ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಹೊಸ ಫ್ರಾಂಚೈಸಿಗಳಿಗೆ ಜನವರಿ 22ರ ಡೆಡ್‌ಲೈನ್ ನೀಡಿದ ಬಿಸಿಸಿಐ

IPL 2022: BCCI sets deadline for new two franchises to complete new signings

ಒಂದೆಡೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಅಂತಿಮ ಘಟ್ಟವನ್ನು ತಲುಪಿದ್ದರೆ ಮತ್ತೊಂದೆಡೆ ಬಿಸಿಸಿಐ ಮುಂಬರುವ ಐಪಿಎಲ್ ಮಹಾ ಹರಾಜಿನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚಟುವಟಿಕೆಗಳನ್ನು ಚುರುಕುಗೊಳಿಸಿದೆ. ಈ ಬಾರಿಯ ಐಪಿಎಲ್‌ನಿಂದ ಕಾಣಿಸಿಕೊಳ್ಳುತ್ತಿರುವ ಎರಡು ಹೊಸ ಫ್ರಾಂಚೈಸಿಗಳಿಗೆ ಬಿಸಿಸಿಐ ಮೂವರು ಆಟಗಾರರನ್ನು ಅಂತಿಮಗೊಳಿಸಲು ಈಗ ಗಡುವು ನೀಡಿದೆ.

ಈ ಬಾರಿಯ ಐಪಿಎಲ್‌ನಲ್ಲಿ ಭಾಗವಹಿಸುತ್ತಿರುವ ಎರಡಡು ಹೊಸ ಫ್ರಾಂಚೈಸಿಗಳಾದ ಅಹಮದಾಬಾದ್ ಹಾಗೂ ಲಕ್ನೋ ತಂಡಗಳು ತಲಾ ಮೂವರು ಆಟಗಾರರನ್ನು ಮುಂಬರುವ ಹರಾಜಿಗೆ ಮುನ್ನ ತಂಡಕ್ಕೆ ಸೇರ್ಪಡೆಗೊಳಿಸುವ ವಿಶೇಷ ಅವಕಾಶವನ್ನು ಹೊಂದಿದೆ. ಹೀಗಾಗಿ ಮೂವರು ಆಟಗಾರರೊಂದಿಗೆ ಒಪ್ಪಂದವನ್ನು ಅಂತಿಮಗೊಳಿಸಲು ಈ ಎರಡು ತಂಡಗಳಿಗೆ ಜನವರಿ 22 ಡೆಡ್‌ಲೈನ್‌ ಆಗಿದೆ. ಜನವರಿ 22ರ ಸಂಜೆ 5 ಗಂಟೆಗೆ ಮುನ್ನ ಈ ಎರಡು ತಂಡಗಳು ಕೂಡ ಮೂವರು ಆಟಗಾರರನ್ನು ಅಂತಿಮಗೊಳಿಸಬೇಕಿದೆ.

ವಾ. ಸುಂದರ್‌ಗೆ ಕೊರೊನಾ, ಜಯಂತ್‌ ಯಾದವ್‌ಗೆ ದಕ್ಷಿಣ ಆಫ್ರಿಕಾದಲ್ಲೇ ಇರಲು ಸೂಚನೆ!ವಾ. ಸುಂದರ್‌ಗೆ ಕೊರೊನಾ, ಜಯಂತ್‌ ಯಾದವ್‌ಗೆ ದಕ್ಷಿಣ ಆಫ್ರಿಕಾದಲ್ಲೇ ಇರಲು ಸೂಚನೆ!

ಈ ಬಾರಿ ಮಹಾ ಹರಾಜು ನಡೆಯುತ್ತಿರುವ ಕಾರಣ ಈಗಾಗಲೇ ಐಪಿಎಲ್‌ನ ಭಾಗವಾಗಿರುವ 8 ತಂಡಗಳು ಹರಾಜಿಗೆ ಆಟಗಾರರ ಬಿಡುಗಡೆಗೊಳಿಸುವ ಮುನ್ನ ಗರಿಷ್ಠ ನಾಲ್ವರು ಆಟಗಾರರನ್ನು ತಂಡದಲ್ಲಿಯೇ ಉಳಿಸಿಕೊಳ್ಳುವ ಅವಕಾಶವನ್ನು ಹೊಂದಿತ್ತು. ಇದರಲ್ಲಿ ಕೆಲ ತಂಡಗಳು ಗರಿಷ್ಠ ನಾಲ್ಕು ಆಟಗಾರರನ್ನು ಉಳಿಸಿಕೊಂಡಿದ್ದರೆ ಇನ್ನು ಕೆಲ ತಂಡಗಳು ಮೂರು ಆಟಗಾರರನ್ನು ಮಾತ್ರವೇ ರೀಟೈನ್ ಮಾಡಿಕೊಂಡಿತ್ತು. ಪಂಜಾಬ್ ಕಿಂಗ್ಸ್ ಮಾತ್ರ ಇಬ್ಬರು ಆಟಗಾರರನ್ನು ಮಾತ್ರವೇ ರೀಟೈನ್ ಮಾಡಿಕೊಂಡಿತ್ತು.

ಈ ಸಂದರ್ಭದಲ್ಲಿ ರೀಟೈನ್ ಮಾಡಿಕೊಳ್ಳದ ಆಟಗಾರರೆಲ್ಲರೂ ಕೂಡ ಹರಾಜು ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಹರಾಜು ಪಟ್ಟಿಯಲ್ಲಿರುವ ಆಟಗಾರರಲ್ಲಿ ಮೂವರು ಆಟಗಾರರನ್ನು ಹೊಸ ಎರಡು ಪ್ರಾಂಚೈಸಿಗಳು ತಮ್ಮ ತಂಡಕ್ಕೆ ಸೇರಿಕೊಳ್ಳುವ ಅವಕಾಶವಿದೆ. ಹೀಗಾಗಿ ಎರಡು ತಂಡಗಳು ಕೂಡ ಪ್ರಮುಖ ಆಟಗಾರರನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಭಾರೀ ಕಸರತ್ತನ್ನು ನಡೆಸುತ್ತಿವೆ. ಆದರೆ ಈವರೆಗೆ ಯಾವ ಆಟಗಾರನನ್ನು ಕೂಡ ಈ ತಂಡಗಳು ಅಂತಿಮಗೊಳಿಸಿಲ್ಲ.

ಕುತೂಹಲಕಾರಿ ಸಂಗತಿಯೆಂದರೆ ಕೆಲ ಅನಧಿಕೃತವಾಗಿ ವರದಿಗಳ ಪ್ರಕಾರ ಈ ಎರಡು ಫ್ರಾಂಚೈಸಿಗಳು ಕೂಡ ತಮ್ಮ ತಂಡದ ನಾಯಕರನ್ನು ಅಂತಿಮಗೊಳಿಸಿದೆ ಎನ್ನಲಾಗಿದೆ. ಅಹಮದಾಬಾದ್ ಫ್ರಾಂಚೈಸಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಮೊದಲ ಆಯ್ಕೆಯ ಆಟಗಾರನನ್ನಾಗಿ ನೇಮಿಸಿಕೊಂಡು ನಾಯಕತ್ವ ನೀಡಲಿದೆ ಎಂದು ವರದಿಯಾಗಿದೆ. ಇನ್ನು ಲಕ್ನೋ ಫ್ರಾಂಚೈಸಿ ಕೆಎಲ್ ರಾಹುಲ್‌ರನ್ನು ನಾಯಕನನ್ನಾಗಿ ಘೋಷಿಸುವ ಸಾಧ್ಯತೆಗಳಿದೆ.

ಸಿಕ್ಸರ್ ಸಿಡಿಸೋದ್ರಲ್ಲಿ ಕೊಹ್ಲಿಗಿಂತ ಮುಂದಿರುವ ಉಮೇಶ್ ಯಾದವ್: ವಿರಾಟ್‌ನ ಅಪರೂಪದ ಸಿಕ್ಸರ್!ಸಿಕ್ಸರ್ ಸಿಡಿಸೋದ್ರಲ್ಲಿ ಕೊಹ್ಲಿಗಿಂತ ಮುಂದಿರುವ ಉಮೇಶ್ ಯಾದವ್: ವಿರಾಟ್‌ನ ಅಪರೂಪದ ಸಿಕ್ಸರ್!

Virat Kohli ಶ್ರೇಷ್ಠ ಆಟಗಾರ ಆಗಿದ್ದರೂ ಈ ವಿಚಾರದಲ್ಲಿ ಹಿಂದೆ | Oneindia Kannada

ಮಂಗಳವಾರ ಬಿಸಿಸಿಐ ಲಕ್ನೋ ಹಾಗೂ ಅಹಮದಾಬಾದ್ ಫ್ರಾಂಚೈಸಿ ಜೊತೆಗೆ ಕಾನ್ಫರೆನ್ಸ್ ಕರೆಯ ಮೂಲಕ ಮೂವರು ಆಟಗಾರರ ಸೇರ್ಪಡೆಯ ವಿಧಾನದ ಬಗ್ಗೆ ಸೂಚನೆಗಳನ್ನು ನೀಡಿದ್ದು ಸೇರ್ಪಡೆಗೆ ಅಂತಿಮ ಗಡುವನ್ನು ಕೂಡ ನಿಗದಿಪಡಿಸಿದೆ. ಈ ಮೂವರು ಆಟಗಾರರ ಸೇರ್ಪಡೆಗೆ ಹೊಸ ಫ್ರಾಂಚೈಸಿಗಳು ಗರಿಷ್ಠ 33 ಕೋಟಿಯನ್ನು ವ್ಯಯಿಸುವ ಅವಕಾಶ ನೀಡಲಾಗಿದೆ. ಓರ್ವ ಅನ್‌ಕ್ಯಾಪ್‌ಡ್ ಹಾಗೂ ಓರ್ವ ವಿದೇಶಿ ಆಟಗಾರನನ್ನು ಕೂಡ ಸೇರ್ಪಡೆಗೊಳಿಸುವ ಅವಕಾಶವಿದೆ. ಮೂವರು ಆಟಗಾರರ ಸ್ಯಾಲರಿ ಸ್ಲ್ಯಾಬ್‌ಅನ್ನು ಕೂಡ ಬಿಸಿಸಿಐ ನಿಗದಿಗೊಳಿಸಿದೆ.

Story first published: Wednesday, January 12, 2022, 17:57 [IST]
Other articles published on Jan 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X