕೊನೆಯ ಪಂದ್ಯದಲ್ಲಿ ವಿಶೇಷವಾಗಿ ಆರ್‌ಸಿಬಿಗೆ ಅಗತ್ಯವಿದ್ದಾಗ ಉತ್ತಮವಾಗಿ ಆಡಿದರು ಎಂದು ಸಮರ್ಥಿಸಿಕೊಂಡರು.

ಆರ್‌ಸಿಬಿ ಅರ್ಹತೆ ಪಡೆದಿದ್ದಕ್ಕಾಗಿ ತುಂಬಾ ಸಂತೋಷಪಟ್ಟಿದ್ದಾರೆ

ಆರ್‌ಸಿಬಿ ಅರ್ಹತೆ ಪಡೆದಿದ್ದಕ್ಕಾಗಿ ತುಂಬಾ ಸಂತೋಷಪಟ್ಟಿದ್ದಾರೆ

"ಅದಕ್ಕಾಗಿಯೇ ಅವರು (ಕೊಹ್ಲಿ) ಆರ್‌ಸಿಬಿ ಅರ್ಹತೆ ಪಡೆದಿದ್ದಕ್ಕಾಗಿ ತುಂಬಾ ಸಂತೋಷಪಟ್ಟಿದ್ದಾರೆ. ಅವರೆಲ್ಲರೂ ಶ್ರೇಷ್ಠ ಆಟಗಾರರು, ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಸಮಯದ ವಿಷಯವಾಗಿದೆ," ಎಂದು ಭಾರತದ ಮಾಜಿ ನಾಯಕ ಗಂಗೂಲಿ ಹೇಳಿದರು.

ಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಸ್ವದೇಶಿ ಅಂತಾರಾಷ್ಟ್ರೀಯ ಟಿ20 ಸರಣಿಯಿಂದ ನಾಯಕ ಶರ್ಮಾ, ಕೊಹ್ಲಿ ಮತ್ತು ಹಿರಿಯ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ರೋಹಿತ್ ಶರ್ಮ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡದ ನಾಯಕರಾಗಿ ಕರ್ನಾಟಕದ ಕೆಎಲ್ ರಾಹುಲ್ ನೇಮಕಗೊಂಡಿದ್ದಾರೆ.

ಡಿಆರ್‌ಎಸ್ ನಿರ್ಧಾರ ತೆಗೆದುಕೊಳ್ಳುವಲ್ಲಿ ರಿಷಭ್ ವಿಫಲ

ಡಿಆರ್‌ಎಸ್ ನಿರ್ಧಾರ ತೆಗೆದುಕೊಳ್ಳುವಲ್ಲಿ ರಿಷಭ್ ವಿಫಲ

ಇನ್ನು ರಿಷಭ್ ಪಂತ್ ವಿಶೇಷವಾಗಿ ತನ್ನ ಪ್ರಮುಖ ಘಟ್ಟದಲ್ಲಿ ಡಿಆರ್‌ಎಸ್ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯಿಸಿ, ಸಮಯದೊಂದಿಗೆ ಸುಧಾರಿಸುತ್ತಾರೆ ಎಂದು ಭಾವಿಸಿದ್ದೇನೆ ಎಂದರು.

"ರಿಷಭ್ ಪಂತ್ ಅವರನ್ನು ಎಂಎಸ್ ಧೋನಿಯೊಂದಿಗೆ ಹೋಲಿಸಬೇಡಿ. ಧೋನಿಗೆ ತುಂಬಾ ಅನುಭವವಿದೆ. ಐಪಿಎಲ್, ಟೆಸ್ಟ್ ಮತ್ತು ಏಕದಿನ ಪಂದ್ಯಗಳು ಸೇರಿದಂತೆ 500 ಪ್ಲಸ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಆದ್ದರಿಂದ ರಿಷಭ್ ಪಂತ್ ಅವರನ್ನು ಧೋನಿಯೊಂದಿಗೆ ಹೋಲಿಸುವುದು ಸರಿಯಲ್ಲ," ಎಂದರು.

ಐಪಿಎಲ್ ಪ್ರತಿಭೆಗಳಿಗೆ ಮಾನ್ಯತೆ ನೀಡುವ ಸ್ಥಳ

ಐಪಿಎಲ್ ಪ್ರತಿಭೆಗಳಿಗೆ ಮಾನ್ಯತೆ ನೀಡುವ ಸ್ಥಳ

ಸನ್‌ರೈಸರ್ಸ್ ಹೈದರಾಬಾದ್ ವೇಗದ ಬೌಲರ್ ಉಮ್ರಾನ್ ಮಲಿಕ್ ಐಪಿಎಲ್‌ನಲ್ಲಿ ತನ್ನ ಕಚ್ಚಾ ವೇಗದಿಂದ ಗಮನ ಸೆಳೆದವರಲ್ಲಿ ಒಬ್ಬರಾಗಿದ್ದಾರೆ. ಸತತವಾಗಿ 150 ಕಿ.ಮೀ ವೇಗದ ಬೌಲಿಂಗ್ ಮಾಡಿದ್ದರಿಂದ ಅಂತಾರಾಷ್ಟ್ರೀಯ ಟಿ20 ಸರಣಿಗೆ ಚೊಚ್ಚಲ ಬಾರಿಗೆ ಭಾರತ ತಂಡದಿಂದ ಕರೆ ಪಡೆದರು.

ಈ ಕುರಿತು ಸೌರವ್ ಗಂಗೂಲಿ ಮಾತನಾಡಿ, "ಅವರ ಭವಿಷ್ಯವು ಅವರ ಕೈಯಲ್ಲಿದೆ. ಅವರು ಫಿಟ್ ಆಗಿದ್ದು ಮತ್ತು ಈ ವೇಗದಲ್ಲಿ ಬೌಲಿಂಗ್ ಮಾಡಿದರೆ, ಅವರು ದೀರ್ಘಕಾಲದವರೆಗೆ ಇರುತ್ತಾರೆ ಎಂದು ನನಗೆ ಖಾತ್ರಿಯಿದೆ. ಈ ಐಪಿಎಲ್‌ನಲ್ಲಿ ಅನೇಕರು ಉತ್ತಮವಾಗಿ ಆಡಿದ್ದಾರೆ. ತಿಲಕ್ ವರ್ಮಾ ಮುಂಬೈ ಇಂಡಿಯನ್ಸ್‌ಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ರಾಹುಲ್ ತ್ರಿಪಾಠಿ ಸನ್‌ರೈಸರ್ಸ್‌ಗೆ, ರಾಹುಲ್ ತೆವಾಟಿಯಾ ಗುಜರಾತ್ ಟೈಟನ್ಸ್‌ಗೆ ಉತ್ತಮವಾಗಿ ಆಡಿದ್ದಾರೆ."

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, May 24, 2022, 19:52 [IST]
Other articles published on May 24, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X