ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022 ಸಿದ್ಧತೆಗೂ ಮುನ್ನ ಹಿನ್ನಡೆ; ಈ 2 ಕ್ರೀಡಾಂಗಣಗಳಲ್ಲಿ ಮಾತ್ರ ಸಂಪೂರ್ಣ ಟೂರ್ನಿ!

IPL 2022: BCCI to meet franchises to discuss about plan B for mega auction, dates venhues and schedule
IPL 2022 Mega Auction ಬಗ್ಗೆ ಕಂಪ್ಲೀಟ್ ಮಾಹಿತಿ | Oneindia Kannada

ಮುಂಬರುವ ಹದಿನೈದನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಹಲವಾರು ಕಾರಣಗಳಿಂದ ಭಾರಿ ನಿರೀಕ್ಷೆ ಮತ್ತು ಕುತೂಹಲಗಳನ್ನು ಹುಟ್ಟುಹಾಕಿದೆ. ಹೌದು, ಮುಂಬರುವ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಅಹ್ಮದಾಬಾದ್ ಮತ್ತು ಲಕ್ನೋ ಎಂಬ 2 ನೂತನ ಫ್ರಾಂಚೈಸಿಗಳು ಸೇರ್ಪಡೆಗೊಳ್ಳುತ್ತಿರುವ ಕಾರಣದಿಂದ ಟ್ರೋಫಿಗಾಗಿ ಹತ್ತು ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಈಗಾಗಲೇ ಈ ಎರಡೂ ತಂಡಗಳು ಆಟಗಾರರು ಮತ್ತು ಸಿಬ್ಬಂದಿ ವರ್ಗದವರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಪ್ರಕ್ರಿಯೆಯಲ್ಲಿ ನಿರತವಾಗಿದ್ದು ಟೂರ್ನಿ ಆರಂಭಕ್ಕೂ ಮುನ್ನವೇ ಟೂರ್ನಿಯ ಕುರಿತಾದ ಸುದ್ದಿಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿಯೇ ಹರಿದಾಡುತ್ತಿವೆ.

ಹಂಸಲೇಖ ಅವರ ಪ್ರೇಮಲೋಕ ಶುರುವಾದಾಗ ನನ್ನ ಕ್ರಿಕೆಟ್ ಲೋಕ ಶುರುವಾಯಿತು ಎಂದ ಅನಿಲ್ ಕುಂಬ್ಳೆಹಂಸಲೇಖ ಅವರ ಪ್ರೇಮಲೋಕ ಶುರುವಾದಾಗ ನನ್ನ ಕ್ರಿಕೆಟ್ ಲೋಕ ಶುರುವಾಯಿತು ಎಂದ ಅನಿಲ್ ಕುಂಬ್ಳೆ

ಇನ್ನು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಈ ನೂತನ ಫ್ರಾಂಚೈಸಿಗಳ ಸೇರ್ಪಡೆಯಾಗಿರುವುದರಿಂದ ಟೂರ್ನಿಯನ್ನು ಆರಂಭಿಸುವ ಮುನ್ನ ಕಡ್ಡಾಯವಾಗಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯನ್ನು ನಡೆಸಲೇಬೇಕಾಗಿದೆ. ಹೀಗಾಗಿ ಆಟಗಾರನ ಮೆಗಾ ಹರಾಜು ಪ್ರಕ್ರಿಯೆಯನ್ನು ಜನವರಿ ತಿಂಗಳಿನಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಈ ಕಾರ್ಯಕ್ರಮವನ್ನು ಫೆಬ್ರವರಿ ತಿಂಗಳಿಗೆ ಬಿಸಿಸಿಐ ಮುಂದೂಡಿದ್ದು, ಮೆಗಾ ಹರಾಜು ಪ್ರಕ್ರಿಯೆ ನಡೆದ 2 ತಿಂಗಳ ನಂತರ ಅಂದರೆ ಏಪ್ರಿಲ್ 2ನೇ ತಾರೀಕಿನಂದು ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಮೂಲಕ ಚಾಲನೆ ನೀಡುವ ನಿರ್ಧಾರವನ್ನು ಮಾಡಿತ್ತು. ಹೌದು, ಮುಂಬರುವ ಐಪಿಎಲ್ ಟೂರ್ನಿಯನ್ನು ಭಾರತದ ನೆಲದಲ್ಲಿಯೇ ಈ ಹಿಂದೆ ನಡೆಯುತ್ತಿದ್ದಂತೆ ವಿವಿಧ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ನಡೆಸಲು ಬಿಸಿಸಿಐ ಯೋಜನೆಯನ್ನು ಹಾಕಿಕೊಂಡಿತ್ತು.

ದಕ್ಷಿಣ ಆಫ್ರಿಕಾ ನೆಲದಲ್ಲಿ ಅತಿಕೆಟ್ಟ ದಾಖಲೆ ಮಾಡಿದ್ದಾರೆ ಹಿರಿಯರು; ಇದನ್ನು ಅಳಿಸಿಹಾಕ್ತಾರಾ ಕನ್ನಡಿಗರು?ದಕ್ಷಿಣ ಆಫ್ರಿಕಾ ನೆಲದಲ್ಲಿ ಅತಿಕೆಟ್ಟ ದಾಖಲೆ ಮಾಡಿದ್ದಾರೆ ಹಿರಿಯರು; ಇದನ್ನು ಅಳಿಸಿಹಾಕ್ತಾರಾ ಕನ್ನಡಿಗರು?

ಆದರೆ ಇದೀಗ ಈ ಯೋಜನೆಗಳೆಲ್ಲ ತಲೆಕೆಳಗಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳ ಹೂಡಿಕೆದಾರರನ್ನು ಒಂದೆಡೆ ಸೇರಿಸಿ ಮತ್ತೊಮ್ಮೆ ಸಭೆ ನಡೆಸಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಹೌದು, ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳ ಜೊತೆ ಮತ್ತೊಂದು ಸಭೆಯನ್ನು ನಡೆಸಲಿದ್ದು ಮುಂಬರುವ ಐಪಿಎಲ್ ಟೂರ್ನಿಯನ್ನು ನಡೆಸಲು ರಚಿಸಿರುವ ಎರಡನೇ ಯೋಜನೆ ಕುರಿತು ಚರ್ಚಿಸಲಿದೆ ಎನ್ನಲಾಗಿದೆ. ಹೀಗೆ ಬಿಸಿಸಿಐ ನಡೆಸಲಿರುವ ಸಭೆಯಲ್ಲಿ ಯಾವ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಮತ್ತು ಯಾವ ಕ್ರೀಡಾಂಗಣಗಳಲ್ಲಿ ಟೂರ್ನಿಯನ್ನು ನಡೆಸಲು ತೀರ್ಮಾನಿಸಲಾಗುತ್ತದೆ ಎಂಬುದರ ಕುರಿತು ಲಭ್ಯವಾಗಿರುವ ಮಾಹಿತಿಯ ವಿವರ ಈ ಕೆಳಕಂಡಂತಿದೆ.

ಒಮಿಕ್ರಾನ್ ಭಯ, ಟೂರ್ನಿಯ ಆರಂಭದಲ್ಲಿ ವಿಳಂಬ ಸಾಧ್ಯತೆ

ಒಮಿಕ್ರಾನ್ ಭಯ, ಟೂರ್ನಿಯ ಆರಂಭದಲ್ಲಿ ವಿಳಂಬ ಸಾಧ್ಯತೆ

ಕೊರೋನಾವೈರಸ್ ಹಾವಳಿ ಭಾರತ ದೇಶದಲ್ಲಿ ತಗ್ಗುತ್ತಿದೆ ಹೀಗಾಗಿ ಮುಂಬರುವ ಐಪಿಎಲ್ ಟೂರ್ನಿಯನ್ನು ಯಾವುದೇ ಅಡೆತಡೆಗಳಿಲ್ಲದೆ ನಡೆಸಬಹುದು ಎಂದುಕೊಂಡಿದ್ದ ಬಿಸಿಸಿಐಗೆ ಓಮಿಕ್ರಾನ್ ತಳಿ ಹಿನ್ನಡೆಯುಂಟು ಮಾಡಿದೆ. ದೇಶದಲ್ಲಿ ಒಮಿಕ್ರಾನ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಏಪ್ರಿಲ್ 2ರಂದು ಆರಂಭವಾಗಬೇಕಿದ್ದ ಮುಂಬರುವ ಐಪಿಎಲ್ ಟೂರ್ನಿಯ ಆರಂಭದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಈ ವಿಷಯದ ಕುರಿತು ಕೂಡ ಬಿಸಿಸಿಐ ಸಭೆಯಲ್ಲಿ ಫ್ರಾಂಚೈಸಿಗಳ ಜೊತೆ ಚರ್ಚಿಸಲಿದ್ದು, ಐಪಿಎಲ್ ಆರಂಭದ ನೂತನ ದಿನಾಂಕ ಸಭೆಯ ನಂತರ ಹೊರಬೀಳುವ ಸಾಧ್ಯತೆಗಳಿವೆ.

ಈ 2 ಕ್ರೀಡಾಂಗಣಗಳಲ್ಲಿ ಮಾತ್ರ ಸಂಪೂರ್ಣ ಐಪಿಎಲ್ ನಡೆಸುವ ಸಾಧ್ಯತೆ

ಈ 2 ಕ್ರೀಡಾಂಗಣಗಳಲ್ಲಿ ಮಾತ್ರ ಸಂಪೂರ್ಣ ಐಪಿಎಲ್ ನಡೆಸುವ ಸಾಧ್ಯತೆ

ಒಮಿಕ್ರಾನ್ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವನ್ನು ಸಭೆಯಲ್ಲಿ ತೆಗೆದುಕೊಳ್ಳಲಿರುವ ಬಿಸಿಸಿಐ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಸಂಪೂರ್ಣವಾಗಿ ಮುಂಬೈ ಮತ್ತು ಪುಣೆ ಕ್ರೀಡಾಂಗಣಗಳಲ್ಲಿ ನಡೆಸಲು ತೀರ್ಮಾನ ಕೈಗೊಳ್ಳಲಿದೆ ಎನ್ನಲಾಗುತ್ತಿದೆ. ಒಂದುವೇಳೆ ಈ 2 ಕ್ರೀಡಾಂಗಣಗಳ ಯೋಜನೆ ಕೈ ಹಿಡಿಯದಿದ್ದರೆ, ಅಹಮದಾಬಾದ್, ರಾಜ್ಕೋಟ್ ಮತ್ತು ಬರೋಡಾದಲ್ಲಿ ಸಂಪೂರ್ಣ ಟೂರ್ನಿಯನ್ನು ನಡೆಸಲು ಬಿಸಿಸಿಐ ತೀರ್ಮಾನವನ್ನು ಕೈಗೊಳ್ಳಲಿದೆ. ಆಟಗಾರರ ಸುರಕ್ಷತೆಯನ್ನು ತಲೆಯಲ್ಲಿಟ್ಟುಕೊಂಡು ಈ ಮಹತ್ವದ ನಿರ್ಧಾರಕ್ಕೆ ಬಿಸಿಸಿಐ ಕೈಹಾಕಲಿದ್ದು ಆಟಗಾರರು ಹೆಚ್ಚು ಪ್ರಯಾಣ ಮಾಡದೇ ಇರುವುದರಿಂದ ಬಯೋ ಬಬಲ್ ವ್ಯವಸ್ಥೆ ಅಚ್ಚುಕಟ್ಟಾಗಿ ಮುಂದುವರಿಯಲು ಇದು ಸಹಕಾರಿಯಾಗಲಿದೆ.

ಸಭೆಯ ನಂತರ ಹರಾಜು ಪ್ರಕ್ರಿಯೆ, ಟೂರ್ನಿಯ ವೇಳಾಪಟ್ಟಿ ಮತ್ತು ಟೂರ್ನಿ ನಡೆಯುವ ಸ್ಥಳಗಳ ಸಂಪೂರ್ಣ ಚಿತ್ರಣ

ಸಭೆಯ ನಂತರ ಹರಾಜು ಪ್ರಕ್ರಿಯೆ, ಟೂರ್ನಿಯ ವೇಳಾಪಟ್ಟಿ ಮತ್ತು ಟೂರ್ನಿ ನಡೆಯುವ ಸ್ಥಳಗಳ ಸಂಪೂರ್ಣ ಚಿತ್ರಣ

ಸದ್ಯ ಬಿಸಿಸಿಐ ಫ್ರಾಂಚೈಸಿಗಳ ಜೊತೆ ನಡೆಸಲಿರುವ ಸಭೆ ಮುಕ್ತಾಯಗೊಂಡ ನಂತರವಷ್ಟೇ ಮುಂಬರಲಿರುವ ಐಪಿಎಲ್ ಆಟಗಾರರ ಮೆಗಾ ಹರಾಜು, ಟೂರ್ನಿಯ ವೇಳಾಪಟ್ಟಿ ಮತ್ತು ಟೂರ್ನಿ ಯಾವ ಕ್ರೀಡಾಂಗಣಗಳಲ್ಲಿ ನಡೆಯಲಿದೆ ಎಂಬುದರ ಕುರಿತು ಸಂಪೂರ್ಣ ಚಿತ್ರಣ ಸಿಗಲಿದೆ.

Story first published: Thursday, December 23, 2021, 17:08 [IST]
Other articles published on Dec 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X